ಚನ್ನಪಟ್ಟಣ: ಒಂದು ಲೀಟರ್ ಪ್ಲ್ಯಾಸ್ಟಿಕ್ ನೀರಿನ ಬಾಟಲ್ ಮೇಲೆ 30 ಸಾವಿರಕ್ಕೂ ಹೆಚ್ಚು ಅಕ್ಷರಶಃಗಳನ್ನ ಬರೆದು ಇಲ್ಲಿನ ಯುವಕರೊಬ್ಬರು ಹೊಸ ದಾಖಲೆ ಸ್ಥಾಪಿಸಿದ್ದಾರೆ. ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದ ಯುವಕ ಶಿವಕುಮಾರ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಶಿವಕುಮಾರ್ ಆ ಬಾಟಲ್ ಮೇಲೆ 30,041 ಅಕ್ಷರಗಳಿಂದ DON'T USE PLASTIC ಎಂದು ಬರೆದಿದ್ದಾರೆ. 1,829 ಬಾರಿ DON'T USE PLASTIC ಎಂದು ಬರೆದಿದ್ದಾರೆ. 595 ಬಾರಿ INDIA; 292 ಬಾರಿ WORLD ಎಂದು ಬರೆದಿದ್ದಾರೆ. ವೃತ್ತಿಯಲ್ಲಿ ವ್ಯಕ್ತಿ ವಿಕಸನ ತರಬೇತುದಾರನಾಗಿರುವ ಜೊತೆಗೆ ಅಂತರರಾಷ್ಟ್ರೀಯ ಯೋಗಪಟು ಕೂಡ ಆಗಿರುವ ಶಿವಕುಮಾರ್ ಸಾಧನೆಗೆ ರಾಮನಗರ ಜಿಲ್ಲೆಯ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನ್ಯೂಸ್ 18 ಜೊತೆಗೆ ಮಾತನಾಡಿರುವ ಸಾಧಕ ಶಿವಕುಮಾರ್, ನಾನು ಯಾವುದೇ ಪ್ರಶಸ್ತಿ ಪಡೆಯುವ ಉದ್ದೇಶದಿಂದ ಈ ರೀತಿ ಬಾಟಲ್ ಮೇಲೆ ಬರೆದಿಲ್ಲ. ಜೊತೆಗೆ ನಾನು ಸಹ ಸಂಪೂರ್ಣವಾಗಿ ಪ್ಲ್ಯಾಸ್ಟಿಕ್ ಬಳಕೆ ಮಾಡುವುದನ್ನ ನಿಲ್ಲಿಸಲು ಸಾಧ್ಯವಾಗದೆ ಮನನೊಂದು ಈ ರೀತಿ ಬರೆದು ಜನಜಾಗೃತಿ ಮೂಡಿಸಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚನ್ನಪಟ್ಟಣದಲ್ಲೇ ಬೃಹತ್ ಗೊಂಬೆ ಉತ್ಪಾದನಾ ಘಟಕ ಸ್ಥಾಪನೆಯಾಗಲಿ: ಕ.ಕ.ಜ.ವೇ. ಆಗ್ರಹ
ದೇಶದ ಜನರು ಮುಂದೆ ಪ್ಲ್ಯಾಸ್ಟಿಕ್ ಬಳಕೆ ಮಾಡುವುದನ್ನ ಸಂಪೂರ್ಣವಾಗಿ ನಿಲ್ಲಿಸಬೇಕು. ಜೊತೆಗೆ ಪ್ಲ್ಯಾಸ್ಟಿಕ್ ಬಳಕೆಯಿಂದಾಗಿ ನಮ್ಮ ಸುತ್ತಮುತ್ತಲ ಪರಿಸರ, ವಾತವರಣ ಕೆಡಲಿದೆ. ಜೊತೆಗೆ ಪ್ಲ್ಯಾಸ್ಟಿಕ್ ಬಳಕೆಯಿಂದಾಗಿ ನಮ್ಮ ಆರೋಗ್ಯ ಸಂಪೂರ್ಣವಾಗಿ ಹಾಳಾಗಲಿದೆ. ಹಾಗಾಗಿ ನನ್ನನ್ನೂ ಒಳಗೊಂಡು ದೇಶದ ಜನರೇ ಸ್ವಯಂಪ್ರೇರಿತರಾಗಿ ಪ್ಲ್ಯಾಸ್ಟಿಕ್ ಬಳಸುವುದನ್ನ ನಿಲ್ಲಿಸಬೇಕೆಂದು ಮನವಿ ಮಾಡ್ತೇನೆಂದು ಶಿವಕುಮಅರ್ ನ್ಯೂಸ್ 18 ಜೊತೆಗೆ ಮಾತನಾಡುತ್ತಾ ಕರೆ ನೀಡಿದ್ಧಾರೆ.
ಇದನ್ನೂ ಓದಿ: SSLC ಮರುಮೌಲ್ಯಮಾಪನ: ಮಾಗಡಿಯ ಪ್ರಜ್ಞಾ, ಬೆಳ್ತಂಗಡಿಯ ಶ್ರೇಯಾಗೆ ಶೇ. 100 ಅಂಕ
ಇನ್ನು, ಶಿವಕುಮಾರ್ ಸಾಧನೆಯ ಬಗ್ಗೆ ತಂದೆ ಮದ್ದೂರಯ್ಯನವರು ಮಾತನಾಡಿ, ನನ್ನ ಮಗನ ಸಾಧನೆ ಬಗ್ಗೆ ಹೆಮ್ಮೆ ಇದೆ. ಇದರ ಜೊತೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೂಡ ಪ್ಲ್ಯಾಸ್ಟಿಕ್ ಉತ್ಪಾದನೆಯನ್ನೇ ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಶಿವಕುಮಾರ್ ಸಾಧನೆಗೆ ಕೋಡಂಬಳ್ಳಿ ಗ್ರಾಮಸ್ಥರು ಹಾಗೂ ಜಿಲ್ಲೆಯ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
ವರದಿ: ಎ.ಟಿ. ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ