ಗೋವಿಗಾಗಿ ಮೇವು ಆಂದೋಲನಾ; ಗೋ ಶಾಲೆಗಳ, ಬಿಡಾಡಿ ಹಸುಗಳ ಮೇವಿಗಾಗಿ ವಿಭಿನ್ನ, ವಿನೂತನ ಯೋಜನೆ

ಈಗಾಗಲೇ ಪ್ರಾಯೋಗಿಕವಾಗಿ ಹತ್ತು ಎಕರೆ ವಿವಿಧ ಜಾಗಗಳಲ್ಲಿ ಮೇವು ಬೆಳೆಸುವ ಯೋಜನೆ ಹೊಂದಿದ್ದು, 5 ಏಕರೆ ಜಾಗ ಈ ಯೋಜನೆಗಾಗಿ ಲಭಿಸಿದೆ.

ಗೋವಿಗಾಗಿ ಮೇವು ಯೋಜನೆಗೆ ಚಾಲನೆ ನೀಡಿದ ಸಚಿವ ಕೆ ಎಸ್ ಈಶ್ವರಪ್ಪ

ಗೋವಿಗಾಗಿ ಮೇವು ಯೋಜನೆಗೆ ಚಾಲನೆ ನೀಡಿದ ಸಚಿವ ಕೆ ಎಸ್ ಈಶ್ವರಪ್ಪ

  • Share this:
ಶಿವಮೊಗ್ಗ(ಜೂ.09): ನಗರೀಕರಣ ಹೆಚ್ಚಾದಂತೆ ನಗರ ಪ್ರದೇಶಗಳ ಸುತ್ತಮುತ್ತಲೂ ಹಸಿರು ಪರಿಸರ ಇಲ್ಲವಾಗಿದೆ. ಸಿಟಿಗಳಲ್ಲಿ ಇರುವಂತ ದನಗಳಿಗೆ ಮೇವು ಸಿಗುವುದೇ ಕಷ್ಟಕರವಾಗುತ್ತಿದೆ. ಅದರಲ್ಲೂ ನಗರ ಪ್ರದೇಶದಲ್ಲಿ ಇರುವಂತ ಗೋ ಶಾಲೆ ಮತ್ತು ಬಿಡಾಡಿ ದನಗಳಿಗೆ ಮೇವಿನ ಕೊರತೆ ಹೆಚ್ಚಾಗಿ ಕಂಡು ಬರುತ್ತಿದೆ. ಇದನ್ನರಿತ ಸ್ಥಳೀಯ ಸಂಘ ಸಂಸ್ಥೆಗಳು ವಿನೂತನ ಯೋಜನೆ ಜಾರಿಗೊಳಿಸಿದ್ದಾರೆ. ಗೋವಿಗಾಗಿ ಮೇವು ಯೋಜನೆ ತಂದಿದ್ದಾರೆ.

ಹೌದು ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಗೋವುಗಳು, ಮೇವಿಲ್ಲದೇ ಪರದಾಡುತ್ತಿವೆ. ನಗರ ಪ್ರದೇಶ ಹೆಚ್ಚಾಗಿ ಬೆಳೆಯುತ್ತಾ ಹೋದಂತೆ, ದನಕರುಗಳಿಗೆ ಮೇವಿನ ಪ್ರಮಾಣ ಸಹ ಕಡಿಮೆಯಾಗುತ್ತಿದೆ. ಜೊತೆಗೆ  ಗೋಮಾಳ ಜಾಗಗಳು ಸಹ ಬಹಳಷ್ಟು ಒತ್ತುವರಿಯಾಗಿವೆ. ನಗರ ಪ್ರದೇಶದಲ್ಲಿರುವ ಗೋವುಗಳಿಗೆ ಸರಿಯಾಗಿ ಮೇವು ಸಿಗದೇ ಪರಿತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ವಿಭಿನ್ನ ಆಂದೋಲನ ಆರಂಭಿಸಲಾಗಿದೆ.

ಅದುವೇ, ಗೋವಿಗಾಗಿ ಮೇವು ಎಂಬ ವಿನೂತನ ಕಾರ್ಯಕ್ರಮ.  ನಗರದ ಸುತ್ತಮುತ್ತಲ ಊರುಗಳಲ್ಲಿ ಖಾಲಿ ಜಾಗ ಮತ್ತು ಜಮೀನುಗಳು ಇದ್ದರೆ, ಅಂತಹ ಸ್ಥಳಗಳಲ್ಲಿ ಜಾನುವಾರುಗಳಿಗೆ ಬೇಕಾಗುವ ಮೇವು ಬೆಳೆಸಲು ಈ ಸಂಘ-ಸಂಸ್ಥೆಗಳ ಸದಸ್ಯರು ಮುಂದಾಗಿದ್ದಾರೆ. ನಿವೇಶನ ಅಥವಾ ಖಾಲಿ ಜಾಗದಲ್ಲಿ ಕಸವನ್ನು ಸುರಿಯುವ ಬದಲಾಗಿ ಗೋವಿಗಾಗಿ ಮೇವು ಬೆಳೆಯಲು ಪ್ರೋತ್ಸಾಹಿಸುತ್ತಿದ್ದಾರೆ. ಸೈಟ್ ಅಥವಾ ಜಮೀನು ಮಾಲೀಕರಿಗೆ  ಇದಕ್ಕೆ ಯಾವುದೇ ವೆಚ್ಛ ಬರುವುದಿಲ್ಲ, ಎಲ್ಲವನ್ನು ಸಂಘ ಸಂಸ್ಥೆಯವರೇ ನೋಡಿಕೊಳ್ಳುತ್ತಾರೆ. ಅಲ್ಲದೇ 2-3 ತಿಂಗಳಿಗೊಮ್ಮೆ ಮೇವು ಕಟಾವಿಗೆ ಬರುತ್ತದೆ. ಈ ವೇಳೆ ಗೋ ಸಂರಕ್ಷಣಾ ವೇದಿಕೆ ಸ್ವಯಂ ಸೇವಕರು ಬಂದು ಈ ಮೇವನ್ನು ಕಟಾವು ಮಾಡಿ ವಿತರಿಸುವ ಕೆಲಸ ಮಾಡುತ್ತಾರೆ.

ನಮ್ಮ ಕನಸಿನ ಶಿವಮೊಗ್ಗ, ಶ್ರೀಗಂಧ, ವಿಶ್ವ ಹಿಂದೂ ಪರಿಷತ್ತು, ಗೋ ರಕ್ಷಣಾ ವೇದಿಕೆಯ ಸದಸ್ಯರು ಈ ವಿನೂತನ ಕಾರ್ಯಯೋಜನೆ ಹಮ್ಮಿಕೊಂಡಿದ್ದಾರೆ. ಈ ರೀತಿ ಮಾಡುವುದರ ಮೂಲಕ, ಖಾಲಿ ಜಾಗ ಅಥವಾ ಜಮೀನು ಸ್ವಚ್ಚವಾಗಿರುತ್ತದೆ. ಮಳೆಗಾಲ ಆರಂಭವಾಗುತ್ತಿರುವದರಿಂದ ನೀರು ಹಾಕುವ ಅವಶ್ಯಕತೆ ಕೂಡ ಇರುವುದಿಲ್ಲ. ಕೇವಲ ಎರಡು ಮೂರು ತಿಂಗಳಲ್ಲಿ ಮೇವು ಕಟಾವಿಗೆ ಬರುತ್ತದೆ. ಆದನ್ನು ಈ ಯೋಜನೆಯ ಸ್ವಯಂ ಸೇವಕರು ಕಟಾವು ಮಾಡಿಕೊಂಡು ಸಂಬಂಧಿಸಿದ ಗೋ ಶಾಲೆಗಳಿಗೆ ಆಯಾ ಜಾಗದ ಮಾಲೀಕರ ಹೆಸರಿನಲ್ಲಿ ತಲುಪಿಸುತ್ತಾರೆ. ಇದರಿಂದ ಗೋ ಪೂಜೆ ಮಾಡಿದ ಪುಣ್ಯ ಸಿಗುತ್ತದೆ ಎಂಬುದು ಈ ವಿನೂತನ ಯೋಜನೆಗೆ ರೂಪರೇಷ ಸಹ ಆಗಿದೆ.

ಶಿವಮೊಗ್ಗ ನಗರದಲ್ಲಿ ಸುಮಾರು 4 ಗೋ ಶಾಲೆಗಳಿದ್ದು, ಇದರ ಜೊತೆಗೆ, ಬೀಡಾಡಿ ದನಗಳು ಕೂಡ ಇದ್ದು, ಸುಮಾರು ಒಂದುವರೆ ಸಾವಿರಕ್ಕಿಂತಲೂ ಹೆಚ್ಚು ಗೋವುಗಳಿಗೆ ಮೇವು, ಈ ವಿನೂತನ ಯೋಜನೆ ಮೂಲಕ ಸಿಕ್ಕಂತಾಗುತ್ತದೆ. ಈಗಾಗಲೇ ಪ್ರಾಯೋಗಿಕವಾಗಿ ಹತ್ತು ಎಕರೆ ವಿವಿಧ ಜಾಗಗಳಲ್ಲಿ ಮೇವು ಬೆಳೆಸುವ ಯೋಜನೆ ಹೊಂದಿದ್ದು, 5 ಏಕರೆ ಜಾಗ ಈ ಯೋಜನೆಗಾಗಿ ಲಭಿಸಿದೆ.

ಇದನ್ನೂ ಓದಿ : Unlock 1.0 Karnataka : ಕರ್ನಾಟಕದೆಲ್ಲೆಡೆ ದೇವಸ್ಥಾನಗಳ ರೀ ಓಪನ್ - ಕಲಬುರ್ಗಿಯ ಈ ಎರಡು ದೇವಸ್ಥಾನಗಳಿಗೆ ಸಿಗದ ಪ್ರವೇಶ ಭಾಗ್ಯ

ಸಿಟಿಯಲ್ಲಿರುವ ಬಿಡಾಡಿ ದನಗಳು, ಮತ್ತು ಗೋ ಶಾಲೆಯಲ್ಲಿ ಇರುವಂತ ದನಗಳಿಗೆ ಮೇವಿನ ಕೊರತೆ  ನಿಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಪಶು ಸಂಗೋಪನೆ ಇಲಾಖೆ ಹಾಗೂ ಪಶು ವೈದ್ಯಕೀಯ ಮಹಾವಿದ್ಯಾಲಯದ ಸಹಕಾರದೊಂದಿಗೆ ಆರಂಭಿಸಲಾಗಿರುವ ಈ ವಿನೂತನ ಯೋಜನೆ ರಾಜ್ಯಕ್ಕೆ ಮಾದರಿಯಾಗಿದೆ. ಗೋವಿಗಾಗಿ ಮೇವು, ಚಿಂತನೆಗೆ ಆಸಕ್ತ ನಾಗರೀಕರು ಉದಾರವಾಗಿ ತಮ್ಮ ಖಾಲಿ ಇರುವ ನಿವೇಶದಲ್ಲಿ ಜಾನುವಾರಗಳಿಗೆ ಮೇವು ಬೆಳೆಸಲು ಅನುವು ಮಾಡಿಕೊಡಬಹುದಾಗಿದೆ. ಈ ಮೂಲಕ ಪ್ರಾಣಿಗಳ ಸೇವೆ ಮಾಡಬಹುದಾಗಿದೆ.
First published: