HOME » NEWS » District » SAVADATTI RENUKA YALLAMMA TEMPLE PROHIBITED TIL JULY 31 DUE TO CORONA EFFECT HK

ಜುಲೈ 31ರ ವರೆಗೆ ಸವದತ್ತಿ ರೇಣುಕಾ ಯಲ್ಲಮ್ಮ, ಚಿಂಚಲಿ ಮಾಯಕ್ಕ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧ..!

ಉತ್ತರ ಕರ್ನಾಟಕದ ಶಕ್ತಿ ದೇವತೆ ಸವದತ್ತಿ ರೇಣುಕಾ ಯಲ್ಲಮ್ಮ, ಚಿಂಚಲಿ ಮಾಯಕ್ಕ ದೇವಸ್ಥಾನ, ಜೋಗಳಬಾವಿ ಸತ್ತಮ್ಮದೇವಿ ದೇವಸ್ಥಾನ ಜುಲೈ 31ರ ವರೆಗೆ ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ.

news18-kannada
Updated:June 29, 2020, 7:16 PM IST
ಜುಲೈ 31ರ ವರೆಗೆ ಸವದತ್ತಿ ರೇಣುಕಾ ಯಲ್ಲಮ್ಮ, ಚಿಂಚಲಿ ಮಾಯಕ್ಕ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧ..!
ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನ
  • Share this:
ಬೆಳಗಾವಿ(ಜೂ. 29): ದೇಶದಲ್ಲಿ ಕೊರೋನಾ ವೈರಸ್ ಮಾಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ವೈರಸ್ ಹತೋಟಿಗೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಎರಡು ಪ್ರಮುಖ ದೇವಸ್ಥಾನಗಳನ್ನು ಜುಲೈ 31 ರ ವರೆಗೆ ಬಂದ್ ಮಾಡಲು ಬೆಳಗಾವಿಯ ಜಿಲ್ಲಾಧಿಕಾರಿ ಎಸ್ ಬಿ ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.

ಉತ್ತರ ಕರ್ನಾಟಕದ ಶಕ್ತಿ ದೇವತೆ ಸವದತ್ತಿ ರೇಣುಕಾ ಯಲ್ಲಮ್ಮ, ಚಿಂಚಲಿ ಮಾಯಕ್ಕ ದೇವಸ್ಥಾನ, ಜೋಗಳಬಾವಿ ಸತ್ತಮ್ಮದೇವಿ ದೇವಸ್ಥಾನ ಜುಲೈ 31ರ ವರೆಗೆ ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ. ಎರಡು ದೇವಸ್ಥಾನಗಳಿಗೆ ಪಕ್ಕದ ಮಾಹಾರಾಷ್ಟ್ರದಿಂದ ಸಾವಿರಾರು ಭಕ್ತರು ನಿತ್ಯ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಈ ಬೆಳಗಾವಿ ಜಿಲ್ಲಾಡಳಿತ ದೇವಸ್ಥಾನ ಬಂದ್ ಮಾಡುವ ನಿರ್ಧಾರ ಕೈಗೊಂಡಿದೆ.

ಎರಡು ದೇವಾಲಯಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದ್ದು, ಇನ್ನೂ ದೇವಸ್ಥಾನದಲ್ಲಿ ಎಂದಿನಂತೆ ಪೂಜೆ ನಡೆಸಲು ಸೂಚನೆ ನೀಡಲಾಗಿದೆ. ಅರ್ಚಕರು ಧಾರ್ಮಿಕ ವಿಧಿವಿದಾನಗಳ ಮೂಲಕ ನಿತ್ಯ ಬೆಳಗ್ಗೆ ಹಾಗೂ ಸಂಜೆ ದೇವರಿಗೆ ಪೂಜೆ ಸಲ್ಲಿಸಲು ವಿನಾಯಿತಿ ನೀಡಲಾಗಿದೆ.

ಮಾರ್ಚ್ 23 ರಿಂದ ದೇಶದಲ್ಲಿ ಲಾಕ್ ಡೌನ್ ಘೋಷಣೆ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಭಕ್ತ ಪ್ರವೇಶ ನಿಷೇಧಿಸಲಾಗಿತ್ತು. ಇನ್ನೂ ರಾಜ್ಯಾಧ್ಯಂತ ಜೂನ್ 8 ರಂದು ಎಲ್ಲಾ ದೇವಾಲಯಗಳು ಓಪನ್ ಆಗಿದ್ದು, ಭಕ್ತರ ಪ್ರವೇಶಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಅದರಂತೆ ಎಲ್ಲಾ ಕಡೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ.
ಬೆಳಗಾವಿ ಜಿಲ್ಲೆಯ ಎರಡು ದೇವಸ್ಥಾನಗಳು ಮಾತ್ರ ಇದೇ ನಾಳೆಯಿಂದ ಭಕ್ತರ ಪ್ರವೇಶಕ್ಕೆ ಮುಕ್ತವಾಗಬೇಕಿತ್ತು. ಆದರೆ, ಮಹಾರಾಷ್ಟ್ರ ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಹಿನ್ನೆಲೆಯಲ್ಲಿ ಇದೇ ಜೂಲೈ 31ರ ವರೆಗ ದೇವಸ್ಥಾನ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಅರ್ಚಕರು ಸೇರಿ 140 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ದೇವಸ್ಥಾನದ ಬಂದ್ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಯಾವುದೇ ರೀತಿಯ ವೇತನ ಸಮಸ್ಯೆಯಾಗಿಲ್ಲ. ದೇವಸ್ಥಾನಕ್ಕೆ 6 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟರಾಗಸ್ತಿ ಹೇಳಿದ್ದಾರೆ.

ಇದನ್ನೂ ಓದಿ :  ಕಲೆಯ ಮೂಲಕ ಪರೀಕ್ಷಾರ್ಥಿಗಳಿಗೆ ಧೈರ್ಯ : ಮೈಸೂರಿನಲ್ಲಿ ಗೋಡೆ ಮೇಲೂ ಮುಂದುವರೆದ ಕೊರೋನಾ ವಿರುದ್ದ ಹೋರಾಟಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಸರ್ಕಾರ ಸಪ್ತಪದಿ ಎನ್ನುವ ಯೋಜನೆಯ ಮೂಲಕ 111 ಸಾಮೂಹಿಕ ವಿವಾಹ ಮಾಡಲು ನಿರ್ಧರಿಸತ್ತು, ಏಪ್ರಿಲ್ 26ರಂದು ಈ ವಿವಾದ ಕಾರ್ಯಕ್ರಮ ನಡೆಯಬೇಕಿತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದುಡಿಕೆಯಾಗಿದೆ.
Youtube Video

ಇಲ್ಲಿ ನೋಂದಣಿ ಮಾಡಿದ 111 ಪೈಕಿ 91 ಜೋಡಿಗಳು ಸದ್ಯ ತಮ್ಮ ಸ್ವತಃ ಖರ್ಚಿನಲ್ಲಿಯೇ ವಿವಾಹವಾಗಿದ್ದಾರೆ. ಇನ್ನೂಳಿದ 20 ಮದುವೆಗಳನ್ನು ಆಗಷ್ಟ್ ತಿಂಗಳ 17ರಂದು ನಿಗದಿ ಪಡಿಸಲಾಗಿದೆ.
First published: June 29, 2020, 7:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories