ಡ್ರಗ್ಸ್​ ಪ್ರಕರಣ; ತ್ರಿಮೂರ್ತಿಗಳ ಪತ್ತೆಗೆ 12 ಸಿಸಿಬಿ ಇನ್ಸ್​ಪೆಕ್ಟರ್​ಗಳ ವಿಶೇಷ ತಂಡಗಳ ರಚನೆ

ಡ್ರಗ್ಸ್ ಕೇಸ್ ಪ್ರಕರಣದ‌‌ಲ್ಲಿ ಶಿವಪ್ರಕಾಶ್, ಆದಿತ್ಯಾ ಆಳ್ವಾ ಹಾಗೂ ಶೇಖ್ ಪಾಜಿಲ್ ಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ.‌ ಪ್ರಕರಣದ ಮೊದಲ ಆರೋಪಿಯಾಗಿರುವ ಶಿವಪ್ರಕಾಶ್‌ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾನೆ.‌ ನಟಿ ರಾಗಿಣಿ ಆಪ್ತನಾಗಿಯೂ ಈತ ಗುರುತಿಸಿಕೊಂಡಿದ್ದ.

news18-kannada
Updated:September 25, 2020, 9:19 AM IST
ಡ್ರಗ್ಸ್​ ಪ್ರಕರಣ; ತ್ರಿಮೂರ್ತಿಗಳ ಪತ್ತೆಗೆ 12 ಸಿಸಿಬಿ ಇನ್ಸ್​ಪೆಕ್ಟರ್​ಗಳ ವಿಶೇಷ ತಂಡಗಳ ರಚನೆ
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಆರೋಪ ಸಂಬಂಧ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೂವರು ಪ್ರಮುಖ ಆರೋಪಿಗಳ ಪತ್ತೆಗಾಗಿ ಇಬ್ಬರು ಎಸಿಪಿಗಳ ನೇತೃತ್ವದಲ್ಲಿ 12 ಮಂದಿ ಇನ್ ಸ್ಪೆಕ್ಟರ್ ಗಳ ತಂಡ ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.‌ ತ್ರಿಮೂರ್ತಿಗಳ ಪತ್ತೆಗೆ 12 ಪೊಲೀಸ್ ಇನ್‌ಸ್ಪೆಕ್ಟರ್ ತಂಡ ‌ಕೆಲಸ‌ ಮಾಡುತ್ತಿದ್ದು. ‌ಒಂದೊಂದು ತಂಡದಿಂದಲೂ ನಾಪತ್ತೆಯಾಗಿರುವ ಆರೋಪಿಗಳ ಶೋಧಕಾರ್ಯವನ್ನು ಎಡಬಿಡದೆ ನಡೆಸುತ್ತಿದ್ದಾರೆ. ನಿರಂತರ ಹುಡುಕಾಟ ನಡೆಸುತ್ತಿದ್ದರೂ ಈವರೆಗೂ ಸಣ್ಣ ಸುಳಿವು ಸಿಗದಿರುವುದು ವಿಪರ್ಯಾಸವಾಗಿದೆ.‌ ಡ್ರಗ್ಸ್ ಕೇಸ್ ಪ್ರಕರಣದ‌‌ಲ್ಲಿ ಶಿವಪ್ರಕಾಶ್, ಆದಿತ್ಯಾ ಆಳ್ವಾ ಹಾಗೂ ಶೇಖ್ ಪಾಜಿಲ್ ಗಾಗಿ ಪೊಲೀಸರು ಶೋಧ ಕಾರ್ಯ ನಡೆಸಲಾಗುತ್ತಿದೆ. ಪ್ರಕರಣದ ಮೊದಲ ಆರೋಪಿಯಾಗಿರುವ ಶಿವಪ್ರಕಾಶ್‌ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾನೆ.‌ ನಟಿ ರಾಗಿಣಿ ಆಪ್ತನಾಗಿಯೂ ಈತ ಗುರುತಿಸಿಕೊಂಡಿದ್ದ ಎನ್ನಲಾಗುತ್ತಿದೆ. ಅದೇ ರೀತಿ ಮಾಜಿ ಸಚಿವರ ಪುತ್ರ ಆದಿತ್ಯ ಆಳ್ವಾ‌ ಹೆಸರು ಕೇಳುಬರುತ್ತಿದ್ದಂತೆ ಮೊಬೈಲ್ ಸ್ವಿಫ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ‌. ಇಬ್ಬರು ಆರೋಪಿಗಳು ದೇಶಬಿಟ್ಟು ತೆರಳಿಲ್ಲ‌‌‌‌ ಎಂದು ಕೇಂದ್ರ ತನಿಖಾ ಸಂಸ್ಥೆ ಖಚಿತಪಡಿಸಿದೆ.

ಈ‌ ಮಧ್ಯೆ ಈ ಇಬ್ಬರು ಆರೋಪಿಗಳ ಪತ್ತೆಗಾಗಿಸಿಸಿಬಿ ಲುಕ್ ಔಟ್ ನೊಟೀಸ್ ಜಾರಿ ಮಾಡಿದೆ.. ಅದೇ ರೀತಿ‌‌ ಮೂರನೇ ಆರೋಪಿಯಾದ ಶೇಖ್ ಫಾಜಿಲ್ ಶ್ರೀಲಂಕಾದಲ್ಲಿ‌ ಕ್ಯಾಸಿನೊ ವ್ಯವಹಾರ ನಡೆಸುತ್ತಿದ್ದ.‌ ಸ್ಟಾರ್  ನಟ-ನಟಿಯರಿಗೆ ಪಾರ್ಟಿಗೆ ಆಹ್ವಾನಿಸಿ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದ. ‌ಡ್ರಗ್ಸ್ ಜಾಲ ಬೆಳಕಿಗೆ ಫಾಜಿಲ್‌ ಸೇರಿದಂತೆ ಮೂವರು ಆರೋಪಿಗಳು ಸುಳಿವು ಸಿಗದಂತೆ‌ ಎಸ್ಕೇಪ್‌ ಆಗಿದ್ದಾರೆ.

ಇದನ್ನೂ ಓದಿ : ದೆಹಲಿ ಗಲಭೆ ಪ್ರಕರಣ; ಉಮರ್​ ಖಾಲಿದ್​ಗೆ ಅಕ್ಟೋಬರ್​ 22ರ ವರೆಗೆ ನ್ಯಾಯಾಂಗ ಬಂಧನ ಮುಂದುವರೆಸಿದ ಕೋರ್ಟ್​

ಆರೋಪಿಗಳ‌ ಪತ್ತೆಗಾಗಿ ಕಳೆದ 20 ದಿನಗಳಿಂದಲೂ ಮೊಬೈಲ್ ಟವರ್ ಲೊಕೇಷನ್, ಕಾಲ್ ಡೀಟೆಲ್ಸ್ ಸೇರಿ ಹಲವು ಆಯಾಮಗಳಲ್ಲಿ ಹುಡುಕಾಟ ಏನು ಪ್ರಯೋಜನವಾಗಿಲ್ಲ. ಹೀಗಾಗಿ ಸಿಸಿಬಿ ಟೆಕ್ನಿಕಲ್ ಟೀಂನಿಂದ ಮೂವರ ಮೊಬೈಲ್ ಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಮೂವರ ಮೊಬೈಲ್‌ಗಳು‌ ಆಪ್ ಆಗಿ 18 ದಿನಗಳಿಂದ ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿದೆ.‌ ಇಷ್ಟೇ ಅಲ್ಲದೆ ತ್ರಿಮೂರ್ತಿಗಳ ಮನೆಯವರ ಫೋನ್ ಗಳ‌ ಮೇಲೆ ಸಿಸಿಬಿ ಹದ್ದಿನ ಕಣ್ಣಿನ‌ ಇಟ್ಟಿದೆ.

ಆರೋಪಿಗಳ ಮೂರು ತಿಂಗಳ ಕಾಲ್ ಡೀಟೆಟ್ಸ್​ ಪರಿಶೀಲಿಸುತ್ತಿದ್ದು ಇನ್ನೊಂದು ವಾರದಲ್ಲಿ ತ್ರಿಮೂರ್ತಿಗಳನ್ನು ಹಿಡಿಯಲೇಬೇಕೆಂದು ಹಿರಿಯ ಅಧಿಕಾರಿಗಳು 12 ಮಂದಿ ಇನ್ ಸ್ಪೆಕ್ಟರ್ ಗಳ ತಂಡಕ್ಕೆ‌ ಟಾಸ್ಕ್ ನೀಡಿದ್ದಾರೆ. ಡ್ರಗ್ ಕೇಸ್ ನಲ್ಲಿ ಈವರೆಗೆ ರಾಗಿಣಿ, ರವಿಶಂಕರ್, ರಾಹುಲ್, ವೈಭವ್ ಜೈನ್, ವಿರೇನ್ ಖನ್ನಾ, ಸಂಜನಾ, ಲೂಮ್ ಪೆಪ್ಪರ್, ಪ್ರಶಾಂತ್ ರಾಂಕ, ಪ್ರತೀಕ್ ಶೆಟ್ಟಿ, ಆದಿತ್ಯ ಅಗರ್ವಾಲ್, ನೀಯಾದ್ ಅಹಮದ್ ಹಾಗೂ ಶ್ರೀ ಎಂಬುವರನ್ನು ಅರೆಸ್ಟ್‌ ಮಾಡಲಾಗಿದೆ.
Published by: MAshok Kumar
First published: September 24, 2020, 11:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading