Siddaramaiah- ಸಿದ್ದರಾಮಯ್ಯರನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಶ್ರೀರಾಮ ಸೇನೆ ಮುಖಂಡ ಆಗ್ರಹ

ಬಾದಾಮಿಯಲ್ಲಿ ಚಾಲುಕ್ಯರ ಕಾಲದ ದೇವಾಲಯವನ್ನ ಸಿದ್ದರಾಮಯ್ಯ ಸೂಚನೆಯಂತೆ ಜಿಲ್ಲಾಡಳಿತಯು ಸ್ಥಳಾಂತರ ಮಾಡುತ್ತಿದೆ. ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ಸಿಗರನ್ನ ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಬಳ್ಳಾರಿ ಘಟಕದ ಶ್ರೀರಾಮಸೇನೆ ಮುಖ್ಯಸ್ಥರು ಒತ್ತಾಯಿಸಿದ್ಧಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

 • Share this:
  ಬಾಗಲಕೋಟೆ: ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನ ಒಳಗೊಂಡಂತೆ ಎಲ್ಲರನ್ನೂ ಪಾಕಿಸ್ತಾನಕ್ಕೆ ಕಳುಹಿಸಿ. ಇಲ್ಲಿ ಶ್ರೀರಾಮ, ಲಕ್ಷ್ಮಣ, ಆಂಜನೇಯ ಹಾಗೂ ಮೂವತ್ಮೂರು ಕೋಟಿ ದೇವತೆಗಳು ಇರ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರ ವಿರುದ್ಧ ಶ್ರೀರಾಮ ಸೇನೆ ಕಿಡಿಕಾರಿದೆ.  ಶ್ರೀರಾಮಸೇನಾ ಬಳ್ಳಾರಿ ವಿಭಾಗದ ಅಧ್ಯಕ್ಷ ಸಂಜೀವ ಮರಡಿ ಅವರು ಬಾಗಲಕೋಟೆ ಜಿಲ್ಲಾಡಳಿತ ಭವನ ಬಳಿ ಮಾಧ್ಯಮದವರ ಜೊತೆ ಮಾತನಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಾ ಪಾಕಿಸ್ತಾನಕ್ಕೆ ಕಳುಹಿಸಿವ ಮಾತುಗಳನ್ನಾಡಿದರು.

  ಬಾದಾಮಿಯಲ್ಲಿನ ಪುರಾತನ ದೇವಾಲಯಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಂಜೀವ ಮರಡಿ, ಶಾಸಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕುಮ್ಮಕ್ಕಿನಿಂದ ದೇವಾಲಯ ಸ್ಥಳಾಂತರಗೊಳಿಸಲು ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು. “ಸಿದ್ಧರಾಮಯ್ಯನವರೇ ತಾಕತ್ ಇದ್ರೆ ದೇವಾಲಯ ಸ್ಥಳಾಂತರಿಸಿ ಎಂದು ಬಾದಾಮಿಯಲ್ಲಿ ನಿಂತು ಮಾತನಾಡಿದ್ದೆ. ಪ್ರಮೋದ ಮುತಾಲಿಕ್ ಅವರ ನೇತೃತ್ವದಲ್ಲಿ ಹೋರಾಟ ಮಾಡುವುದಾಗಿ ಹೇಳಿದ್ದೆ. ಆದ್ರೆ, ಈಗ ಸಿದ್ಧರಾಮಯ್ಯ ಅವರ ಬೆಂಬಲಿಗರು ಕರೆ ಮಾಡಿ ಧಮ್ಕಿ ಮಾಡುತ್ತಿದ್ದಾರೆ. ಜೀವ ಬೆದರಿಕೆ ಹಾಕುತ್ತಿದ್ದಾರೆ. ಕಾರ್ಕಳದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಮಚಂದ್ರಪ್ಪ ಎನ್ನೋ ವ್ಯಕ್ತಿ ದರಿದ್ರ ಭಾರತ, ಸೈನಿಕರು ಅಂತ ಪಾಕಿಸ್ತಾನದ ಪರವಾಗಿ ಮಾತನಾಡಿದ್ದ. ಅಂಥವನನ್ನ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ ಬೆಂಬಲಿಸಿ ಟ್ವೀಟ್ ಮಾಡಿದ್ರು. ಆತ ಕಾಂಗ್ರೆಸ್ ಬೆಂಬಲಿಗ ಅಂದ್ರು. ಸಿದ್ಧರಾಮಯ್ಯ ಅವರನ್ನ ಸೇರಿಸಿ ಈ ಎಲ್ಲಾ ಕಾಂಗ್ರೆಸ್ಸಿಗರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು” ಎಂದು ಶ್ರೀರಾಮಸೇನೆಯ ಮುಖಂಡ ಒತ್ತಾಯಿಸಿದರು.

  ಇದನ್ನೂ ಓದಿ: Mysore Rape Case: ರಾಜ್ಯದಲ್ಲಿ ಪೊಲೀಸ್ ಇಲಾಖೆ ವೈಫಲ್ಯ- ಹೆಚ್.ಡಿ. ಕುಮಾರಸ್ವಾಮಿ ಟೀಕೆ

  ಬಾದಾಮಿಯಲ್ಲಿ ದೇವಾಲಯ ತೆರವಿಗೆ ಮುಂದಾದ ತಾಲೂಕಾ ಆಡಳಿತ..! 

  ಬಾದಾಮಿಯಲ್ಲಿನ ಚಾಲುಕ್ಯರ ಕಾಲದ ಶಿವಲಿಂಗ ನಾಗಲಿಂಗ ಗುಡಿ ಸ್ಥಳಾಂತರ ವಿವಾದ ತಾರಕಕ್ಕೆ ಏರಿದ್ದು, ದೇಗುಲ ತೆರವುಗೊಳಿಸಬೇಕೆಂದು ಬಾದಾಮಿ ತಾಲೂಕು ಆಡಳಿತ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದೆ. ದೇಗುಲಗಳ ಸ್ಥಳಾಂತರಕ್ಕೆ ಹಿಂದೂ ಪರ ಸಂಘಟನೆಗಳು ವಿರೋಧ  ವ್ಯಕ್ತಪಡಿಸಿದ್ದವು. ಇತ್ತೀಚೆಗೆ ಶ್ರೀರಾಮಸೇನೆ ಬಳ್ಳಾರಿ ವಿಭಾಗದ ಅಧ್ಯಕ್ಷ ಸಂಜಯ್ ಮರಡಿ, ಬಾದಾಮಿಗೆ ಭೇಟಿ ನೀಡಿ ದೇಗುಲ ಸ್ಥಳಾಂತರ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.

  ಸಿದ್ದರಾಮಯ್ಯ ತಹಸೀಲ್ದಾರ ಮೂಲಕ ಈ ಕೆಲಸ ಮಾಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ದಮ್ ಇದ್ರೆ, ತಾಕತ್ ಇದ್ದರೆ ತೆರವುಗೊಳಿಸಲಿ ನೋಡೋಣ ಎಂದು ಸಂಜಯ್ ಮರಡಿ ಸವಾಲು ಹಾಕಿದ್ದರು. ತೆರವುಗೊಳಿಸಲು ಮುಂದಾದರೆ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಬಾದಾಮಿ ಚಲೊ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಸಿದ್ದರಾಮಯ್ಯ ವಿರುದ್ದ ಮಾತಾಡಿದ್ದಕ್ಕೆ ಸಿದ್ದರಾಮಯ್ಯ ಅಭಿಮಾನಿಗಳು ಸಂಜಯ್ ಮರಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನನಗೆ ಸಿದ್ದರಾಮಯ್ಯ ಅಭಿಮಾನಿಗಳು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆಂದು ಸಂಜಯ್ ಮರಡಿ ಆರೋಪ ಮಾಡಿದ್ದರು. ನಾವು ಹೆದರುವ ಅವಶ್ಯಕತೆ ಇಲ್ಲ. ಪುರಾತನ ಕಾಲದ ದೇವಸ್ಥಾನ ತೆರವು ಬೇಡ ಅದನ್ನು ಕಾಪಾಡೋದು ನಮ್ಮ ಹಕ್ಕು. ಬಾಗಲಕೋಟೆ ಎಸ್.ಪಿ ಅವರಿಗೆ ಬೆದರಿಕೆ ಬಗ್ಗೆ ದೂರು ನೀಡಲು ನಿರ್ಧರಿಸಿದ್ದೇನೆ ಎಂದಿದ್ದರು.  ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಗೆ ಭೇಟಿ ನೀಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನ ಭೇಟಿ ಮಾಡಿ ದೂರು ನೀಡಿದರು.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

  ವರದಿ: ಮಂಜುನಾಥ್ ತಳವಾರ 
  Published by:Vijayasarthy SN
  First published: