ಎಸ್​ಎಸ್​ಎಲ್​ಸಿ ಪರೀಕ್ಷೆ ಹಿನ್ನೆಲೆ; ಮನೆ-ಮನೆಗೆ ತೆರಳಿ ವಿದ್ಯಾರ್ಥಿಗಳಿಗೆ ಪುನರ್​ಮನನ ಮಾಡಿಸುತ್ತಿರುವ ಶಿಕ್ಷಕರು

ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಗೊಂದಲವಿದ್ದರೆ ಅದನ್ನು ಸ್ಥಳದಲ್ಲಿಯೇ ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ. ಶಾಲೆಯಲ್ಲಿ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಪ್ರತೀ ದಿನ ನಾಲ್ಕು ವಿದ್ಯಾರ್ಥಿಗಳ ಮನೆಗೆ ವಿಷಯವಾರು ಶಿಕ್ಷಕರು ತೆರಳಿ ಅತ್ಯಂತ ಪ್ರೀತಿಯಿಂದ ಪಾಠ ಪ್ರವಚನ ಹೇಳಿಕೊಡುತ್ತಿದ್ದೇವೆ ಎನ್ನುತ್ತಾರೆ ಶಾಲಾ ಶಿಕ್ಷಕಿ ಇಂದಿರಾ.

news18-kannada
Updated:May 29, 2020, 7:05 AM IST
ಎಸ್​ಎಸ್​ಎಲ್​ಸಿ ಪರೀಕ್ಷೆ ಹಿನ್ನೆಲೆ; ಮನೆ-ಮನೆಗೆ ತೆರಳಿ ವಿದ್ಯಾರ್ಥಿಗಳಿಗೆ ಪುನರ್​ಮನನ ಮಾಡಿಸುತ್ತಿರುವ ಶಿಕ್ಷಕರು
ಮನೆಗೆ ತೆರಳಿ ವಿದ್ಯಾರ್ಥಿಗೆ ಪುನರ್ ಮನನ ಮಾಡಿಸುತ್ತಿರುವ ಶಿಕ್ಷಕ
  • Share this:
ಕೊಡಗು: ಕೊರೋನಾ ಮಹಾಮಾರಿಯಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಮುಂದೂಡಿದ್ದ ಸರ್ಕಾರ, ಜೂನ್ ಕೊನೆಯ ವಾರದಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಆದರೆ ಶಾಲೆ, ಶಿಕ್ಷಕರಿಂದ ದೂರವಿರುವ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸಲು ಶಿಕ್ಷಕರು ಮನೆ ಮನೆಗೆ ತೆರಳಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಹಣಿಗೊಳಿಸುತ್ತಿದ್ದಾರೆ. ಅದು ಎಲ್ಲಿ ಹೇಗೆ ಸಿದ್ಧತೆ ನಡೆಯುತ್ತಿದೆ ಎನ್ನುವುದನ್ನು ನೀವು ನೋಡಲೇಬೇಕು.

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯೋರೆ ಜಾಸ್ತಿ. ಈ ಶಾಲೆಗಳಲ್ಲಿ ಕಲಿಕಾ ಮಟ್ಟ ಕಡಿಮೆ ಇರುತ್ತೆ, ವಿದ್ಯಾರ್ಥಿಗಳ ಮೇಲೆ ಶಿಕ್ಷಕರು ಗಮನ ಹರಿಸುವುದು ಕಡಿಮೆ ಎಂದೆಲ್ಲಾ ದೂರುವವರು ಇದ್ದಾರೆ. ಆದರೆ ಇದೆಲ್ಲದಕ್ಕೂ ತದ್ವಿರುದ್ಧವಾಗಿ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕೊಡಗರಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ವಿಶೇಷ ಒತ್ತು ನೀಡಲಾಗುತ್ತಿದೆ.

ಹೌದು ಇಷ್ಟೊತ್ತಿಗಾಗಲೇ ಎಸ್‍ಎಸ್‍ಎಲ್ಸಿ ಪರೀಕ್ಷೆ ಮುಗಿದು ಫಲಿತಾಂಶ ಕೂಡ ಬರಬೇಕಾಗಿತ್ತು. ಆದರೆ ಕೊರೊನಾ ಮಹಾಮಾರಿಯಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಸರ್ಕಾರ ಪರೀಕ್ಷೆಯನ್ನು ಮುಂದೂಡಿತ್ತು. ಇದೀಗ ಜೂನ್ ತಿಂಗಳ ಕೊನೆಯಲ್ಲಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದ್ದು ಬರೋಬ್ಬರಿ ಎರಡು ತಿಂಗಳಿಂದ ವಿದ್ಯಾರ್ಥಿಗಳು ಶಾಲೆ, ಶಿಕ್ಷಕರಿಂದ ದೂರವೇ ಇದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಕಲಿತಿರುವುದನ್ನು ಮರೆತಿರಬಹುದು. ಇಲ್ಲವೇ ಕಲಿತಿದ್ದರಲ್ಲಿ ಗೊಂದಲ ಮೂಡಿರಬಹುದು. ಇದೆಲ್ಲವನ್ನೂ ಆಲೋಚಿಸಿ ಕೊಡಗರಹಳ್ಳಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಮನೆ, ಮನೆಗೆ ತೆರಳಿ ಪಾಠ ಪ್ರವಚನವನ್ನು ಪುನರ್ ಮನನ ಮಾಡಿಸುತ್ತಿದ್ದಾರೆ.

ಜೂನ್ ಅಂತ್ಯದೊಳಗೆ ರಾಜ್ಯ ಸಂಪುಟ ವಿಸ್ತರಣೆ; ಹೆಚ್ಚುವರಿಯಾಗಿ ನಾಲ್ವರಿಗೆ ಸಚಿವ ಸ್ಥಾನ ಸಾಧ್ಯತೆ?

ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಗೊಂದಲವಿದ್ದರೆ ಅದನ್ನು ಸ್ಥಳದಲ್ಲಿಯೇ ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ. ಶಾಲೆಯಲ್ಲಿ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಪ್ರತೀ ದಿನ ನಾಲ್ಕು ವಿದ್ಯಾರ್ಥಿಗಳ ಮನೆಗೆ ವಿಷಯವಾರು ಶಿಕ್ಷಕರು ತೆರಳಿ ಅತ್ಯಂತ ಪ್ರೀತಿಯಿಂದ ಪಾಠ ಪ್ರವಚನ ಹೇಳಿಕೊಡುತ್ತಿದ್ದೇವೆ ಎನ್ನುತ್ತಾರೆ ಶಾಲಾ ಶಿಕ್ಷಕಿ ಇಂದಿರಾ.

ಒಂದೆಡೆ ಪರೀಕ್ಷೆ ಯಾವಾಗ ನಡೆಯುತ್ತೆ, ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ರೀತಿಯಾದರೂ ಹೇಗೆ, ನಮ್ಮ ಮಕ್ಕಳ ಮುಂದಿನ ಭವಿಷ್ಯವೇನು ಎಂದು ಪೋಷಕರು ಚಿಂತೆಗೇಡಾಗಿರುವುದಂತು ಸತ್ಯ. ಆದರೆ ಕೊಡಗರಹಳ್ಳಿ ಶಾಲೆಯ ಶಿಕ್ಷಕರು ಪ್ರತೀ ವಿದ್ಯಾರ್ಥಿಯ ಮನೆಗೆ ತೆರಳಿ ವಿದ್ಯಾರ್ಥಿಗಳ ಕಲಿಕೆಯನ್ನು ಮತ್ತೊಮ್ಮೆ ಖಚಿತ ಪಡಿಸಿಕೊಳ್ಳುತ್ತಿದ್ದಾರೆ. ಜೊತೆಗೆ ವಿದ್ಯಾರ್ಥಿಗಳ ಪೋಷಕರಿಗೂ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ಕೊರೊನಾ ಭೀತಿ ಇರುವುದರಿಂದ ಎಲ್ಲಾ ವಿದ್ಯಾರ್ಥಿಗಳ ಜೊತೆಗೆ ತಮ್ಮ ಮಕ್ಕಳು ಶಾಲೆಗೆ ಹೋಗುವುದಕ್ಕೆ ಸಾಧ್ಯವಾಗದ ಸ್ಥಿತಿಯಲ್ಲಿ ಶಿಕ್ಷಕರೇ ಮನೆಗೆ ಬಂದು ತಮ್ಮ ಮಕ್ಕಳು ಕಲಿತಿರುವುದನ್ನು ಮರೆತಿದ್ದರೆ ಪುನರ್ ಮನನ ಮಾಡಿಸುತ್ತಿರುವುದು ಖುಷಿ ತಂದಿದೆ. ಇದರಿಂದ ತಮ್ಮ ಮಕ್ಕಳು ಹೆಚ್ಚು ಅಂಕ ಗಳಿಸುತ್ತಾರೆ ಎನ್ನೋ ಭರವಸೆ ಮೂಡಿದೆ ಎನ್ನುವುದು ಪೋಷಕರಾದ ಲತಾ ಅವರ ಮಾತು.ಒಟ್ಟಿನಲ್ಲಿ ಕೊರೋನಾದಿಂದ ಶಾಲೆ ಶಿಕ್ಷಕರಿಂದ ದೂರವಾಗಿ ಎರಡು ತಿಂಗಳನ್ನೇ ಕಳೆದಿರುವ ವಿದ್ಯಾರ್ಥಿಗಳು ಸದ್ಯ ಪರೀಕ್ಷೆಗೆ ಸಿದ್ಧವಾಗುತ್ತಿದ್ದಾರೆ. ವಿದ್ಯಾರ್ಥಿಗಳ ಸಿದ್ಧತೆಗೆ ಶಿಕ್ಷಕರು ಒತ್ತಾಸೆಯಾಗಿ ನಿಲ್ಲುವ ಮೂಲಕ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಗಳಿಸಲು ಪ್ರಾಮಾಣಿಕ ಮತ್ತು ವಿನೂತನ ಪ್ರಯತ್ನ ಮಾಡುತ್ತಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
First published: May 29, 2020, 7:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading