HOME » NEWS » District » SEIZE THE VEHICLE WHICH RUN UNNECESSARY SAYS CHAMARAJANAGARA DC MR RAVI RHHSN NCHM

ಅನಗತ್ಯವಾಗಿ ಸಂಚರಿಸುವ ವಾಹನ ಸೀಜ್ ಮಾಡಿ ಕೇಸ್ ಹಾಕಿ: ಚಾಮರಾಜನಗರ ಜಿಲ್ಲಾಧಿಕಾರಿ ಖಡಕ್ ಸೂಚನೆ

ಜಿಲ್ಲೆಯಲ್ಲಿ 22 ಚೆಕ್ ಪೋಸ್ಟ್ ತೆರೆಯಲಾಗಿದೆ, ಚೆಕ್ ಪೋಸ್ಟ್ ಗೆ ಕೇವಲ ಪೊಲೀಸ್ ಸಿಬ್ಬಂದಿ ಸಾಲುವುದಿಲ್ಲ. ಕಂದಾಯ ಹಾಗು ಆರೋಗ್ಯ ಇಲಾಖೆಯ ಸಹಕಾರವು ಬೇಕು. ಈ ಬಗ್ಗೆ ನಿನ್ನೆ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ ಎಂದರು. ಕರ್ಫ್ಯೂ ನಿಯಮಗಳ ಉಲ್ಲಂಘನೆ ಹಿನ್ನಲೆ  80 ಮಂದಿ ವಿರುದ್ಧ ಎಫ್.ಐ.ಆರ್ ಹಾಕಲಾಗಿದೆ. ಅನಗತ್ಯ ವಾಹನಗಳನ್ನು ಸೀಜ್ ಮಾಡಿ ದಂಡ ವಿಧಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

news18-kannada
Updated:April 30, 2021, 4:37 PM IST
ಅನಗತ್ಯವಾಗಿ ಸಂಚರಿಸುವ ವಾಹನ ಸೀಜ್ ಮಾಡಿ ಕೇಸ್ ಹಾಕಿ: ಚಾಮರಾಜನಗರ ಜಿಲ್ಲಾಧಿಕಾರಿ ಖಡಕ್ ಸೂಚನೆ
ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಎಂ.ಆರ್.ರವಿ
  • Share this:
ಚಾಮರಾಜನಗರ (ಏ.30); ಕಳೆದ ಮೂರು ದಿನಗಳಿಂದ ಲಾಕ್ ಡೌನ್ ಮಾದರಿಯ ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಚಾಮರಾಜನಗರದಲ್ಲಿ ವಾಹನ ಸವಾರರು ಯಾವುದಕ್ಕೂ ಕೇರ್ ಮಾಡದೆ ಜನರು ಒಂದಲ್ಲ ಒಂದು ಕಾರಣ ಹೇಳಿಕೊಂಡು ಓಡಾಡುತ್ತಿದ್ದಾರೆ. ನಗರದ ಭುವನೇಶ್ವರಿ ವೃತ್ತದಲ್ಲಿ  ಈ ದೃಶ್ಯಗಳನ್ನು ಕಣ್ಣಾರೆ ಕಂಡು  ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಸ್ಥಳದಲ್ಲೇ ಎಸ್ಪಿಗೆ ಫೋನ್ ಕರೆ ಮಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿಗೆ ಬಂದು ನೋಡಿ. ಯಾವ ರೀತಿ ಕರ್ಫ್ಯೂ ವಯಲೇಟ್ ಆಗ್ತಾ ಇದೆ ಅಂತ, ಮೂವರು ಪೊಲೀಸ್ ಸಿಬ್ಬಂದಿ ಬಿಟ್ಟರೆ ಸ್ಥಳದಲ್ಲಿ ಯಾವ ಹಿರಿಯ ಪೊಲೀಸ್ ಅಧಿಕಾರಿಯು ಇಲ್ಲ. ಸಂಬಂಧಪಟ್ಟ ಸಬ್ ಇನ್ಸ್ ಪೆಕ್ಟರ್​ಗೆ ಷೋಕಾಸ್ ನೋಟಿಸ್ ಜಾರಿ ಮಾಡಿ ಎಂದು ಸೂಚನೆ ನೀಡಿದರು.

ಹೀಗೆ ಹೇಳಿ ಫೋನ್ ಸಂಪರ್ಕ ಕಡಿತ ಮಾಡಿದ ಕೆಲವೇ ಹೊತ್ತಿನಲ್ಲಿ ತಕ್ಷಣ ಸ್ಥಳಕ್ಕೆ ಬಂದ ಡಿವೈಎಸ್ಪಿ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್​ರನ್ನು ಸಹ ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು. ಸಮಜಾಯಿಷಿ ನೀಡಲು ಬಂದ ಪೊಲೀಸ್ ಅಧಿಕಾರಿಗಳ ವಿರುದ್ದ ಮತ್ತೆ ಗರಂ ಆದ ಜಿಲ್ಲಾಧಿಕಾರಿ, ಇದೇನಾ ಕರ್ಫ್ಯೂ? ಅರ್ಥ ಆಗ್ತಾ ಇಲ್ವಾ? ಯಾವ ಭಾಷೆಲಿ ಹೇಳ್ಬೇಕು ?ಮಾತು ಕಡಿಮೆ ಮಾಡಿ ಕೆಲಸ ಮಾಡಿ. ಹೀಗೆ ಜನ ಸಂಚರಿಸಲು ಬಿಟ್ರೆ ಏನ್ ಪ್ರಯೋಜನ? ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಸೀಜ್ ಮಾಡಿ, ಕೇಸ್ ಹಾಕಿ ಜನಸಂಚಾರ ನಿಯಂತ್ರಣ ಮಾಡಿ ಎಂದು ಖಡಕ್ ಸೂಚನೆ ನೀಡಿದರು.

30 ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೋನಾ ಪಾಸಿಟಿವ್

ಜಿಲ್ಲಾಧಿಕಾರಿಗಳ ಸೂಚನೆ  ನಂತರ ಎಚ್ಚೆತ್ತ ಚಾಮರಾಜನಗರ ಪೊಲೀಸರು ಅನಗತ್ಯ  ವಾಹನ ಸಂಚಾರಕ್ಕೆ ಕಡಿವಾಣ ಹಾಕಲು ಮುಂದಾದರು. ಇಲ್ಲಿನ ಭುವನೇಶ್ವರಿ ವೃತ್ತದಲ್ಲಿ ನಿಂತು ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಫೋನ್ ಕರೆ ಮಾಡಿದ ಸ್ವಲ್ಪ ಹೊತ್ತಿಗೆ ದೌಡಾಯಿಸಿದ ಎಸ್ಪಿ ದಿವ್ಯಾ ಸಾರಾಥಾಮಾಸ್, ಹಾಗೂ ಅಡಿಷನಲ್ ಎಸ್ಪಿ ಅನಿತಾ ಹದ್ದಣ್ಣನವರ್ ಸ್ವತಃ ಜನ ಹಾಗೂ ವಾಹನ ಸಂಚಾರ ನಿಯಂತ್ರಿಲು ಮುಂದಾದರು.

ಇದನ್ನು ಓದಿ: Corona Vaccine: 18-44 ವರ್ಷದೊಳಗಿನ ಜನರು ತಮಗೆ ಬೇಕಾದ ಲಸಿಕೆ ಆಯ್ಕೆ ಮಾಡಿಕೊಳ್ಳಬಹುದು: ಕೋವಿನ್ ಸಂಸ್ಥೆ ಮುಖ್ಯಸ್ಥ ಶರ್ಮಾ

ಇದೇ ಸಂದರ್ಭದಲ್ಲಿ  ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ‌ ಪೊಲೀಸರು ಲಾಠಿ ರುಚಿ ತೋರಿಸಿದರು. ವಾಹನ ಸವಾರರಿಗೆ ದಂಡ ಹಾಕಿದ್ದಲ್ಲದೆ ಕೆಲವು ವಾಹನಗಳನ್ನು  ಸೀಜ್ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದಎಸ್ಪಿ ದಿವ್ಯಾಸಾರಾ ಥಾಮಸ್  ಜಿಲ್ಲೆಯಲ್ಲಿ 30 ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಹಾಗಾಗಿ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಹೆಚ್ಚಿನ ಸಂಖ್ಯೆಯ ಹೋಂ ಗಾರ್ಡ್ ಕೊಡಲು ಡಿಸಿ ಯವರನ್ನು ಕೇಳಿದ್ದೇವೆ ಎಂದು ತಿಳಿಸಿದರು.
Youtube Video
ಜಿಲ್ಲೆಯಲ್ಲಿ 22 ಚೆಕ್ ಪೋಸ್ಟ್ ತೆರೆಯಲಾಗಿದೆ, ಚೆಕ್ ಪೋಸ್ಟ್ ಗೆ ಕೇವಲ ಪೊಲೀಸ್ ಸಿಬ್ಬಂದಿ ಸಾಲುವುದಿಲ್ಲ. ಕಂದಾಯ ಹಾಗು ಆರೋಗ್ಯ ಇಲಾಖೆಯ ಸಹಕಾರವು ಬೇಕು. ಈ ಬಗ್ಗೆ ನಿನ್ನೆ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ ಎಂದರು. ಕರ್ಫ್ಯೂ ನಿಯಮಗಳ ಉಲ್ಲಂಘನೆ ಹಿನ್ನಲೆ  80 ಮಂದಿ ವಿರುದ್ಧ ಎಫ್.ಐ.ಆರ್ ಹಾಕಲಾಗಿದೆ. ಅನಗತ್ಯ ವಾಹನಗಳನ್ನು ಸೀಜ್ ಮಾಡಿ ದಂಡ ವಿಧಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ವರದಿ: ಎಸ್.ಎಂ.ನಂದೀಶ್
Published by: HR Ramesh
First published: April 30, 2021, 4:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories