ಬೆಂಗಳೂರು; ಶಾಲೆಗಳ ಪುನರಾರಂಭ ಮಾಡಲು ಶಿಕ್ಷಣ ಇಲಾಖೆ ಈಗಾಗಲೇ ಸಾಲು ಸಾಲು ಸಭೆ ನಡೆಸಿದೆ. ಸಭೆ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ದೀಪಾವಳಿ ಹಬ್ಬ ನಂತರ ದಿನಾಂಕ ಘೋಷಣೆ ಮಾಡುವ ಸಾಧ್ಯತೆಯಿದೆ. ಈ ಮಧ್ಯೆ ಆರ್ ಟಿ ಇ ವಿದ್ಯಾರ್ಥಿ ಹಾಗೂ ಪೋಷಕರ ಅಸೋಯೇಷನ್ ಶಿಕ್ಷಣ ಇಲಾಖೆಗೆ ಸಲಹೆ ನೀಡಿವೆ. ಹಂತ ಹಂತವಾಗಿ ಶಾಲೆ ತೆರೆಯಲು ಅಭ್ಯಂತರವಿಲ್ಲವೆಂದಿವೆ. ಹಾಗಾದ್ರೆ ಸರ್ಕಾರಕ್ಕೆ ಏನು ಸಲಹೆ ಕೊಟ್ಟಿದ್ದಾರೆ ಗೊತ್ತಾ? ಈ ಕುರಿತು ವರದಿ ಇಲ್ಲಿದೆ ನೋಡಿ.
ಶಾಲೆ ಪುನರಾರಂಭ ವಿಚಾರವಾಗಿ ಶಿಕ್ಷಣ ಇಲಾಖೆ ಕಳೆದೊಂದು ವಾರದಿಂದ ಸರಣಿ ಸಭೆ ನಡೆಸಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಖುದ್ದು ಸಾಲು ಸಾಲು ಸಭೆಯಲ್ಲಿ ಭಾಗವಹಿಸಿ ಸಲಹೆ ಪಡೆದಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿ ಶಾಲೆ ಪುನರಾರಂಭ ಕುರಿತು ಮಾಹಿತಿ ಕಲೆಹಾಕಿದ್ದಾರೆ. ಈಗಾಗಲೇ ಶಿಕ್ಷಣ ಇಲಾಖೆ ಮಾಹಿತಿ ಕಲೆಹಾಕಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಕೊವಿಡ್ ಸಂದರ್ಭ ನೋಡಿಕೊಂಡು ಹಂತ ಹಂತವಾಗಿ ಶಾಲೆ ತೆರೆಯಲು, ಪ್ರೌಢಶಾಲೆವರೆಗೆ ತೆರೆಯಲು ತೊಂದರೆಯಿಲ್ಲ ಎಂದು ವರದಿಯಲ್ಲಿ ಅಭಿಫ್ರಾಯಪಟ್ಟಿದೆ.
ಈ ಮಧ್ಯೆ ಶಿಕ್ಷಣ ಇಲಾಖೆಯ ಆಯುಕ್ತರೊಂದಿಗೆ ಇಂದು RTE ಸ್ಟುಡೆಂಟ್ಸ್ ಅಂಡ್ ಪೇರೆಂಟ್ಸ್ ಅಸೋಸಿಯೇಷನ್ ಸಭೆ ನಡೆಸಿದೆ. ಸಭೆಯಲ್ಲಿ ಸ್ಟೂಡೆಂಟ್ಸ್ ಆ್ಯಂಡ್ ಪೆರೆಂಟ್ಸ್ ಅಸೋಸಿಯೇಷನ್ ಶಾಲಾ ಪುನರಾರಂಭ ಕುರಿತು ತಮ್ಮ ಸಲಹೆಗಳು ಹಾಗೂ ಸುರಕ್ಷತಾ ಕ್ರಮಗಳನ್ನು ಹೇಗಿರಬೇಕು ಎಂದು ತಿಳಿಸಿದೆ.
ಸರ್ಕಾರಕ್ಕೆ ಪೇರೆಂಟ್ಸ್ ಅಸೋಯೇಷನ್ ನೀಡಿದ ಸಲಹೆಗಳು*ಡಿಸೆಂಬರ್ 15ರ ನಂತರ ಶಾಲೆ ಕಾಲೇಜು ಆರಂಭಿಸಬಹುದು.* ಮೊದಲ ಹಂತದಲ್ಲಿ 10 ಮತ್ತು 12ನೇ ತರಗತಿಗಳು ನಂತರ 15, ದಿನ ಬಿಟ್ಟು 9 ಮತ್ತು 11ನೇ ತರಗತಿಗಳನ್ನು ನಡೆಸುವುದು.10 ಮತ್ತು 12ನೇ ತರಗತಿಗಳನ್ನು ಬೆಳಿಗ್ಗೆ 7 ರಿಂದ 12 ಘಂಟೆಯವರೆಗೆ ನಡೆಸುವುದು 9 ಮತ್ತು 11ನೇ ತರಗತಿಗಳನ್ನು 1 ರಿಂದ ಸಂಜೆ 5 ಘಂಟೆಯ ವರೆಗೆ ನಡೆಸುವುದು.
ಒಂದು ತರಗತಿಯಲ್ಲಿ ಕೇವಲ 10 ವಿದ್ಯಾರ್ಥಿಗಳು ಮಾತ್ರ ಇರಬೇಕು.ಪ್ರಾರ್ಥನೆ ಸೇರಿದಂತೆ ಯಾವುದೇ ಪತ್ಯೇತರ ಚಟುವಟಿಕೆಗಳನ್ನು ನಡೆಸಬಾರದು.ಸಮವಸ್ತ್ರ, ಟೈ, ಬೆಲ್ಟ್, ಶೂ, ಸಾಕ್ಸ್ ಕಡ್ಡಾಯವಾಗಿ ಖರೀದಿ ಮಾಡುವಂತೆ ಆಡಳಿತ ಮಂಡಳಿಗಳು ಒತ್ತಾಯಿಸುವಂತಿಲ್ಲ.
ತರಗತಿ ಪ್ರಾರಂಭದ ಹೆಸರಿನಲ್ಲಿ ಯಾವುದೇ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುವಂತಿಲ್ಲ.ಆನ್ಲೈನ್, ವಿದ್ಯಾಗಮ, ಯೂಟೂಬ್ ಚಾನೆಲ್ ಚಂದನ ವಾಹಿನಿ ಮೂಲಕ ನೀಡಿರುವ ಶಿಕ್ಷಣದಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆಗ್ರಾಮೀಣ ಪ್ರದೇಶಗಳ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ 10 ಮತ್ತು 12ನೇ ತರಗತಿಯ ವಾರ್ಷಿಕ ಪರೀಕ್ಷೆಗಳಲ್ಲಿ ಶೇ. 10ರಷ್ಟು ಕೋವಿಡ್ ಕೃಪಾಂಕ ನೀಡಬೇಕು.
ಅದೇ ರೀತಿ ಶಾಲೆಯಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳನ್ನು ಶಿಕ್ಷಣ ಇಲಾಖೆಗೆ ತಿಳಿಸಿದೆ.*ಸುರಕ್ಷತಾ ಕ್ರಮಗಳು*ಪ್ರತಿಯೊಬ್ಬ ವಿದ್ಯಾರ್ಥಿಯ ಪೋಷಕರಿಂದ ಅನುಮತಿ ಪತ್ರ ಕಡ್ಡಾಯಗೊಳಿಸುವುದು.ಯಾವುದೇ ವಿದ್ಯಾರ್ಥಿಗಳಲ್ಲಿ ಸೋಂಕು ಕಂಡುಬಂದಲ್ಲಿ ಆ ಸಮಯದಲ್ಲಿ ಶಾಲಾಡಳಿತ ಸರ್ಕಾರ ಚಿಕಿತ್ಸಾ ಖರ್ಚು-ವೆಚ್ಚ ಭರಿಸುವುದು.ಪ್ರತಿಯೊಬ್ಬ ವಿದ್ಯಾರ್ಥಿಗೂ ಆರೋಗ್ಯ ವಿಮೆ ಸೌಲಭ್ಯ ಒದಗಿಸುವುದು. ಶಿಕ್ಷಕರು, ಎಲ್ಲಾ ಸಿಬ್ಬಂದಿಗಳಿಗೂ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡುವುದು.
15 ದಿನಗಳಿಗೊಮ್ಮೆ ಮರು ಪರೀಕ್ಷೆ ನಡೆಸುವುದುಶೌಚಾಲಯ, ಶುದ್ಧ ಕುಡಿಯುವ ನೀರು, ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್, ಥರ್ಮೋಮೀಟರ್, ಕೋವಿಡ್ ಕಿಟ್ಗಳನ್ನು ಕಡ್ಡಾಯವಾಗಿ ಇರುವಂತೆ ಅತ್ಯುತ್ತಮವಾದ SOP ತಯಾರಿಸುವುದು.SOP ಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಇಲಾಖೆಯ ಉಪ ನಿರ್ದೇಶಕರನ್ನು ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಿಸುವುದು. ಶಾಲಾ ವಾಹನಗಳಲ್ಲಿ ಹೆಚ್ಚಿನ ಮಕ್ಕಳನ್ನು ಕರೆದೊಯ್ಯದಂತೆ ನಿಗಾ ವಹಿಸುವುದುಶಾಲಾ ಆವರಣದಲ್ಲಿ ಪೋಷಕರು ಗುಂಪಾಗಿ ಸೇರದಂತೆ ಎಚ್ಚರಿಸಬೇಕು.
ಇದನ್ನೂ ಓದಿ : ಅಭಿವೃದ್ಧಿ ಮಾದರಿ ಬಿಹಾರ ಜನರ ಹೃದಯ ಗೆದ್ದಿದೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ; ಪ್ರಧಾನಿ ಮೋದಿ
ತರಗತಿ ಆರಂಭದ 15 ದಿನಗಳ ಮುಂಚೆಯೇ SOP ಕುರಿತು ವಿದ್ಯಾರ್ಥಿ ಪೋಷಕರಿಗೆ ಧ್ವನಿ ವರ್ಧಕಗಳ ಮೂಲಕ ಅರಿವು ಮೂಡಿಸಬೇಕು.ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಇರುವ ಭಯ ಆತಂಕ ಹೋಗಲಾಡಿಸಬೇಕು.ಮಕ್ಕಳನ್ನು ತರಗತಿಗಳಿಗೆ ಕಳುಹಿಸಲು ಪ್ರೇರೇಪಿಸುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ