ಮನೆ ಅಂಗಳಕ್ಕೆ ಶಾಲಾ ಶಿಕ್ಷಕರು ; ಮನೆಯೇ ಪಾಠ ಶಾಲೆ ಶಿಕ್ಷಕರ ವಿನೂತನ ಪ್ರಯತ್ನ

1 ರಿಂದ 9 ನೇ ವರ್ಗದ ವರೆಗಿನ‌ ವಿದ್ಯಾರ್ಥಿಗಳಿಗೆ 28 ಶಿಕ್ಷಕರ ತಂಡ ದಿನನಿತ್ಯ ಹೋಗಿ‌ ಪಾಠ ಮಾಡಿ ಬರುತ್ತಿದ್ದಾರೆ.

ವಿದ್ಯಾರ್ಥಿನಿಗೆ ಹೋಮ್​​​​ ವರ್ಕ್​​ ಕೊಡುತ್ತಿರುವ ಶಿಕ್ಷಕಿ

ವಿದ್ಯಾರ್ಥಿನಿಗೆ ಹೋಮ್​​​​ ವರ್ಕ್​​ ಕೊಡುತ್ತಿರುವ ಶಿಕ್ಷಕಿ

  • Share this:
ಚಿಕ್ಕೋಡಿ(ಜೂ.28): ಕೊರೋನಾ ಮಹಾಮಾರಿಯಿಂದ ಶಾಲೆಗಳನ್ನ ಯಾವಾಗ ಆರಂಭ ಮಾಡಬೇಕು ಎನ್ನುವ ಗೊಂದಲದಲ್ಲಿ  ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗೊಂದಲದಲ್ಲಿವೆ. ಕೆಲ ಶಾಲೆಗಳು ಆನ್ ‌ಲೈನ್ ಶಿಕ್ಷಣದಲ್ಲಿ ಮಕ್ಕಳಿಗೆ ಸರಕಾರ ಬೇಡ ಎಂದರೂ ಪಾಠ ಮಾಡುತ್ತಿವೆ. ಆದರೆ, ಇಲ್ಲೊಂದು ಶಾಲಾ ಆಡಳಿತ ಮಂಡಳಿ ಆನ್ ಲೈನ್ ಶಿಕ್ಷಣ ಬೇಡ ಎನ್ನುವ ಅಭಿಯಾನವನ್ನ ಬೆಂಬಲಿಸಿ ಮಕ್ಕಳಿಗೆ ವಿಭಿನ್ನವಾಗಿ ಪಾಠ ಮಾಡುವ ಹೊಸ ಐಡಿಯಾ ಕಂಡು ಕೊಂಡಿದೆ.  

ಮಕ್ಕಳ ಮನೆಗಳಿಗೆ ತೆರಳಿ ಶಿಕ್ಷಕರು ಪಾಠ ಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿರುವದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ. ಗ್ರಾಮದ ಜಿ ಎಂ ಹಂಜಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಆಡಳಿತ ಮಂಡಳಿ ಮಹಾಮಾರಿ‌ ಕೊರೋನಾದಿಂದ ವಿದ್ಯಾರ್ಥಿಗಳು ಪಾಠ ಬಿಟ್ಟು ಕೇವಲ ಆಟ ಆಡಿ‌ ಕಾಲಹರಣ ಮಾಡುವದನ್ನ ಗಮನಿಸಿ ಹಾಗೂ ಆನ್ ಲೈನ್ ಶಿಕ್ಷಣದಿಂದ ಮಕ್ಕಳಿಗೆ ಹಾಗೂ ಪಾಲಕರಲ್ಲಿ ತೊಂದರೆಯಾಗುವದನ್ನ ಮನಗಂಡು ವಿದ್ಯಾರ್ಥಿಗಳ ಮನೆಗಳಿಗೆ ಶಿಕ್ಷಕರೆ ತೆರಳಿ ಪಾಠ ಹೇಳುವ ಹೊಸ ಐಡಿಯಾ ಕಂಡುಕೊ‌ಂಡಿದೆ. 600 ಕ್ಕೂ ಹೆಚ್ಚು ವಿದ್ಯಾರ್ಥಿಗಳ‌ ಮನೆಗಳಿಗೆ  ಶಿಕ್ಷಕರೇ ಖುದ್ದಾಗಿ ತೆರಳಿ ಪಾಠ ಮಾಡುತ್ತಿದ್ದಾರೆ.

ದಿನನಿತ್ಯ 50 ಕ್ಕೂ ಹೆಚ್ಚು ಮನೆಗಳಿಗೆ ಶಿಕ್ಷಕರು ತೆರಳಿ ಹೋಮ್​ ವರ್ಕ ಕೊಟ್ಟು ಬರುತ್ತಾರೆ.‌ ಬಳಿಕ ಮತ್ತೆ ಮೂರು ದಿನಗಳ ಬಳಿಕ ಹೋಮ್ ವರ್ಕ ಚೆಕ್ ಮಾಡಿ ಹೊಸ ಹೋಮ್ ವರ್ಕ ಕೊಟ್ಟು ಬರುವ ಕೆಲಸವನ್ನ ಶಿಕ್ಷಕರು‌ ಮಾಡುತ್ತಿದ್ದಾರೆ. 1 ರಿಂದ 9 ನೇ ವರ್ಗದ ವರೆಗಿನ‌ ವಿದ್ಯಾರ್ಥಿಗಳಿಗೆ 28 ಶಿಕ್ಷಕರ ತಂಡ ದಿನನಿತ್ಯ ಹೋಗಿ‌ ಪಾಠ ಮಾಡಿ ಬರುತ್ತಿದ್ದಾರೆ.

ಈ ಹೊಸ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಪಾಲಕರು ಸಂತಸ ವ್ಯಕ್ತಪಡಿಸಿದ್ದು, ಲಾಕ್ ಡೌನ್ ಇಂದ ನಮ್ಮ‌ ಮಕ್ಕಳು ವಿದ್ಯಾಭ್ಯಾಸ ಮರೆತು ಬಿಟ್ಟಿದ್ದರೂ ಆದರೆ ಈ ಹೊಸ ವ್ಯವಸ್ಥೆಯಿಂದ ದಿನನಿತ್ಯ ಅಭ್ಯಾಸ ದ ಕಡೆಗೆ ಗಮನ ಕೊಡುವಂತಾಗಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ಅನುದಾನಿತ ಶಾಲೆ ಆದರೂ ದಿನಗೂಲಿ ಶಿಕ್ಷಕರು ಹೆಚ್ಚು ಇರುವ ಈ ಶಾಲೆಯಲ್ಲಿ ಶಾಲೆಗಳು ಬಂದ ಆಗಿದ್ದ ಕಾರಣ ವೇತನವಿಲ್ಲದೇ ಶಿಕ್ಷಕರು ಪರದಾಡುತ್ತಿದ್ದರೂ ಇದನ್ನ ಗಮನಿಸಿದ ಆಡಳಿತ ಮಂಡಳಿ ಈಗ ಶಿಕ್ಷಕರಿಗೆ ಹೊಸ ಕಾಯಕ ನೀಡಿ ವೇತನ ನೀಡುತ್ತಿರುವದಕ್ಕೆ ಶಿಕ್ಷಕರ ಕುಟುಂಬಗಳು ನಿಟ್ಟುಸಿರು ಬಿಟ್ಟಿವೆ.

ಅಲ್ಲದೇ ದಿನನಿತ್ಯ ಶಿಕ್ಷಕರು ಪಾಠ ಮಾಡುವದು ಅಷ್ಟೇ ಅಲ್ಲದೇ ವಿದ್ಯಾರ್ಥಿಗಳ ಹಾಗೂ ವಿದ್ಯಾರ್ಥಿ ಗಳ ಮನೆಯವರ ಆರೋಗ್ಯದ ಮಾಹಿತಿ ಪಡೆದು ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ ಅವರಿಗೆ ಸಲಹೆ ನೀಡಿ ಆಸ್ಪತ್ರೆಗೆ ಕಳಿಸಕೊಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಪಾಠದ ಜೊತೆಗೆ ಆರೋಗ್ಯದ ಕಡೆಯೂ ಈ ಶಾಲೆಯ ಶಿಕ್ಷಕರು ಕಾಳಜಿ ಇಡುತ್ತಿದ್ದಾರೆ.

ಇದನ್ನೂ ಓದಿ :  ಮಳೆಯಿಂದ ರಕ್ಷಣೆ ಪಡೆಯಲು ಬೀದಿ ನಾಯಿಗಳಿಗೆ ಬೆಚ್ಚನೆಯ ಸೂರು ಕಲ್ಪಿಸಿ ಮಾನವೀಯತೆ ಮೆರೆದ ಅನಿಮಲ್ ಕೇರ್ ಟ್ರಸ್ಟ್

ಒಟ್ಟಿನಲ್ಲಿ ಕೊರೋನಾ ಮಾಹಾಮಾರಿಗೆ ಶಿಕ್ಷಣ ವ್ಯವಸ್ಥೆಯೇ ಅದಲು ಬದಲಾಗಿದೆ. ಆನ್ ಲೈನ್ ಶಿಕ್ಷಣ ಬೇಕಾ ಅಥವಾ ಶಾಲೆ ಆರಂಭಿಸಬೇಕು ಎನ್ನುವ ಗೊಂದಲದಲ್ಲಿ ಸರಕಾರಗಳು ಇವೆ. ಆದರೆ ಈ ಎಲ್ಲ‌ ಗೊಂದಲಗಳನ್ನ ಬದಿಗಿಟ್ಟು  ಜಿ ಎಂ ಹಂಜಿ ಶಿಕ್ಷಣ ಸಂಸ್ಥೆಯು ಕಂಡುಕೊಂಡಿರುವ ಈ ಹೊಸ ಐಡಿಯಾ ಇತರರಿಗೂ‌ ಮಾದರಿಯಾಗಿದೆ.

ಸರಕಾರವು ಈ ಬಗ್ಗೆ ಯೋಚಿಸಿ ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಆರೋಗ್ಯದ ಕಡೆಯು ಸರಕಾರಿ ಶಿಕ್ಷಕರಿಂದ ಕಾಳಜಿ‌ ವಹಿಸಲಿ ಎನ್ನುವದೇ ನಮ್ಮ ಆಶಯ.
First published: