ಮುಖ್ಯಮಂತ್ರಿಗಳೇ ಕುರಿಗಾರರ ಸಮಸ್ಯೆಗೆ ಕಿವಿಗೊಡಿ: ಇಲ್ಲವಾದರೆ ಬೆಂಗಳೂರಲ್ಲಿ ಪ್ರತಿಭಟನೆ ಕುರಿಗಾರರ ಎಚ್ಚರಿಕೆ
ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯ ಸಹಕಾರ ಕುರಿ, ಮೇಕೆ ಸಾಕಾಣಿಕೆದಾರ ಸಂಘಗಳ ಮಹಾಮಂಡಳ ಸ್ಥಾಪಿಸಿದ್ದರು. ಕಳೆದ ಎರಡು ವರ್ಷದಿಂದ ಮಹಾಮಂಡಳಕ್ಕೆ ಸರ್ಕಾರ ಅನುದಾನ ಕೊಟ್ಟಿಲ್ಲ ಹೀಗಾಗಿ ಕುರಿಗಾರರ ಆರ್ಥಿಕಾಭಿವೃದ್ಧಿಗೆ ತೊಂದರೆಯಾಗಿದೆ
news18-kannada Updated:November 24, 2020, 3:41 PM IST

ರಾಜ್ಯ ಸಹಕಾರ ಕುರಿ ಮತ್ತು ಮೇಕೆ ಮಹಾಮಂಡಳದ ನಿರ್ದೇಶಕರು ಹಾಗೂ ಕುರಿಗಾರರು
- News18 Kannada
- Last Updated: November 24, 2020, 3:41 PM IST
ಬಾಗಲಕೋಟೆ(ನವೆಂಬರ್24): ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸಿದ್ದರಾಮಯ್ಯ ಜಾರಿಗೆ ತಂದಿದ್ದ ಕುರಿಗಾರರ ಆರ್ಥಿಕಾಭಿವೃದ್ಧಿ ಯೋಜನೆಗೆ ಕಡಿತಗೊಳಿಸಿ ರಾಜ್ಯ ಸರ್ಕಾರ ಅನುದಾನ ಕೊಡುತ್ತಿಲ್ಲ. ಜತೆಗೆ ಅನುಗ್ರಹ ಯೋಜನೆ ಸ್ಥಗಿತ ಸೇರಿದಂತೆ ವಿವಿಧ ಸಮಸ್ಯೆಗೆ ಪರಿಹಾರಕ್ಕೆ ಆಗ್ರಹಿಸಿ ನವೆಂಬರ್ 26 ರಂದು ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆಗೆ ಕುರಿಗಾರರು ಮುಂದಾಗಿದ್ದಾರೆ. ಮುಖ್ಯಮಂತ್ರಿಗಳೇ ಕುರಿಗಾರರ ಸಮಸ್ಯೆಗೆ ಕಿವಿಗೊಟ್ಟು,ಪರಿಹರಿಸಿ, ಇಲ್ಲವಾದರೆ ಕುರಿಗಾರರು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ರಾಜ್ಯ ಸಹಕಾರ ಕುರಿ ಮತ್ತು ಮೇಕೆ ಮಹಾಮಂಡಳದ ನಿರ್ದೇಶಕ ಭೀಮಪ್ಪ ಮೊಕಾಶಿ, ಭೀಮಪ್ಪ ಕೆಂಗಾರ, ರಾಮಣ್ಣ ಸೋಬಾನದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರವಾಹದ ಬಳಿಕ ಕುರಿ ಮೇಕೆಗಳು ಕಾಲುಬೇನೆ, ಬಾಯಿಬೇನೆ ರೋಗಕ್ಕೆ ತುತ್ತಾಗಿ ಸಾವಿರಾರು ಕುರಿ, ಮೇಕೆಗಳು ಸತ್ತುಹೋಗಿದರೂ ಸರ್ಕಾರ ಪರಿಹಾರ ಕೊಟ್ಟಿಲ್ಲ. ಕುರಿ ಮೇಕೆ ಅಕಾಲಿಕವಾಗಿ ಮೃತಪಟ್ಟ 3 ರಿಂದ 6 ತಿಂಗಳ ಮರಿಗಳಿಗೆ 2500, ಹಾಗೂ 6 ತಿಂಗಳ ಮೇಲ್ಮಟ್ಟದವುಗಳಿಗೆ 5ಸಾವಿರ ಪರಿಹಾರ ಕೊಡುವ ಅನುಗ್ರಹ ಯೋಜನೆ ಸ್ಥತಗಿಗೊಳಿಸಿದ್ದಾರೆ.
ಮುಖ್ಯಮಂತ್ರಿ ಹಾಗೂ ಪಶುಸಂಗೋಪನಾ ಸಚಿವರು ಯೋಜನೆ ಮುಂದುವರಿಸುವುದಾಗಿ ಹೇಳಿದ್ದು, ಶೀಘ್ರವೇ ಕ್ರಮಕೈಗೊಳ್ಳಬೇಕು. 2016-17ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯ ಸಹಕಾರ ಕುರಿ, ಮೇಕೆ ಸಾಕಾಣಿಕೆದಾರ ಸಂಘಗಳ ಮಹಾಮಂಡಳ ಸ್ಥಾಪಿಸಿದ್ದರು. ಕಳೆದ ಎರಡು ವರ್ಷದಿಂದ ಮಹಾಮಂಡಳಕ್ಕೆ ಸರ್ಕಾರ ಅನುದಾನ ಕೊಟ್ಟಿಲ್ಲ ಹೀಗಾಗಿ ಕುರಿಗಾರರ ಆರ್ಥಿಕಾಭಿವೃದ್ಧಿಗೆ ತೊಂದರೆಯಾಗಿದೆ. ಜೊತೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮೂಲಕ ಕುರಿಗಾರರ ಆರ್ಥಿಕಾಭಿವೃದ್ಧಿ ಯೋಜನೆ ಜಾರಿಯಾಗುತ್ತಿದ್ದವು. ಆದರೆ, ಈಗಿನ ಸರ್ಕಾರ ಅನುದಾನ ಕಡಿತಗೊಳಿಸಿದೆ ಎಂದರು. ಕುರಿ ಸಾಕಾಣಿಕೆ ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರದ ಎನ್ ಸಿ ಡಿಸಿ ಯೋಜನೆಗೆ 187.50 ಕೋಟಿ ಅನುದಾನ ನೀಡಿಲ್ಲ.ರಾಜ್ಯ ಸರ್ಕಾರ ಇದಕ್ಕೆ ಭದ್ರತೆ ನೀಡಿ ಅನುದಾನ ತರಬೇಕು.ಜೊತೆಗೆ 2018-19ನೇ ಬಜೆಟ್ ನಲ್ಲಿ ಘೋಷಣೆಯಾದರೂ ಅನುಷ್ಠಾನವಾಗಿಲ್ಲ. ಆಂಧ್ರಪ್ರದೇಶ, ತೆಲಂಗಾಣ ರಾಜ್ಯ ಇದೇ ಯೋಜನೆಯಡಿ ಕೇಂದ್ರ ಸರ್ಕಾರಕ್ಕೆ ಖಾತ್ರಿ ನೀಡಿ 4ಸಾವಿರ ಕೋಟಿ ಅನುದಾನ ಪಡೆದು ಕುರಿಗಾರರಿಗೆ ಅನುಕೂಲ ಮಾಡಿಕೊಟ್ಟಿದೆ. ರಾಜ್ಯ ಸರ್ಕಾರ ಈ ಯೋಜನೆ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಸರ್ಕಾರಿ ಶಾಲಾ ದತ್ತು ಪರಿಕಲ್ಪನೆ ದೇಶದಲ್ಲೇ ಪ್ರಥಮ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
ಇನ್ನು ಮೀನುಗಾರರಿಗೆ ಶೂನ್ಯ ಬಡ್ಡಿದರ ಸಾಲಸೌಲಭ್ಯವಿದೆ. ಅದೇ ರೀತಿ ಕುರಿಗಾರರಿಗೂ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ ಕಲ್ಪಿಸಬೇಕು.ಇನ್ನು ಕುರಿ ಮೇಯಿಸಲು ಕುರಿಗಾರರು ಅರಣ್ಯ ಅವಲಂಬಿಸಿದ್ದು, ಅರಣ್ಯದಲ್ಲಿ ಗಿಡಗಳಿಗೆ ತೊಂದರೆಯಾಗದಂತೆ ಕುರಿ ಮೇಯಿಸಲು ಸರ್ಕಾರ ಅನುಮತಿ ನೀಡಬೇಕು. ಜೊತೆಗೆ ಕುರಿ, ಮೇಕೆಗಳಿಗೆ ಜಂತುನಾಶಕ ಔಷಧಿಗಳನ್ನು ಕುರಿಗಾರರ ಸಂಘದ ಮೂಲಕ ವಿತರಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು ಕುರಿಗಾರರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವಾದರೆ ರಾಜ್ಯಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸುವದಾಗಿ ಕುರಿಗಾರರು ಎಚ್ಚರಿಸಿದ್ದರು.
ಮುಖ್ಯಮಂತ್ರಿ ಹಾಗೂ ಪಶುಸಂಗೋಪನಾ ಸಚಿವರು ಯೋಜನೆ ಮುಂದುವರಿಸುವುದಾಗಿ ಹೇಳಿದ್ದು, ಶೀಘ್ರವೇ ಕ್ರಮಕೈಗೊಳ್ಳಬೇಕು. 2016-17ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯ ಸಹಕಾರ ಕುರಿ, ಮೇಕೆ ಸಾಕಾಣಿಕೆದಾರ ಸಂಘಗಳ ಮಹಾಮಂಡಳ ಸ್ಥಾಪಿಸಿದ್ದರು. ಕಳೆದ ಎರಡು ವರ್ಷದಿಂದ ಮಹಾಮಂಡಳಕ್ಕೆ ಸರ್ಕಾರ ಅನುದಾನ ಕೊಟ್ಟಿಲ್ಲ ಹೀಗಾಗಿ ಕುರಿಗಾರರ ಆರ್ಥಿಕಾಭಿವೃದ್ಧಿಗೆ ತೊಂದರೆಯಾಗಿದೆ. ಜೊತೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮೂಲಕ ಕುರಿಗಾರರ ಆರ್ಥಿಕಾಭಿವೃದ್ಧಿ ಯೋಜನೆ ಜಾರಿಯಾಗುತ್ತಿದ್ದವು. ಆದರೆ, ಈಗಿನ ಸರ್ಕಾರ ಅನುದಾನ ಕಡಿತಗೊಳಿಸಿದೆ ಎಂದರು.
ಇದನ್ನೂ ಓದಿ : ಸರ್ಕಾರಿ ಶಾಲಾ ದತ್ತು ಪರಿಕಲ್ಪನೆ ದೇಶದಲ್ಲೇ ಪ್ರಥಮ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
ಇನ್ನು ಮೀನುಗಾರರಿಗೆ ಶೂನ್ಯ ಬಡ್ಡಿದರ ಸಾಲಸೌಲಭ್ಯವಿದೆ. ಅದೇ ರೀತಿ ಕುರಿಗಾರರಿಗೂ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ ಕಲ್ಪಿಸಬೇಕು.ಇನ್ನು ಕುರಿ ಮೇಯಿಸಲು ಕುರಿಗಾರರು ಅರಣ್ಯ ಅವಲಂಬಿಸಿದ್ದು, ಅರಣ್ಯದಲ್ಲಿ ಗಿಡಗಳಿಗೆ ತೊಂದರೆಯಾಗದಂತೆ ಕುರಿ ಮೇಯಿಸಲು ಸರ್ಕಾರ ಅನುಮತಿ ನೀಡಬೇಕು. ಜೊತೆಗೆ ಕುರಿ, ಮೇಕೆಗಳಿಗೆ ಜಂತುನಾಶಕ ಔಷಧಿಗಳನ್ನು ಕುರಿಗಾರರ ಸಂಘದ ಮೂಲಕ ವಿತರಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು ಕುರಿಗಾರರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವಾದರೆ ರಾಜ್ಯಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸುವದಾಗಿ ಕುರಿಗಾರರು ಎಚ್ಚರಿಸಿದ್ದರು.