• Home
  • »
  • News
  • »
  • district
  • »
  • Shivamogga: ಮಾರಿಕಾಂಬಾ ಜಾತ್ರೆ ಮಳಿಗೆ ಹಂಚಿಕೆ ವಿವಾದ; ಭಜರಂಗ ದಳದ ಮುಖಂಡರಿಗೆ ಟೆಂಡರ್, ಸಿದ್ದರಾಮಯ್ಯ ಕಿಡಿ

Shivamogga: ಮಾರಿಕಾಂಬಾ ಜಾತ್ರೆ ಮಳಿಗೆ ಹಂಚಿಕೆ ವಿವಾದ; ಭಜರಂಗ ದಳದ ಮುಖಂಡರಿಗೆ ಟೆಂಡರ್, ಸಿದ್ದರಾಮಯ್ಯ ಕಿಡಿ

ಕೋಟೆ ಮಾರಿಕಾಂಬಾ ದೇಗುಲ

ಕೋಟೆ ಮಾರಿಕಾಂಬಾ ದೇಗುಲ

ಅನ್ಯಕೋಮಿನವರಿಗೆ ಅಂಗಡಿ ಟೆಂಡರ್​ ಕೊಡದಂತೆ ಭಜರಂಗ ದಳದವರು ತಡೆದಿದ್ದಾರೆ. ಹೀಗಾಗಿ ಈ ಬಾರೀ ಜಾತ್ರೆಯಲ್ಲಿ ಅಂಗಡಿ ನಿರ್ಮಾಣದ ಟೆಂಡರ್​ ನಾಗರಾಜು ಎಂಬುವರ ಪಾಲಾಗಿದೆ.

  • Share this:

ಶಿವಮೊಗ್ಗ (ಮಾ.22): ಶ್ರೀ ಮಾರಿಕಾಂಬಾ (Marikamba) ಜಾತ್ರಾ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ಮೂರು ದಿನಗಳ ಕಾಲ ನಡೆಯುವ ಹಬ್ಬದಲ್ಲಿ ನೂರಾರು ಅಂಗಡಿ (Shop) ಮುಂಗಟ್ಟುಗಳು ಜಾತ್ರೆಯ ಆಕರ್ಷಣೆಯನ್ನು ಸಹಜವಾಗಿಯೇ ಹೆಚ್ಚಿಸುತ್ತದೆ. ಅಂಗಡಿ ಮುಂಗಟ್ಟುಗಳಲ್ಲಿ ಯಾರು ವ್ಯಾಪಾರ ಮಾಡುತ್ತಾರೆ ಎಂದು ಇದುವರೆಗೆ ಯಾರೂ ಗಮನಿಸಿರಲೂ ಇಲ್ಲ. ಅಮ್ಮನವರ ದರ್ಶನಕ್ಕೆ ಕೂಡ ಹಿಂದೂಗಳಂತೆ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಮರು (Muslims) ಮತ್ತು ಕ್ರೈಸ್ತರು ಕೂಡ ಆಗಮಿಸಿ ಹರಕ್ಕೆ ಸಲ್ಲಿಸುತ್ತಾರೆ. ಆದ್ರೆ ಈ ಬಾರಿ ಅಂಗಡಿ ಟೆಂಡರ್ (Tender)​ ವಿಚಾರ ಭಾರೀ ಸುದ್ದಿಯಾಗಿ ಅನ್ಯಕೋಮಿನವರಿಗೆ ಅಂಗಡಿ ಟೆಂಡರ್​ ಕೊಡದಂತೆ ಭಜರಂಗ ದಳದವರು ತಡೆದಿದ್ದಾರೆ. ಹೀಗಾಗಿ ಈ ಬಾರೀ ಜಾತ್ರೆಯಲ್ಲಿ ಅಂಗಡಿ ನಿರ್ಮಾಣದ ಟೆಂಡರ್​ ನಾಗರಾಜು ಎಂಬುವರ ಪಾಲಾಗಿದೆ.


ಮುಸ್ಲಿಮರಿಗೆ ಟೆಂಡರ್ ನೀಡಲು ನಕಾರ


ಈ ಬಾರಿ ಜಾತ್ರೆಯಲ್ಲಿನ ಅಂಗಡಿಗಳನ್ನು ಕೇವಲ ಹಿಂದೂಗಳು ಮಾತ್ರ ನಡೆಸಬೇಕು, ಮುಸ್ಲಿಂರಿಗೆ ನೀಡಬಾರದು ಎಂಬುದು ಹಿಂದೂಪರ ಸಂಘಟನೆಗಳ ಆಗ್ರಹ. ಜಾತ್ರೆಯಲ್ಲಿ ಎಲ್ಲ ವ್ಯವಸ್ಥೆಗೂ ಪ್ರತ್ಯೇಕ ಸಮಿತಿ ರಚಿಸಿದ್ದು, ಸಿದ್ಧತೆಗಳು ಬಹುತೇಕ ಪೂರ್ಣಗೊಳ್ಳುತ್ತಿವೆ. ಪ್ರತಿ ಬಾರಿಯೂ ಮಳಿಗೆಗಳನ್ನು ಹಾಕುವುದು ಮತ್ತು ಅದನ್ನು ಹಂಚುವ ಕುರಿತ ಗುತ್ತಿಗೆಯನ್ನು ಹರಾಜು ಹಾಕಲಾಗುತ್ತದೆ. ಈ ಬಾರಿ ಇದನ್ನು ಚಿನ್ನಯ್ಯ ಎಂಬುವವರು ಪಡೆದಿದ್ದರು. ಈ ಹಂತದಲ್ಲಿ  ಬಿಜೆಪಿ, ಬಜರಂಗ ದಳ ಸೇರಿದಂತೆ ಹಿಂದೂಪರ  ಮುಖಂಡರು ಮುಸ್ಲಿಮರಿಗೆ ಜಾತ್ರೆಯಲ್ಲಿ ಮಳಿಗೆ ಹಾಕಲು ಅವಕಾಶ ನೀಡದಂತೆ ಒತ್ತಾಯಿಸಿದ್ದಾರೆ.


ಮುಸ್ಲಿಮರಿಗೆ ಮಳಿಗೆ ಕೊಡಬಾರದೆಂದು ಪಟ್ಟು


ಏಕಾಏಕಿ ಇಂತಹ ಬೆಳವಣಿಗೆಯಿಂದ ಕಂಗಾಲಾದ ಗುತ್ತಿಗೆದಾರರು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ  ಮಾರಿಕಾಂಬಾ ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಕೆ.ಮರಿಯಪ್ಪ ತುರ್ತು ಸಭೆ ನಡೆಸಿದ್ದರು. ಭಜರಂಗ ದಳದ ಜಿಲ್ಲಾ ಸಂಚಾಲಕ ದೀನ ದಯಾಳ್, ಪ್ರಸಾದ್, ಅರ್ಚಕ ರಾಜು, ಬಿಜೆಪಿ ಮುಖಂಡ ಎಸ್.ಎನ್.ಚನ್ನಬಸಪ್ಪ ಅವರ ಜೊತೆ ಚರ್ಚಿಸಿದರು. ಈ ಸಮಯದಲ್ಲಿ ಹಿಂದೂಪರ ಸಂಘಟನೆಯ ಮುಖಂಡರು ಮುಸ್ಲಿಮರಿಗೆ ಮಳಿಗೆ ಕೊಡಬಾರದು ಎಂದು ಪಟ್ಟು ಹಿಡಿದರು.


ಇದನ್ನೂ ಓದಿ: Mekedatu Project: ಕ್ಯಾತೆ ತೆಗೆಯಲು ತಮಿಳುನಾಡಿನಿಂದ ಕಾನೂನು ಬಾಹಿರ ನಿರ್ಣಯ: ಸಿದ್ದರಾಮಯ್ಯ


ಭಜರಂಗದಳ ಮುಖಂಡ ನಾಗರಾಜ್​ಗೆ ಟೆಂಡರ್​


ಜಾತ್ರೆಗೆ ಅಗತ್ಯವಾದ ಹಣ ಸಂಗ್ರಹಿಸಿ ಕೊಡುವ ಭರವಸೆಯನ್ನು ನೀಡಿದರಲ್ಲದೆ, ಮಳಿಗೆಯ ಟೆಂಡರ್ ಹಣವಾದ 9 ಲಕ್ಷವನ್ನು ತಾವೇ ಭರಿಸಿ, ಗುತ್ತಿಗೆಯನ್ನು ತಾವೇ ಹಿಡಿಯುವುದಾಗಿ ಪ್ರಕಟಿಸಿದರು. ಟೆಂಡರ್ ಹಣ ಬಂದರೆ ಸರಿ. ಆದರೆ ದೇವಸ್ಥಾನ ಸಮಿತಿಯು ಈ ರೀತಿಯ ತಾರತಮ್ಯಕ್ಕೆ ಒಪ್ಪುವುದಿಲ್ಲ. ದೇವಸ್ಥಾನಕ್ಕೆ ಮತ್ತು ದರ್ಶನಕ್ಕೆ ಎಲ್ಲ ಧರ್ಮಿಯರಿಗೂ ಅವಕಾಶ  ಮಾಡಿಕೊಡುವುದಾಗಿ ಆಡಳಿತ ಮಂಡಳಿಯವರು ಪ್ರಕಟಿಸಿದರು. 9 ಲಕ್ಷ 1 ಸಾವಿರ 101 ರೂಪಾಯಿ ಹಣ ಕಟ್ಟಿ ನಾಗರಾಜು ಬಜರಂಗದಳ ಮುಖಂಡ ನಾಗರಾಜು ಟೆಂಡರ್​ ಪಡೆದಿದ್ದಾರೆ. ದೇವಸ್ಥಾನ ಮುಂಭಾಗದಲ್ಲಿ ಹಾಕುವ ಅಂಗಡಿ ಗಳಿಂದ ಹಣ ಸಂಗ್ರಹ


ಇದನ್ನೂ ಓದಿ: Sirsi Marikamba Jatre: ಶಿರಸಿ ಮಾರಿಕಾಂಬಾ ದೇವಿ‌ಯ ಆಶೀರ್ವಾದ ಪಡೆಯಿರಿ! ಜಾತ್ರೆ ಮುಗಿಯೋಕೆ ಇನ್ನೊಂದೇ ದಿನ ಬಾಕಿ!


ಕೋಟೆ ಶ್ರೀ ಮಾರಿಕಾಂಬಾ ಸಮಿತಿಯು ಎಲ್ಲ ಧರ್ಮಿಯರಿಗೂ ಸಮಾನ ಅವಕಾಶವನ್ನು ಕೊಡುತ್ತದೆ. ಲಾಗಾಯ್ತಿನಿಂದಲೂ ಇಲ್ಲಿ ಎಲ್ಲ ಕೋಮಿನವರೂ ಬಂದು ದರ್ಶನ ಪಡೆದು ಹರಕೆ ಒಪ್ಪಿಸುತ್ತಾರೆ. ಈ ಬಾರಿ ಮಳಿಗೆ ಟೆಂಡರ್ ಪಡೆದವರು ಹಿಂದೂಗಳಿಗೆ ಮಾತ್ರ ಹಂಚುತ್ತಾರೆ ಎಂದು ತಿಳಿದು ಬಂದಿದೆ.


‘ಮೂಲಭೂತ ಹಕ್ಕನ್ನು ಹತ್ತಿಕ್ಕುವ ಕೆಲಸ’


ಮುಸ್ಲಿಂ ಮಳಿಗೆಗಳಿಗೆ ಜಾತ್ರೆಗಳಲ್ಲಿ ಅವಕಾಶ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ  ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದಾರೆ ಈ ರೀತಿ ಅವಕಾಶ ನಿರಾಕರಣ ಮಳಿಗೆ ನೀಡದೇ ಇರುವುದು ಅಂಗಡಿ ಟೆಂಡರ್ ನಿರಾಕರಿಸುವುದು ತಪ್ಪು ,ಇದು ಫ್ರೀ ಟ್ರೇಡಿಂಗ್ ಗೆ ವಿರೋಧ, ನಮ್ಮ ದೇಶದಲ್ಲಿ ಫ್ರೀ ಟ್ರೆಡಿಂಗ್ ಇದೆ. ಈ ರೀತಿ ಅವಕಾಶ ನಿರಾಕರಣೆ ಮಾಡುವುದು ದೌರ್ಜನ್ಯ ಇದು ಮೂಲಭೂತ ಹಕ್ಕನ್ನು ಹತ್ತಿಕ್ಕುವ ಕೆಲಸ ಇದು ಸಂಪೂರ್ಣ ಕಾನೂನು ಬಾಹಿರ ಎಂದು ಕಿಡಿಕಾರಿದ್ರು.

Published by:ಪಾವನ ಎಚ್ ಎಸ್
First published: