HOME » NEWS » District » RUMOR SPREAD ON SOME CASTE REMOVE FROM SC COMMUNITY LETTER PROTEST FROM TANDA RESIDENTS RH

ಎಸ್​ಸಿ ಸಮುದಾಯದಿಂದ ಕೆಲ ಜಾತಿಗಳ ಕೈಬಿಡುವ ವದಂತಿ; ತಾಂಡ ನಿವಾಸಿಗಳಿಂದ ಪತ್ರ ಚಳವಳಿ..!

ಗದಗ ಜಿಲ್ಲೆಯ 72 ತಾಂಡೆಯ ಜನರ ಪತ್ರ ಚಳವಳಿ ನಡೆಸಿ ಗಮನ ಸೆಳೆದಿದ್ದಾರೆ. ರಾಜ್ಯ  ಸರ್ಕಾರಕ್ಕೆ ಪತ್ರವನ್ನು ಕಳುಹಿಸಿ ಕೊಟ್ಟಿದ್ದಾರೆ. ಸರ್ಕಾರ ಸುಳ್ಳು ಸುದ್ದಿಯನ್ನು ಹಬ್ಬಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಬೇಕಿದೆ. ಕಿಡಿಗೇಡಿಗಳಿಗೆ ಶಿಕ್ಷೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

news18-kannada
Updated:June 11, 2020, 9:03 AM IST
ಎಸ್​ಸಿ ಸಮುದಾಯದಿಂದ ಕೆಲ ಜಾತಿಗಳ ಕೈಬಿಡುವ ವದಂತಿ; ತಾಂಡ ನಿವಾಸಿಗಳಿಂದ ಪತ್ರ ಚಳವಳಿ..!
ಗದಗ ಜಿಲ್ಲೆಯ ತಾಂಡಾ ನಿವಾಸಿಗಳ ಪತ್ರ ಚಳವಳಿ.
  • Share this:
ಗದಗ: ಎಸ್​ಸಿ ಪಟ್ಟಿಯಿಂದ ಲಂಬಾಣಿ, ಬೋವಿ, ಕೊರಚ ಜಾತಿಗಳನ್ನು ಕೈ ಬಿಡಲಾಗುತ್ತಿದೆ ಎಂಬ ವದಂತಿ ಹಬ್ಬಿದ್ದು, ಇದಕ್ಕೆ ಗದಗ ಜಿಲ್ಲೆಯಲ್ಲಿ ಲಂಬಾಣಿ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯವಾಗಿ ಗದಗ ತಾಲೂಕಿನ ಕಳಸಾಪುರ ತಾಂಡ ನಿವಾಸಿಗಳು ಪತ್ರ ಚಳವಳಿ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.

ಸಮಾಜದ ಕೆಳಸ್ತರದಲ್ಲಿ ಬದುಕುತ್ತಿರುವ ಲಂಬಾಣಿ, ಬಂಜಾರ ಭೋವಿ, ಕೊರಚ, ಕೊರಮ ಜಾತಿಗಳ ಜನ ಕೇಂದ್ರ-ರಾಜ್ಯ ಸರಕಾರಿ ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಎಸ್‌ಸಿ ಮೀಸಲಾತಿ ಸೌಲಭ್ಯದ ಮೂಲಕ ಶಿಕ್ಷಣ, ಉದ್ಯೋಗ ಮುಂತಾದವುಗಳಲ್ಲಿ ಅನೇಕ ವರ್ಷಗಳಿಂದ ಪ್ರಗತಿ ಸಾಧಿಸುತ್ತಿರುವ ತಮ್ಮನ್ನು ಈಗ ಕರ್ನಾಟಕದ ಪರಿಶಿಷ್ಟ ಜಾತಿ ಪಟ್ಟಿಯಿಂದ ದಿಢೀರನೆ ತೆಗೆದು ಹಾಕಬಹುದೆಂಬ ವದಂತಿಯ ಭೀತಿ ಕಾಡಲಾರಂಭಿಸಿದೆ. ಈ ಸುಳ್ಳು ವದಂತಿಯ ಹರಿಬಿಟ್ಟು ಬಂಜಾರ ಸಮುದಾಯದಗಳ ನಡುವೆ ಒಕ್ಕಲೆಬ್ಬಿಸುವಿಕೆ ಷಡ್ಯಂತ್ರವಿದೆ ಎಂದು ಆರೋಪಿಸಲಾಗಿದೆ.

ಇದನ್ನು ಓದಿ: ‘ಮಕ್ಕಳ ಆನ್​ಲೈನ್​ ಶಿಕ್ಷಣ ರದ್ದು, ಆಗಸ್ಟ್​ವರೆಗೂ ಸ್ಕೂಲ್​​ ಓಪನ್​​ ಇಲ್ಲ‘ - ಸಚಿವ ಸುರೇಶ್​ ಕುಮಾರ್​

ಹಾಗಾಗಿ ಗದಗ ಜಿಲ್ಲೆಯ 72 ತಾಂಡೆಯ ಜನರ ಪತ್ರ ಚಳವಳಿ ನಡೆಸಿ ಗಮನ ಸೆಳೆದಿದ್ದಾರೆ. ರಾಜ್ಯ  ಸರ್ಕಾರಕ್ಕೆ ಪತ್ರವನ್ನು ಕಳುಹಿಸಿ ಕೊಟ್ಟಿದ್ದಾರೆ. ಸರ್ಕಾರ ಸುಳ್ಳು ಸುದ್ದಿಯನ್ನು ಹಬ್ಬಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಬೇಕಿದೆ. ಕಿಡಿಗೇಡಿಗಳಿಗೆ ಶಿಕ್ಷೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
First published: June 11, 2020, 9:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories