HOME » NEWS » District » SATISH JARKIHOLI GAVE CLARIFICATION ON RUMORS OF HIS BROTHER SUPPORTED HIM IN BELGAUM BY ELECTION KVD

ಬೆಳಗಾವಿ ಉಪ ಚುನಾವಣೆಯಲ್ಲಿ ನನ್ನ ಸೋದರರೇನು ನನಗೆ ಸಹಾಯ ಮಾಡಿಲ್ಲ: ಸತೀಶ್ ಜಾರಕಿಹೊಳಿ

ಬಿಜೆಪಿಯಲ್ಲಿರುವ ರಮೇಶ್​​ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಲಖನ್​ ಜಾರಕಿಹೊಳಿ ಚುನಾವಣೆ ವೇಳೆ ಸತೀಶ್​ ಅವರನ್ನು ಬೆಂಬಲಿಸಿದ್ದಾರೆ. ಹೀಗಾಗಿಯೇ ಕಾಂಗ್ರೆಸ್​ನ ಸತೀಶ್​ ಜಾರಕಿಹೊಳಿ ಅತಿ ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.

Kavya V | news18-kannada
Updated:May 16, 2021, 3:23 PM IST
ಬೆಳಗಾವಿ ಉಪ ಚುನಾವಣೆಯಲ್ಲಿ ನನ್ನ ಸೋದರರೇನು ನನಗೆ ಸಹಾಯ ಮಾಡಿಲ್ಲ: ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
  • Share this:
ಬೆಂಗಳೂರು: ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ ಮಾನಸಿಕವಾಗಿ ಗೆದ್ದಿದೆ. ಆದರೆ ತಾಂತ್ರಿಕವಾಗಿ ಸೋತಿದೆಯಷ್ಟೇ ಎಂದು ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ತಮ್ಮ ಸೋಲನ್ನು ವಿಶ್ಲೇಷಿಸಿದ್ದಾರೆ. ಚುನಾವಣಾ ಫಲಿತಾಂಶದ ಬಳಿಕ ಬೆಂಗಳೂರಿಗೆ ಆಗಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರನ್ನು ಸತೀಶ್​​ ಜಾರಕಿಹೊಳಿ ಭೇಟಿ ಮಾಡಿದರು. ಬಳಿಕ ಮಾತನಾಡಿದ ಅವರು ಚುನಾವಣೆ ಆದ ಬಳಿಕ ಭೇಟಿ ಆಗಿರಲಿಲ್ಲ. ಹೀಗಾಗಿ ಬಂದು ಭೇಟಿ ಮಾಡಿದ್ದೇನೆ. ಪಕ್ಷ ಸಂಘಟನೆ ದೃಷ್ಟಿಯಿಂದ ಚರ್ಚೆ ಮಾಡಿದ್ದೇವೆ. ಬೆಳಗಾವಿ ಉಪ ಚುನಾವಣೆಯಲ್ಲಿ ನಮ್ಮ ಪಕ್ಷ ಹೆಚ್ಚು ಮತ ಪಡೆದು ಮಾನಸಿಕವಾಗಿ ಗೆಲುವು ಸಾಧಿಸಿದೆ. ತಾಂತ್ರಿಕವಾಗಿ ನಾವು ಸೋತಿರಬಹುದು ಎಂದರು.

ಸಹೋದರರು ನನಗೇನು ಸಹಾಯ ಮಾಡಿಲ್ಲ

ಇನ್ನು ಚುನಾವಣೆಯಲ್ಲಿ ನನ್ನ ಸಹೋದರರು ನನಗೇನು ಸಹಾಯ ಮಾಡಿಲ್ಲ. ಅವರ ಪಕ್ಷಕ್ಕೆ ಸಹಾಯ ಮಾಡಿದ್ದಾರೆ ಎನ್ನುವ ಮೂಲಕ ಸೋದರರು ಬೆಂಬಲಿಸಿದ್ದರು ಎಂಬ ಊಹಾಪೋಹವನ್ನು ತಳ್ಳಿಹಾಕಿದರು. ಬಿಜೆಪಿಯಲ್ಲಿರುವ ರಮೇಶ್​​ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಲಖನ್​ ಜಾರಕಿಹೊಳಿ ಚುನಾವಣೆ ವೇಳೆ ಸತೀಶ್​ ಅವರನ್ನು ಬೆಂಬಲಿಸಿದ್ದಾರೆ. ಹೀಗಾಗಿಯೇ ಕಾಂಗ್ರೆಸ್​ನ ಸತೀಶ್​ ಜಾರಕಿಹೊಳಿ ಅತಿ ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಇದನ್ನು ಅಲ್ಲಗಳೆದ ಸತೀಶ್​ ಜಾರಕಿಹೊಳಿ, ನನ್ನ ಸಹೋದರರು ಅವರ ಪಕ್ಷಕ್ಕೆ ಸಹಾಯ ಮಾಡಿದ್ದಾರೆ.  ನಮ್ಮ ಪಕ್ಷದವರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ ಎಂದರು.

ಕೊರೊನಾ ಹಬ್ಬಲು ಬಿಜೆಪಿ ಕಾರಣ

ಕಾಂಗ್ರೆಸ್ ಕೊಲೆಗಡುಕ ಪಕ್ಷ ಅನ್ನೋ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​​ ಕಟೀಲ್​​ ಹೇಳಿಕೆ‌ಗೆ ಸತೀಶ್​ ಜಾರಕಿಹೊಳಿ ತಿರುಗೇಟು ನೀಡಿದರು. ನಮ್ಮಿಂದ ಕೊರೊನಾ ಹರಡಿಲ್ಲ. ಕಾಂಗ್ರೆಸ್​ನವರು ಚುನಾವಣೆಯನ್ನು ಚಿಕ್ಕದಾಗಿ ಮಾಡಿ ಅಂತ ತಿಳಿಸಿದ್ದೆವು. ಆದರೆ ಪಶ್ಚಿಮ ಬಂಗಾಳ ಚುನಾವಣೆಯನ್ನು ದೊಡ್ಡದಾಗಿ ಕೇಂದ್ರ ಸರ್ಕಾರ ಮಾಡಿತು.ಇವತ್ತು ಕೊರೊನಾ ಹಬ್ಬಿದೆ ಅಂದರೆ ಅದಕ್ಕೆ ಬಿಜೆಪಿಯೇ ಕಾರಣ, ನಾವಲ್ಲ ಎಂದು ತಿರುಗೇಟು ಕೊಟ್ಟರು.

ಚುನಾವಣೆಯನ್ನು 6 ತಿಂಗಳು ಮುಂದೂಡಬೇಕಿತ್ತು

ಚುನಾವಣೆ ಕೆಲಸದಿಂದ ಶಿಕ್ಷಕರ ಬಲಿಯಾದ ವಿಚಾರದಲ್ಲಿ ಸರ್ಕಾರ ಜವಾಬ್ದಾರಿ ಹೊರಬೇಕು. ಹೈಜನಿಕ್ ಆಗಿ ಸರ್ಕಾರ ಚುನಾವಣೆ ಮಾಡಬೇಕಿತ್ತು. ಆದರೆ ಸರ್ಕಾರ ಅದನ್ನು ಮಾಡಿಲ್ಲ. ಇದರಿಂದ ಅನೇಕ ಸಮಸ್ಯೆಗಳಾವೆ. 6 ತಿಂಗಳು ಚುನಾವಣೆ ಮುಂದೂಡಿದ್ರೆ ಏನು ಆಗುತ್ತಿರಲಿಲ್ಲ. ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಚುನಾವಣೆ ಅವಶ್ಯಕತೆ ಇರಲಿಲ್ಲ. ಈಗ ಶಿಕ್ಷಕರು ಕೊರೊನಾಗೆ ಬಲಿ ಆಗಿದ್ದಾರೆ. ಈ ಬಗ್ಗೆ ತನಿಖೆ ಆಗಲಿ. ಮೃತ ಶಿಕ್ಷಕರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಸತೀಶ್ ಜಾರಕಿಹೊಳಿ ಒತ್ತಾಯಿಸಿದರು.ಲಸಿಕೆಗೆ ಶಾಸಕರ ಹಣ ಬಳಸಿ

ಇನ್ನು ಶಾಸಕರ‌ ಅಭಿವೃದ್ಧಿ ಹಣವನ್ನ ಕೊರೊನಾ ಲಸಿಕೆಗೆ ಬಳಸುವಂತೆ ಕಾಂಗ್ರೆಸ್ ಮನವಿ ಮಾಡಿದೆ. ಸರ್ಕಾರ ಇದಕ್ಕಾಗಿ ಪ್ರತ್ಯೇಕ ಆದೇಶ ಹೊರಡಿಸಿಬೇಕು. ಸರ್ಕಾರ ಆ ಹಣವನ್ನ ಲಸಿಕೆಗೆ ಬಳಸಬಹುದು. ಈ ಸಂಬಂಧ ನಮ್ಮ ಪಕ್ಷ ಸರ್ಕಾರಕ್ಕೆ ಪತ್ರ ಬರೆದಿದೆ. ಸರ್ಕಾರ ಈ ಬಗ್ಗೆ ತೀರ್ಮಾನ ಮಾಡಲಿ ಎಂದರು.
Published by: Kavya V
First published: May 16, 2021, 3:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories