ಮಹಾ ರೈತ ಪಂಚಾಯತ್ ಸಮಾವೇಶಕ್ಕೆ ಶಿವಮೊಗ್ಗ ಸಜ್ಜು; ರಾಜ್ಯದ ಅಧಿಕಾರದ ಕೇಂದ್ರದಲ್ಲಿ ಮೊಳಗಲಿದೆ ರೈತರ ಕಹಳೆ!

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ರೈತ ಹೋರಾಟಕ್ಕೆ ಸಜ್ಜಾಗಿದೆ. ಮಾರ್ಚ್ 20 ರಂದು (ನಾಳೆ)  ಶಿವಮೊಗ್ಗ ದಲ್ಲಿ ರೈತ ಸಮಾವೇಶ ನಡೆಯಲಿದೆ.  ನಗರದ ಸೈನ್ಸ್ ಮೈದಾನದಲ್ಲಿ ಕಾರ್ಯಕ್ರಮ ಜರುಗಲಿದೆ. ಈ ಸಮಾವೇಶಕ್ಕೆ ಉತ್ತರ ಭಾರತದ ರೈತ ಮುಖಂಡರುಗಳು ಭಾಗವಹಿಸುತ್ತಿದ್ದಾರೆ.

ಶಿವಮೊಗ್ಗದಲ್ಲಿ ರೈತ ಮಹಾ ಪಂಚಾಯತ್​ಗೆ ಬರದ ಸಿದ್ಧತೆ.

ಶಿವಮೊಗ್ಗದಲ್ಲಿ ರೈತ ಮಹಾ ಪಂಚಾಯತ್​ಗೆ ಬರದ ಸಿದ್ಧತೆ.

  • Share this:
ಶಿವಮೊಗ್ಗ: ನಾಳೆ ಶಿವಮೊಗ್ಗ ನಗರದಲ್ಲಿ  ಮಹಾ ರೈತ ಪಂಚಾಯತ್ ಹೋರಾಟ ನಡೆಯಲಿದೆ. ಇದಕ್ಕಾಗಿ ರೈತ ಸಂಘಟನೆಗಳು ಮತ್ತು ವಿವಿಧ ಸಂಘ ಸಂಸ್ಥೆಗಳು, ಪ್ರಗತಿಪರ ಸಂಘಟನಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. ರೈತರ ಈ ಸಮಾವೇಶಕ್ಕೆ ಬಾರೀ ಬೆಂಬಲ ವ್ಯಕ್ತವಾಗುತ್ತಿದೆ. ಜಿಲ್ಲೆಯ ಹಲವು ಭಾಗಗಳಿಗೆ ತೆರಳಿ ರೈತರಿಗೆ ಸಮಾವೇಶದ ಬಗ್ಗೆ ಮಾಹಿತಿ ನೀಡಲಾಗಿದೆ. ಹೀಗಾಗಿ ಸಾಕಷ್ಟು ಸಂಖ್ಯೆಯಲ್ಲಿ ರೈತರು ಸಮಾವೇಶಕ್ಕೆ ಆಗಮಿಸುವ ನೀರಿಕ್ಷೆ ಇದೆ. ನಾಳೆ ಸಂಜೆ 3 ಗಂಟೆಗೆ  ಮಹಾ ರೈತ ಪಂಚಾಯತ್ ಸಮಾವೇಶ ಜರುಗಲಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವಂತೆ ಆಗ್ರಹಿಸಿ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ದಕ್ಷಿಣ ಭಾರತದಿಂದ ಬೆಂಬಲ ನೀಡಲು ರೈತರು ಈ ಮೂಲಕ ಸಜ್ಜಾಗಿದ್ದಾರೆ.

ದಕ್ಷಿಣ ಭಾರತದಲ್ಲಿ ಸಹ ಹೋರಾಟ ನಡೆಸಲು ರೈತ ಸಂಘಟನೆಗಳು ಮುಂದಾಗಿವೆ. ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೂತನ ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ವಾಪಾಸ್ ಪಡೆಯಬೇಕು ಎಂಬ ಬೇಡಿಕೆಯೊಂದಿಗೆ ಈ ಸಮಾವೇಶ ನಡೆಯಲು ರೈತರು ಕಾರ್ಯತಂತ್ರ ರೂಪಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ರೈತ ಹೋರಾಟಕ್ಕೆ ಸಜ್ಜಾಗಿದೆ. ಮಾರ್ಚ್ 20 ರಂದು (ನಾಳೆ)  ಶಿವಮೊಗ್ಗದಲ್ಲಿ ರೈತ ಸಮಾವೇಶ ನಡೆಯಲಿದೆ.  ನಗರದ ಸೈನ್ಸ್ ಮೈದಾನದಲ್ಲಿ ಕಾರ್ಯಕ್ರಮ ಜರುಗಲಿದೆ. ಈ ಸಮಾವೇಶಕ್ಕೆ ಉತ್ತರ ಭಾರತದ ರೈತ ಮುಖಂಡರುಗಳು ಭಾಗವಹಿಸುತ್ತಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಸಿಂಗ್ ಟಿಕಾಯತ್ ಹಾಗೂ ಯುಧ್ವೀರ್ ಸಿಂಗ್ ಸೇರಿದಂತೆ ಹಲವು  ರೈತ ಮುಖಂಡರು ನಾಳೆ ನಡೆಯುವ ಸಮಾವೇಶದಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಶಿವಮೊಗ್ಗದಲ್ಲಿ ನಡೆಯುವ ಈ ಸಮಾವೇಶಕ್ಕೆ ಎಲ್ಲಾ ರೈತರ ಪರ ಸಂಘನೆಗಳು ಮತ್ತು ಸಂಘ ಸಂಸ್ಥೆಗಳು ಬೆಂಬಲ ನೀಡಿವೆ.

ಇದನ್ನೂ ಓದಿ: ನೀವು ಹೋರಾಟಗಾರರು, ಕುಟುಂಬ ವ್ಯಾಮೋಹಕ್ಕೆ ಬಲಿಯಾಗಬೇಡಿ: ಯಡಿಯೂರಪ್ಪಗೆ ರಮೇಶ್ ಕುಮಾರ್ ಸಲಹೆ

ಕೇಂದ್ರ ಸರ್ಕಾರ ಸುಗ್ರವಾಜ್ಞೆ ಮೂಲಕ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ಅಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವ, ರೈತ  ವಿರೋಧಿ  ಕಾಯ್ದೆಗಳಾಗಿದ್ದು, ಇದನ್ನು ಹಿಂಪಡೆಯಬೇಕು ಎಂಬ ಉದ್ದೇಶದಿಂದ ಈ ಸಮಾವೇಶ ನಡೆಯಲಾಗತ್ತಿದೆ. ಈ ಮಸೂದೆಗಳನ್ನು ಹಿಂಪಡೆಯ ಬೇಕು ಎಂದು ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ರೈತರ ಹೋರಾಟಕ್ಕೆ ಕೇಂದ್ರ ಸರ್ಕಾರ ಸ್ಪಂಧಿಸುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಹೀಗಾಗಿ ಶಿವಮೊಗ್ಗದಲ್ಲಿ ನಡೆಯುವ ಹೋರಾಟಕ್ಕೆ ರೈತ ಮುಖಂಡರಾದ ರಾಕೇಶ್ ಸಿಂಗ್ ಟಿಕಾಯತ್ ಹಾಗೂ ಯುಧ್ವೀರ್ ಸಿಂಗ್  ಆಗಮಿಸುವ ಮೂಲಕ ಇಲ್ಲಿನ ರೈತರಿಗೆ ಬಲ ತುಂಬಲಿದ್ದಾರೆ.

ಶಿವಮೊಗ್ಗದಲ್ಲಿ ರಾಜ್ಯ ರೈತ ಸಂಘಟನೆಗಳು, ದಲಿತ ಸಂಘರ್ಷ ಸಮಿತಿಗಳು, ಕನ್ನಡ ಪರ ಸಂಘಟನೆಗಳ ಜೊತೆ ವಿವಿಧ ಪಕ್ಷಗಳು ಕಾರ್ಯಕರ್ತರು ಪಾಲ್ಗೊಂಡು ಬೃಹತ್  ರ್ಯಾಲಿ ನಡೆಸಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಬೇಡಿಕೆಗಳ ಈಡೇರಿಕೆಗೆ ಮುಂದಾಗಬೇಕು, ಕಾಯ್ದೆಗಳನ್ನು ಹಿಂಪಡೆಯಬೇಕು ಎಂಬ ಒತ್ತಾಯ ಮಾಡಲಿದ್ದಾರೆ.
ಶಿವಮೊಗ್ಗ ಜಿಲ್ಲೆ  ಸಮಾಜವಾದಿ ಹೋರಾಟಗಳಿಗೆ ಹಾಗೂ ರೈತ ಚಳವಳಿ ಹೋರಾಟಗಳಿಗೆ  ಹೆಸರುವಾಸಿಯಾಗಿರುವ ಜಿಲ್ಲೆಯಾಗಿದೆ. ಈ ನೆಲದಿಂದ ಕೇಂದ್ರ ಸರ್ಕಾರಕ್ಕೆ  ಮತ್ತೊಂದು ಬಾರಿ ಖಡಕ್ ಸಂದೇಶ ನಾಳೆ ರವಾನೆಯಾಗಲಿದೆ.
Published by:MAshok Kumar
First published: