ಸಾಮಾಜಿಕ ಅಂತರ ಪಾಲಿಸದ ಖಾಸಗಿ ಬಸ್, ಆಟೋರಿಕ್ಷಾಗಳಿಗೆ ಬಿಸಿ ಮುಟ್ಟಿಸಿದ ಆರ್‌ಟಿಓ ಅಧಿಕಾರಿಗಳು

ಹುಬ್ಬಳ್ಳಿ- ಧಾರವಾಡ ಪೂರ್ವ ಮತ್ತು ಪಶ್ಚಿಮ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರತ್ಯೇಕವಾಗಿ ಒಟ್ಟು ಒಂಬತ್ತು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಖಾಸಗಿ ಬಸ್

ಖಾಸಗಿ ಬಸ್

  • Share this:
ಹುಬ್ಬಳ್ಳಿ(ಜುಲೈ.09): ಸಾಮಾಜಿಕ ಅಂತರ ನಿಯಮ ಪಾಲಿಸದೇ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ವಾಹನಗಳಿಗೆ ಆರ್‌ಟಿಓ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಮೂರು ಬೇಂದ್ರೆ ನಗರ ಸಾರಿಗೆ ಬಸ್‌ ಗಳು, ಆಟೋ ರಿಕ್ಷಾ, ಮ್ಯಾಕ್ಸಿಕ್ಯಾಬ್ ಹಾಗೂ ಸರಕು ಸಾಗಣೆ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಹುಬ್ಬಳ್ಳಿ- ಧಾರವಾಡ ಪೂರ್ವ ಮತ್ತು ಪಶ್ಚಿಮ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರತ್ಯೇಕವಾಗಿ ಒಟ್ಟು ಒಂಬತ್ತು ಪ್ರಕರಣಗಳನ್ನು ದಾಖಲಿಸಿದ್ದಾರೆ. ವಾಹನಗಳನ್ನು ವಶಪಡಿಸಿಕೊಂಡು ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಹುಬ್ಬಳ್ಳಿ- ಧಾರವಾಡದಲ್ಲಿ ವಾಹನಗಳು ಸರ್ಕಾರದ ಆದೇಶ ಉಲ್ಲಂಘಿಸುತ್ತಿವೆ. ದೈಹಿಕ ಅಂತರ ಮರೆತು ಪ್ರಯಾಣಿಕರನ್ನು ಸಾಗಿಸಲಾಗುತ್ತಿದೆ. ಕೆಲ ವಾಹನಗಳು ಜನರನ್ನು ಅಕ್ಕಪಕ್ಕದಲ್ಲಿಯೇ ಕೂರಿಸಿ ಬಾಡಿಗೆ ಹೊಡೆಯುತ್ತಿವೆ. ಅಧಿಕಾರಿಗಳು ನಿಷ್ಕ್ರಿಯ ವಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.

ಇದನ್ನೂ ಓದಿ : ಕುಕ್ಕರ್ ವಿಚಾರದಲ್ಲಿ ಆಣೆ, ಪ್ರಮಾಣಕ್ಕೆ ಸಿದ್ಧ ; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಸಚಿವ ರಮೇಶ್ ಜಾರಕಿಹೊಳಿ ಸವಾಲ್..!

ಜಿಲ್ಲಾಧಿಕಾರಿಗ ನಿತೇಶ್ ಪಾಟೀಲ ಅವರ ನಿರ್ದೇಶನದ ಮೇರೆಗೆ ಆರ್‌ಟಿಓಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಆರ್‌ಟಿಓ ಅಪ್ಪಯ್ಯ ನಾಲತ್ವಾಡಮಠ ಹಾಗೂ ಸಿ.ಡಿ. ನಾಯಕ್ ಅವರ ನೇತೃತ್ವದಲ್ಲಿ ಅವಳಿ ನಗರದ ವಿವಿದೆಡೆ ಕಾರ್ಯಾಚರಣೆ ಮಾಡಲಾಗಿದೆ. ಕೊರೋನಾ ಮಹಾಮಾರಿ ತೀವ್ರ ಗತಿಯಲ್ಲಿ ಹರಡುತ್ತಿದ್ದರೂ ಸರ್ಕಾರದ ಆದೇಶ ಪಾಲಿಸದೆ ಕಾನೂನು ಉಲ್ಲಂಘಿಸುವವರಿಗೆ ತಕ್ಕ ಪಾಠ ಕಲಿಸಲಾಗಿದೆ.

ಪರಿಹಾರಧನ ಪಡೆಯಲು ಅರ್ಜಿ ವಿಸ್ತರಣೆ  

ಜುಲೈ 31ರೊಳಗೆ ಅರ್ಜಿ ಸಲ್ಲಿಸಲು ಆರ್‌ಟಿಓ ಸೂಚನೆ ನೀಡಿದ್ದಾರೆ. ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ 5000 ರೂಪಾಯಿ ಪರಿಹಾರ ಧನವನ್ನು ಸರ್ಕಾರ ಘೋಷಿಸಿದೆ.‌

ಪರಿಹಾರ ಧನಕ್ಕಾಗಿ ಅರ್ಜಿ ಸಲ್ಲಿಸವ ದಿನಾಂಕವನ್ನು ಜುಲೈ 31 ವಿಸ್ತರಿಸಲಾಗಿದೆ. ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಚಾಲಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಲ್ವತ್ವಾಡಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Published by:G Hareeshkumar
First published: