Hubli-Dharwad| ಕಾರಿನಲ್ಲಿ ಕಂತೆ ಕಂತೆ ನೋಟುಗಳ ಸಾಗಾಟ; 82.75 ಲಕ್ಷ ಹಣ ವಶಕ್ಕೆ ಪಡೆದ ಹುಬ್ಬಳ್ಳಿ ಪೊಲೀಸರು
ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಕುಸುಗಲ್ ರಸ್ತೆಯ ಆಕ್ಸಫರ್ಡ್ ಕಾಲೇಜ್ ಬಳಿ ದಾಳಿ ಮಾಡಿದ ಪೊಲೀಸರು ನಗದು ಸಮೇತ ಕಾರು ವಶಡಿಸಿಕೊಂಡಿದ್ದಾರೆ. ಬಾಗಲಕೋಟೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸ್ವಿಪ್ಟ್ ಡಿಜೈರ್ ಕಾರನ್ನು ತಡೆದು ಪರಿಶೀಲಿಸಿದಾಗ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ.
ಹುಬ್ಬಳ್ಳಿ (ಆಗಸ್ಟ್ 28); ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ದಿನೇ ದಿನೇ ಕಾವೇರಲಾರಂಭಿಸಿದೆ. ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಕಾರೊಂದರಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. ಇದೇನು ಚುನಾವಣೆಯಲ್ಲಿ ಹಂಚಲು ತಂದ ಹಣವಾ ಅಥವಾ ಹವಾಲಾ ಹಣವಾ ಅನ್ನೋ ಅನುಮಾನ ಮೂಡಲಾರಂಭಿಸಿದೆ. ಪ್ರಮುಖ ಪಕ್ಷಗಳ ನಡುವೆ ಚುನಾವಣಾ ಜಿದ್ದಾ ಜಿದ್ದಿ ಏರ್ಪಟ್ಟಿದ್ದು, ಹಣ ಹಂಚೋ ಮೂಲಕ ಗೆಲುವು ಸಾಧಿಸೋಕೆ ಪ್ರಯತ್ನಗಳು ನಡೆದಿದ್ದವಾ ಅನ್ನೋ ಅನುಮಾನ ಮೂಡಿದೆ. ಹುಬ್ಬಳ್ಳಿ ಯ ಕೇಶ್ವಾಪುರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 82.75 ಲಕ್ಷ ರೂ. ಹಣವನ್ನು ವಶಪಡಿಸಿಕೊ ಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಕೇಶ್ವಾಪುರ ಠಾಣೆ ಪೊಲೀಸರು ನಿನ್ನೆ ರಾತ್ರಿ ಭರ್ಜರಿ ಬೇಟೆಯಾಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಕುಸುಗಲ್ ರಸ್ತೆಯ ಆಕ್ಸಫರ್ಡ್ ಕಾಲೇಜ್ ಬಳಿ ದಾಳಿ ಮಾಡಿದ ಪೊಲೀಸರು ನಗದು ಸಮೇತ ಕಾರು ವಶಡಿಸಿಕೊಂಡಿದ್ದಾರೆ. ಬಾಗಲಕೋಟೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸ್ವಿಪ್ಟ್ ಡಿಜೈರ್ ಕಾರನ್ನು ತಡೆದು ಪರಿಶೀಲಿಸಿದಾಗ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ಬಾಗಲಕೋಟೆಯ ಭವಾನಿ ಟೀ ಸ್ಟಾಲ್ ಟಾಂಗಾ ಸ್ಟ್ಯಾಂಡ್ ಹತ್ತಿರದ ನಿವಾಸಿ ಕಾರು ಚಾಲಕ ಗೋಕುಲರಾಮ ವೀರಾಮಾರಾಮ ರಬಾರಿ(34) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಅಕ್ರಮವಾಗಿ ಸಾಗಿಸುತ್ತಿದ್ದ 82,75,100 ರೂಪಾಯಿ ನಗದು ಹಾಗೂ 5 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಎರಡು ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇದು ಮಹಾನಗರ ಪಾಲಿಕೆ ಚುನಾವಣೆಗಾಗಿ ಸಾಗಿಸುತ್ತಿದ್ದ ಹಣವೋ ಅಥವಾ ಹವಾಲಾ ಹಣವೋ ಎಂಬುದು ತನಿಖೆಯಿಂದ ಪತ್ತೆಯಾಗಬೇಕಿದೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮೈಸೂರು ವಿ.ವಿ. ಕುಲಪತಿಗಳ ನಿರ್ಣಯಕ್ಕೆ ಡಿಕೆಶಿ ಕಿಡಿ;
ಮೈಸೂರು ವಿಶ್ವ ವಿದ್ಯಾಲಯದ ವಿವಾದತ್ಮಕ ಆದೇಶಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, "ಮೈಸೂರು ವಿಶ್ವವಿದ್ಯಾಲಯ ಕುಲಪತಿ ಹೇಳ್ತಾರೆ ವಿದ್ಯಾರ್ಥಿನಿಯರು ಎಲ್ಲೂ ಓಡಾಡಬಾರು ಅಂತ ಹೇಳಿ ಆದೇಶ ಮಾಡಿ ನಂತರ ವಾಪಸ್ ಪಡೀತಾರೆ. ಹೆಣ್ಣು ಮಕ್ಕಳು ಓಡಾಡಬಾರದು ಅಂದ್ರೆ ಸರ್ಕಾರ ಯಾಕೆ ಇರ್ಬೇಕು. ವಿಶ್ವ ವಿದ್ಯಾಲಯದಲ್ಲೇ ಈ ರೀತಿ ಆದ್ರೆ ಹೆಂಗೆ ? ವಿಶ್ವವಿದ್ಯಾಲಯ ಹೊರಡಿಸಿದ್ದ ಆದೇಶ ವಾಪಸ್ ಪಡೆಯೋದಲ್ಲ, ಆ ಕುಲಪತಿಯನ್ನೇ ತೆಗೆದು ಹಾಕಬೇಕು.
ಉಮೇಶ್ ಕತ್ತಿ ಹೇಳಿಕೆನೂ ಕೇಳಿದ್ದೀನಿ, ಗೃಹ ಮಂತ್ರಿಗಳ ಹೇಳಿಕೆನೂ ಕೇಳಿದ್ದೀನಿ. ನಮ್ಮ ಗೃಹ ಮಂತ್ರಿಗಳ ಮೇಲೇಯೇ ಅದ್ಯಾವುದೋ ಕೇಸ್ ಇದೆಯಂತೆ. ನಮ್ಮ ಮಾಜಿ ಮಿನಿಸ್ಟರ್ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಇರಲಿ ಇಂತವರು ಗೃಹ ಮಂತ್ರಿಗಳಾಗಿ ಇರಬೇಕು. ರಾಜ್ಯದ ಆಡಳಿತ ಬಹಳ ಚೆನ್ನಾಗಿ ನಡೆಯುತ್ತೆ ಎಂದು ಗೃಹ ಮಂತ್ರಿಗಳ ಬಗ್ಗೆಯೂ" ಡಿಕೆಶಿ ವ್ಯಂಗ್ಯವಾಡಿದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊ ಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ