ಸರಕಾರಿ ಶಾಲೆಗಳಲ್ಲಿ(Government Schools) ಬಿಸಿಯೂಟದ ಜೊತೆಗೆ ಮೊಟ್ಟೆ (Serve eggs) ಬೇಕೆ ಬೇಡವೇ ಎಂದು ಪರ ವಿರೋಧದ ಚರ್ಚೆ ನಡೆಯುತ್ತಿರುವಾಗಲೇ ಬಾಗಲಕೋಟೆಯ ( Bagalkot) ಶಾಲೆಯೊಂದರಲ್ಲಿ ಮಾಂಸಾಹಾರ (Meat) ನೀಡಿರುವುದು ಇದೀಗ ಭಾರಿ ಚರ್ಚೆಗೆ (Debated)ಗ್ರಾಸವಾಗಿದೆ. ಹೌದು ಶಾಲೆಯಲ್ಲಿ ಮುಗ್ಧ ಮಕ್ಕಳಿಗೆ ಕೋಳಿಮೊಟ್ಟೆ ನೀಡಿದರೆ ಉದ್ದೇಶಪೂರ್ವಕವಾಗಿ ಮಾಂಸಾಹಾರಕ್ಕೆ ಪ್ರಚೋದನೆ ನೀಡಿದಂತಾಗಬಹುದು, ಅಲ್ಲದೇ ಮೊಟ್ಟೆ ತಿನ್ನುವ ಮಕ್ಕಳು ಮತ್ತು ತಿನ್ನದ ಮಕ್ಕಳೆಂದು ಶಾಲೆಯಲ್ಲಿ ನೀವೇ ಭೇದಭಾವ ಮೂಡಿಸಿದಂತಾಗುತ್ತದೆ ಎಂಬ ಕೇಳಿ ಬರುತ್ತಿದ್ದರೇ, ಇದರ ಮಧ್ಯೆ ಮಾಂಸಾಹಾರ ಬಡಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಹಲವರ ವಾದವಾಗಿದೆ.
ಶಾಲೆ ಮುಚ್ಚುವಂತೆ ಆದೇಶ
ಆದರೆ ಇದನ್ನು ಲೆಕ್ಕಿಸದೇ ಕ್ರಿಸ್ಮಸ್ ಆಚರಣೆಯ ದಿನದಂದು ಶಾಲಾ ಮಕ್ಕಳಿಗೆ ಮಾಂಸಾಹಾರ ನೀಡಿದ ಆರೋಪ ಕೇಳಿಬಂದಿದ್ದು, ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದ ಸೇಂಟ್ ಪಾಲ್ಸ್ ಶಾಲೆಯಲ್ಲಿ ಮಾಂಸಾಹಾರ ನೀಡಿದ ಬಳಿಕ ಶಾಲೆಯನ್ನು ಮುಚ್ಚುವಂತೆ ಬಾಗಲಕೋಟೆಯ ಕ್ಷೇತ್ರ ಶಿಕ್ಷಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ಶಿಕ್ಷಣ ಇಲಾಖೆ ತಡೆ ನೀಡಿದೆ ಎಂದು ತಿಳಿದು ಬಂದಿದೆ.
ಮುಜುಗರಕ್ಕೆ ದೂಡಿದೆ
ಶಾಲೆಯ ಆಡಳಿತ ಮಂಡಳಿಗೆ ಶಿಕ್ಷಣಾಧಿಕಾರಿ ಪತ್ರ ಬರೆದಿದ್ದಾರೆ. ಕ್ರಿಸ್ಮಸ್ ಆಚರಣೆಯಂದು ನಿಮ್ಮ ಶಾಲೆಯಲ್ಲಿ ಮಕ್ಕಳಿಗೆ ಮಾಂಸಾಹಾರ ನೀಡಿರುವುದು ನಮ್ಮ ಗಮನಕ್ಕೆ ತರಲಾಗಿದೆ. ಈ ನಿಮ್ಮ ವರ್ತನೆ ನಮ್ಮ ಇಲಾಖೆ ಹಾಗೂ ಸಾರ್ವನಿಕರನ್ನು ಮುಜುಗರಕ್ಕೆ ದೂಡಿದೆ. ಮತ್ತೊಂದು ಆದೇಶ ಬರುವವರೆಗೂ ಶಾಲೆಯನ್ನು ತೆರೆಯುವಂತಿಲ್ಲ ಎಂದು ಪತ್ರದಲ್ಲಿ ಶಿಕ್ಷಣಾಧಿಕಾರಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ
ಬಳಿಕ ಈ ವಿಚಾರ ಶಿಕ್ಷಣ ಇಲಾಖೆಯ ಗಮನಕ್ಕೆ ತಂದಾಗ ಆದೇಶವನ್ನು ರದ್ದುಗೊಳಿಸಲಾಗಿದೆ. ಜಿಲ್ಲಾಧಿಕಾರಿ ಅಥವಾ ಶಿಕ್ಷಣ ಇಲಾಖೆಗೆ ಮಾಹಿತಿ ನೀಡದೆ ಸ್ಥಳೀಯ ಅಧಿಕಾರಿ ಶಾಲೆ ಮುಚ್ಚುವಂತೆ ಆದೇಶ ನೀಡಿದ್ದರು ಎನ್ನಲಾಗಿದೆ. ಮಾಂಸಾಹಾರಿ ಆಹಾರವನ್ನು ನೀಡಿದ್ದಾರೆಂದ ಮಾತ್ರಕ್ಕೆ ನಾವು ಶಾಲೆಯನ್ನು ಮುಚ್ಚಲು ಸಾಧ್ಯವಿಲ್ಲ. ಇದೀಗ ಆ ಆದೇಶವನ್ನು ಹಿಂಪಡೆಯಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಬಲಪಂಥೀಯ ಗುಂಪು ಪ್ರತಿಭಟನೆ
ಈ ಹಿಂದೆ, ಬಲಪಂಥೀಯ ಗುಂಪುಗಳು ಶಾಲೆಯ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದವು ಮತ್ತು ಶಾಲೆಯು ಮಕ್ಕಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಲಾಗುತ್ತಿದೆ ಹಾಗೂ ಬೈಬಲ್ ಅನ್ನು ನಂಬುವಂತೆ ಮರುಳು ಮಾಡುತ್ತಿದೆ ಎಂದು ಆರೋಪಿಸಿತ್ತು. ಶಾಲೆಗೆ ಕಳಹಿಸುವ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸುವುದು ಬಿಟ್ಟು ಧರ್ಮಕ್ಕೆ ಪರಿವರ್ತಿಸುವ ಬಗ್ಗೆ ಪೋಷಕರಿಗೆ ಕಳವಳ ಉಂಟು ಮಾಡುತ್ತದೆ ಎಂದು ಆಕ್ರೋಶ ಹೊರಹಾಕಿತ್ತು.
ಮಾಂಸಾಹಾರ ಪದ್ಧತಿ
ಜೈನ ಮತ್ತು ಲಿಂಗಾಯತ ಧರ್ಮದ ಪ್ರಕಾರ ಮೊಟ್ಟೆ ಮಾಂಸಾಹಾರ ಪದ್ಧತಿಯಾಗಿದೆ. ಇದರಿಂದ ಸಸ್ಯಾಹಾರಿ ಪದ್ಧತಿ ಅಳವಡಿಸಿಕೊಂಡವರಿಗೆ ಇದು ಅವಮಾನ ಮಾಡಿದಂತಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಈ ನಿರ್ಣಯವನ್ನು ಹಿಂಪಡೆಯಬೇಕು” ಎಂದು ಕೆಲ ಸಂಘಟನೆಗಳು ಆಗ್ರಹಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ.
ವಿಜ್ಞಾನಕ್ಕೆ ತತ್ವಿರುದ್ಧ
ಇನ್ನು ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಬಾರದು ಎಂದು ಹೇಳುವುದು ವಿಜ್ಞಾನಕ್ಕೆ ತತ್ವಿರುದ್ಧವಾಗಿದೆ ಎಂದು ತಜ್ಞರು ಹೇಳುತ್ತಾರೆ. 2008ನೇ ಇಸವಿಯಿಂದ ನಾನು ಮತ್ತು ನರೇಂದ್ರ ನಾಯಕ್ ಅಂಥವರೆಲ್ಲ ಸೇರಿ ಶಾಲಾ ಮಕ್ಕಳಿಗೆ ಮೊಟ್ಟೆಯನ್ನು ಕೊಡಬೇಕೆಂದು ಬೇಡಿಕೆ ಇಡಲಾರಂಭಿಸಿದೆವು. ಅಂದು ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದರು. ಆಗಿನಿಂದಲೂ ಮೊಟ್ಟೆ ಕೊಡುವುದಕ್ಕೆ ವಿರೋಧ ನಡೆಯುತ್ತಲೇ ಇದೆ. ಅಂದೇ ಕೇಂದ್ರ ಸರ್ಕಾರ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆ ಕೊಡಲು ಹಣ ನೀಡಲು ಶುರುಮಾಡಿತು. ಅಲ್ಲಿಗೆ ಹದಿಮೂರು ವರ್ಷಗಳಾಯಿತು. ಅಂದಿನಿಂದಲೇ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ