ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹೊಸ ವರ್ಷ ಸಂಭ್ರಮಕ್ಕೆ ಬ್ರೇಕ್; ಸೆಕ್ಷನ್ 144 ಜಾರಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಹೊಸ ವರ್ಷದ ಸಂಭ್ರಮಕ್ಕೆ ಜಿಲ್ಲಾಡಳಿತ ಅಡ್ಡಿ ಮಾಡಲ್ಲ ಎಂಬ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಹುಸಿ ಆಗಿದ್ದು ಜಿಲ್ಲಾಡಳಿತ ಕೊನೆ ಗಳಿಕೆಯಲ್ಲಿ ಸಂಭ್ರಮಕ್ಕೆ ಬ್ರೇಕ್ ಹಾಕಲು 144 ಸೆಕ್ಷನ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಬಂದ ಸಾವಿರಾರು ಪ್ರವಾಸಿಗರ ಸ್ಥಿತಿ ಅಡ್ಡಕತ್ತರಿಯಲ್ಲಿ ಸಿಕ್ಕಿಕೊಂಡಿದೆ. 

ಮುರುಡೇಶ್ವರ ಬೀಚ್

ಮುರುಡೇಶ್ವರ ಬೀಚ್

  • Share this:
ಕಾರವಾರ; ಹೊಸ ವರ್ಷದ ಸಂಭ್ರಮಕ್ಕೆಂದು ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮುರ್ಡೆಶ್ವರ, ಗೋಕರ್ಣ, ಕಾರವಾರವನ್ನು ಆಯ್ಕೆ ಮಾಡಿಕೊಂಡ ಸಾವಿರಾರು ಪ್ರವಾಸಿಗರ ಸಂಭ್ರಮ, ಸಡಗರಕ್ಕೆ ಉತ್ತರ ಕನ್ನಡ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಈ ಭಾಗದಲ್ಲಿ ಸೆಕ್ಷನ್ 144 ಜಾರಿ ಮಾಡುವ ಮೂಲಕ ಪ್ರವಾಸಿಗರ ಆಸೆ ನಿರಾಸೆಗೊಳಿಸಿದೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾಹಿತಿ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಕರಾವಳಿಯ ಗೋಕರ್ಣ, ಮುರ್ಡೆಶ್ವರ, ಕಾರವಾರದ ಪ್ರಮುಖ ಕಡಲತೀರಗಳು ಹೊಸ ವರ್ಷಾಚರಣೆಗೆ ಪ್ರವಾಸಿಗರ ಸ್ವರ್ಗ. ಹೊಸ ವರ್ಷದ ಸಂಭ್ರಮಕ್ಕೆ ಅಂತಾನೆ ಸಾವಿರಾರು ಪ್ರವಾಸಿಗರು ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಬೀಡು ಬಿಟ್ಟಿದ್ದಾರೆ. ಈ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಕ್ಷಿಣಿಸುವ ಸಾಧ್ಯತೆ ಇತ್ತಾದರೂ ಇದು ಹುಸಿಯಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಉತ್ತರ ಕನ್ನಡ ಜಿಲ್ಲೆಯತ್ತ ಆಗಮಿಸಿದ್ದಾರೆ. ಈ ನಡುವೆ ಜಿಲ್ಲೆಯ ಕರಾವಳಿಯಲ್ಲಿ ಸೆಕ್ಷನ್ 144 ಜಾರಿ ಮಾಡುವ ಮೂಲಕ ಪ್ರವಾಸಿಗರ ಮೋಜು ಮಸ್ತಿಗೆ ಬ್ರೇಕ್ ಹಾಕಿದೆ. ಉತ್ತರ ಕನ್ನಡ ಜಿಲ್ಲಾಡಳಿತ ಸೆಕ್ಷನ್ 144 ಜಾರಿ ಮಾಡಿ ಮುಕ್ತವಾಗಿ ಸಾರ್ವಜನಿಕ ಜಾಗದಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಅವಕಾಶ ನಿರಾಕರಿಸಿದೆ.

ಎಲ್ಲೆಲ್ಲಿ ಸಂಭ್ರಮಕ್ಕೆ ನಿರಾಕರಣೆ?

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯುದ್ದಕ್ಕೂ ಹೊಸ ವರ್ಷದ ಸಂಭ್ರಮಕ್ಕೆ ಅವಕಾಶ ನಿರಾಕರಿಸಲಾಗಿದೆ. ಹೋಟೇಲ್ ಒಳಗಡೆ ಮಾತ್ರ ಅವಕಾಶ ಇದೆ. ಅದು ಕೂಡ ಲಿಮಿಟೆಡ್ ಜನರನ್ನು ಒಳಗೂಡಿ ಸಂಭ್ರಮಿಸಬಹುದು. ಜತೆಗೆ ಯಾವುದೇ ರೀತಿಯ ಮ್ಯೂಸಿಕ್ ಸಿಸ್ಟಮ್ ಹಾಕುವಂತಿಲ್ಲ. ಕರಾವಳಿಯ ಕಡಲತೀರದಲ್ಲಿ ಮುಕ್ತವಾಗಿ ಸಂಭ್ರಮ ಮಾಡುವಂತಿಲ್ಲ. ಐದು ಜನರಕ್ಕಿಂತ ಹೆಚ್ಚು ಮಂದಿ ಸೇರಿ ಹೊಸ ವರ್ಷದ ಸಂಭ್ರಮ ಮಾಡುವಂತಿಲ್ಲ. ಕಡಲ ತೀರಕ್ಕೆ ಬಂದು ಮುಕ್ತವಾಗಿ ಓಡಾಡಿಕೊಂಡು ಮೋಜು ಮಸ್ತಿಯಲ್ಲಿ ತೊಡಗಲು ಅನುಮತಿ ನಿರಾಕರಿಸಲಾಗಿದೆ.  ಜಿಲ್ಲೆಯ ಕರಾವಳಿಯಲ್ಲಿ ಡಿಸೆಂಬರ್ 31 ಸಂಜೆ ನಾಲ್ಕು ಘಂಟೆಯಿಂದ 2021 ಜನವರಿ 1 ಮುಂಜಾನೆ 6 ಘಂಟೆಯವರೆಗೆ ನಿಷೇಧಾಜ್ಞೆ ಜಾರಿ ಇರಲಿದೆ.

ಇದನ್ನು ಓದಿ: ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ ಪ್ರಯತ್ನ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಈ ಬಾರಿ ಅತಿ ಹೆಚ್ಚು ಬೆಂಗಳೂರು ಪ್ರವಾಸಿಗರು

ಬೆಂಗಳೂರಿನಲ್ಲಿ ಇ ಬಾರಿ ಹೊಸ ವರ್ಷದ ಸಂಭ್ರಮಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ. ರಾಜಧಾನಿಯ ಬ್ರಿಗೇಡ್ ಮತ್ತು ಎಮ್.ಜಿ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಬೆಂಗಳೂರಿಗರು ಉತ್ತರ ಕನ್ನಡ ಜಿಲ್ಲೆಯತ್ತ ಮುಖ ಮಾಡಿದ್ದು ಜಿಲ್ಲೆಯ ಎಲ್ಲಾ ಹೋಂ ಸ್ಟೇ ಗಳು ಬೆಂಗಳೂರಿನ ಪ್ರವಾಸಿಗರಿಂದಲೇ ತುಂಬಿ ತುಳುಕುತ್ತಿದೆ. ಜತೆಗೆ ಗೋಕರ್ಣ, ಮುರ್ಡೆಶ್ವರ, ಕಾರವಾರದ ಬಹುತೇಕ ರೇಸಾರ್ಟ್ ಗಳಿಗೆ ತೆರಳಿ ಯಾರನ್ನು ಮಾತನ್ನಾಡಿಸಿದರೂ ತಾವು ಬೆಂಗಳೂರಿಂದ ಬಂದಿದ್ದೇವೆ ಅಂತಾರೆ. ಆದರೆ ಇಲ್ಲೂ ಕೂಡ ಹೊಸ ವರ್ಷದ ಸಂಭ್ರಮಕ್ಕೆ ಮುಕ್ತ ಅವಕಾಶಕ್ಕೆ ಬ್ರೇಕ್ ಬಿದ್ದಿದ್ದು ಪ್ರವಾಸಿಗರು ಸಪ್ಪೆ ಮುಖ ಹಾಕಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಹೊಸ ವರ್ಷದ ಸಂಭ್ರಮಕ್ಕೆ ಜಿಲ್ಲಾಡಳಿತ ಅಡ್ಡಿ ಮಾಡಲ್ಲ ಎಂಬ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಹುಸಿ ಆಗಿದ್ದು ಜಿಲ್ಲಾಡಳಿತ ಕೊನೆ ಗಳಿಕೆಯಲ್ಲಿ ಸಂಭ್ರಮಕ್ಕೆ ಬ್ರೇಕ್ ಹಾಕಲು 144 ಸೆಕ್ಷನ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಬಂದ ಸಾವಿರಾರು ಪ್ರವಾಸಿಗರ ಸ್ಥಿತಿ ಅಡ್ಡಕತ್ತರಿಯಲ್ಲಿ ಸಿಕ್ಕಿಕೊಂಡಿದೆ.
Published by:HR Ramesh
First published: