ಕಲ್ಯಾಣ ಕರ್ನಾಟಕದ ಲಿಂಗಾಯತರಿಗೆ ಮಂತ್ರಿ ಸ್ಥಾನ ನೀಡಿ, ಇಲ್ಲದಿದ್ದರೆ ಗಂಡಾಂತರ ತಪ್ಪಿದ್ದಲ್ಲ; ಸಾರಂಗಧರ ಶ್ರೀ ಎಚ್ಚರಿಕೆ

ಸಂಪುಟ ವಿಸ್ತರಣೆ, ವಿಧಾನ ಪರಿಷತ್ ನಾಮನಿರ್ದೇಶನ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತರಿಗೆ ಆದ್ಯತೆ ನೀಡಬೇಕು. ಇಲ್ಲದಿದ್ದಲ್ಲಿ ಮುಂಬರುವ ಐದಾರು ತಿಂಗಳಲ್ಲಿ ಯಡಿಯೂರಪ್ಪಗೆ ಗಂಡಾಂತರ ತಪ್ಪಿದ್ದಲ್ಲ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ. 

ಸಾರಂಗಧರ ಶ್ರೀ .

ಸಾರಂಗಧರ ಶ್ರೀ .

  • Share this:
ಕಲಬುರ್ಗಿ (ಜೂನ್‌ 03); ಕೊರೋನಾ ಸಂಕಷ್ಟದ ನಡುವೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಚಿವ ಸ್ಥಾನಕ್ಕಾಗಿ ಒತ್ತಡ ತರಲು ಪ್ರತ್ಯೇಕ ಸಭೆಗಳು ನಡೆದಿರುವ ಸಂದರ್ಭದಲ್ಲಿಯೇ ಕಲ್ಯಾಣ ಕರ್ನಾಟಕ ಲಿಂಗಾಯತ ಶಾಸಕರ ಪರ ಸ್ವಾಮೀಜಿಗಳು ಬ್ಯಾಟಿಂಗ್ ಆರಂಭಿಸಿದ್ದಾರೆ. ಲಿಂಗಾಯತರಿಗೆ ಮಂತ್ರಿ ಸ್ಥಾನ ನೀಡಬೇಕು. ಕಲ್ಯಾಣ ಕರ್ನಾಟದ ಲಿಂಗಾಯತರಿಗೆ ಆಗಿರೋ ಅನ್ಯಾಯ ಸರಿಪಡಿಸದೇ ಇದ್ದಲ್ಲಿ ಐದಾರು ತಿಂಗಳ ನಂತರ ಯಡಿಯೂರಪ್ಪನವರಿಗೆ ಸಂಕಷ್ಟ ಗ್ಯಾರಂಟಿ ಎಂದು ಶ್ರೀಶೈಲ ಸಾರಂಗ ಮಠದ ಸಾರಂಗಧರ ದೇಶೀಕೇಂದ್ರ ಸ್ವಾಮೀಜಿ ಎಚ್ಚರಿಸಿದ್ದಾರೆ. 

"ಯಡಿಯೂರಪ್ಪ ಒಬ್ಬರೇ ಲಿಂಗಾಯತರಲ್ಲ. ಅವರ ಹಿಂದೆ ಹಲವಾರು ಲಿಂಗಾಯತರಿದ್ದಾರೆ. ಆದರೆ ಪಕ್ಷಾತರಿಗಳಿಗೆ ಮಣೆ ಹಾಕಲು ಹೋಗಿ ಲಿಂಗಾಯತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅದರಲ್ಲಿಯೂ ಕಲ್ಯಾಣ ಕರ್ನಾಟಕ ಭಾಗದ ಒಬ್ಬ ಲಿಂಗಾಯತರಿಗೂ ಸಚಿವ ಸ್ಥಾನ ನೀಡಿಲ್ಲ. ಕಲ್ಯಾಣ ಕರ್ನಾಟಕವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ. ಈ ಭಾಗದ ಶಾಸಕರ ಜೊತೆ ವಿನಯದಿಂದ ವರ್ತಿಸಿ.

ಸ್ವಾಮೀಜಿಗಳು ಬಂದರೂ ಮಾತನಾಡಲ್ಲ, ಶಾಸಕರು ಹೋದರೂ ಮಾತಾಡಲ್ಲ ಅಂದ್ರೆ ಹೇಗೆ..? ಕೆಲಸ ಮಾಡಿಕೊಡದಿದ್ದರೂ ಪರವಾಗಿಲ್ಲ ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಶಾಸಕರು ಮತ್ತು ಸ್ವಾಮೀಜಿಗಳ ಜೊತೆ ಸೌಜನ್ಯದಿಂದ ವರ್ತಿಸಬೇಕೆಂದು" ಶ್ರೀಶೈಲ ಸಾರಂಗ ಸ್ವಾಮಿಗಳು ಆಗ್ರಹಿಸಿದ್ದಾರೆ.

"ಸಂಪುಟ ವಿಸ್ತರಣೆ, ವಿಧಾನ ಪರಿಷತ್ ನಾಮನಿರ್ದೇಶನ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತರಿಗೆ ಆದ್ಯತೆ ನೀಡಬೇಕು. ಇಲ್ಲದಿದ್ದಲ್ಲಿ ಮುಂಬರುವ ಐದಾರು ತಿಂಗಳಲ್ಲಿ ಯಡಿಯೂರಪ್ಪಗೆ ಗಂಡಾಂತರ ತಪ್ಪಿದ್ದಲ್ಲ" ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.

"ದತ್ತಾತ್ರೇಯ ಪಾಟೀಲ ರೇವೂರಗೆ ಸಚಿವ ಸ್ಥಾನಕ್ಕೆ ಒತ್ತಾಸಿದ್ದೆ. ಸಚಿವ ಸ್ಥಾನ ನೀಡದಿದ್ದಲ್ಲಿ 10 ಶಾಸಕರಿಂದ ರಾಜೀನಾಮೆ ಕೊಡಿ ಸೋದಾಗಿ ಹೇಳಿದ್ದೆ. ಈ ಹೇಳಿಕೆಗೆ ನಾನು ಈಗಲೂ ಬದ್ದನಿದ್ದೇನೆ. ಫೆಬ್ರವರಿ ತಿಂಗಳಲ್ಲಿ ನಾನು ಹೇಳಿಕೆ ನೀಡಿದ್ದೆ, ಒಂದು ವರ್ಷ ಗಡುವು ಕೊಟ್ಟಿದ್ದೆ. ರೇವೂರಗೆ ಸಚಿವ ಸ್ಥಾನ ನೀಡದೇ ಇದ್ದಲ್ಲಿ ಶಾಸಕರಿಂದ ರಾಜೀನಾಮೆ ಕೊಡಿಸುತ್ತೇನೆ. ಅದಕ್ಕೂ ಮುಂಚಿತವಾಗಿಯೇ ಈ ಭಾಗಕ್ಕೆ ಆಗಿರೋ ಅನ್ಯಾಯ ಸರಿಪಡಸಿಬೇಕು. ಇಲ್ಲಿದಿದ್ದಲ್ಲಿ ಮುಂದಿನ ದಿನಗಳಲ್ಲಿ ಯಡಿಯೂರಪ್ಪಗೆ ಸಂಕಷ್ಟ ತಪ್ಪಿದ್ದಲ್ಲ" ಎಂದು ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಸ್ವಾರ್ಥ ರಾಜಕಾರಣಕ್ಕಾಗಿ ಪಕ್ಷದ ಹಿತವನ್ನೇ ಬಲಿಕೊಟ್ಟವರು ಸಿದ್ದರಾಮಯ್ಯ; ಶ್ರೀರಾಮುಲು ಲೇವಡಿ
First published: