ಶಾಸಕ ಹರತಾಳು ಹಾಲಪ್ಪಗೆ ಕೊರೋನಾ ಪಾಸಿಟಿವ್​ : ಆಸ್ಪತ್ರೆಗೆ ದಾಖಲು

ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ನೂತನವಾಗಿ ಎಂಎಸ್​ಐಎಲ್ ನಿಗಮ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಹರತಾಳು ಹಾಲಪ್ಪನವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ

news18-kannada
Updated:August 4, 2020, 3:21 PM IST
ಶಾಸಕ ಹರತಾಳು ಹಾಲಪ್ಪಗೆ ಕೊರೋನಾ ಪಾಸಿಟಿವ್​ : ಆಸ್ಪತ್ರೆಗೆ ದಾಖಲು
ಶಾಸಕ ಹರತಾಳು ಹಾಲಪ್ಪ
  • Share this:
ಶಿವಮೊಗ್ಗ(ಆಗಸ್ಟ್​. 04): ಜಿಲ್ಲೆಯ ಮತ್ತೊಬ್ಬ ಶಾಸಕರಿಗೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಶಾಸಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮೊಂದಿಗೆ ಸಂಪರ್ಕದಲ್ಲಿ ಇದ್ದವರು ಕೂಡಲೇ ಐಸೊಲೇಷನ್ ಆಗಬೇಕು, ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಶಾಸಕರು ಮನವಿ ಮಾಡಿದ್ದಾರೆ.

ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ನೂತನವಾಗಿ ಎಂಎಸ್​ಐಎಲ್ ನಿಗಮ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಹರತಾಳು ಹಾಲಪ್ಪನವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈ ಕುರಿತು ಫೇಸ್ಬುಕ್​​​ನಲ್ಲಿ ಪೇಜ್ ನಲ್ಲಿ ಶಾಸಕ ಹಾಲಪ್ಪನವರು ತಿಳಿಸಿದ್ದಾರೆ. ಹಾಲಪ್ಪನವರ ಹೆಂಡತಿ, ಕಾರು ಚಾಲಕ ಮತ್ತು ಓರ್ವ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ ಎಂದು ಫೆಸ್​ ಬುಕ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.ಇತ್ತೀಚೆಗಷ್ಟೇ ಎಂಎಸ್ಐಎಲ್ ನ ಅಧ್ಯಕ್ಷರಾಗಿ ನೇಮಕೊಂಡಿದ್ದರು. ಸರ್ಕಾರ ಅವರನ್ನ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಹರತಾಳು ಹಾಲಪ್ಪ ಯಾರಿಗೂ ಸಿಕ್ಕಿರಲಿಲ್ಲ. ಇದೀಗ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ವರದಿಯಲ್ಲಿ ಪಾಸಿಟಿವ್ ವರದಿ ಬಂದಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ :  Siddaramaiah: ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಲೆಂದು ಹಾರೈಸಿದ ವಿವಿಧ ನಾಯಕರು

ಎಂಎಸ್ ಐ ಎಲ್ ಅಧ್ಯಕ್ಷರಾಗಿ ನೇಮಕಗೊಂಡ ಸಮಯದಲ್ಲಿ ಅವರ ಅಭಿಮಾನಿಗಳು  ಪಕ್ಷದ ಕಾರ್ಯಕರ್ತರು ಸಾಕಷ್ಟು ಜನ ಅವರಿಗೆ ಶುಭ ಕೋರಲು ಹೇಗಿದ್ದರು. ಅಲ್ಲದೇ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಸಿಎಂ ಯಡಿಯೂರಪ್ಪನವರನ್ನು ಸಹ ಹಾಲಪ್ಪ ಭೇಟಿ ಮಾಡಿ ಆರ್ಶಿವಾದ ಪಡೆದು ಬಂದಿದ್ದರು. ಅಲ್ಲದೇ ಸಂಸದ ರಾಘವೇಂದ್ರ ಅವರನ್ನು ಸಹ ಭೇಟಿ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರು ಎಲ್ಲರೂ ಕೂಡಲೇ ಐಸೊಲೇಷನ್ ಆಗಬೇಕು ಎಂದು ಹಾಲಪ್ಪ ವಿನಂತಿಸಿಕೊಂಡಿದ್ದಾರೆ. ಜೊತೆಗೆ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ  ಮನವಿ ಮಾಡಿದ್ದಾರೆ.ಜಿಲ್ಲೆಯವರೆ ಆದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ವಿಧಾನ ಪರಿಷತ್ ಸದಸ್ಯ ಆರ್​ ಪ್ರಸನ್ನಕುಮಾರ್​ ಹಾಗೂ ಬಿಜೆಪಿ ಮುಖಂಡ ಭಾನುಪ್ರಕಾಶ್​ ಅವರುಗಳಿಗೆ ಕೊರೋನಾ ಪಾಸಿಟಿವ್​ ದೃಢವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Published by: G Hareeshkumar
First published: August 4, 2020, 3:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading