• Home
  • »
  • News
  • »
  • district
  • »
  • ವಿಧಾನ ಪರಿಷತ್ ಕಲಾಪ; ರಾಜ್ಯದ ನೆರೆ ಪರಿಸ್ಥಿತಿ ಬಗ್ಗೆ ಪ್ರತಿಪಕ್ಷ ಸದಸ್ಯರಿಂದ ಗಂಭೀರ ಚರ್ಚೆ

ವಿಧಾನ ಪರಿಷತ್ ಕಲಾಪ; ರಾಜ್ಯದ ನೆರೆ ಪರಿಸ್ಥಿತಿ ಬಗ್ಗೆ ಪ್ರತಿಪಕ್ಷ ಸದಸ್ಯರಿಂದ ಗಂಭೀರ ಚರ್ಚೆ

ಸಾಂದರ್ಭಿಕ ಚಿತ್ರ (ರಾಜ್ಯ ಅಧಿವೇಶನ).

ಸಾಂದರ್ಭಿಕ ಚಿತ್ರ (ರಾಜ್ಯ ಅಧಿವೇಶನ).

ಈಗ ಮಳೆ ಬಂದಿದೆ. ನೆರೆ ಪೀಡಿತ ಪ್ರದೇಶದ ರೈತರ ಸಾಲ‌ಮನ್ನಾ ಮಾಡುತ್ತೇವೆ ಎಂದು ಈಗ ಟ್ರ್ಯಾಕ್ಟರ್ ಜಪ್ತಿ ಮಾಡುತ್ತಿದ್ದೀರಿ. ರೈತರ ಮೂರು ಬೆಳೆ ಸತತ ನಷ್ಟವಾಗಿದೆ. ಇದಕ್ಕೆ ಸರ್ಕಾರದ ಉತ್ತರ ಏನು? ಎಂದು ವಿಧಾನ ಪರಿಷತ್​ನಲ್ಲಿ ವಿರೋಧ ಪಕ್ಷದ ನಾಯಕ ಎಸ್​.ಆರ್​. ಪಾಟೀಲ್ ಕಿಡಿಕಾರಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು: ರಾಜ್ಯದಲ್ಲಿ ಕಳೆದ ಸಾರಿಗಿಂತ ಹೆಚ್ಚಿನ ಹಾನಿ ಈ ಸಾರಿ ಮಳೆಯದ ಉಂಟಾದ ನೆರೆಯಿಂದ ಹಾನಿ ಆಗಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ತಿಳಿಸಿದ್ದಾರೆ. ನಿಯಮ 69 ರ ಅಡಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ಅವರು, ನೆರೆಯದ ರಾಜ್ಯದ ಹಲವು ಜಿಲ್ಲೆಯಲ್ಲಿ ಸಮಸ್ಯೆ ಹೆಚ್ಚಾಗಿದೆ. ಒಂದು ಮಳೆಗಾಲದ ಅವಧಿಯಲ್ಲಿ ಎರಡು ಮೂರು ಸಾರಿ ನೆರೆ ಸಮಸ್ಯೆ ಕಾಡಿದೆ. ಕಳೆದ ಸಾರಿ ನೆರೆ ಬಂದಾಗಲೇ ಸಮಸ್ಯೆಯ ಗಮನ ಸೆಳೆದಿದ್ದೆವು. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. 24 ಜಿಲ್ಲೆ ನೆರೆ ಸಮಸ್ಯೆಗೆ ತುತ್ತಾಗಿದೆ.ರಾಜ್ಯದ ಬಹುತೇಕ ಜಿಲ್ಲೆ ಸಮಸ್ಯೆಗೆ ಒಳಗಾಗಿವೆ. 134 ತಾಲ್ಲೂಕು ಸಮಸ್ಯೆಗೆ ತುತ್ತಾಗಿದೆ. 913 ಹಳ್ಳಿ ಮುಳುಗಿದೆ. ಕಳೆದ ಸಾರಿ ಜನರ ಜೀವ ರಕ್ಷಣೆ ಕಳೆದ ಸಾರಿ ಚೆನ್ನಾಗಿತ್ತು. ಸಾವು ಕಳೆದ ಸಾರಿಗಿಂತ ಹೆಚ್ಚಾಗಿದೆ. 500 ಪ್ರಾಣಿಗಳು, 105 ಮಂದಿ ಜನ ಪ್ರಾಣ ಹೋಗಿದೆ. 20,439 ಕಿಮೀ ರಸ್ತೆ ಹಾಳಾಗಿದೆ. ಒಟ್ಟಾರೆ ಕಳೆದ ವರ್ಷಕ್ಕಿಂತ ಹೆಚ್ಚಿನ ಹಾನಿ ಎಲ್ಲಾ ವಿಭಾಗದಲ್ಲೂ ಆಗಿದೆ. ಸೆ.15ರವರೆಗಿನ ಹಾನಿಯ ವಿವರ ಇದಾಗಿದೆ. ಮಳೆ ಇದೇ ರೀತಿ ಇನ್ನೂ ಮೂರು ದಿನ ಸುರಿಯುವ ಮಾಹಿತಿ ಇದೆ. ನಷ್ಟ ಇನ್ನೂ ಎರಡು ಮೂರರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.


ಅಲ್ಲದೆ, "ಮಳೆ ಹಾನಿಗೆ ಪರಿಣಾಮಕಾರಿ ಕ್ರಮ ಆಗಬೇಕು. ಕಷ್ಟಸಾಧ್ಯ ಅನ್ನುವುದು ಗೊತ್ತು. ಆದರೆ ಸ್ವಲ್ಪ ಶ್ರಮ ಸರ್ಕಾರ ತೊಡಗಿಸಬೇಕು. ಕಳೆದ ಸಾರಿ ಸಿಎಂ ಯಡಿಯೂರಪ್ಪ ಮಾತ್ರ ಇದ್ದರು. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ್ದರು. ಆದರೆ ಈ ಸಾರಿ ಹಾನಿ ಹೆಚ್ಚಾಗಿದೆ. ಯಾರೂ ಹೋಗಿಲ್ಲ. 9400 ಕೋಟಿ ರೂ. ಹಾನಿ ಆಗಿದೆ ಎಂದಿದ್ದೀರಿ. ಆದರೆ ಕೇಂದ್ರದ ತಂಡ ಬಂದು ಹೋಗಿದೆ. ಹಣ ಬಿಡುಗಡೆ ಆಗಿಲ್ಲ. ರೈತರ ಬೆಳೆ ಹಾಳಾಗಿದೆ. ಕಳೆದ ವರ್ಷ ಬೆಳೆ ಹಾನಿ ಆಯಿತು. ನಂತರ ಕೋವಿಡ್ ಬಂದು ಸಮಸ್ಯೆಗೆ ಒಳಗಾದರು.


ಈಗ ಮಳೆ ಬಂದಿದೆ. ನೆರೆ ಪೀಡಿತ ಪ್ರದೇಶದ ರೈತರ ಸಾಲ‌ಮನ್ನಾ ಮಾಡುತ್ತೇವೆ ಎಂದು ಈಗ ಟ್ರ್ಯಾಕ್ಟರ್ ಜಪ್ತಿ ಮಾಡುತ್ತಿದ್ದೀರಿ. ರೈತರ ಮೂರು ಬೆಳೆ ಸತತ ನಷ್ಟವಾಗಿದೆ. ಇದಕ್ಕೆ ಸರ್ಕಾರದ ಉತ್ತರ ಏನು?" ಎಂದು ಕಿಡಿಕಾರಿದ್ದಾರೆ.  "ಜನ ಮೆಚ್ಚಿ ದೊಡ್ಡ ಪ್ರಮಾಣದಲ್ಲಿ ಸಂಸದರನ್ನು ಆಯ್ಕೆ ಮಾಡಿದ್ದಾರೆ. 25 ಸಂಸದರನ್ನು ಆಯ್ಕೆ‌ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಪೂರ್ಣ ಸ್ವೀಪ್ ಮಾಡಿ ಕೊಟ್ಟಿದ್ದಾರೆ. ಆದರೆ ರಾಜ್ಯದ ಸಮಸ್ಯೆಗಳನ್ನು ಏಕೆ ಪ್ರಸ್ತಾಪಿಸುತ್ತಿಲ್ಲ?" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಚಿವ ಆರ್ ಅಶೋಕ್ ಮಾತನಾಡಿ, "ಪ್ರಧಾನಿ ನರೇಂದ್ರ ಮೋದಿ ಜತೆ ನಾವು ಆನ್ಲೈನ್ ಮೂಲಕ ಸಮಾಲೋಚಿಸಿದ್ದೇವೆ. ಸಾಕಷ್ಟು ಮಾಹಿತಿ ಪಡೆದಿದ್ದಾರೆ. ಕೋವಿಡ್ ಸಮಸ್ಯೆ ಇದ್ದ ಹಿನ್ನೆಲೆ ಅವರು ಬಂದಿಲ್ಲ. ಅನ್ಯತಾ ಮಾತು ಬೇಡ. ಕೇಂದ್ರದಿಂದ ತಂಡ ಕಳಿಸಿದ್ದರು. ಮಾತನಾಡಿದ್ದೇವೆ. ಕೇಂದ್ರದ ಸಹಕಾರ ಸಿಗಲಿದೆ" ಎಂದು ಉತ್ತರಿಸಿದ್ದಾರೆ.


ಆದರೆ ಪ್ರತಿಪಕ್ಷ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಬಸವರಾಜ ಹೊರಟ್ಟಿ ಮಾತನಾಡಿ ರಾಜ್ಯ ಸರ್ಕಾರ ಪ್ರಧಾನಿ ಮುಂದೆ ನಿಲ್ಲುವ ಧೈರ್ಯ ಎಂದು ಬರಲಿದೆ? ಕೇಂದ್ರ, ರಾಜ್ಯದಲ್ಲಿ ಒಂದೇ ಸರ್ಕಾರ ಇದೆ. ಸ್ವರ್ಗವೇ ಧರೆಗಿಳಿಸಬಹುದಿತ್ತು ಎಂದು ಪ್ರತಿಪಕ್ಷ ನಾಯಕರು ಹೇಳಿದಾಗ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅಲ್ಲಿ ಬಿಜೆಪಿ ಸದಸ್ಯರು ಮಾತ್ರ ಇಲ್ಲ, ನಮ್ಮವರು , ನಿಮ್ಮವರು ಎಲ್ಲಾ ಇದ್ದಾರೆ ಎಂದರು.


ಇದನ್ನೂ ಓದಿ : ಕೇಂದ್ರ ಕೃಷಿ ಕಾಯ್ದೆ ವಿರುದ್ಧ ರೈತ ಹೋರಾಟ; ಹೋರಾಟಗಾರರನ್ನು ಭಯೋತ್ಪಾದಕರೆಂದ ನಟಿ ಕಂಗನಾ


ಅಲ್ಲಿ ಹೋದವರಿಗೆ ಸ್ಥಾನ ಮಾನ ಸಿಗುತ್ತಿಲ್ಲ ಎಂದಾಗ ಆಡಳಿತ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಪಕ್ಷ ನಾಯಕರು ವಿರೋಧಿಸಿದಾಗ ಕೆಲಕಾಲ ವಾಗ್ವಾದ ನಡೆಯಿತು. 8 ಸಾವಿರ ಶಾಲಾ ಕೊಠಡಿ ಹಾಳಾಗಿದ್ದವು. ಆದರೆ ಇವರ ಸ್ಥಿತಿ ಸುಧಾರಿಸಿಲ್ಲ. ಜಗಲಿ, ಟೆಂಟ್ಗಳಲ್ಲಿ ಶಾಲೆ ನಡೆಯುತ್ತಿದೆ. ಕೇಳಿದರೆ ಶಿಕ್ಷಣ ಸಚಿವರು ಹಣದ ಕೊರತೆ ಇದೆ ಎನ್ನುತ್ತಿದ್ದಾರೆ. ಶಾಲೆ ವಿಚಾರದಲ್ಲಿ ಏನು ತೊಂದರೆಯಾಗಿದೆ? ಯಾವ ಸಮಸ್ಯೆ ಆಗಿದೆ. ನಿಮ್ಮ ನುಡಿ- ನಡೆ ಒಂದೇ ಆಗಿರಬೇಕು.


ಮನೆ ಹಾನಿಗೆ ಸಂಪೂರ್ಣ ಹಣ ಕೊಟ್ಟಿಲ್ಲ. ಬೆಳೆ ನಷ್ಟ ಪರಿಹಾರ ಬಂದಿಲ್ಲ. ಕಳೆದ ವರ್ಷದ ನಷ್ಟಕ್ಕೇ ಪರಿಹಾರ ಬಂದಿಲ್ಲ. ನಾವು ಇದೆಲ್ಲಾ ಮುಗಿದಿದ್ದರೆ, ಹಳೆ ಪುರಾಣ ಹೇಳುವ ಸ್ಥಿತಿ ಬರುತ್ತಿರಲಿಲ್ಲ. ಇಡೀ ರಾಜ್ಯ ಮುಳುಗಿದೆ. ಸರ್ಕಾರ ಧಾವಿಸಬೇಕು. ಈಗ ಮುಳುಗಿದ ಹಳ್ಳಿಗಳನ್ನು ಶಾಶ್ವತವಾಗಿ ಸ್ಥಳಾಂತರಿಸಿ. ಕೃಷಿ ತಂತ್ರಜ್ಞರಿಗೆ ಸೂಚನೆ‌ಕೊಟ್ಟು ನೀರಲ್ಲಿ ಮುಳುಗಿದ್ದೂ ಬೆಳೆ ಹಾನಿ ಆಗದ ರೀತಿಯ ಪೈರಿಗೆ ಧಕ್ಕೆ ಆಗದ ಹಾಗೆ, ಇಳುವರಿ ನಷ್ಟ ಆಗದ ಹಾಗೆ ಸಂಶೋಧನೆ ಮಾಡಿಸಿ ಎಂದು ಸಲಹೆ ಇತ್ತರು.

Published by:MAshok Kumar
First published: