• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಶಾಲೆ ಬಳಿಯ ಖಾಲಿ ಜಾಗದಲ್ಲಿ ನಳನಳಿಸುವ ಹಸಿರು, ಸಾವಿರಾರು ಗಿಡ ಮರ ನೆಟ್ಟು ಪೋಷಿಸಿದ್ದಾರೆ ಮಕ್ಕಳು

ಶಾಲೆ ಬಳಿಯ ಖಾಲಿ ಜಾಗದಲ್ಲಿ ನಳನಳಿಸುವ ಹಸಿರು, ಸಾವಿರಾರು ಗಿಡ ಮರ ನೆಟ್ಟು ಪೋಷಿಸಿದ್ದಾರೆ ಮಕ್ಕಳು

ಶಾಲಾಮಕ್ಕಳು ಬೆಳೆಸಿದ ಕೈತೋಟ

ಶಾಲಾಮಕ್ಕಳು ಬೆಳೆಸಿದ ಕೈತೋಟ

ಇಲ್ಲಿ ಫಲ ನೀಡುವ ಮಾವು, ಬೆಟ್ಟದ ನೆಲ್ಲಿ, ಹಲಸು, ಬಾಳೆ, ಹುಣಸೆ, ಪಪ್ಪಾಯಿ, ನೇರಳೆ, ಹತ್ತಿ, ತೆಂಗು, ನುಗ್ಗೆ, ಕರಿಬೇವು., ಚೆರ್ರಿ, ಬದಾಮಿ, ಅಶ್ವಥ, ಬಸಿರೆ, ಬೇವು. ಹೊಂಗೆ, ರಾಯಲ್ ಫಾಮ್, ದುರಂತ ಹೀಗೆ ಸಾವಿರಾರು ಗಿಡಗಳನ್ನು ನಾಟಿ ಮಾಡಿದ್ದು ಈಗಾಗಲೇ ಗಿಡಗಳು ಭವ್ಯವಾಗಿ ಬೆಳೆದಿವೆ, ಇದರಿಂದಾಗಿ ಮುರಾರ್ಜಿ ವಸತಿ ಶಾಲೆಯು ಗಿಡ ಮರಗಳಿಂದ ಆವೃತವಾಗಿ ಸುಂದರವಾಗಿದೆ.

ಮುಂದೆ ಓದಿ ...
  • Share this:

ಕೊಪ್ಪಳ: ಸಾಮಾನ್ಯವಾಗಿ ಶಾಲೆಗೆ ಹೋಗಿ ಮಕ್ಕಳಿಗೆ ಪಾಠ ಮಾಡಿ ಬಂದರೆ ಸಾಕು., ಇನ್ನೂ ಮಕ್ಕಳು ಸಹ ಶಾಲೆಯಲ್ಲಿ ಪಾಠ, ಬಿಡುವಿನ ವೇಳೆ ಆಟ, ಇನ್ನಷ್ಟು ವೇಳೆಯಲ್ಲಿ ಕಾಲಹರಟೆ ಮಾಡುವವರೆ ಹೆಚ್ಚು ಆದರೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಲಿಂಗನಬಂಡಿನಲ್ಲಿರುವ ಮುರಾರ್ಜಿ ವಸತಿ ಶಾಲೆಯ ಮಕ್ಕಳು ಮೇಲಿನ ಸಾಮಾನ್ಯಗಿಂತ ಭಿನ್ನವಾಗಿದ್ದಾರೆ, ಕೇವಲ ಮೂರು ವರ್ಷದಲ್ಲಿ ಶಾಲೆಯಲ್ಲಿ ಹಸರೀಕರಣ ಮಾಡಿ ಶಾಲಾ ವಾತವರಣವನ್ನೆ ಬದಲಾಯಿಸಿದ್ದಾರೆ, ಶಾಲೆಯತ್ತ ನೋಡಗರನ್ನು ಕೈ ಬಿಸಿ ಕರೆಯುವಂತೆ ಮಾಡಿದ್ದಾರೆ.ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಮುರಾರ್ಜಿ ವಸತಿ ಶಾಲೆಯು ಈ ಮೊದಲು ಯಲಬುರ್ಗಾದಲ್ಲಿ ಆರಂಭವಾಗಿತ್ತು. ಕಳೆದ ನಾಲ್ಕು ವರ್ಷದ ಹಿಂದೆ ಲಿಂಗನಬಂಡಿಗೆ ವರ್ಗಾಯಿಸಲಾಗಿದೆ, ಲಿಂಗನಬಂಡಿಯಲ್ಲಿ ಸುಮಾರು 10 ಎಕರೆ ಜಾಗೆಯನ್ನು ಶಾಲೆಗಾಗಿ ಮೀಸಲಿಟ್ಟಿದ್ದಾರೆ, ಇದರಲ್ಲಿ 2 ಎಕರೆಯಲ್ಲಿ ಶಾಲೆ, ವಸತಿಗಾಗಿ, ಆಟದ ಮೈದಾನ ನಿರ್ಮಿಸಲಾಗಿದೆ, ಉಳಿದ 8 ಎಕರೆ ಜಾಗೆಯೂ ಖಾಲಿಯಾಗಿಯೇ ಇತ್ತು.


ಖಾಲಿ ಇರುವ ಜಾಗೆಯನ್ನು ಯಾಕೆ ಬೀಳು ಜಾಗೆಯಾಗಿ ಬಿಡಬೇಕು, ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವಾಗ ಗಿಡ ಮರಗಳನ್ನು ಬೆಳೆಸಿ ಪರಿಸರವನ್ನು ರಕ್ಷಿಸಬೇಕಾಗಿದೆ ಎಂಬ ಕಾರಣಕ್ಕೆ ಶಾಲೆಯಲ್ಲಿ ಮಕ್ಕಳು, ಶಾಲಾ ಸಿಬ್ಬಂದಿಗಳು ಸೇರಿ ಸುಂದರವಾದ ಉದ್ಯಾನವನ ಮಾದರಿಯಲ್ಲಿ ಸುಮಾರು 2000 ಗಿಡಗಳನ್ನು ಹಾಕಿದ್ದಾರೆ. ಮುರಾರ್ಜಿ ವಸತಿ ಶಾಲೆಯಲ್ಲಿ 6 ರಿಂದ 10 ನೆಯ ತರಗತಿಯವರೆಗೆ ಒಟ್ಟು 250 ವಿದ್ಯಾರ್ಥಿಗಳಿದ್ದಾರೆ, ಈ ವಿದ್ಯಾರ್ಥಿಗಳು ತಮ್ಮ ಓದಿನ ನಂತರ ತಮ್ಮ ಶಾಲೆಯ ಸುತ್ತಲಿನ ಗಿಡ ಮರಗಳನ್ನು ಬೆಳೆಸಲು ಸಮಯ ವ್ಯಯಿಸಿದ್ದಾರೆ, ವಿದ್ಯಾರ್ಥಿಗಳೊಂದಿಗೆ ಮುರಾರ್ಜಿ ಶಾಲೆಯ ಪ್ರಾಚಾರ್ಯರಾಗಿದ್ದ ಶರಣಪ್ಪ ಕರ್ಜಗಿ, ಶಾಲೆಯ ಶಿಕ್ಷಕರು, ಡಿ ಗ್ರುಪ್ ನೌಕರರಾದ ಶಿವಪ್ಪ ಭಜಂತ್ರಿ, ಶಿವಕುಮಾರ ಪುಜಾರ, ಶರಣಪ್ಪ ಸಂಗಟಿ ಸೇರಿದಂತೆ ಗ್ರಾಮ ಕೆಲ ಯುವಕರು ಸೇರಿ ಇಲ್ಲಿ ಗಿಡಗಳನ್ನು ಹಾಕಿ ಶಾಲೆಯನ್ನು ಹಸಿರೀಕರಣ ಮಾಡುವ ಪಣತೊಟ್ಟಿದ್ದಾರೆ.


ಇದನ್ನೂ ಓದಿ: Varamahalakshmi 2021: ಇಂದು ವರಮಹಾಲಕ್ಷ್ಮಿ ಹಬ್ಬ, ಪೂಜಾ ವಿಧಾನಗಳೇನು? ವ್ರತ ಆಚರಿಸುವ ಬಗೆ ಹೇಗೆ?


ಈ ಕಾರಣಕ್ಕಾಗಿ ಕೇವಲ 3.5 ವರ್ಷದಲ್ಲಿ ಮುರಾರ್ಜಿ ಶಾಲೆಯ ಚಿತ್ರಣವೇ ಬದಲಾಗಿದೆ, ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವವರ ಮಧ್ಯೆ ಮನಸ್ಸು ಮಾಡಿದರೆ ಶಾಲೆಯನ್ನು ಈ ರೀತಿಯಾಗಿಯು ಸುಂದರವಾಗಿ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. 8 ಎಕರೆ ಪ್ರದೇಶದಲ್ಲಿ ಗಿಡ ಮರಗಳನ್ನು ಗ್ರಾಮ ಪಂಚಾಯತ್ ಯಿಂದ ಜಲಶಕ್ತಿ ಯೋಜನೆಯ ಅಭಿಯಾನ ಅಡಿಯಲ್ಲಿ ಜಲ ಸಂಗ್ರಹಗಾರ ಮಾಡಿದ್ದು ಮಳೆಯ ನೀರನ್ನು ಒಂದು ಕಡೆ ನಿಲ್ಲಿಸಿ ಈ ನೀರು ಇಂಗುವಂತೆ ಮಾಡಿ ಇದೇ ನೀರನ್ನು ಗಿಡ ಮರಗಳನ್ನು ಬೆಳೆಸಲು ಉಪಯೋಗಿಸಿದ್ದಾರೆ, ಇಲ್ಲಿ ಗಿಡಗಳನ್ನು ಹಾಕಲು ನರೇಗಾ ಯೋಜನೆಯಲ್ಲಿ ಗುಂಡಿಗಳನ್ನು ತೆಗೆಯಲು, ಅರಣ್ಯ ಇಲಾಖೆ ಸಹಕಾರದಿಂದ ವಿವಿಧ ಗಿಡಗಳ ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ.


ಸಸಿಗಳ ಖರೀದಿ, ಸಸಿಗಳನ್ನು ಹಾಕಲು ವಿದ್ಯಾರ್ಥಿಗಳ ಪಾಲಕರು ಸಹ ಸಹಕಾರ ನೀಡಿದ್ದಾರೆ.ಇಲ್ಲಿ ಫಲ ನೀಡುವ ಮಾವು, ಬೆಟ್ಟದ ನೆಲ್ಲಿ, ಹಲಸು, ಬಾಳೆ, ಹುಣಸೆ, ಪಪ್ಪಾಯಿ, ನೇರಳೆ, ಹತ್ತಿ, ತೆಂಗು, ನುಗ್ಗೆ, ಕರಿಬೇವು., ಚೆರ್ರಿ, ಬದಾಮಿ, ಅಶ್ವಥ, ಬಸಿರೆ, ಬೇವು. ಹೊಂಗೆ, ರಾಯಲ್ ಫಾಮ್, ದುರಂತ ಹೀಗೆ ಸಾವಿರಾರು ಗಿಡಗಳನ್ನು ನಾಟಿ ಮಾಡಿದ್ದು ಈಗಾಗಲೇ ಗಿಡಗಳು ಭವ್ಯವಾಗಿ ಬೆಳೆದಿವೆ, ಇದರಿಂದಾಗಿ ಮುರಾರ್ಜಿ ವಸತಿ ಶಾಲೆಯು ಗಿಡ ಮರಗಳಿಂದ ಆವೃತವಾಗಿ ಸುಂದರವಾಗಿದೆ.ಈ ಮಧ್ಯೆ ಮುರಾರ್ಜಿ ವಸತಿ ಶಾಲೆಯು ಲಾಕ ಡೌನ್ ಸಂದರ್ಭದಲ್ಲಿ ಬಂದ್ ಆಗಿತ್ತು, ಈ ಸಂದರ್ಭದಲ್ಲಿ ಶಾಲೆಗೆ ಮಕ್ಕಳು ಬಂದಿಲ್ಲ, ಆದರೂ ಶಾಲೆಯಲ್ಲಿಯ ಗಿಡಗಳನ್ನು ಉಳಿಸುವ ಉದ್ದೇಶದಿಂದ ಇಲ್ಲಿಯ ಶಿಕ್ಷಕರು ಹಾಗು ಡಿ ಗ್ರುಪ್ ನೌಕರರು ನಿತ್ಯ ಕಾಳಜಿ ವಹಿಸಿದ್ದಾರೆ.


ಸರಕಾರಿ ಶಾಲೆಗಳನ್ನು ಪಾಠ ಮಾಡಿ ಬರುವ ಶಿಕ್ಷಕರು, ಶಾಲೆಯಲ್ಲಿ ಓದಿ ಪಾಸಾದರೆ ಸಾಕು ಎನ್ನುವ ವಿದ್ಯಾರ್ಥಿಗಳು, ಶಾಲೆಯಲ್ಲಿ ಉತ್ತಮ ಅಂಕ ಪಡೆಯಲಿ ಎನ್ನುವ ಪಾಲಕರ ಮಧ್ಯೆಯೂ ಮನಸ್ಸು ಮಾಡಿದರೆ ಪರಿಸರ ರಕ್ಷಣೆಯೊಂದಿಗೆ ತಮ್ಮ ಸುತ್ತಲಿನ ಪ್ರದೇಶವನ್ನು ಸುಂದರ ಮಾಡಬಹುದು ಎನ್ನುವುದಕ್ಕೆ ಇದು ಮಾದರಿಯಾಗಿದೆ.

First published: