ಆರು ತಿಂಗಳೊಳಗೆ ಯಡಿಯೂರಪ್ಪರನ್ನ ಸಿಎಂ ಕುರ್ಚಿಯಿಂದ ಕೆಳಗಿಳಿಸೋದು ಖಚಿತ : ಶಾಸಕ ಶರಣಬಸಪ್ಪಗೌಡ ದರ್ಶನಾಪುರ

ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ಮೇಲೆ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಶಹಾಪುರ ಕ್ಷೇತ್ರಕ್ಕೆ ಒಂದು ಪೈಸೆ ಕೂಡ ಅನುದಾನ ನೀಡಿಲ್ಲ ಇದರಿಂದ ನಾವು ಕ್ಷೇತ್ರ ಹೇಗೆ ಅಭಿವೃದ್ಧಿ ಮಾಡಬೇಕೆಂದು ಪ್ರಶ್ನೆ ಮಾಡಿದರು.

news18-kannada
Updated:September 15, 2020, 6:10 PM IST
ಆರು ತಿಂಗಳೊಳಗೆ ಯಡಿಯೂರಪ್ಪರನ್ನ ಸಿಎಂ ಕುರ್ಚಿಯಿಂದ ಕೆಳಗಿಳಿಸೋದು ಖಚಿತ : ಶಾಸಕ ಶರಣಬಸಪ್ಪಗೌಡ ದರ್ಶನಾಪುರ
ಶಾಸಕ ಶರಣಬಸಪ್ಪಗೌಡ ದರ್ಶನಾಪುರ
  • Share this:
ಯಾದಗಿರಿ(ಸೆಪ್ಟೆಂಬರ್​. 15): ರಾಜ್ಯದಲ್ಲಿ ಈಗ ಸಿಎಂ ಬದಲಾವಣೆ ಬಗ್ಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಬಿಎಸ್ ವೈ ಬೆಂಬಲಿಗ ಶಾಸಕರು ಸಿಎಂ ಆಗಿ ಬಿ ಎಸ್ ವೈ ಅವರು ತಮ್ಮ‌ ಪೂರ್ಣ ಅವಧಿ ಪೂರೈಸುತ್ತಾರೆಂದು ಹೇಳಿಕೆ ನೀಡುತ್ತಿದ್ದಾರೆ, ಮತ್ತೊಂದೆಡೆ ತೆರೆಮೆರೆಯಲ್ಲಿ ಸಿಎಂ ಸ್ಥಾನದಿಂದ ಇಳಿಸಲು ಲೆಕ್ಕಾಚಾರ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಇನ್ನೊಂದು 6 ತಿಂಗಳಲ್ಲಿ ಸಿಎಂ ಸ್ಥಾನದಿಂದ ಬಿಎಸ್ ವೈ ಅವರನ್ನು  ಕೆಳಗಿಳಿಸೋದು ಖಚಿತ ಎಂದಿದ್ದಾರೆ. ಯಾದಗಿರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರಕಾರ ನಡೆಯುತ್ತಿಲ್ಲ ಮುಖ್ಯಮಂತ್ರಿಗಳಿಗೆ ವಯಸ್ಸಾಗಿದೆ. ಸಚಿವರ ಇಲ್ಲಾ ಇಲಾಖೆ ಕೆಲಸ ,ಹಣಕಾಸಿನ ವ್ಯವಹಾರದಲ್ಲಿ ಕೂಡ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ, ಇದರಿಂದ ಬಹುತೇಕ ಸಚಿವರು ಅಸಮಾಧಾನಗೊಂಡಿದ್ದಾರೆ. ಸಿಎಂ ಬದಲು ಅವರ ಮಗ ಆಡಳಿತದಲ್ಲಿ ಹೆಚ್ಚಿನ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹೇಳಿದರು.

ಅಸಮಾಧಾನಗೊಂಡ ಸಚಿವರು ಈಗಾಗಲೇ ದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್ ನಾಯಕರ ಮುಂದೆ ಮುಖ್ಯಮಂತ್ರಗಳ ವಿರುದ್ಧ ಅಸಮಾಧಾನದ ಬಗ್ಗೆ ತಿಳಿಸಿದ್ದು, ಸಿಎಂ ಅವರನ್ನು ಬದಲಾವಣೆ ಮಾಡಿದರೆ ಮಾತ್ರ ಪಕ್ಷಕ್ಕೆ ಒಳ್ಳೆದಾಗುತ್ತದೆ ಎಂದು ಸಲಹೆ ನೀಡಿದ್ದಾರೆ. ಈ‌ ಕುರಿತು ಕೇಂದ್ರ ಸರಕಾರ ‌ಈ ಬಗ್ಗೆ ಮಾಹಿತಿ ಪಡೆದಿದೆ ಎಂದರು.

ಸಚಿವ ರಮೇಶ್ ಜಾರಕಿಹೋಳಿ ಅವರು ಕೂಡ ಸಿಎಂ ಅವರನ್ನು ಬದಲಾವಣೆ ಮಾಡಬೇಕೆಂದು ಹೇಳಿದ್ದಾರೆ. ಬಿಎಸ್ ವೈ ಅವರು ತಾವೇ ಉತ್ತಮ‌ ಕೆಲಸ ಮಾಡಿದರೆ ಯಾವುದೇ ಅಭ್ಯಂತರವಿಲ್ಲ ಆದರೆ, ಇದೆ ರೀತಿ ಆಡಳಿತದಲ್ಲಿ ಮಗ ವಿಜಯೇಂದ್ರ ಅವರ ಹಸ್ತಕ್ಷೇಪ ಮುಂದುವರೆಸಿದರೆ ಬಿಜೆಪಿ ಹೈಕಮಾಂಡ್ ಅವರನ್ನು ತೆಗೆಯುತ್ತಾರೆ. ನಂತರ ಬಿಎಸ್ ವೈ ಗೆ ಬೆಂಬಲವಾಗಿರುವ ಶಾಸಕರು ಅವರಿಗೆ ಕೈಬಿಡುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ : ಶಾಲೆಗೆ ಹೋಗದೆ ಇದ್ದಿದ್ದರೆ , ಲಾಯರ್ ಆಗುತ್ತಿರಲಿಲ್ಲ, ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ : ಸಿದ್ದರಾಮಯ್ಯ

ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ಮೇಲೆ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಶಹಾಪುರ ಕ್ಷೇತ್ರಕ್ಕೆ ಒಂದು ಪೈಸೆ ಕೂಡ ಅನುದಾನ ನೀಡಿಲ್ಲ ಇದರಿಂದ ನಾವು ಕ್ಷೇತ್ರ ಹೇಗೆ ಅಭಿವೃದ್ಧಿ ಮಾಡಬೇಕೆಂದು ಪ್ರಶ್ನೆ ಮಾಡಿದರು. ಬಿಜೆಪಿ ಶಾಸಕರು ಇರುವ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುತ್ತಾರೆ ,ಆದರೆ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಹಣ ನೀಡುವದಿಲ್ಲ ಎಂದು ಸಿಎಂ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಶಾಸಕರ ಕ್ಷೇತ್ರಕ್ಕೆ 15 ಕೋಟಿ ಅನುದಾನ ನೀಡಿದರೆ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ 10 ಕೋಟಿ ರೂಪಾಯಿ ಆದರು ಅನುದಾನ ನೀಡಬೇಕು. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸರಕಾರದಲ್ಲಿ ಮಾಡಿದ ಕೆಲಸದ ಹಣ ಬಿಡುಗಡೆ ಮಾಡದೆ ಸಿಎಂ ತಡೆ ಹಿಡಿದಿದ್ದಾರೆ ಎಂದು ಬಿಎಸ್ ವೈ ವಿರುದ್ಧ ಶಾಸಕರು ವಾಗ್ದಾಳಿ ನಡೆಸಿದರು
Published by: G Hareeshkumar
First published: September 15, 2020, 5:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading