ಭದ್ರಾವತಿಯ ಎಂಪಿಎಂ ಕಾರ್ಖಾನೆಯ ಬ್ಯಾಕ್​ಲಾಗ್ ನೌಕರರಿಗೆ ಸಂಬಳವೂ ಕಡಿಮೆ, ಉದ್ಯೋಗವೂ ಅಭದ್ರ

ಕೆಲಸಕ್ಕೆ ಸೇರಿದ ದಿನದಿಂದ ಇಲ್ಲಿಯವರೆಗೂ ಅವರಿಗೆ ಬಡ್ತಿ ನೀಡಲಾಗಿಲ್ಲ. ಅಲ್ಲದೇ ಇವತ್ತಿನ ಅವರ ಮೂಲ ವೇತನ ಕೇವಲ 5,200 ರೂಪಾಯಿ ಆಗಿದೆ

ಕಾರ್ಮಿಕರು

ಕಾರ್ಮಿಕರು

  • Share this:
ಶಿವಮೊಗ್ಗ(ಜೂ.06): ಅವರೆಲ್ಲ ಕೆಲಸ ಮಾಡುತ್ತಿರುವುದು ಸರ್ಕಾರಿ ಸೌಮ್ಯದ ಕಾರ್ಖಾನೆಯಲ್ಲಿ. ಬ್ಯಾಕ್ ಲಾಗ್ ಮೀಸಲಾತಿ ಅಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು 12 ವರ್ಷ ಸೇವೆ ಸಲ್ಲಿಸಿದ್ದಾರೆ. ಅವರ ಸಂಬಳ ಕೇಳಿದರೆ ಎಲ್ಲರಿಗೂ ಅಚ್ಚರಿಯಾಗುತ್ತೇ. ಕನಿಷ್ಠ ವೇತನ ಸಹ ಅವರಿಗೆ ಸಿಗುತ್ತಿಲ್ಲ. ಸರ್ಕಾರ ಕಾರ್ಖಾನೆಗೆ ಬಾಗಿಲು ಹಾಕಿ 4 ವರ್ಷಗಳು ಕಳೆದಿದೆ. ಸ್ವಯಂ ನಿವೃತ್ತಿ ಪಡೆಯದೇ ಇನ್ನು ಸೇವೆಯಲ್ಲಿರುವ ಬ್ಯಾಕ್ ಲಾಗ್ ನೌಕರರಿಗೆ ಭವಿಷ್ಯದ ಅತಂಕ ಕಾಡುತ್ತಿದೆ. ವಿವಿಧ ನಿಗಮ ಮಂಡಳಿಗಳಿಗೆ ನಮ್ಮನ್ನು ನಿಯೋಜಿಸಿ, ಖಾಯಂ ಸೇವಾ ಭದ್ರತೆ ಕೊಡಿ ಎಂದು ಕಾರ್ಮಿಕರು ಅಂಗಲಾಚುತ್ತಿದ್ದಾರೆ.

1936 ರಲ್ಲಿ ಭದ್ರಾವತಿಯಲ್ಲಿ ಮೈಸೂರು ಕಾಗದ ಮತ್ತು ಸಕ್ಕರೆ ಕಾರ್ಖಾನೆ ಸ್ಥಾಪನೆ ಯಾಗುತ್ತೇ . ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿ ಸ್ಥಾಪನೆಯಾದ ಕಾರ್ಖಾನೆ ನಂತರ ಸರ್ಕಾರಿ ಸೌಮ್ಯದ ಕಾರ್ಖಾನೆಯಾಗಿ ಮಾರ್ಪಾಡಾಗುತ್ತೇ. ಸುಮಾರು 80 ವರ್ಷಗಳ ಕಾಲ ಕಾರ್ಖಾನೆ ನಡೆದು, ನಂತರ ನಷ್ಟದ ಮತ್ತು ಪರಿಸರ ಮಾಲಿನ್ಯದ ಹೆಸರಿನಲ್ಲಿ ರಾಜ್ಯ ಸರ್ಕಾರ ಕಾರ್ಖಾನೆಗೆ ಬೀಗ ಮುದ್ರೆ ಹಾಕತ್ತೇ. ಭದ್ರಾವತಿಯ ಸರ್ಕಾರಿ ಎಪಿಎಂ ಕಾರ್ಖಾನೆ ಮುಚ್ಚಿ ಈಗ ನಾಲ್ಕು ವರ್ಷಗಳೇ ಕಳೆದಿವೆ. ಕಾರ್ಖಾನೆ ಲಾಕ್ ಹೌಟ್ ಮಾಡುತ್ತಾರೆ ಎಂಬ ಭಯದಿಂದ ಸುಮಾರು 811 ಕಾರ್ಮಿಕರು ಸ್ವಯಂ ನಿವೃತ್ತಿ ಪಡೆದರು.

ಸರ್ಕಾರ ಕಾರ್ಮಿಕರ ಸ್ವಯಂ ನಿವೃತ್ತಿ ಯೋಜನೆಗೆ 350 ಕೋಟಿ ರೂಪಾಯಿಯನ್ನು  ಬಿಡುಗಡೆ ಗೊಳಿಸಿತ್ತು. ಆದರೆ, ಕೆಲ ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಪಡೆಯದೇ ಇನ್ನು ಕೆಲಸ ಮಾಡುತ್ತಿದ್ದಾರೆ. ಅಂತಹ ಕಾರ್ಮಿಕರಲ್ಲಿ ಬ್ಯಾಕ್ ಲಾಗ್ ಮೀಸಲಾತಿ ಅಡಿಯಲ್ಲಿ ಸೇವೆಗೆ ಸೇರಿದ 112 ಜನ ಕೂಡ ಇದ್ದಾರೆ. ಅವರಿಗೆ ಈಗ ಕೆಲಸದ ಅಭದ್ರತೆ ಕಾಡುತ್ತಿದೆ. ಅಲ್ಲದೇ ಸರ್ಕಾರಿ ಸೌಮ್ಯದ ಕಾರ್ಖಾನೆಯಲ್ಲಿ ಅವರಿಗೆ ನೀಡುತ್ತಿರುವ ಸಂಬಳ ಕೇಳಿದರೆ  ಅಚ್ಚರಿಯಾಗುತ್ತೇ. ಬ್ಯಾಕ್ ಲಾಗ್ ನಲ್ಲಿ ಅಡಿಯಲ್ಲಿ ಕೆಲಸಕ್ಕೆ ಸೇರಿದ ಕಾರ್ಮಿಕರು 12 ವರ್ಷ ಸೇವಾವಾಧಿ ಮುಗಿಸಿದರೂ, ಇನ್ನು ಪಡೆಯುತ್ತಿರುವ ಸಂಬಳ ಮಾತ್ರ 12 ಸಾವಿರ ದಾಟಿಲ್ಲ.

ಇವೆರಡರಲ್ಲೂ 2008 ರಲ್ಲಿ ನೇಮಕಗೊಂಡಿದ್ದಾರೆ. 112 ಜನರಲ್ಲಿ ಸುಮಾರು 62 ಜನರು ಕಾರ್ಖಾನೆ ಮುಚ್ಚುತ್ತೇ ಕೆಲಸ ಕಳೆದುಕೊಳ್ಳುತ್ತೇವೆ ಎಂದು ವಿವಿಧ ನಿಗಮ ಮಂಡಳಿಗಳಿಗೆ ಸೇವೆಗಾಗಿ ನಿಯೋಜಿಸಿಕೊಂಡಿದ್ದಾರೆ. ಅದಕ್ಕೂ  ಸಹ ಕಾರ್ಖಾನೆಯ ಆಡಳಿತ ಮಂಡಳಿ ಕಾರ್ಮಿಕರಿಂದ ಅಗ್ರಿಮೆಂಟ್ ಮಾಡಿಸಿಕೊಂಡಿದೆ. ಇದು ಸಹ ಕಾನೂನು ಬಾಹಿರ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಕೆಲಸಕ್ಕೆ ಸೇರಿದ ದಿನದಿಂದ ಇಲ್ಲಿಯವರೆಗೂ ಅವರಿಗೆ ಬಡ್ತಿ ನೀಡಲಾಗಿಲ್ಲ. ಅಲ್ಲದೇ ಇವತ್ತಿನ ಅವರ ಮೂಲ ವೇತನ ಕೇವಲ 5,200 ರೂಪಾಯಿ ಆಗಿದೆ. ಸರ್ಕಾರದ ಡಿ ಗ್ರೂಪ್ ನೌಕರನಿಗೂ ಇರುವಷ್ಟು ಸಂಬಳ ನಮಗೆ ಸಿಗುತ್ತಿಲ್ಲ, ಇದು ತ್ಯಾರತಮ್ಯ ನೀತಿಯಾಗಿದೆ ಎಂದು ಕಾರ್ಮಿಕರು ಗೋಳಾಡುತ್ತಿದ್ದಾರೆ.

ಕಾರ್ಖಾನೆಯ ನಿಯಮದ ಪ್ರಕಾರ 2012, 2017 ರಲ್ಲಿ ಇವರಿಗೆ ಒಪ್ಪಂದವೂ ಸಹ ಮಾಡಿಕೊಂಡಿಲ್ಲ. ವಿವಿಧ ನಿಗಮ ಮಂಡಳಿಗಳಿಗೆ, ಇತರೆ ಇಲಾಖೆಗಳಿಗೆ ಡೆಪ್ಯುಟೇಷನ್ ಮೇಲೆ ಹೋಗೋಣ ಅಂದರೆ, ಇವರು ಕನಿಷ್ಠ ವೇತನ ಸೌಲಭ್ಯಕ್ಕೂ ಬಾರದ ಕಾರಣಕ್ಕೆ ಅವಕಾಶ ಕೊಡಲಾಗುತ್ತಿಲ್ಲ. ಹೀಗಾಗಿ ಬ್ಯಾಕ್ ಲಾಗ್ ಅಡಿಯಲ್ಲಿ ಕೆಲಸಕ್ಕೆ ಸೇರಿಕೊಂಡವರು ಈಗ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಇದನ್ನೂ ಓದಿ : ಜೂನ್ 8 ರಿಂದ ದೇವಾಲಯ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ; ಉತ್ತರ ಕನ್ನಡದಲ್ಲಿ ಭಕ್ತರಿಗೆ ಷರತ್ತುಬದ್ಧ ಅನುಮತಿ

ಸ್ವಯಂ ನಿವೃತ್ತಿ ಪಡೆಯೋಣ ಅಂದರೆ, ಅವರ ಸಂಬಳಕ್ಕೆ 2 ಲಕ್ಷ ಸಹ ಪರಿಹಾರ ಸಿಗುವುದಿಲ್ಲ. ಇನ್ನು 15, 20 ವರ್ಷ ಸೇವಾವಧಿಗೆ ಅವಕಾಶ ಇದೆ.  ಸ್ವಯಃ ನಿವೃತ್ತಿ ಪಡೆದರೇ ಕುಟುಂಬ ನಿರ್ವಹಣೆ ಹೇಗೆ ಮಾಡುವುದು ಎಂಬ ಪ್ರಶ್ನೆ ಕಾರ್ಮಿಕರನ್ನು ಕಾಡುತ್ತಿದೆ. ರಾಜ್ಯ ಸರ್ಕಾರ ನಮ್ಮ ನೆರವಿಗೆ ಬರಬೇಕು. ನಮ್ಮನ್ನು ಡಿ ಗ್ರೂಪ್ ನೌಕರರು ಎಂದು ಪರಿಗಣಿಸಬೇಕು. ಜೊತೆಗೆ ಇತರೆ ಇಲಾಖೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂಬುದು ಕಾರ್ಮಿಕರ ಬೇಡಿಕೆಯಾಗಿದೆ.

ಶಿವಮೊಗ್ಗ ಜಿಲ್ಲೆಯವರೇ ಮುಖ್ಯಮಂತ್ರಿ ರಾಜ್ಯದಲ್ಲಿ ಇದ್ದು,  ಜಿಲ್ಲೆಯ ಕಾರ್ಮಿಕರ ಸಮಸ್ಯೆ ಬಗೆ ಹರಿಸುತ್ತಾರಾ ಎಂಬ ಆಶಾಭಾವನೆಯಲ್ಲಿ ಕಾರ್ಮಿಕರಿದ್ದಾರೆ.
First published: