• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಸತೀಶ ಜಾರಕಿಹೊಳಿ‌ ಹೆಗಲಿಗೆ ಬೆಳಗಾವಿ ಲೋಕಸಭಾ ಉಪಚುನಾವಣೆ ಹೊಣೆ; ಮಾಜಿ ಸಚಿವ ಎಂ ಬಿ‌ ಪಾಟೀಲ್

ಸತೀಶ ಜಾರಕಿಹೊಳಿ‌ ಹೆಗಲಿಗೆ ಬೆಳಗಾವಿ ಲೋಕಸಭಾ ಉಪಚುನಾವಣೆ ಹೊಣೆ; ಮಾಜಿ ಸಚಿವ ಎಂ ಬಿ‌ ಪಾಟೀಲ್

ಮಾಜಿ ಸಚಿವ ಸತೀಶ್ ಜಾರಕಿಹೊಳಿ

ಮಾಜಿ ಸಚಿವ ಸತೀಶ್ ಜಾರಕಿಹೊಳಿ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌, ಸಭೆಯಲ್ಲಿ ಬಹಳಷ್ಟು ಹೆಸರುಗಳ ಚರ್ಚೆ ಆಗಿವೆ. ಸಮಿತಿಗೆ 10 ದಿನ ಸಮಯ ಕೇಳಿದ್ದೇವೆ. ಕ್ಷೇತ್ರದ ಕಾರ್ಯಕರ್ತರು, ಮುಖಂಡರ ಜತೆಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಪಕ್ಷ ಚುನಾವಣೆಯಲ್ಲಿ ಸರ್ಧೆ ಮಾಡಿ ಅಂತ ಹೇಳಿದರೇ ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಎಂದು ಹೇಳಿದರು.

ಮುಂದೆ ಓದಿ ...
  • Share this:

ಬೆಳಗಾವಿ (ನವೆಂಬರ್ 21); ಕೇಂದ್ರ ಸಚಿವ ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಇಂದು ಕಾಂಗ್ರೆಸ್ ಪಕ್ಷ ಮೊದಲ ಸಭೆ ನಡೆಸಿತು. ಮಾಜಿ ಸಚಿವ ಎಂ ಬಿ ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನೇಕ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗಿದೆ. ವಿಧಾನಸಭೆವಾರು ಅಭಿಪ್ರಾಯ ಸಂಗ್ರಹಿಸಿ ಇನ್ನೊಮ್ಮೆ ಸಭೆ ನಡೆಸಲು ತೀರ್ಮಾನಿಸಲಾಗಿದೆ.


ಬೆಳಗಾವಿ ಲೋಕಸಭಾ ಉಪಚುನಾವಣೆ ಸ್ಪರ್ಧಿಸಲು 7-8 ಜನ ಅಭ್ಯರ್ಥಿಗಳು ಸದ್ಯ ಮುಂದೆ ಬಂದಿದ್ದಾರೆ. ಇನ್ನೂ ಅನೇಕರು ಬಿಜೆಪಿಯಿಂದ ಯಾರಿಗೆ ಟಿಕೆಟ್ ಕೊಡ್ತಾರೆ ಅನ್ನೊದರ ಮೇಲೆ ಲಾಭಿ ಮಾಡಲು ತೀರ್ಮಾನ ಮಾಡಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಸಹೋದರ ಚನ್ನರಾಜ್ ಹಟ್ಟಿಹೊಳಿಗೆ ಟಿಕೆಟ್ ಕೊಡಿಸಲು ಸಾಕಷ್ಟು ಲಾಭಿ ಆರಂಭಿಸಿದ್ದಾರೆ. ಟಿಕೆಟ್ ಸಂಬಂಧ ಇನ್ನೂ ಎರಡು ಸಭೆ ನಡೆಯಲಿದ್ದು, ನಂತರ ಕೆಪಿಸಿಸಿಗೆ ಹೆಸರು ಶಿಫಾರಸು ಮಾಡಲು ತೀರ್ಮಾನ ಮಾಡಲಾಗಿದೆ.


ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯ ಬಳಿಕ‌ ಮಾತನಾಡಿದ ಮಾಜಿ ಸಚಿವ ಎಂ ಬಿ ಪಾಟೀಲ್, ಬೆಳಗಾವಿ ಲೋಕಸಭಾ ಉಪಚುನಾವಣೆ ಟಿಕೆಟ್ ಸಂಬಂಧ ಇದು ಮೊದಲ ಸಭೆಯಾಗಿದೆ. ಒಂದು ವಾರದ ನಂತರ ಮತ್ತೊಂದು ಸಭೆ ನಡೆಸಲು ತೀರ್ಮಾನಿಸಲಾಗಿದೆ. ಸತೀಶ್ ಜಾರಕಿಹೊಳಿ‌ ನೇತೃತ್ವದಲ್ಲಿ ಚುನಾವಣೆ ನಡೆಸಲಾಗುತ್ತದೆ. ಕೆಪಿಸಿಸಿಗೆ ಈ ನಿಟ್ಟಿನಲ್ಲಿ ಒಂದು ಶಿಫಾರಸ್ಸು ಮಾಡಲು ನಿರ್ಧಾರ ಮಾಡಲಾಗಿದೆ. ಎಲ್ಲಾ ಸಮುದಾಯ ಒಟ್ಟಾಗಿ ತೆಗೆದುಕೊಂಡು‌ ಹೋಗಲು ತೀರ್ಮಾನಿಸಲಾಗಿದೆ. ಇನ್ನೊಂದು ಸಭೆಯಲ್ಲಿ ಆಕಾಂಕ್ಷಿಗಳ ಬಗ್ಗೆ ಮಾಹಿತಿ. ನಂತರ ಟಿಕೆಟ್ ಆಕಾಂಕ್ಷಿಗಳ ವರದಿಯನ್ನು ಕೆಪಿಸಿಸಿಗೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.


ಪ್ರತಿ ವಿಧಾನಸಭೆಯಲ್ಲಿ ಸಭೆ ನಡೆಸಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಸ್ಪರ್ಧೆಗೆ 7ರಿಂದ 8 ಆಸಕ್ತಿ ಆಕಾಂಕ್ಷಿಗಳು ಮುಂದೆ ಬಂದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ಹೆಸರು ಸಹ ಇದೆ. ಪ್ರಕಾಶ್ ಹುಕ್ಕೇರಿ ಭಾವನಾತ್ಮಕವಾಗಿ ಹೇಳಿಕೆ ಕೊಟ್ಟಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಬಂಧಿಸಿದ ಸಭೆಗೆ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಆಹ್ವಾನ ನೀಡಿಲ್ಲ. ಮುಂದಿನ ಸಭೆಗೆ ಎಲ್ಲಾರನ್ನು ಆಹ್ವಾನಿಸುತ್ತೇವೆ ಎಂದರು.


ಇದನ್ನು ಓದಿ: ತ್ಯಾಗ ಮಾಡಿ ಬಂದವರಿಗೆಲ್ಲ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ; ಸಚಿವ ರಮೇಶ್ ಜಾರಕಿಹೊಳಿ

top videos


    ನಂತರ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌, ಸಭೆಯಲ್ಲಿ ಬಹಳಷ್ಟು ಹೆಸರುಗಳ ಚರ್ಚೆ ಆಗಿವೆ. ಸಮಿತಿಗೆ 10 ದಿನ ಸಮಯ ಕೇಳಿದ್ದೇವೆ. ಕ್ಷೇತ್ರದ ಕಾರ್ಯಕರ್ತರು, ಮುಖಂಡರ ಜತೆಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಪಕ್ಷ ಚುನಾವಣೆಯಲ್ಲಿ ಸರ್ಧೆ ಮಾಡಿ ಅಂತ ಹೇಳಿದರೇ ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಎಂದು ಹೇಳಿದರು.


    ಸಭೆಯ ಬಳಿಕ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸಭೆಯಲ್ಲಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ತನ್ನ ಸಹೋದರ ಚನ್ನರಾಜ್ ಸ್ಪರ್ಧೆ ಕುರಿತು ಹೈಕಮಾಂಡ್ ಅಂತಿಮ ನಿರ್ಣಯ ಕೈಗೊಳ್ಳಲಿದೆ. ಸುರೇಶ ಅಂಗಡಿ ಅಕಾಲಿಕ ನಿಧನದಿಂದ ಚುನಾವಣೆ ಎದುರಾಗಿದೆ. ಅವರು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ನನ್ನ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ನಮ್ಮದು ಒಂದು ರಾಷ್ಟ್ರೀಯ ಪಕ್ಷವಾಗಿ ಚುನಾವಣೆಗೆ ಸ್ಪರ್ಧಿಸುವುದು ಅನಿವಾರ್ಯವಾಗಿದೆ ಎಂದರು.

    First published: