ಶಿರಾ ಬೈ ಎಲೆಕ್ಷನ್ : ಮುಂದುವರಿದ ಯಾದವ ಸಮುದಾಯದ ಮತಬೇಟೆ

ಶಿರಾ-ಮಧುಗಿರಿಯ ಆಂಧ್ರದ ಗಡಿಭಾಗವಾದ ನೀಲಕಂಠಾಪುರದ ರಘುವೀರಾ ರೆಡ್ಡಿ ಮನೆಗೆ ಡಿಸಿಎಂ ಅಶ್ವಥ್ ನಾರಾಯಣ್ ಭೇಟಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.. ರಘುವೀರಾ ರೆಡ್ಡಿ ಆಂಧ್ರದ ಯಾದವ ಸಮುದಾಯದ ವರ್ಚಸ್ವಿ ನಾಯಕರು.

news18-kannada
Updated:October 26, 2020, 7:50 AM IST
ಶಿರಾ ಬೈ ಎಲೆಕ್ಷನ್ : ಮುಂದುವರಿದ ಯಾದವ ಸಮುದಾಯದ ಮತಬೇಟೆ
ಪ್ರಾತಿನಿಧಿಕ ಚಿತ್ರ.
  • Share this:
ತುಮಕೂರು : ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಇನ್ನೂ ಈವರೆಗೂ ಖಾತೆಯೇ ತೆರೆಯದ ಬಿಜೆಪಿ ಈ ಬಾರಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.. ಶತಾಯಗತಾಯ ಕ್ಷೇತ್ರ ಗೆಲ್ಲಲು ಹೊರಟಿರೋ ಬಿಜೆಪಿ ಎಲ್ಲಾ ಆ್ಯಂಗಲಲ್ಲೂ ಚಿಂತಿಸುತಿದೆ. ಇದರ ಭಾಗವಾಗಿ ಕ್ಷೇತ್ರದಲ್ಲಿ ಎರಡನೇ ದೊಡ್ಡ ಸಮುದಾಯವಾದ ಗೊಲ್ಲರ ಮತಬೇಟೆಗೆ ಮಾಸ್ಟರ್ ಪ್ಲಾನ್ ಮಾಡಿದೆ. ಆಂಧ್ರದ ಯಾದವ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ನ ಮಾಜಿ ಸಚಿವರಿಗೆ ಬಿಜೆಪಿ ಗಾಳ ಹಾಕಿದೆ.. ಬಿಜೆಪಿಯ ಮಾಸ್ಟರ್ ಪ್ಲಾನ್ ಅರಿತ ಕಾಂಗ್ರೆಸ್ ಅವ್ರನ್ನೇ ಭೇಟಿಯಾಗಿ ಬಿಜೆಪಿಗೆ ಠಕ್ಕರ್ ನೀಡಿದೆ.. ಶಿರಾ ರಣಕಣ ದಿನದಿಂದ ದಿನಕ್ಕೆ ರಂಗೇರುತಿದೆ. ಬಿಜೆಪಿ ಖಾತೆ ತೆರೆಯಲು ಇನ್ನಿಲ್ಲದ ಪ್ರಯತ್ನ ಮಾಡುತಿದೆ. ದೊಡ್ಡ ಸಮುದಾಯವಾದ ಕುಂಚಿಟಿಗ ಒಕ್ಕಲಿಗ ರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ.

ಎರಡನೇ ದೊಡ್ಡ ಸಮುದಾಯ ಗೊಲ್ಲರ ಮತಬೇಟೆಗೆ ಮಾಸ್ಟರ್‌ ಪ್ಲಾನ್ ಮಾಡಿದೆ.. ಆಂಧ್ರಪ್ರದೇಶದ ಕಾಂಗ್ರೆಸ್ ಮಾಜಿ ಸಚಿವ ರಘುವೀರಾ ರೆಡ್ಡಿ ಅವರ ಬೆಂಬಲವನ್ನ ಬಿಜೆಪಿ ಕೋರಿದೆ. ಶಿರಾ-ಮಧುಗಿರಿಯ ಆಂಧ್ರದ ಗಡಿಭಾಗವಾದ ನೀಲಕಂಠಾಪುರದ ರಘುವೀರಾ ರೆಡ್ಡಿ ಮನೆಗೆ ಡಿಸಿಎಂ ಅಶ್ವಥ್ ನಾರಾಯಣ್ ಭೇಟಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ರಘುವೀರಾ ರೆಡ್ಡಿ ಆಂಧ್ರದ ಯಾದವ ಸಮುದಾಯದ ವರ್ಚಸ್ವಿ ನಾಯಕರು. ಶಿರಾ ಮತ್ತು ಮಧುಗಿರಿಯಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಹಾಗಾಗಿ ಡಿಸಿಎಂ‌ ಅಶ್ವಥ್ ನಾರಾಯಣ ರಘುವೀರಾ ರೆಡ್ಡಿ ಬೆಂಬಲ ಕೋರಿದ್ದಾರೆ.

ಶಿರಾ ಕ್ಷೇತ್ರದಲ್ಲಿ ಸುಮಾರು 47 ಸಾವಿರ ಯಾದವ ಸಮುದಾಯದವರ ಮತ ಇದೆ. ಕುಂಚಿಟಿಗರನ್ನೂ ಹೊರತುಪಡಿಸಿದರೇ ಯಾದವರ ಮತಬ್ಯಾಂಕ್‌ ದೊಡ್ಡದಿದೆ. ಈ ಸಮುದಾಯವನ್ನು ಸೆಳೆಯಲು ಈಗಾಗಲೇ ಬಿಜೆಪಿ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಇದರ ನಡುವೆ ಯಾದವ ಸಮುದಾಯದ ಪ್ರಭಾವಿ ನಾಯಕರಿಗೆ ಗಾಳ ಹಾಕುತಿದೆ ಬಿಜೆಪಿ. ತಮಗೆ ಬೆಂಬಲ ನೀಡುವಂತೆ ರಘುವೀರಾ ರೆಡ್ಡಿ‌ಬಳಿ ಡಿಸಿಎಂ ಅಶ್ವಥ್ ನಾರಾಯಣರ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಮೈಸೂರು ದಸರಾ: ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಮುಖ್ಯಮಂತ್ರಿಗಳಿಂದ ಪೂಜೆ; 40 ನಿಮಿಷದಲ್ಲಿ ಮುಗಿಯಲಿದೆ ಜಂಬೂಸವಾರಿ

ನಗು ನಗುತಲೆ ರಘುವೀರಾ ರೆಡ್ಡಿ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.. ಬಿಜೆಪಿ ಮಾಸ್ಟರ್ ಸ್ಟ್ರೋಕ್ ಗೆ ಎಚ್ಚೆತ್ತ ಕಾಂಗ್ರೆಸ್ ನಾಯಕರು ರಘುವೀರಾ ರೆಡ್ಡಿ ಮನೆಗೆ ದೌಡಾಯಿಸಿದ್ದಾರೆ.. ಪರಮೇಶ್ವರ್ ಹಾಗೂ ಕೆ.ಎನ್.ರಾಜಣ್ಣ ಅವ್ರ ಆಪ್ತೇಷ್ಟರಾಗಿರೋ ರಘುವೀರ ರೆಡ್ಡಿ ಅವ್ರನ್ನ ಭೇಟಿ ಮಾಡಿ, ಟಿ.ಬಿ.ಜಯಚಂದ್ರ ಅವ್ರಿಗೆ ಬೆಂಬಲಿಸುವಂತೆ ಕೋರಿದ್ದಾರೆ. ಯಾದವ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ನಾಯಕರಿಗೆ ಗಾಳ ಹಾಕಿದ ಬಿಜೆಪಿ ಮೊದಲು ಕಾಂಗ್ರೆಸ್ ಗೆ ದೊಡ್ಡ ಆಘಾತ ಕೊಟ್ಟಿತ್ತು.

ಕೂಡಲೇ‌ ಎಚ್ಚೆತ್ತ ಕಾಂಗ್ರೆಸ್ ರಘುವೀರಾ ರೆಡ್ಡಿ ಅವ್ರು ಬಿಜೆಪಿಗೆ ಬೆಂಬಲಿಸದಂತೆ ಎಚ್ಚರವಹಿಸಿ ತಮ್ಮ ಅಭ್ಯರ್ಥಿಗೆ ಯಾದವ ವೋಟ್ ಗಳು ಬೀಳುವಂತೆ ಪ್ಲಾನ್ ಮಾಡಿದೆ. ಆದರೆ ಕಾಂಗ್ರೆಸ್ ನಾಯಕರಾದ ರಘುವೀರಾ ರೆಡ್ಡಿ ಮುಕ್ತವಾಗಿ ಯಾರ ಪರ ಮತಯಾಚನೆ ಮಾಡ್ತಾರಾ ಅನ್ನೋದೇ ಕುತೂಹಲ ಕೆರಳಿಸಿದೆ. ಉಪಚುನಾವಣೆಯ ವೋಟ್ ಕಸರತ್ತಿಗಾಗಿ ದಿನಕ್ಕೊಂದು ದಿಕ್ಕು ಬದಲಾಗ್ತಿದ್ದು, ಮತದಾರ ಯಾರಿಗೆ ಜೈ ಅಂತಾನೇ‌ ಕಾದುನೋಡ್ಬೇಕಿದೆ..
Published by: MAshok Kumar
First published: October 26, 2020, 7:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading