• Home
  • »
  • News
  • »
  • district
  • »
  • HDKಗೆ ಶಂಖನಾದ ಭಾರತೀಯ ಸಂಸ್ಕೃತಿಯ ಪ್ರತೀಕ ಅನ್ನೋದು ಗೊತ್ತಿಲ್ಲ: ಸಚಿವ R Ashok

HDKಗೆ ಶಂಖನಾದ ಭಾರತೀಯ ಸಂಸ್ಕೃತಿಯ ಪ್ರತೀಕ ಅನ್ನೋದು ಗೊತ್ತಿಲ್ಲ: ಸಚಿವ R Ashok

ಸಚಿವ ಆರ್. ಅಶೋಕ್

ಸಚಿವ ಆರ್. ಅಶೋಕ್

ಶಂಖನಾದ ಭಾರತೀಯ ಸಂಸ್ಕೃತಿ ಪ್ರತೀಕ ಅನ್ನೋದು ಗೊತ್ತಿಲ್ಲ ಎಂದು ಸಚಿವ ಆರ್. ಅಶೋಕ್ (Minister R Ashok) ತಿರುಗೇಟು ನೀಡಿದ್ದಾರೆ

  • Share this:

ಕೊಡಗು: ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಅವರಿಗೆ ಶಂಖನಾದ ಭಾರತೀಯ ಸಂಸ್ಕೃತಿ ಪ್ರತೀಕ ಅನ್ನೋದು ಗೊತ್ತಿಲ್ಲ ಎಂದು ಸಚಿವ ಆರ್. ಅಶೋಕ್ (Minister R Ashok) ತಿರುಗೇಟು ನೀಡಿದ್ದಾರೆ. ಕೊಡಗಿನ ಕುಶಾಲನಗರದ (Kushala Nagara, kodagu) ಜನ ಸ್ವರಾಜ ಯಾತ್ರೆಯಲ್ಲಿ (Jan Swaraj Yatre) ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳಿಗೂ ಶಂಖ ಊದಲಾಗುತ್ತದೆ. ಆ ಕಹಳೆಯಿಂದ ಶಬ್ದ ಮಾಡಿ ಕೆಲಸಕ್ಕೆ ಕೈ ಹಾಕುತ್ತಾರೆ ಎಂದರು. ಯಡಿಯೂರಪ್ಪ (BS Yediyurappa) ಅವರು ಹೆಚ್ ಡಿಕೆಗೆ ಒಂದು ಅವಕಾಶ ನೀಡಿದ್ದರು. ಆಗ ಕುಮಾರಸ್ವಾಮಿ ಸರಿಯಾಗಿ ಕೆಲಸ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.


ಶಂಖ ನಾದದ ಬಗ್ಗೆ ಎಲ್ಲರಿಗೂ ಗೊತ್ತಿರುವುದಿಲ್ಲ. ಶ್ರೀಕೃಷ್ಣನ ಪರವಾಗಿರುವವರಿಗೆ ಮಾತ್ರ ಗೊತ್ತಿರುತ್ತದೆ ಕುಮಾರಸ್ವಾಮಿ ಅವರಿಗೆ ಶಂಖನಾದ ಮಾಡುವುದಕ್ಕೆ ಆಗಲ್ಲ. ಆ ಶಕ್ತಿಯನ್ನು ದೇವರು ಕಿತ್ತುಕೊಂಡಿದ್ದಾನೆ ಎಂದರು.


ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ, ರಾಜ್ಯದಲ್ಲಿರುವ ಕಾಂಗ್ರೆಸ್ ಸದ್ಯದಲ್ಲಿಯೇ ಇಲ್ಲವಾಗುತ್ತದೆ. ಸದ್ಯ ರಾಜ್ಯದಲ್ಲಿಯೇ ಕಾಂಗ್ರೆಸ್ ಪ್ರಾದೇಶಿಕ ಪಕ್ಷವಾಗಿ ಕೆಲಸ ಮಾಡುತ್ತಿದೆ. ಅದು ಕೂಡ ಹೊಡೆದು ಹೋಗುತ್ತೋ ಗೊತ್ತಿಲ್ಲ. ಈಗಾಗಲೇ ರಾಜ್ಯದಲ್ಲಿ ಎರಡು ಬಣವಾಗಿ ಹೋಗಿದೆ. ಸಿದ್ದರಾಮಯ್ಯನದು ಒಂದು ಬಣವಾದರೆ ಡಿಕೆಶಿಯದ್ದು ಮತ್ತೊಂದು ಬಣ. ಇಬ್ಬರೂ ತಾನೇ ಮುಖ್ಯಮಂತ್ರಿ ಅಂತ ಭಾವಿಸಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.


ಇದನ್ನೂ ಓದಿ:  ಪರಿಷತ್ ಚುನಾವಣೆಗೆ Congress Candidate List ಬಿಡುಗಡೆ: 17 ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ


ಈಶ್ವರಪ್ಪ ವಿವಾದಾತ್ಮಕ ಹೇಳಿಕೆ


ಎಲ್ಲಾ ಕ್ಷೇತ್ರಗಳಿಗೆ ಸಚಿವರುಗಳು ಹೋದರೆ ಬಿಜೆಪಿ ಏನು ಮಳೆ ನಿಲ್ಲಿಸೋಕೆ ಆಗುತ್ತಾ ಎಂದು ಸಚಿವ ಕೆ ಎಸ್ ಈಶ್ವರಪ್ಪ ಮಡಿಕೇರಿಯಲ್ಲಿ ವಿವಾದಾತ್ಮಕವಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಮಳೆ ಪ್ರವಾಹದಿಂದ ಜನರು ತತ್ತರಿಸುತ್ತಿದ್ದರೆ, ಬಿಜೆಪಿಯವರು ಜನಸ್ವರಾಜ್ ಸಮಾವೇಶ ಮಾಡಿಕೊಂಡು ಚುನಾವಣೆಗಾಗಿ ಓಡಾಡುತಿದ್ದಾರೆ ಎಂದು ಪ್ರತಿಪಕ್ಷಗಳು ಟೀಕಿಸುತ್ತಿವೆ ಎಂದು ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಅವರು ವಿವಾದಾತ್ಮಕವಾಗಿ ಪ್ರತಿಕ್ರಿಯಿಸಿದರು.


ಶಂಖ ಊದೋರು ಇಲ್ಲ ಹೇಳಿಕೆಗೆ HDK ತಿರುಗೇಟು


ನಾವು ಶಂಖ ಊದಲು ಜನ ಕರೆದುಕೊಂಡು ಬರಬೇಕಿಲ್ಲ. ಕೇವಲ ಶಂಖ ಊದುವುದರಿಂದ ಏನೂ ಆಗಲ್ಲ. ನೀವು ಶಂಖ ಊದಲು ಜನ ಇಟ್ಟುಕೊಂಡಿದ್ದೀರಿ. ನೀವು ಶಂಕ ಊದಿಕೊಳ್ರಪ್ಪ. ಆದರೆ ಈಗ ಶಂಖ ಊದುವ ಕಾಲ ಅಲ್ಲ, ಕೆಲಸ ಮಾಡಿ. ನಾವು ಅಧಿಕಾರದಲ್ಲಿ ಕೆಲವೇ ದಿನ ಅಧಿಕಾರದಲ್ಲಿ ಇದ್ದರೂ ಜನರ ಮನಸ್ಸಲ್ಲಿ ಉಳಿಯುವ ಕೆಲಸ ಮಾಡಿದ್ದೇವೆ ಎಂದು ಹೇಳುವ ಮೂಲಕ ಈಶ್ವರಪ್ಪ ಅವರಿಗೆ ತಿರುಗೇಟು ನೀಡಿದ್ದರು.


ನೀವು ನಿಮಗೆ ಅಭಿವೃದ್ಧಿ ಮಾಡಿಕೊಂಡಿದ್ದೀರಿ ಅಷ್ಟೇ. ನಿಮ್ಮ ಹಿಂದೆ ಝಂಡ ಹಿಡಿದು ಬರುವವರ ಅಭಿವೃದ್ಧಿ ಮಾಡಿದ್ದೀರಿ. ಆದರೆ ನಿಮ್ಮನ್ನ ಅಧಿಕಾರದಲ್ಲಿ ಕೂರಿಸಿದವರ ಅಭಿವೃದ್ಧಿ ಮಾಡಿದ್ದೀರ ಹೇಳಿ. ಬಕಾಸುರರ ರೀತಿ ನುಂಗೋದೇ ಅಭಿವೃದ್ಧಿಯೇ ಎಂದು ಪ್ರಶ್ನೆ ಮಾಡಿದ್ದರು.


ಇದನ್ನೂ ಓದಿ:  ಚನ್ನಪಟ್ಟಣ ಬಳಿ ಸಂಸದರ ಕಾರು ಅಪಘಾತಕ್ಕೊಳಗಾಯಿತೇ? ಏನಾಯ್ತು ಎಂದು ತಿಳಿಸಿದ Pratap Simha


ನವೆಂಬರ್ 19ರಂದು ಮಾಧ್ಯಮಗಳ ಜೊತೆ ಮಾತನಾಡಿದ್ದ ಕುಮಾರಸ್ವಾಮಿ ಅವರು, ಬಿಜೆಪಿ (BJP) ಎಲ್ಲಾ ಕಡೆ ಶಂಖ ಊದೋಕೆ ಹೋಗಿದ್ದಾರೆ. ಯಾವುದೋ ಜನ ಸ್ವರಾಜ್ ಯಾತ್ರೆ (Jan Swaraj Yatra) ಮಾಡಲು ಹೊರಟಿದ್ದಾರೆ. ಶಂಖ ಊದಿದರೆ ಎಲ್ಲವೂ ಸರಿಯಾಗುತ್ತಾ?  ಮಳೆಯಿಂದ ಆಗಿರುವ ಸಮಸ್ಯೆ ಕಡೆ ಗಮನಹರಿಸ ಬೇಕು ಅಲ್ಲವೇ, ಶಂಖ ಊದುವುದೇ ಇವರಿಗೆ ಹೆಚ್ಚಾಯ್ತೇ ಎಂದು ಮಾಜಿ ಸಿಎಂ ಹೆಚ್.ಡಿ .ಕುಮಾರಸ್ವಾಮಿ (Former CM HD Kumaraswamy) ರಾಜ್ಯಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.


ಈ ಹೇಳಿಕೆಗೆ ಬಿಜೆಪಿ ನಾಯಕರು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ . ವಿಪಕ್ಷಗಳ ಟೀಕೆ ಬೆನ್ನಲ್ಲೆ ಸೋಮವಾರ ಸಿಎಂ ಬೊಮ್ಮಾಯಿ ತಮ್ಮ ಕೊಡಗು ಪ್ರವಾಸ ರದ್ದುಗೊಳಿಸಿ, ಮಳೆಯಿಂದ ತತ್ತರಿಸಿರುವ ಕೋಲಾರ ಜಿಲ್ಲೆಗೆ ಭೇಟಿ ನೀಡಿದ್ದರು.

Published by:Mahmadrafik K
First published: