ಸೀಲ್ಡೌನ್​ನಿಂದ ತೆರವುಗೊಂಡ ಮುಂಬೈ ಸೋಂಕಿನ ರಾಜಘಟ್ಟ ಗ್ರಾಮ; ಚಪ್ಪಾಳೆ‌ ತಟ್ಟಿ ತಾಲೂಕು ಆಡಳಿತಕ್ಕೆ ನಿವಾಸಿಗಳ ಧನ್ಯವಾದ

ಮುಂಬೈನ ಸೋಂಕು ಜಿಲ್ಲೆಯಲ್ಲಿ ದಿನೇ ದಿನೇ ನಿಯಂತ್ರಣಕ್ಕೆ ಬರುತ್ತಿರುವುದು ಜಿಲ್ಲಾಡಳಿತದಲ್ಲಿ ಒಂದು‌ ರೀತಿಯ‌ ಸಮಾಧಾನ ತಂದಿದೆ. ಅದರಲ್ಲೂ ಕೊರೋನಾ ಹಾಟ್ ಸ್ಪಾಟ್ ‌ಆಗಿರುವ ಕೆ.ಆರ್.ಪೇಟೆ ತಾಲೂಕಿನ ಮೊದಲ ಗ್ರಾಮ ಇದೀಗ ಸೀಲ್ಡೌನ್​ನಿಂದ ತೆರವಾಗಿದ್ದು, ಜನರು ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ.

ತಾಲೂಕು ಅಧಿಕಾರಿಗಳಿಗೆ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದ ರಾಜಘಟ್ಟ ಗ್ರಾಮಸ್ಥರು.

ತಾಲೂಕು ಅಧಿಕಾರಿಗಳಿಗೆ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದ ರಾಜಘಟ್ಟ ಗ್ರಾಮಸ್ಥರು.

  • Share this:
ಮಂಡ್ಯ: ಆ ಊರಿನ ಜನರೆಲ್ಲ ಕಳೆದ ಒಂದು‌ ತಿಂಗಳಿಂದ ಕಂಗಾಲಾಗಿದ್ದರು. ಊರಿಗೆ ಬಂದಿದ್ದ ಸೋಂಕಿತ ಮಹಿಳೆಯಿಂದ ಇಡೀ ಗ್ರಾಮವನ್ನೇ ತಾಲೂಕು ಆಡಳಿತ ಸೀಲ್ಡೌನ್  ಮಾಡಿತ್ತು. ಕೆ.ಆರ್. ಪೇಟೆ ತಾಲೂಕಿಗೆ ಬಂದ ಮೊದಲ ಪ್ರಕರಣದಿಂದ ಇಡೀ ಗ್ರಾಮವೇ ಕಂಗಾಲಾಗಿತ್ತು. ತಾಲೂಕು ಆಡಳಿತ ಕೈಗೊಂಡ ಕ್ರಮದಿಂದ ಈ ಗ್ರಾಮ ಇದೀಗ ಸೀಲ್ಡೌನ್ ನಿಂದ ತೆರವುಗೊಂಡಿದ್ದು, ಜನರು ಸಂಭ್ರಮದಲ್ಲಿದ್ದಾರೆ.

ಹೌದು! ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ‌ ತಾಲೂಕಿನ ರಾಜಘಟ್ಟ ಗ್ರಾಮದಲ್ಲಿ ಮೇ 1 ಈ ಊರಿನ‌ P-569  ಹೆಸರಿನ  ಮಹಿಳೆಯೊಬ್ಬರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದ ಕಾರಣ ಜಿಲ್ಲಾಡಳಿತದ ಆದೇಶದ ಮೇರೆಗೆ ಈ ಗ್ರಾಮವನ್ನು ತಾಲೂಕು ಆಡಳಿತ ಸೀಲ್ಡೌನ್ ಮಾಡಿತ್ತು. ಸೀಲ್ಡೌನ್ ಬಳಿಕ ಇಡೀ ಗ್ರಾಮಕ್ಕೆ ಕೊರೋನಾ ಹರಡದಂತೆ ಔಷಧ ಸಿಂಪಡಣೆ ಮೂಲಕ ಸ್ಯಾನಿಟೈಜ್ ಮಾಡಲಾಗಿತ್ತು. ಅಲ್ಲದೆ ಇಡೀ ಗ್ರಾಮದ ಜನರಿಗೆ ಹೊರಗೆ ಬಾರದಂತೆ ಸೂಚಿಸಿ ಗ್ರಾಮದ ರಸ್ತೆ ಸಂಪರ್ಕ ಬಂದ್ ಮಾಡಿ, ಕೊರೋನಾ ಹರಡದಂತೆ ಕಟ್ಟುನಿಟ್ಟಿನ ‌ಕ್ರಮ ಕೈಗೊಂಡಿತ್ತು. ಜೊತೆಗೆ ಇಡೀ ಪ್ರದೇಶವನ್ನು ಕಂಟೋನ್ಮೆಂಟ್ ಪ್ರದೇಶವನ್ನಾಗಿ ಘೋಷಣೆ ಮಾಡಿದ್ದರಿಂದ ಗ್ರಾಮದಲ್ಲಿ ಅಂದಿನಿಂದ ಇಂದಿನವರೆಗೂ ಯಾವುದೇ ಹೊಸ ಪ್ರಕರಣ‌ ಕಾಣಿಸಿಕೊಂಡಿಲ್ಲ. ಕೇಂದ್ರದ ಮಾರ್ಗಸೂಚಿ ಆಧಾರದ ಮೇಲೆ 28 ದಿನ ಕಳೆದು ಇದೀಗ ಈ ಗ್ರಾಮದಲ್ಲಿ ಯಾವುದೇ ಹೊಸ ಪ್ರಕರಣ ಕಾಣಿಸಿಕೊಳ್ಳದ ಕಾರಣ ಸೀಲ್ಡೌನ್ ಆದೇಶವನ್ನು ತಾಲೂಕು ಆಡಳಿತ ಹಿಂಪಡೆದಿದೆ.

ಇನ್ನು ಗ್ರಾಮಕ್ಕೆ  ಮುಂಬೈನಿಂದ ಆ್ಯಂಬುಲೆನ್ಸ್ ಮೂಲಕ ತಂದಿದ್ದ ಶವ ಪ್ರಕರಣದಲ್ಲಿ  ಸೋಂಕು ತಗುಲಿತ್ತು. ಶವ ಸಂಸ್ಕಾರದಲ್ಲಿ ಭಾಗಿಯಾಗಿದ್ದ ಮೃತ ವ್ಯಕ್ತಿಯ ಮಗಳು ಈ ರಾಜ್ಯಘಟ್ಟ ಗ್ರಾಮದವರಾಗಿದ್ದು, ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.  ಮಹಿಳೆಗೆ ಸೋಂಕು ತಗುಲಿದ ಕಾರಣ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿತ್ತು. ಮೇ 1ರಂದು ಸೀಲ್ಡೌನ್ ಆಗಿದ್ದ ಗ್ರಾಮದಲ್ಲಿ ಇದುವರೆಗೂ ಯಾವುದೇ‌ ಹೊಸ ಪ್ರಕರಣ ಪತ್ತೆಯಾಗಿಲ್ಲ. ಆ ಕಾರಣದಿಂದ ಇಂದು ಗ್ರಾಮಕ್ಕೆ  ಭೇಟಿ ನೀಡಿದ್ದ ತಹಶೀಲ್ದಾರ್ ಸೀಲ್ಡೌನ್ ‌ತೆರವುಗೊಳಿಸಿದರು.

ಲಾಕ್​ಡೌನ್ ತರವು ಆದೇಶ ಘೋಷಣೆ ಮಾಡುತ್ತಿದ್ದಂತೆ, ಇಡೀ ಗ್ರಾಮದ ಬಗ್ಗೆ ಮುತುವರ್ಜಿ ತೋರಿದ ಅಧಿಕಾರಿಗಳಿಗೆ  ಗ್ರಾಮಸ್ಥರು ಚಪ್ಪಾಳೆ ತಟ್ಟಿ ಅಭಿನಂಧಿಸಿದ್ದಾರೆ. ಅಲ್ಲದೆ ಒಂದು ತಿಂಗಳ ಕಾಲ ಗ್ರಾಮದಲ್ಲಿ ಸೋಂಕು ಹರಡದಂತೆ ತಾಲೂಕು ಆಡಳಿತದ ಕೈಜೋಡಿಸಿದ ಗ್ರಾಮಸ್ಥರಿಗೆ ತಹಶೀಲ್ದಾರ್ ಅಭಿನಂದಿಸಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.  ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಸೋಂಕಿತರು ಕೂಡ ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗುತ್ತಿದ್ದಾರೆ ಎಂದು ಡಿಸಿ ತಿಳಿಸಿದ್ದಾರೆ. ಜೊತೆಗೆ ಜನರು ಮತ್ತಷ್ಟು ಜಾಗೃತರಾಗಿರುವಂತೆ ಮನವಿ ಮಾಡಿದ್ದಾರೆ.

ಇದನ್ನು ಓದಿ: ಜೂನ್ 8ರಿಂದ ತಿರುಪತಿ ಮಾದರಿಯಲ್ಲಿ ಮಲೆಮಹದೇಶ್ವರನ ದರ್ಶನಕ್ಕೆ ಸಿದ್ದತೆ

ಒಟ್ಟಾರೆ ಮುಂಬೈನ ಸೋಂಕು ಜಿಲ್ಲೆಯಲ್ಲಿ ದಿನೇ ದಿನೇ ನಿಯಂತ್ರಣಕ್ಕೆ ಬರುತ್ತಿರುವುದು ಜಿಲ್ಲಾಡಳಿತದಲ್ಲಿ ಒಂದು‌ ರೀತಿಯ‌ ಸಮಾಧಾನ ತಂದಿದೆ. ಅದರಲ್ಲೂ ಕೊರೋನಾ ಹಾಟ್ ಸ್ಪಾಟ್ ‌ಆಗಿರುವ ಕೆ.ಆರ್.ಪೇಟೆ ತಾಲೂಕಿನ ಮೊದಲ ಗ್ರಾಮ ಇದೀಗ ಸೀಲ್ಡೌನ್​ನಿಂದ ತೆರವಾಗಿದ್ದು, ಜನರು ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ.
First published: