ಮರಳು-ತಿರುಳು ಭಾಗ-2 | ಬರಿದಾಗುತ್ತಿದೆ ಕೊಪ್ಪಳ ಜಿಲ್ಲೆಯ ನದಿ-ಹಳ್ಳಗಳ ಒಡಲು!

ನಾಗರಹಳ್ಳಿ ಗ್ರಾಮದ ತುಂಗಭದ್ರ ನದಿ ದಂಡೆಯ ದಡದಲ್ಲಿ 3 ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿದ ಸುಮಾರು 5 ಟಿಪ್ಪರ್ ಅನಧಿಕೃತ ಮರಳನ್ನು ಸೀಜ್ ಮಾಡಲಾಗಿದೆ. ಚಿಕ್ಕಜಂತಕಲ್ ಗ್ರಾಮದ ಕಂಪ್ಲಿ ಬ್ರೀಡ್ಜ್ ಹತ್ತಿರ ಮರಳು ಎತ್ತಲು ಬಳಸುವ 4 ತೆಪ್ಪ (ದೋಣಿ) ವಶಕ್ಕೆ ಪಡೆಯಲಾಗಿದೆ.

ಅಕ್ರಮವಾಗಿ ಸಂಗ್ರಹಿಸಿರುವ ಮರಳು.

ಅಕ್ರಮವಾಗಿ ಸಂಗ್ರಹಿಸಿರುವ ಮರಳು.

  • Share this:
ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಪಟ್ಟಾ ಜಮೀನಿನಲ್ಲಿ ಮರಳು ಗಣಿ ಗುತ್ತಿಗೆ ಪಡೆದ ಐವರ ನಿಖರ ವಿವರಗಳನ್ನು ಹಿಂದಿನ ಸಂಚಿಕೆಯಲ್ಲಿ ನೀಡಲಾಗಿದೆ. ಈ ಸಂಚಿಕೆಯಲ್ಲಿ ನದಿ ಮತ್ತು ಹಳ್ಳದ ಮರಳನ್ನು ತೆಗೆಯಲು ಅಧಿಕೃತವಾಗಿ ಗುತ್ತಿಗೆ ಪಡೆದವರ ಸಂಪೂರ್ಣ ವಿವರ ನೀಡಲಾಗುತ್ತಿದೆ.

ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದ ಸರ್ವೇ ನಂಬರ್ 76, 77, 78 ಮತ್ತು 80ರ ಪಕ್ಕದ (12-20 ವಿಸ್ತೀರ್ಣ ಮಾತ್ರ) ಸಾದಾ ಮರಳು ತೆಗೆಯಲು 2017ರ ಜೂನ್ 8ರಿಂದ 5 ವರ್ಷದವರೆಗೆ ಶಿವಾನಂದ ಪಲ್ಲೇದ (ಗುತ್ತಿಗೆ ಸಂಖ್ಯೆ-KPLNSAOS01) ಎನ್ನುವ ಗುತ್ತಿಗೆದಾರರು ಮರಳು ಗಣಿ ಗುತ್ತಿಗೆ ಪಡೆದಿದ್ದಾರೆ.

ಕೊಪ್ಪಳ ತಾಲೂಕಿನ ಕಾಟ್ರಳ್ಳಿ ಗ್ರಾಮದ ಸರ್ವೇ ನಂಬರ್ 18, 189, 22, 25 ಮತ್ತು 26ರ ಪಕ್ಕದ (12-20 ವಿಸ್ತೀರ್ಣ ಮಾತ್ರ) ಸಾದಾ ಮರಳು ತೆಗೆಯಲು 2017ರ ಜೂನ್ 19ರಿಂದ 5 ವರ್ಷದವರೆಗೆ ಪಿ.ಎಲ್. ಕಾಂಬ್ಳೆ (ಗುತ್ತಿಗೆ ಸಂಖ್ಯೆ-KPLNSAOS02) ಎನ್ನುವ ಗುತ್ತಿಗೆದಾರರು ಮರಳು ಗಣಿ ಗುತ್ತಿಗೆ ಪಡೆದಿದ್ದಾರೆ.

ಗಂಗಾವತಿ ತಾಲೂಕಿನ ಮುಷ್ಟೂರು ಗ್ರಾಮದ ಸರ್ವೇ ನಂಬರ್ 276, 278 ಮತ್ತು 283ರ ಪಕ್ಕದ (12-20 ವಿಸ್ತೀರ್ಣ ಮಾತ್ರ) ಸಾದಾ ಮರಳು ತೆಗೆಯಲು 2017ರ ಜೂನ್ 16ರಿಂದ 5 ವರ್ಷದವರೆಗೆ ಪಿ.ಎಲ್. ಕಾಂಬ್ಳೆ (ಗುತ್ತಿಗೆ ಸಂಖ್ಯೆ-KPLNSAOS03) ಎನ್ನುವ ಗುತ್ತಿಗೆದಾರರು ಮರಳು ಗಣಿ ಗುತ್ತಿಗೆ ಪಡೆದಿದ್ದಾರೆ.

ಗಂಗಾವತಿ ತಾಲೂಕಿನ ಉದ್ದಿಹಾಳ ಗ್ರಾಮದ ಸರ್ವೇ ನಂಬರ್ 74,73, 95, 96 ಮತ್ತು 93ರ ಪಕ್ಕದ (12-20 ವಿಸ್ತೀರ್ಣ ಮಾತ್ರ) ಸಾದಾ ಮರಳು ತೆಗೆಯಲು 2017ರ ಜೂನ್ 8ರಿಂದ 5 ವರ್ಷದವರೆಗೆ ವಿವೇಕಾನಂದ ಬಿ.ಚೌಧರಿ (ಗುತ್ತಿಗೆ ಸಂಖ್ಯೆ-KPLNSAOS04) ಎನ್ನುವ ಗುತ್ತಿಗೆದಾರರು ಮರಳು ಗಣಿ ಗುತ್ತಿಗೆ ಪಡೆದಿದ್ದಾರೆ.

ಯಲಬುರ್ಗಾ ತಾಲೂಕಿನ ಯಡಿಯಾಪುರ ಗ್ರಾಮದ ಸರ್ವೇ ನಂಬರ್ 1, 32/1, 3, 2/2, 31 ಮತ್ತು 29ರ ಪಕ್ಕದ (12-20 ವಿಸ್ತೀರ್ಣ ಮಾತ್ರ) ಸಾದಾ ಮರಳು ತೆಗೆಯಲು 2017ರ ಜೂನ್ 14ರಿಂದ 5 ವರ್ಷದವರೆಗೆ ಬಿ.ಜಕರಯ್ಯ (ಗುತ್ತಿಗೆ ಸಂಖ್ಯೆ-KPLNSAOS05) ಎನ್ನುವ ಗುತ್ತಿಗೆದಾರರು ಮರಳು ಗಣಿ ಗುತ್ತಿಗೆ ಪಡೆದಿದ್ದಾರೆ.

ಕೊಪ್ಪಳ ತಾಲೂಕಿನ ಕೊಳೂರು ಗ್ರಾಮದ ಸರ್ವೇ ನಂಬರ್ 50. 51, 52, 53  ಮತ್ತು 54ರ ಪಕ್ಕದ (12-20 ವಿಸ್ತೀರ್ಣ ಮಾತ್ರ) ಸಾದಾ ಮರಳು ತೆಗೆಯಲು 2017ರ ಜೂನ್ 13ರಿಂದ 5 ವರ್ಷದವರೆಗೆ ಆರ್.ಸಿದ್ಧಮೂರ್ತಿ (ಗುತ್ತಿಗೆ ಸಂಖ್ಯೆ-KPLNSAOS06) ಎನ್ನುವ ಗುತ್ತಿಗೆದಾರರು ಮರಳು ಗಣಿ ಗುತ್ತಿಗೆ ಪಡೆದಿದ್ದಾರೆ.

ಗಂಗಾವತಿ ತಾಲೂಕಿನ ಉದ್ದಿಹಾಳ-2 ಗ್ರಾಮದ ಸರ್ವೇ ನಂಬರ್ 101, 102 ಮತ್ತು 5ರ ಪಕ್ಕದ (12-20 ವಿಸ್ತೀರ್ಣ ಮಾತ್ರ) ಸಾದಾ ಮರಳು ತೆಗೆಯಲು 2017ರ ಜೂನ್ 17ರಿಂದ 5 ವರ್ಷದವರೆಗೆ ಬಸವರಾಜ ಮೇಟಿ (ಗುತ್ತಿಗೆ ಸಂಖ್ಯೆ-KPLNSAOS07) ಎನ್ನುವ ಗುತ್ತಿಗೆದಾರರು ಮರಳು ಗಣಿ ಗುತ್ತಿಗೆ ಪಡೆದಿದ್ದಾರೆ.

ಕೊಪ್ಪಳ ತಾಲೂಕಿನ ಮಂಗಳಾಪುರ ಗ್ರಾಮದ ಸರ್ವೇ ನಂಬರ್ 37 ಮತ್ತು 39ರ ಪಕ್ಕದ (12-20 ವಿಸ್ತೀರ್ಣ ಮಾತ್ರ) ಸಾದಾ ಮರಳು ತೆಗೆಯಲು 2017ರ ಜೂನ್ 8ರಿಂದ 5 ವರ್ಷದವರೆಗೆ ಸುರೇಶ್ ಭೂಮರೆಡ್ಡಿ (ಗುತ್ತಿಗೆ ಸಂಖ್ಯೆ-KPLNSAOS08) ಎನ್ನುವ ಗುತ್ತಿಗೆದಾರರು ಮರಳು ಗಣಿ ಗುತ್ತಿಗೆ ಪಡೆದಿದ್ದಾರೆ. ಇದಿಷ್ಟು ಅಧಿಕೃತವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪರವಾನಗಿ ಪಡೆದು ಮರಳು ತೆಗೆಯುವ ಗುತ್ತಿಗೆದಾರರ ಮಾಹಿತಿ.

ಗಂಗಾವತಿ ತಾಲೂಕಿನ ಬಸವನದುರ್ಗದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು, ಟ್ರ್ಯಾಕ್ಟರ್, ಮೋಟಾರ್ ಬೈಕ್ ಹಾಗೂ ಸವಾರನ ಸಮೇತ ಸೋಮವಾರ ರಾತ್ರಿ ಹಿಡಿದು ಪ್ರಕರಣ ದಾಖಲಿಸಲಾಗಿದೆ. ನಾಗರಹಳ್ಳಿ ಗ್ರಾಮದ ತುಂಗಭದ್ರ ನದಿ ದಂಡೆಯ ದಡದಲ್ಲಿ 3 ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿದ ಸುಮಾರು 5 ಟಿಪ್ಪರ್ ಅನಧಿಕೃತ ಮರಳನ್ನು ಸೀಜ್ ಮಾಡಲಾಗಿದೆ. ಚಿಕ್ಕಜಂತಕಲ್ ಗ್ರಾಮದ ಕಂಪ್ಲಿ ಬ್ರೀಡ್ಜ್ ಹತ್ತಿರ ಮರಳು ಎತ್ತಲು ಬಳಸುವ 4 ತೆಪ್ಪ (ದೋಣಿ) ವಶಕ್ಕೆ ಪಡೆಯಲಾಗಿದೆ. ಮತ್ತು ಹಂಪಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಮಲ್ಲಾಪೂರ ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ  ನಡೆಯುವ ಜಾಗವನ್ನು ಪರಿಶೀಲಿಸಿದ್ದು, ಸ್ಥಳದಲ್ಲಿದ್ದ ದ್ರಾಕ್ಷಿ ತೋಟಕ್ಕೆ ಬಳಸುವ ಕಲ್ಲುಗಳನ್ನು ನಾಶಪಡಿಸಲಾಗಿದೆ.

ಇದನ್ನು ಓದಿ: ಮರಳು-ತಿರುಳು ಭಾಗ 1: ಕೊರೋನಾ ಕರಿನೆರಳಿನಲ್ಲಿ ಕಣ್ಮರೆಯಾಗಿದ್ದ ಮರಳಿನ ಅಕ್ರಮ ಬೆಳಕಿಗೆ

ಕೊಪ್ಪಳ ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಸೈಯದ್ ಫಾಸಿಲ್ ಹಾಗೂ ಗಂಗಾವತಿ ತಹಸೀಲ್ದಾರರಾದ ಶ್ರೀಮತಿ ಕವಿತಾ ಹಾಗೂ ಗಂಗಾವತಿ ಕಂದಾಯ ನಿರೀಕ್ಷಕರಾದ ಮಂಜುನಾಥ್ ಹಿರೇಮಠ ಹಾಗೂ ಸಿಬ್ಬಂದಿ ವರ್ಗ ದಾಳಿ ನಡೆಸಿ, ಮರಳು ಅಕ್ರಮ ಸಾಗಣೆಯನ್ನು ತಡೆದಿದ್ದಾರೆ

(ಮುಂದಿನ ಭಾಗದಲ್ಲಿ ಮರಳು ಅಕ್ರಮ ಸಾಗಾಟ ಹೇಗೆ? ಫಿಲ್ಟರ್ ಸ್ಯಾಂಡ್, ಅಧಿಕಾರಿಗಳ ಪಾತ್ರ ಕುರಿತ ಮಾಹಿತಿ ಬರಲಿದೆ)
Published by:HR Ramesh
First published: