ಮರಳು-ತಿರುಳು ಭಾಗ-3; ಕೊಪ್ಪಳದಲ್ಲಿ ರಾತ್ರೋರಾತ್ರಿ ಅಕ್ರಮವಾಗಿ ಸಾಗಣೆಯಾಗುತ್ತೆ ಮರಳು?

ಮರಳು ಸಾಗಣೆಗೆ ಪರವಾನಗಿ ಇದ್ದ ದಿನಗಳಲ್ಲೂ ಮರಳು ಸಾಗಿಸುವ ವಾಹನಗಳು ಹಗಲಿಗಿಂತ ರಾತ್ರಿ ಸದ್ದು‌ ಮಾಡುತ್ತಿದ್ದುದೇ ಹೆಚ್ಚು. ಈಗಂತು ಕೆಲ ಹಳ್ಳ-ಕೊಳ್ಳಗಳಿಗೆ ಇನ್ನೂ ನೀರು‌ ಹರಿಯದಿರುವುದರಿಂದ ಮರಳು ಅಕ್ರಮ‌ ಸಾಗಣೆ ಅವ್ಯಾಹತವಾಗಿ ನಡೆದಿದೆ ಎಂಬುದು‌ ತೆರೆದಿಟ್ಟ‌‌ ವಿಚಾರ.

news18-kannada
Updated:July 30, 2020, 7:55 AM IST
ಮರಳು-ತಿರುಳು ಭಾಗ-3; ಕೊಪ್ಪಳದಲ್ಲಿ ರಾತ್ರೋರಾತ್ರಿ ಅಕ್ರಮವಾಗಿ ಸಾಗಣೆಯಾಗುತ್ತೆ ಮರಳು?
ಅಕ್ರಮ ಮರಳು ಗಣಿಗಾರಿಕೆ.
  • Share this:
ಕೊಪ್ಪಳ: ಜಿಲ್ಲೆಯ ಪಟ್ಟಾ ಜಮೀನು ಹಾಗೂ ನದಿ-ಹಳ್ಳಿ ಪಾತ್ರದ ಮರಳಿನ ಗಣಿ ಗುತ್ತಿಗೆಯನ್ನು ಅಧಿಕೃತವಾಗಿ ಪಡೆದಿರುವವರ ವಿವರಗಳನ್ನು ಹಿಂದಿನ ಭಾಗಗಳಲ್ಲಿ ನೀಡಲಾಗಿದ್ದು, ಈ ಭಾಗದಲ್ಲಿ ಪರವಾನಗಿ ಪಡೆದವರು ಯಾಕೆ ಇನ್ನೂ ಸುಮ್ಮನಿದ್ದಾರೆ? ಅಕ್ರಮವಾಗಿ ಮರಳು ಸಾಗಣೆ ಪ್ರಕರಣಗಳು ಹೆಚ್ಚುತ್ತಿದ್ದರೂ ಇವರ ಮೌನಕ್ಕೆ ಏನು ಕಾರಣ? ಎಂಬ ಹಲವು ವಿಷಯಗಳ ಅನಾವರಣ ಇಲ್ಲಿದೆ.

ಮಾರ್ಚ್‌ನಲ್ಲಿ ಕೊರೋನಾ ಸಂಕಷ್ಟ ಆರಂಭವಾಗಿದ್ದರಿಂದ ಬಹುತೇಕ ಉದ್ಯಮಗಳು ಅರೆಕಾಲಿಕವಾಗಿ ಸ್ಥಗಿತಗೊಂಡಿದ್ದವು. ಜೂನ್ ನಂತರ ಉದ್ಯಮಗಳ ಚೇತನಕ್ಕೆ ಸರಕಾರ ಅವಕಾಶ ಕಲ್ಪಿಸಿಕೊಟ್ಟಿದೆ. ಆ ಮೂಲಕ ಆರ್ಥಿಕವಾಗಿ ಸಬಲಗೊಳ್ಳಬೇಕಾದ ಮಹತ್ವಾಕಾಂಕ್ಷೆಯಿಂದ ವರ್ಕ್ ಫ್ರಂ ಹೋಮ್ ಬಹುತೇಕ‌ ಕಡೆ ರದ್ದಾಗಿದೆ. ಕೊರೋನಾದ ಸೀಲ್‌ಡೌನ್, ಲಾಕ್‌ಡೌನ್ ನಿಯಮಗಳನ್ನು ಕೊಂಚ ಸಡಿಲಿಕೆ ಕಂಡಿವೆ. ಆದಾಗ್ಯೂ ಮರಳು ಸಾಗಣೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪರವಾನಗಿ ನೀಡುತ್ತಿಲ್ಲ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ರಾತ್ರಿಯೇ ಸದ್ದು ಯಾಕೆ?

ಮರಳು ಸಾಗಣೆಗೆ ಪರವಾನಗಿ ಇದ್ದ ದಿನಗಳಲ್ಲೂ ಮರಳು ಸಾಗಿಸುವ ವಾಹನಗಳು ಹಗಲಿಗಿಂತ ರಾತ್ರಿ ಸದ್ದು‌ ಮಾಡುತ್ತಿದ್ದುದೇ ಹೆಚ್ಚು. ಈಗಂತು ಕೆಲ ಹಳ್ಳ-ಕೊಳ್ಳಗಳಿಗೆ ಇನ್ನೂ ನೀರು‌ ಹರಿಯದಿರುವುದರಿಂದ ಮರಳು ಅಕ್ರಮ‌ ಸಾಗಣೆ ಅವ್ಯಾಹತವಾಗಿ ನಡೆದಿದೆ ಎಂಬುದು‌ ತೆರೆದಿಟ್ಟ‌‌ ವಿಚಾರವೇ. ಅದರಲ್ಲೂ ಕಿನ್ನಾಳ, ಬಳಗೇರಿ, ಕನಕಗಿರಿ, ಕಾರಟಗಿ, ಮಂಗಳಾಪುರ, ಕುಕನೂರು, ಕೊಳೂರು, ಹಿರೇಸಿಂಧೋಗಿ, ಚಿಕ್ಕಸಿಂಧೋಗಿ ಭಾಗಗಳಲ್ಲಿ ರಾತ್ರಿ 1 ರ ನಂತರ ನಸುಕಿನ 5ರ ಒಳಗೆ ಟ್ರ್ಯಾಕ್ಟರ್, ಟಿಪ್ಪರ್‌ಗಳ ಸಂಚಾರದ ಸದ್ದು ಜಾಸ್ತಿ.

 ಉಸ್ತುವಾರಿ ಸಚಿವರ ಹೆಸರಲ್ಲೇ ನಡೆಯುತ್ತಾ ದಂಧೆ?

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಆಗಾಗ ಜಿಲ್ಲಾ ಕೇಂದ್ರದ ಅಧಿಕಾರಿಗಳನ್ನು‌ ಭೇಟಿಯಾಗುವುದು ಸಭೆ‌ ನಡೆಸಿ, ಜಿಲ್ಲೆಯ ಅಭಿವೃದ್ಧಿ ಮಾಡಲಿಕ್ಕಲ್ಲ. ಬದಲಾಗಿ ಮರಳು ಅಕ್ರಮ, ಇಸ್ಪೀಟ್ ಅಡ್ಡೆ , ಬಾರ್‌ಗಳಿಂದ ಮಾಮೂಲು ಪಡೆಯುವ ಅನೌಪಚಾರಿಕ ಸಭೆ ಎಂದು ಪ್ರತಿಪಕ್ಷದ ಮುಖಂಡರು ಆರೋಪಿಸುತ್ತಾರೆ. ಸಚಿವರ ಹೆಸರಿನಲ್ಲೇ ಪೊಲೀಸರು ಅಕ್ರಮ‌ದ ಕುಳಗಳಿಂದ ಮಾಮೂಲು ಪಡೆಯುತ್ತಾರೆ ಎಂಬ ವಿಷಯವನ್ನು‌‌ ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

 ಫಿಲ್ಟರ್ ಸ್ಯಾಂಡ್ ಮಾಫಿಯಾಅಕ್ರಮವಾಗಿ ಸಂಗ್ರಹಿಸುವ ಮರಳನ್ನು ದಂಧೆಕೋರರು‌ ನಿರ್ಜನ ಪ್ರದೇಶದಲ್ಲಿ ಅದನ್ನು ಹಾಕಿ, ಮರಳನ್ನು ಜಿನುಗು ಆಗುವಂತೆ ಸಾಣಿಗೆ ಹಿಡಿದು ಫಿಲ್ಟರ್ ಮಾಡುತ್ತಾರೆ. ಜಿನುಗು ಮಣ್ಣಿಗೆ ನೀರು‌ ಮಿಶ್ರಣ ಮಾಡಿ ಗಾಣದಂತೆ ತಿರುಗಿಸಿದಾಗ ಅದು ಈಗಷ್ಟೇ ಹಳ್ಳ-ಕೊಳ್ಳದಿಂದ ತಂದಿರುವ ಗುಣಮಟ್ಟದ ಮರಳು ಎಂದು ಬಿಂಬಿಸುತ್ತಾರೆ.‌

ಮರಳಿನ ಜೊತೆ ನೀರಿನ ಅಂಶ ಸೇರಿಕೊಂಡೊರುವುದರಿಂದ ತೂಕವೂ ಜಾಸ್ತಿ, ಜೊತೆಗೆ ಆದಾಯವೂ ಸಹ. ಗಂಗಾವತಿ ತಾಲೂಕಿನ ಹಲವು ಕಡೆ ಗೌಪ್ಯ ಸ್ಥಳಗಳಲ್ಲಿ ಫಿಲ್ಟರ್ ಸ್ಯಾಂಡ್ ಸಿದ್ಧವಾಗುತ್ತಿರುವುದು ಹಲವು ಸಲ ದೃಢಪಟ್ಟಿದೆ. ಫಿಲ್ಟರ್ ಸ್ಯಾಂಡ್ ಬಳಸಿ ನಿರ್ಮಾಣಗೊಳ್ಳುವ ಕಟ್ಟಡಗಳ ಬಾಳಿಕೆ ತೀರ ಕಡಿಮೆ ಎಂಬುದು‌ ತಜ್ಞರ ಮಾತು.
Published by: MAshok Kumar
First published: July 30, 2020, 7:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading