HOME » NEWS » District » SEXUAL HARASSMENT ALLEGATION AGAINST MANDYA DIST BJP PRESIDENT RGM HK

ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಕ್ರಮ ಕೈಗೊಳ್ಳದ ಹೈಕಮಾಂಡ್ ವಿರುದ್ಧ ಆಕ್ರೋಶ

ಜಿಲ್ಲಾಧ್ಯಕ್ಷರಾಗಿರುವ ವಿಜಯ್ ಕುಮಾರ್ ಮೇ ತಿಂಗಳ ಲಾಕ್​​ಡೌನ್​​ ವೇಳೆ ಕೆ.ಆರ್.ಪೇಟೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಜೊತೆ ಅಸಭ್ಯವಾಗಿ ವರ್ತಿಸಿ ಬಂಧನಕೊಳಗಾಗಿದ್ದ. ಇದೀಗ ಪಕ್ಷ ಮಹಿಳಾ ಕಾರ್ಯಕರ್ತರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ

news18-kannada
Updated:November 5, 2020, 7:22 AM IST
ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಕ್ರಮ ಕೈಗೊಳ್ಳದ ಹೈಕಮಾಂಡ್ ವಿರುದ್ಧ ಆಕ್ರೋಶ
ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ವಿಜಯ್ ಕುಮಾರ್
  • Share this:
ಮಂಡ್ಯ(ನವೆಂಬರ್​ 05): ಮಂಡ್ಯ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ದ ಲೈಂಗಿಕ ದೌರ್ಜನ್ಯದ ಗಂಭೀರ  ಆರೋಪ ಕೇಳಿ ಬಂದಿದೆ. ಅಲ್ಲದೇ ಲೈಂಗಿಕ ದೌರ್ಜನ್ಯ ನಡೆಸತ್ತಿರುವ ಬಗ್ಗೆ ದೂರು ನೀಡಿದರು ಕ್ರಮ ಕೈಗೊಳ್ಳದ ಪಕ್ಷದ ವರಿಷ್ಠರ ವಿರುದ್ದ ಮಂಡ್ಯದಲ್ಲಿ ಮಹಿಳಾ ಕಾರ್ಯಕರ್ತರು ಪಕ್ಷದ ವಿರುದ್ದ ರೊಚ್ಚಿಗೆದ್ದಿದ್ದಾರೆ. ಕೂಡಲೇ ಜಿಲ್ಲಾಧ್ಯಕ್ಷರ ಬದಲಾವಣೆ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಡ್ಯ ನಗರದಲ್ಲಿ ಬಿಜೆಪಿ ಪಕ್ಷದ ಕಚೇರಿ ಮುಂದೆ ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ. ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ವಿರುದ್ದ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಕುರಿತಾಗಿ ಮಂಡ್ಯ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರಶ್ಮಿಯವರು ಪಕ್ಷದ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್​​ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಕೂಡ ದೂರಿನ ಪತ್ರ ಬರೆದಿದ್ದಾರೆ.

ಅಲ್ಲದೆ ಪತ್ರ ಬರೆದರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಗರದಲ್ಲಿರುವ ಪಕ್ಷದ ಕಚೇರಿ ಮುಂದೆ ಪಕ್ಷದ ದೌರ್ಜನ್ಯಕೊಳಗಾದ ಮಹಿಳೆಯರು ಸೇರಿ ಮತ್ತು ಪುರುಷ ಕಾರ್ಯಕರ್ತರು ಪಕ್ಷದ ಕಚೇರಿ‌ ಮುಂದೆ ಕುಳಿತು ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ.

ಇನ್ನು ಪಕ್ಷದ ಕಚೇರಿ ಮುಂದೆ ಕಾರ್ಯಕರ್ತರು ಮತ್ತು ದೌರ್ಜನ್ಯ ಕೊಳಗಾದವರು ಪ್ರತಿಭಟನೆ ನಡೆಸುವ ಮಾಹಿತಿ ತಿಳಿದ ಜಿಲ್ಲಾಧ್ಯಕ್ಷರು ಇಂದು ಪಕ್ಷದ ಕಚೇರಿಗೂ ಬಂದಿಲ್ಲ. ಅಲ್ಲದೇ ಪಕ್ಷದ ಕಚೇರಿಗೂ ಬಾಗಿಲು ಹಾಕಿ ನಾಪತ್ತೆಯಾಗಿದ್ದಾರೆ. ಪ್ರಸ್ತುತ ಜಿಲ್ಲಾಧ್ಯಕ್ಷರಾಗಿರುವ ವಿಜಯ್ ಕುಮಾರ್ ರೌಡಿ ಶೀಟರ್ ವ್ಯಕ್ತಿಯಾಗಿದ್ದು, ಮೇ ತಿಂಗಳ ಲಾಕ್​​ಡೌನ್​​ ವೇಳೆ ಕೆ.ಆರ್.ಪೇಟೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಜೊತೆ ಅಸಭ್ಯವಾಗಿ ವರ್ತಿಸಿ ಬಂಧನಕೊಳಗಾಗಿದ್ದ.

ಇದನ್ನೂ ಓದಿ :  ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಿಂಬಾಳ್ಕರ್- ಪಾಟೀಲ್ ನಡುವೆ ಫೈಟ್; ರೆಸಾರ್ಟ್ ರಾಜಕಾರಣ

ಇದೀಗ ಪಕ್ಷ ಮಹಿಳಾ ಕಾರ್ಯಕರ್ತರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆಯಾದರು ಈತ ಮಾತ್ರ ಎಲ್ಲದಕ್ಕೂ ಸಾಕ್ಷಿ ಕೇಳುತ್ತಿದ್ದಾನೆ. ಅಲ್ಲದೇ ಅದೆಲ್ಲ ಸುಳ್ಳು ಆಧಾರ ಸಮೇತ ಸಾಕ್ಷಿ ಇದ್ರೆ ಕೊಡಿ ಮಾತನಾಡುತ್ತೇನೆ ಎನ್ನುತ್ತಿದ್ದು, ತನ್ನ ಮೇಲಿನ ಆರೋಪಗಳನ್ನು ಅಲ್ಲಗೆಳೆಯುತ್ತಿದ್ದಾನೆ.

ಒಟ್ಟಾರೆ ಮಂಡ್ಯ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರ ಲೈಂಗಿಕ ಕಿರುಕುಳಕ್ಕೆ ಬೇಸತ್ತ ಮಹಿಳಾ ಕಾರ್ಯಕರ್ತರು ಇದೀಗ ತಮ್ಮ ಮೇಲಿನ‌ ದೌರ್ಜನ್ಯದ ವಿರುದ್ದ ಪಕ್ಷದ ವರಿಷ್ಟರಿಗೆ ದೂರು ನೀಡಿದ್ದು ಪಕ್ಷದ ವರಿಷ್ಟರು ಯಾವ ಕ್ರಮ ಕೈಗೊಳ್ಳುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.
Published by: G Hareeshkumar
First published: November 5, 2020, 7:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories