Chikkamagaluru: ಕಾಶ್ಮೀರದಲ್ಲಿ ನೆಲೆಸಲಿದ್ದಾಳೆ ಶೃಂಗೇರಿ ಶಾರದೆ, ಮಠದಿಂದ ವಿಗ್ರಹ ಕಳುಹಿಸಲು ಒಪ್ಪಿಗೆ

ಕಾಶ್ಮೀರಿಯಲ್ಲಿದ್ದ ಶಾರದಾ ದೇವಿ ಮೂಲ ವಿಗ್ರಹ ನಂತರ ಶೃಂಗೇರಿ ಪೀಠಕ್ಕೆ ಸೇರಿತ್ತು. ಹಾಗಾಗಿ, ಅದೇ ರೂಪವನ್ನು ಹೋಲುವ ಶೃಂಗೇರಿ ಶಾರದಾಂಬೆಯ ಪ್ರತಿರೂಪದ ಮೂರ್ತಿಯನ್ನು ನಿರ್ಮಾಣ ಮಾಡಿಕೊಡಲು ಮಠದ ಶ್ರೀಗಳು ಒಪ್ಪಿದ್ದಾರೆ

ಶೃಂಗೇರಿ ದೇಗುಲ

ಶೃಂಗೇರಿ ದೇಗುಲ

  • Share this:
ಆದಿಶಂಕರಾಚಾರ್ಯರರು(Adi Shankaracharya) 8ನೇ ಶತಮಾನದಲ್ಲಿ ನಿರ್ಮಿಸಿದ ಶೃಂಗೇರಿ (Sringeri) ಕರ್ನಾಟಕ (Karnataka)ದ ಪ್ರಸಿದ್ಧ ದೇವಾಲಯಗಳಲ್ಲೊಂದು. ಇಲ್ಲಿ ವೀಣಾಪಾಣಿ ತುಂಗಾತೀರ ನಿವಾಸಿನಿಯಾಗಿ, ಶೃಂಗೇರಿಪುರವಾಸಿನಿಯಾಗಿ ಕುಳಿತಿದ್ದಾಳೆ. ಭಕ್ತರ ಸಂಕಷ್ಟಗಳನ್ನೆಲ್ಲಾ ದೂರ ಮಾಡ್ತಿರೋ ದೇವಿಗೆ ಅಪಾರ ಭಕ್ತರ ಬಳಗವಿದೆ. ಇದು ವಿದ್ಯಾಧಿದೇವತೆಯಾದ ಸರಸ್ವತಿ ದೇವಿ(Saraswati devi) ಯ ದೇವಸ್ಥಾನವಾಗಿದ್ದು, ಅಕ್ಷರಾಭ್ಯಾಸಕ್ಕೆ ಹೆಸರುವಾಸಿಯಾಗಿದೆ. 2 ರಿಂದ 5 ವರ್ಷದೊಳಗಿನ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದು ಓಂ ನಾಮ ಬರೆಸಿ ವಿದ್ಯಾಭ್ಯಾಸ ಆರಂಭಿಸಿದರೆ ಮಕ್ಕಳು ವಿದ್ಯಾವಂತರಾಗ್ತಾರೆ ಅನ್ನೋ ನಂಬಿಕೆ ಇದೆ. ಹೀಗಾಗಿ ಪೋಷಕರು ದೊಡ್ಡ ಸಂಖ್ಯೆಯಲ್ಲಿಅಕ್ಷರಾಭ್ಯಾಸಕ್ಕೆ ಮಕ್ಕಳನ್ನು ಇಲ್ಲಿಗೆ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಇದೀಗ ಕಾಶ್ಮೀರದಲ್ಲೂ ಶಾರದಾ ದೇವಿಯ ದೇಗುಲ ನಿರ್ಮಿಸಲು ಮುಂದಾಗಿದ್ದಾರೆ. ಈ ದೇಗುಲಕ್ಕೆ ಇಲ್ಲಿಂದಲೇ ವಿಗ್ರಹವನ್ನು ತೆಗೆದುಕೊಂಡು ಹೋಗಲಾಗುತ್ತೆ.

ಕಾಶ್ಮೀರದ ಕುಪ್ವಾರ ಬಳಿ ಶಾರದಾದೇವಿ ದೇಗುಲ

ಪಾಕ್​ ಆಕ್ರಮಿತ ಕಾಶ್ಮೀರದ ಗಡಿಯಲ್ಲಿರೋ ಕುಪ್ವಾರ ಜಿಲ್ಲೆಯ ಟ್ವಿಟಾಲ್​ನಲ್ಲಿ ಈ ದೇವಸ್ಥಾನ ನಿರ್ಮಾಣವಾಗಲಿದೆ. 2021ರ ಡಿಸೆಂಬರ್​ನಲ್ಲೇ ದೇವಸ್ಥಾನಕ್ಕೆ ಶಂಕುಸ್ಥಾಪನೆ ಕೂಡ ನೆರವೇರಿದೆ. ದೇವಸ್ಥಾನ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶಾರದಾ ಸೇವಾ ಸಮಿತಿ ಸದಸ್ಯರು ಶೃಂಗೇರಿಗೆ ಬಂದು ಶ್ರೀಗಳ ಜೊತೆ ಚರ್ಚಿಸಿದ್ದಾರೆ. ಶ್ರೀಮಠದ ಉಭಯ ಶ್ರೀಗಳಿಂದ ಕಾಶ್ಮೀರದ ಶಾರದಾ ದೇಗುಲ ವಿಗ್ರಹ ಕಳುಹಿಸಲು ಒಪ್ಪಿಗೆ ನೀಡಲಾಗಿದೆ.

ಕಾಶ್ಮೀರದಿಂದಲೇ ಬಂದಿತ್ತಾ ಶಾರದಾಂಬೆ ಮೂರ್ತಿ?

ಶೃಂಗೇರಿಯಲ್ಲಿ ಶಾರದಾಂಬೆಯ ಮೂರ್ತಿಯನ್ನು 1200 ವರ್ಷಗಳ ಹಿಂದೆ ಕಾಶ್ಮೀರದ ಶಾರದಾ ಪೀಠದಿಂದ ಶಂಕರಾಚಾರ್ಯರ ತಂದಿದ್ದರು ಎನ್ನುವ ಐತಿಹ್ಯವಿದೆ. ಇದೀಗ ಶೃಂಗೇರಿ ಶಾರದಾಂಬೆಯ ಮೂರ್ತಿಯ ಪ್ರತಿರೂಪವನ್ನು ಶೃಂಗೇರಿ ಮಠದ ವತಿಯಿಂದ ಕಾಶ್ಮೀರದ ಶಾರದಾ ಪೀಠಕ್ಕೆ ಮಾಡಿಸಿ ಕೊಡಲು ಶೃಂಗೇರಿ ಮಠದ ಶ್ರೀಗಳು ಒಪ್ಪಿಗೆ ಸೂಚಿಸಿದ್ದಾರೆ. ಕಾಶ್ಮೀರ ಶಾರದಾ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಪಂಡಿತ್ ಶೃಂಗೇರಿಗೆ ಬಂದು ಮಠದ ಜಗದ್ಗುರು ಭಾರತೀ ತೀರ್ಥ ಹಾಗೂ ವಿಧುಶೇಖರ ಶ್ರೀಗಳ ಜೊತೆ ಈ ಕುರಿತು ಮಾತುಕತೆ ನಡೆಸಿದ್ದಾರೆ. ಈ ವೇಳೆ, ಶೃಂಗೇರಿ ಮಠದ ಶ್ರೀಗಳು ಶೃಂಗೇರಿ ಶಾರದಾಂಬೆಯ ಮೂಲ ವಿಗ್ರಹದ ಪ್ರತಿಕೃತಿಯನ್ನು ಕಾಶ್ಮೀರ ಶಾರದಾ ಮಠಕ್ಕೆ ಕಳುಹಿಸಿಕೊಡಲು ಒಪ್ಪಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: PHOTOS: ಶೃಂಗೇರಿ ಶಾರದಾಂಬೆ ದರ್ಶನ ಪಡೆದ ದೇವೇಗೌಡರ ಕುಟುಂಬ

ಹಿಂದೆ ಕಾಶ್ಮೀರಿಯಲ್ಲಿದ್ದ ಶಾರದಾ ದೇವಿ ವಿಗ್ರಹ ನಂತರ ಶೃಂಗೇರಿ ಪೀಠಕ್ಕೆ ಸೇರಿತ್ತು. ಅಂದರೆ ಮೂಲ ವಿಗ್ರಹ ಈಗ ಶೃಂಗೇರಿ ಮಠದಲ್ಲಿದೆ. ಹಾಗಾಗಿ, ಅದೇ ರೂಪವನ್ನು ಹೋಲುವ ಶೃಂಗೇರಿ ಶಾರದಾಂಬೆಯ ಪ್ರತಿರೂಪದ ಮೂರ್ತಿಯನ್ನು ನಿರ್ಮಾಣ ಮಾಡಿಕೊಡಲಾಗುತ್ತದೆ ಎಂದು ಮಠದ ಗುರುಗಳು ಕಾಶ್ಮೀರ ಶಾರದಾ ಸೇವಾ ಸಮಿತಿಯ ರವೀಂದ್ರ ಪಂಡಿತ್‍ಗೆ ಭರವಸೆ ನೀಡಿದ್ದಾರೆ.

ಸರ್ವಜ್ಞ ಪೀಠದ ಮಾದರಿಯಲ್ಲೇ ದೇಗುಲ

ಪಾಕ್​ ಆಕ್ರಮಿತ ಕಾಶ್ಮೀರದ ಗಡಿಯಲ್ಲಿರೋ ಕುಪ್ವಾರ ಜಿಲ್ಲೆಯ ಟ್ವಿಟಾಲ್​ನಲ್ಲಿ ಈ ದೇವಸ್ಥಾನ ನಿರ್ಮಾಣವಾಗಲಿದೆ. 2021ರ ಡಿಸೆಂಬರ್​ನಲ್ಲೇ ದೇವಸ್ಥಾನಕ್ಕೆ ಶಂಕುಸ್ಥಾಪನೆ ಕೂಡ ನೆರವೇರಿದೆ. ದೇವಸ್ಥಾನ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶಾರದಾ ಸೇವಾ ಸಮಿತಿ ಸದಸ್ಯರು ಶೃಂಗೇರಿಗೆ ಬಂದು ಶ್ರೀಗಳ ಜೊತೆ ಚರ್ಚಿಸಿದ್ದಾರೆ. ಶ್ರೀಮಠದ ಉಭಯ ಶ್ರೀಗಳಿಂದ ಕಾಶ್ಮೀರದ ಶಾರದಾ ದೇಗುಲ ವಿಗ್ರಹ ಕಳುಹಿಸಲು ಒಪ್ಪಿಗೆ ನೀಡಲಾಗಿದೆ.

ಇದನ್ನೂ ಓದಿ: ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ ಕಾಮೇನಹಳ್ಳಿ ಜಲಪಾತ

ಕಾಶ್ಮೀರದಲ್ಲಿ 2021ರ ಡಿಸೆಂಬರ್ 2 ರಂದೇ ಭೂಮಿ ಪೂಜೆ ನಡೆದಿದ್ದು, ದೇಗುಲದ ವಾಸ್ತುಶಿಲ್ಪ ಹಿಂದಿನ ಸರ್ವಜ್ಞ ಪೀಠದ ಮಾದರಿಯಲ್ಲೇ ಇರಲಿದೆ. ಶಾರದಾಂಬೆ ದೇವಾಲಯ ಕಲ್ಲುಗಳಿಂದ ನಿರ್ಮಾಣವಾಗಲಿದ್ದು, ನಾಲ್ಕು ದಿಕ್ಕಿಗೂ ನಾಲ್ಕು ಬಾಗಿಲು ಇರಲಿದೆ. ಚಳಿಗಾಲ ಹೊರತುಪಡಿಸಿ ಉಳಿದ ಎಲ್ಲಾ ಕಾಲದಲ್ಲೂ ದೇವರ ದರ್ಶನಕ್ಕೆ ಅವಕಾಶ ಇರಲಿದೆ. ಕಾಶ್ಮೀರದಲ್ಲೂ ಶಾರದಾಂಬೆ ದೇಗಲ ನಿರ್ಮಾಣವಾಗ್ತಿರೋದು ಹೆಮ್ಮೆಯ ವಿಚಾರ
Published by:Pavana HS
First published: