ಕಿಚ್ಚ ಸುದೀಪ್‌ಗೆ ಶಿವಗಂಗಾ ಶ್ರೀ ಪ್ರಶಸ್ತಿ: ಕಾರ್ಯಕ್ರಮದಲ್ಲಿ ಕೋವಿಡ್ ರೂಲ್ಸ್ ಬ್ರೇಕ್

ಕೋವಿಡ್ ಗೈಡ್‌ಲೈನ್ಸ್‌ಗಳನ್ನ ಗಾಳಿಗೆ ತೂರಿ ಯೋಜನೆ ಮಾಡಿದ್ದಲ್ಲದೆ, ಯಾರೊಬ್ಬರು ಸಹ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ ಕಿಚ್ಚ ಸುದೀಪ್‌ನನ್ನು ನೋಡಲು ಬಂದಿದ್ದ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮೇಲೆ ಮೇಲೆ ಬಿದ್ದು ನೂಕು ನುಗ್ಗಲು ಸೃಷ್ಟಿಸಿದ್ದರು.

ಕಿಚ್ಚ ಸುದೀಪ್‌ಗೆ ಶಿವಗಂಗಾ ಶ್ರೀ ಪ್ರಶಸ್ತಿ ನೀಡಿದ ಕಾರ್ಯಕ್ರಮ.

ಕಿಚ್ಚ ಸುದೀಪ್‌ಗೆ ಶಿವಗಂಗಾ ಶ್ರೀ ಪ್ರಶಸ್ತಿ ನೀಡಿದ ಕಾರ್ಯಕ್ರಮ.

  • Share this:
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್‌ನ ಎರಡನೇ ಅಲೇ ತನ್ನ ಕಬಂದಬಾಹುವನ್ನ ಚಾಚುತ್ತಿದೆ, ವೈರಸ್ ನಿಯಂತ್ರಣಕ್ಕೆ ಸರ್ಕಾರದ ನೂತನ ನಿಯಮಾವಳಿಗಳ ಪ್ರಕಾರ ಯಾವುದೇ ಸಭೆ ಸಮಾರಂಭ ಗಳನ್ನು ನಡೆಸುವಂತಿಲ್ಲ. ಆದ್ರೆ ಕೋವಿಡ್ ನಿಯಮಾವಳಿಗಳನ್ನ ಮುರಿದು ಕಿಚ್ಚ ಸುದೀಪ್‌ಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮೇಲಣಗವಿ ವೀರಸಿಂಹಾಸನ ಮಠದ ಆವರಣದಲ್ಲಿ ನಡೆದಿರುವ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಇದು ಆಗಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಮೇಲಣಗವಿ ಮಠದ ಪೀಠಾಧಿಪತಿಗಳಾದ ಮಲಯ ಶಾಂತಮುನಿ ದೇಶಿಕೇಂದ್ರ ಸ್ವಾಮಿಗಳು ಶಿವಗಂಗಾ ಶ್ರೀ ಪ್ರಶಸ್ತಿ ಕೊಟ್ಟು ಸನ್ಮಾನಿಸಿ ಗೌರವಿಸುವುದರ ಮೂಲಕ ಕಿಚ್ಚ ಸುದೀಪ್ ಮುಖಟಕ್ಕೆ ಮತ್ತೊಂದು ಗರಿ ತಲುಪಿದೆ.

ಸುದೀಪ್‌ ರೊಂದಿಗೆ ಸಾಹಿತಿ ಡಾ.ನಾಗೇಂದ್ರ ಅವರಿಗೆ ಗಾನಗಾರುಡಿ ಪ್ರಶಸ್ತಿ ಹಾಗೂ ಕೃಷಿಕ ಮಹಿಳೆ ಕವಿತಾ ಮಿಶ್ರಾಗೆ ಶಿವಗಂಗಾ ಶ್ರೀ ಗೌರವ ನೀಡಿ ಸನ್ಮಾನಿಸಿದರು. ಇನ್ನೂ ಕೃಷಿಕ ಮಹಿಳೆ ಕರುನಾಡ ಹೆಮ್ಮೆಯ ಶ್ರೀಗಂಧದ ಬೆಳೆ ಬೆಳೆಯುವಲ್ಲಿ ಯಶಸ್ವಿಯಾಗಿ ನಾಡಿನ ಎಲ್ಲಾ ರೈತರಿಗೂ ಮಾದರಿಯಾಗಿರುವ ಕವಿತಾ ಮಿಶ್ರಾ ಕಳೆದ ಭಾರಿಯ ಶಿವಗಂಗಾ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಆದ್ರೆ ಕಳೆದ ವರ್ಷ ಕೋವಿಡ್ ಮಹಾಮಾರಿಯಿಂದ ದೇಶದೆಲ್ಲೆಡೆ ಲಾಕ್‌ಡೌನ್ ಘೋಷಣೆಯಾಗಿದ್ದ ಹಿನ್ನೆಲೆ ಕಾರ್ಯಕ್ರಮ ನಡೆಸಲು ಆಗದೆ ಈ ಭಾರಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಕೋವಿಡ್ ರೂಲ್ಸ್ ಬ್ರೇಕ್:

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೋವಿಡ್ ನಿಯಮಾವಳಿಗಳನ್ನ ಗಾಳಿಗೆ ತೂರಿ ಕಾರ್ಯಕ್ರಮ ಆಯೋಜನೆ ಮಾಡಕಾಗಿತ್ತು. ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಎಲ್ಲೆಡೆ ವ್ಯಾಪಿಸುತ್ತಿರುವುದರಿಂದ ನೂತನ ನಿಯಮಾವ ಳಿಗಳನ್ನ ಜಾರಿಗೆ ತರಲಾಗಿದೆ. ಹೊಸ ರೂಲ್ಸ್ ಪ್ರಕಾರ ಸಭೆ ಸಮಾರಂಭಗಳಿಗೆ ಬ್ರೇಕ್ ಹಾಕಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದನ್ನ ಕಡ್ಡಾಯಗೊಳಿಸಲಾಗಿದೆ.

ನಿಯಮ ಪಾಲಿಸುವಂತೆ ಕಿಚ್ಚನ ಮನವಿ:

ಈ ಕಾರ್ಯಕ್ರಮವನ್ನ ಕೋವಿಡ್ ಗೈಡ್‌ಲೈನ್ಸ್‌ಗಳನ್ನ ಗಾಳಿಗೆ ತೂರಿ ಯೋಜನೆ ಮಾಡಿದ್ದಲ್ಲದೆ, ಯಾರೊಬ್ಬರು ಸಹ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ ಕಿಚ್ಚ ಸುದೀಪ್‌ನನ್ನು ನೋಡಲು ಬಂದಿದ್ದ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮೇಲೆ ಮೇಲೆ ಬಿದ್ದು ನೂಕು ನುಗ್ಗಲು ಸೃಷ್ಟಿಸಿದ್ದರು.

ಇದನ್ನೂ ಓದಿ: ಅನುದಾನ ನೀಡದಿದ್ದಕ್ಕೆ ಸಿಎಂ ವಿರುದ್ಧ ಮೈಸೂರಿನ ಕೈ ಶಾಸಕರ ಆಕ್ರೋಶ!

ಅಷ್ಟೆ ಅಲ್ಲದೆ ವೇದಿಕೆ ಮೇಲಿದ್ದ ಸ್ವಾಮೀಜಿಗಳು ಸೇರಿದಂತೆ ಕಿಚ್ವ ಸುದೀಪ್ ಸಹ ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಆದ್ರೆ ವೇದಿಕೆ ಮೇಲೆ ಮಾತನಾಡುವ ವೇಳೆ ಕಿಚ್ಚ ಸುದೀಪ್ ಮಾಸ್ಕ್ ಹಾಕದ ಅಭಿಮಾನಿಗಳಿಗೆ ಹಾಗೂ ಸಭೆಯಲ್ಲಿ ಸೇರಿದ್ದ ಜನರಿಗೆ ತೀಕ್ಷ್ಣವಾಗಿ ಬುದ್ದಿ ಮಾತು ಹೇಳಿದರು.

ಒಟ್ಟಾರೆ ಕೋವಿಡ್ ಎರಡನೆ ಅಲೆಯ ನಡುವೆಯು ನಿಯಮಾವಳಿಗಳನ್ನ ಮೀರಿ ಸಮಾರಂಭ ನಡೆದಿದ್ದು, ಒಂದು ವೇಳೆ ಯಾರಿಗಾದ್ರು ಸೋಂಕು ಇದ್ದು ಕಾರ್ಯಕ್ರಮದಿಂದ್ಸ್ ವ್ಯಾಪಿಸಿದ್ರೆ ಯಾರು ಹೊಣೆ ಅನ್ನೋದು ಸದ್ಯದ ಪ್ರಶ್ನೆಯಾಗಿದೆ.
Published by:MAshok Kumar
First published: