HOME » NEWS » District » SHARADA ACHAR IN TEARS REMEMBERING FATHER DURING KAVERI TEERTHODBHAVA RSK SNVS

ಕಾವೇರಿ ತೀರ್ಥೋದ್ಭವದಲ್ಲಿ ಮೃತ ತಂದೆ ತಾಯಿ ನೆನೆದು ಕಣ್ಣೀರಿಟ್ಟ ಶಾರದಾ ಆಚಾರ್

ಕೊಡಗಿನ ಭೂಕುಸಿತದಲ್ಲಿ ಬಲಿಯಾಗಿದ್ದ ಅರ್ಚಕ ನಾರಾಯಣ ಆಚಾರ್ ಅವರ ಇಬ್ಬರು ಹೆಣ್ಮಕ್ಕಳು ಇಂದು ತಲಕಾವೇರಿಯ ತೀರ್ಥೋದ್ಭವ ಕಾರ್ಯದ ವೇಳೆ ಮೃತ ತಂದೆ ಹಾಗೂ ಕುಟುಂಬ ಸದಸ್ಯರನ್ನು ನೆನೆದು ಕಣ್ಣೀರಿಟ್ಟ ಪ್ರಸಂಗ ನಡೆಯಿತು.

news18-kannada
Updated:October 17, 2020, 6:40 PM IST
ಕಾವೇರಿ ತೀರ್ಥೋದ್ಭವದಲ್ಲಿ ಮೃತ ತಂದೆ ತಾಯಿ ನೆನೆದು ಕಣ್ಣೀರಿಟ್ಟ ಶಾರದಾ ಆಚಾರ್
ಶಾರದಾ ಆಚಾರ್ ಮತ್ತು ನಮಿತಾ ಆಚಾರ್
  • Share this:
ಕೊಡಗು: ಪ್ರತೀ ವರ್ಷ ತೀರ್ಥೋದ್ಭವ ಎಂದರೆ ಅದೇನೋ ಸಂಭ್ರಮ ಸಂತಸದಲ್ಲಿ ತನ್ನ ತಂದೆ ತಾಯಿಗಳೊಂದಿಗೆ ಕಳೆಯುತ್ತಿದ್ದ ಈ ಹೆಣ್ಣು ಮಕ್ಕಳು ಈ ಬಾರಿ ಅನಾಥವಾಗಿ ನಿಂತಿದ್ದರು. ಅಕ್ಟೋಬರ್ 17 ರಂದು ತಲಕಾವೇರಿಯಲ್ಲಿ ಕನ್ಯಾ ಲಗ್ನದಲ್ಲಿ ಕಾವೇರಿ ಮಾತೆ ತೀರ್ಥ ರೂಪಿಣಿಯಾದಳು. ತೀರ್ಥೋದ್ಭವದಲ್ಲಿ ಪ್ರತೀ ವರ್ಷದಂತೆ ಭಾಗವಹಿಸಿದ್ದ ಮೃತ ನಾರಾಯಣ ಆಚಾರ್ ಅವರ ಮಕ್ಕಳಾದ ಶಾರದ ಆಚಾರ್ ಮತ್ತು ನಮಿತಾ ಆಚಾರ್ ತಮ್ಮ ತಂದೆ ತಾಯಿ ಇಲ್ಲದ ಕ್ಷಣಗಳನ್ನು ನೆನೆದು ಕಣ್ಣೀರಿಟ್ಟರು.

ಪ್ರತೀ ವರ್ಷವೂ ತಂದೆ ಸಾವಿರಾರು ಭಕ್ತರ ನಡುವೆ ಕಾವೇರಿಯನ್ನು ಪೂಜಿಸುತ್ತಿದ್ದ. ಆ ಕ್ಷಣದಲ್ಲಿ ನಮ್ಮ ಸಂಭ್ರಮ ಸಡಗರಗಳೇ ಹೇಳತೀರದಂತಿದ್ದವು. ಆದರೆ ಈ ಬಾರಿ ಕಾವೇರಿ ಬ್ರಹ್ಮಕುಂಡಿಕೆ ಬಳಿ ತಂದೆ, ತಾಯಿ ದೊಡ್ಡಪ್ಪ ಅವರ್ಯಾರು ಕಾಣಿಸದಿರುವುದು ಬಹಳ ನೋವಾಗುತ್ತಿದೆ ಎಂದು ಹೇಳಿದ ಅವರಿಬ್ಬರು ಒತ್ತರಿಸಿಬರುತ್ತಿದ್ದ ದುಃಖ ನುಂಗಿಕೊಳ್ಳುತ್ತಿದ್ದರು.

ಇದನ್ನೂ ಓದಿ: DK Shivakumar: ಒಕ್ಕಲಿಗ ಎಂಬ ಹೆಮ್ಮೆ ಇದೆ ಆದರೆ, ನನ್ನ ಜಾತಿ ಕಾಂಗ್ರೆಸ್​; ಡಿಕೆ ಶಿವಕುಮಾರ್

ಶಾರದಾ ಆಚಾರ್ ಮತ್ತು ಅವರ ಮಗಳು ಇಬ್ಬರೂ ಕಾವೇರಿ ಮಾತೆಯ ಬ್ರಹ್ಮಕುಂಡಿಕೆ ಬಳಿ ಹೋಗಿ ತೀರ್ಥೋದ್ಭವದಲ್ಲಿ ಭಾಗವಹಿಸಿದ್ರು. ಇನ್ನು ನಮಿತಾ ಆಚಾರ್ ಮತ್ತು ಅವರ ಮಗಳು ಮಾತ್ರ ದೂರದಲ್ಲೇ ನಿಂತು ನೋಡಿದರು. ಆದರೆ ಆಗಸ್ಟ್ ಐದರಂದು ಕೊಡಗಿನಲ್ಲಿ ಭಾರೀ ಭೂಕುಸಿತ ಸಂಭವಿಸಿ ಈ ವೇಳೆ ಭೂಸಮಾಧಿಯಾಗಿದ್ದ ತಮ್ಮ ತಂದೆ ನಾರಾಯಣ ಆಚಾರ್, ತಾಯಿ ಹಾಗೂ ಕುಟುಂಬದವರ ಜೊತೆಗೆ ಸಹಾಯಕ ಅರ್ಚಕರನ್ನೂ ನೆನೆದು ಶಾರದಾ ಆಚಾರ್ ಕಣ್ಣೀರು ಇಟ್ಟರು.

ಈ ಸಂದರ್ಭದಲ್ಲಿ, ನಮ್ಮ ತಂದೆ, ತಾಯಿ ಮತ್ತು ದೊಡ್ಡಪ್ಪ ಅವರುಗಳು ಇರದೇ ಇರುವುದು ತೀವ್ರ ನೋವಾಗುತ್ತಿದೆ. ಅವರ ಆತ್ಮಕ್ಕೆ ಕಾವೇರಿ ತಾಯಿ ಶಾಂತಿ ನೆಮ್ಮದಿ ನೀಡಲಿ ಅಂತ ಬೇಡಿಕೊಳ್ತೇವೆ ಎಂದಷ್ಟೇ ಕೇಳಿಕೊಳ್ಳಲು ಸಾಧ್ಯ. ನಾಡಿನ ಜನರಿಗೆ ಮಾತೆ ಕಾವೇರಿ ಕಾಪಾಡಲಿ ಎಂದು ಹೇಳಿದರು.

ಇದನ್ನೂ ಓದಿ: ಭೀಮಾ ನದಿಯಲ್ಲಿ ಪ್ರವಾಹ; ಜೀವ ಉಳಿಸಿಕೊಳ್ಳಲು ಜನರ ಹರಸಾಹಸ

ಇದೇ ವೇಳೆ, ತೀರ್ಥೋದ್ಭವ ಎಂದಿನಂತೆ ಶ್ರದ್ಧಾಭಕ್ತಿಯಿಂದ ನಡೆಯಿತು. ಯಾವುದೇ ಸಮಸ್ಯೆ ಆಗದಂತೆ ಎಲ್ಲವೂ ಸುಸೂತ್ರವಾಗಿ ತೀರ್ಥೋದ್ಭವ ನಡೆಯಿತು.ವರದಿ: ರವಿ ಎಸ್ ಹಳ್ಳಿ
Published by: Vijayasarthy SN
First published: October 17, 2020, 6:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories