HOME » NEWS » District » RULES VIOLATION IN MARRIAGE AT MADIKERI FIR FILLED BY POLICE RHHSN RSK

ನಿಯಮ ಉಲ್ಲಂಘಿಸಿದ ವಿವಾಹ; ಕಲ್ಯಾಣ ಮಂಟಪ, ಆಯೋಜಕರ ವಿರುದ್ಧ ಪ್ರಕರಣ ದಾಖಲು

ಕರ್ಫ್ಯೂನಿಂದಾಗಿ ಎಲ್ಲಾ ಹೋಟೆಲ್ ಗಳು ಸಂಪೂರ್ಣ ಬಂದ್ ಆಗಿದ್ದವು. ಹೀಗಾಗಿ ಊಟವಿಲ್ಲದೆ ಹಸಿವಿನಿಂದ ಪರದಾಡುತ್ತಿದ್ದ ಹತ್ತಕ್ಕೂ ಹೆಚ್ಚು ನಿರ್ಗತಿಕರಿಗೆ ಊಟ ನೀಡಿದ್ದಾರೆ. ಕರ್ತವ್ಯದ ನಡುವೆ ಮಾನವೀಯತೆ ಮೆರೆದ ಮಡಿಕೇರಿಯ ಪೊಲೀಸರ ಈ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

news18-kannada
Updated:April 24, 2021, 6:50 PM IST
ನಿಯಮ ಉಲ್ಲಂಘಿಸಿದ ವಿವಾಹ; ಕಲ್ಯಾಣ ಮಂಟಪ, ಆಯೋಜಕರ ವಿರುದ್ಧ ಪ್ರಕರಣ ದಾಖಲು
ಮಡಿಕೇರಿಯಲ್ಲಿ ನಿರ್ಗತಿಕರಿಗೆ ಊಟ ನೀಡಿದ ಪೊಲೀಸ್ ಅಧಿಕಾರಿ.
  • Share this:
ಕೊಡಗು: ಕೋವಿಡ್ ಸೋಂಕು ಹರಡುವುದನ್ನು ತಪ್ಪಿಸುವುದಕ್ಕಾಗಿ ಕೊಡಗು ರಾಜ್ಯವ್ಯಾಪಿಯಾಗಿ ಜಾರಿ ಮಾಡಿದ್ದ ವೀಕೆಂಡ್ ಕರ್ಫ್ಯೂ ಕೊಡಗಿನಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಇಡೀ ಜಿಲ್ಲೆಯ ಎಲ್ಲಾ ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್ ಆಗಿದ್ದು, ಸಾರಿಗೆ ಸಂಚಾರವೂ ಸ್ತಬ್ಧವಾಗಿತ್ತು. ಬೆಳಿಗ್ಗೆ ಆರು ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಆದರೂ ಬಹುತೇಕ ಅಂಗಡಿಗಳು ತೆರೆಯಲೇ ಇಲ್ಲ. ಕೆಲವು ಅಂಗಡಿಗಳು ತೆರೆದಿದ್ದವಾದರೂ ಸಾಕಷ್ಟು ಗ್ರಾಹಕರು ಬರಲಿಲ್ಲ. ಹೀಗಾಗಿ ಒಂಭತ್ತುವರೆಯಿಂದ ಹತ್ತು ಗಂಟೆಯ ವೇಳೆಗೆ ಸ್ವತಃ ವ್ಯಾಪಾರಿಗಳಿಗೆ ಅಂಗಡಿಗಳನ್ನು ಮುಚ್ಚಿದರು. ಆದರೆ ವಾಹನಗಳ ಓಡಾಟ ಸಂಪೂರ್ಣ ಸ್ಥಗಿತಗೊಳ್ಳದಿದ್ದರೂ ಎಂದಿನಂತೆ ವಾಹನಗಳ ಓಡಾಟವಿರಲಿಲ್ಲ. ಹೀಗಾಗಿ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೆ ಕರ್ಫ್ಯೂ ಹೇಗಿದೆ ಎಂದು ನೋಡಲು ಬಂದವರು, ಅನಾವಶ್ಯಕವಾಗಿ ರಸ್ತೆಗಿಳಿದವರೆಲ್ಲರ ಬೈಕುಗಳನ್ನು ಪೊಲೀಸರು ಸೀಜ್ ಮಾಡಿದರು. ಪೊಲೀಸರು ಸ್ಟ್ರಿಕ್ಟ್ ಆಗಿ ಫೀಲ್ಡಿಗೆ ಇಳಿಯುತ್ತಿದ್ದಂತೆ ನಡೆಯುತ್ತಿದ್ದ ಸಂಚಾರವೂ ಸಂಪೂರ್ಣ ಸ್ಥಗಿತವಾಯಿತು. 

ನಿಯಮ ಮೀರಿದ ವಿವಾಹದ ವಿರುದ್ಧ ಪ್ರಕರಣ ದಾಖಲು

ಇನ್ನು ಕೋವಿಡ್ ನಿಯಮಗಳನ್ನು ಮೀರಿ ನಡೆಸುತ್ತಿದ್ದ ವಿವಾಹ ಆಯೋಜಕರು ಮತ್ತು ಕಲ್ಯಾಣ ಮಂಟಪದ ವಿರುದ್ಧ ಪ್ರಕರಣ ದಾಖಲಾಗಿದೆ. ಕೋವಿಡ್ ಮಿತಿಮೀರುತ್ತಿರುವುದರಿಂದ ಸರ್ಕಾರ ಸ್ಪಷ್ಟವಾದ ಸೂಚನೆ ನೀಡಿದ್ದು ವಿವಾಹದಲ್ಲಿ 50 ಕ್ಕೂ ಹೆಚ್ಚು ಜನರು ಸೇರುವಂತಿಲ್ಲ. ಆದರೂ ಮಡಿಕೇರಿ ನಗರದ ಕೆಳಗಿನ ಕೊಡವ ಸಮಾಜದಲ್ಲಿ ವಿವಾಹ ಒಂದು ನಡೆಯುತಿತ್ತು. ಈ ವಿವಾಹದಲ್ಲಿ 120 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಅಲ್ಲದೆ ವೃದ್ಧರು, ಮಕ್ಕಳು ವಿವಾಹದಲ್ಲಿ ಭಾಗವಹಿಸುವಂತಿಲ್ಲ ಎಂದು ನಿಯಮವಿದ್ದರೂ ಈ ಎಲ್ಲಾ ನಿಯಮಗಳನ್ನು ಮೀರಿ ವಿವಾಹ ನಡೆಯುತಿತ್ತು. ಖಚಿತ ಮಾಹಿತಿ ಆಧರಿಸಿದ ನಗರಸಭೆ ಅಧಿಕಾರಿಗಳು ಮಡಿಕೇರಿ ನಗರ ಪೊಲೀಸರೊಂದಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಕಲ್ಯಾಣಮಂಟಪದಲ್ಲಿ ನೂರಾರು ಜನರು ಇರುವುದನ್ನು ಗಮನಿಸಿ ವಿವಾಹ ಆಯೋಜಕರ ವಿರುದ್ಧ ಮತ್ತು ಕಲ್ಯಾಣ ಮಂಟಪವನ್ನು ವಿವಾಹಕ್ಕೆ ಒದಗಿಸಿ ಬಳಿಕ ಕೋವಿಡ್ ನಿಯಮ ಉಲ್ಲಂಘನೆಗೆ ಕಾರಣವಾಗಿರುವ ಕೊಡವ ಸಮಾಜದ ವಿರುದ್ಧ ಮಡಿಕೇರಿ ನಗರಸಭೆ ಆಯುಕ್ತ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿಕೊಂಡಿರುವ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನು ಓದಿ: ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮೇಕ್‍ಶಿಫ್ಟ್ ಆಸ್ಪತ್ರೆಗಳು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಹಸಿವು ನೀಗಿಸಿದ ಪೊಲೀಸರು

ಕೋವಿಡ್ ಸೋಂಕು ಹರಡದಂತೆ ತಡೆಗಟ್ಟಲು ಸರ್ಕಾರವು ರಾಜ್ಯವ್ಯಾಪಿಯಾಗಿ ಕರ್ಫ್ಯೂ ಜಾರಿ ಮಾಡಿದ್ದು, ಪೊಲೀಸರು ಕರ್ಫ್ಯೂವನ್ನು ಯಶಸ್ವಿಗೊಳಿಸಲು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಅದರ ನಡುವೆಯೂ ಮಡಿಕೇರಿ ಪೊಲೀಸರು ಬೀದಿ ಬದಿಯಲ್ಲಿ ಜೀವಿಸುವವರ ಹಸಿವು ನೀಗಿಸಿ ಮಾನವೀಯತೆ ಮೆರೆದಿದ್ದಾರೆ. ಪೊಲೀಸರು ಕೊಡಗು ಜಿಲ್ಲೆಯಲ್ಲೂ ಪೊಲೀಸರು ಕರ್ಫ್ಯೂವನ್ನು ಸಂಪೂರ್ಣ ಯಶಸ್ವಿಗೊಳಿಸಿದ್ದಾರೆ. ಇದರ ನಡುವೆ ಮಡಿಕೇರಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮತ್ತು ಸಿಬ್ಬಂದಿ ಮಡಿಕೇರಿ ನಗರದ ವಿವಿಧೆಡೆ ಬೀದಿಗಳಲ್ಲಿ ಬದುಕುವವರನ್ನು ಹುಡುಕಿ ಅವರಿಗೆ ಮಧ್ಯಾಹ್ನದ ಊಟ ಪೂರೈಸಿ ಅವರ ಹಸಿವು ನೀಗಿಸಿದ್ದಾರೆ.
Youtube Video
ಕರ್ಫ್ಯೂನಿಂದಾಗಿ ಎಲ್ಲಾ ಹೋಟೆಲ್ ಗಳು ಸಂಪೂರ್ಣ ಬಂದ್ ಆಗಿದ್ದವು. ಹೀಗಾಗಿ ಊಟವಿಲ್ಲದೆ ಹಸಿವಿನಿಂದ ಪರದಾಡುತ್ತಿದ್ದ ಹತ್ತಕ್ಕೂ ಹೆಚ್ಚು ನಿರ್ಗತಿಕರಿಗೆ ಊಟ ನೀಡಿದ್ದಾರೆ. ಕರ್ತವ್ಯದ ನಡುವೆ ಮಾನವೀಯತೆ ಮೆರೆದ ಮಡಿಕೇರಿಯ ಪೊಲೀಸರ ಈ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Published by: HR Ramesh
First published: April 24, 2021, 6:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories