ಪ್ರಯಾಣಿಕರ ಸುರಕ್ಷತೆಗೆ ಆಟೋಗಳಿಗೆ ಫೈಬರ್ ಪ್ಲಾಸ್ಟಿಕ್ ಕವರ್ ಅಳವಡಿಸಲು ಸೂಚನೆ ; ಗಾಯದ ಮೇಲೆ ಬರೆ ಎಳೆದ ಆರ್​ಟಿಒ

ಆಟೋ ಚಾಲಕರಿಗೆ  ಆರ್.ಟಿ.ಒ. ಅಧಿಕಾರಿಗಳು ಕೊರೋನಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷೆ ಅಂತಾ ಹೊಸ ರೂಲ್ಸ್ ತಂದಿದ್ದಾರೆ. ಇದು ಆಟೋ ಚಾಲಕರಿಗೆ ಮತ್ತು ಮಾಲೀಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶಿವಮೊಗ್ಗ(ಜೂ.05): ಎಲ್ಲಾ ಆಟೋಗಳ ಚಾಲಕರ ಸೀಟಿನ ಹಿಂಬದಿಯಲ್ಲಿ ಈಗ ಪ್ಲಾಸ್ಟಿಕ್ ಕವರ್ ಹಾಕುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ. ಈ ರೀತಿ ಪ್ಲಾಸ್ಟಿಕ್ ಕವರ್ ಹಾಕಲಿಕ್ಕೂ ಒಂದು ಕಾರಣ ಇದೆ. ಈ ಕೊರೊನಾ ಎಂಬ ಮಹಾಮಾರಿ, ಎಲ್ಲಾ ವರ್ಗಗಳಲ್ಲೂ, ಎಲ್ಲಾ ಕ್ಷೇತ್ರಗಳಲ್ಲೂ ಹಲವಾರು ಬದಲಾವಣೆ, ಬಂದಿದೆ. ಅಂತೆಯೇ ಇದೀಗ ಆಟೋ ಚಾಲಕರಿಗೆ  ಆರ್.ಟಿ.ಒ. ಅಧಿಕಾರಿಗಳು ಕೊರೋನಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷೆ ಅಂತಾ ಹೊಸ ರೂಲ್ಸ್ ತಂದಿದ್ದಾರೆ. ಇದು ಆಟೋ ಚಾಲಕರಿಗೆ ಮತ್ತು ಮಾಲೀಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 

ಲಾಕ್ ಡೌನ್ ಸಡಿಲಿಕೆಯಾದ ನಂತರ ನಿಧಾನಗತಿಯಲ್ಲಿ, ಆಟೋಗೆ ಓಡಿಸಲು ಬಾಡಿಗೆ ಮಾಡಲು ಚಾಲನೆ ಸಿಕ್ಕಿದೆ. ಆದರೆ, ಆಟೋಗಳಲ್ಲಿ ಜನರು ಸಂಚಾರ ಮಾಡುವುದು ಈಗ ಕಡಿಮೆಯಾಗಿದೆ. ದುಡಿಮೆ ಇಲ್ಲದ  ಇಂತಹ ಸಂದರ್ಭದಲ್ಲಿ, ಪ್ರಾದೇಶಿಕ ಸಾರಿಗೆ ಇಲಾಖೆ ಚಾಲಕ ಮತ್ತು ಪ್ರಯಾಣಿಕರ ನಡುವೆ ಪ್ಲಾಸ್ಟಿಕ್ ಶೀಟ್ ಹಾಕಲು ಆದೇಶಿಸಿದ್ದಾರೆ. ಆಯ್ತು ಎಂದು ಕೊಂಡು, ಆಟೋ ಚಾಲಕರು 200, 300 ರೂಪಾಯಿ ಖರ್ಚು ಮಾಡಿ ಪ್ಲಾಸ್ಟಿಕ್ ಕವರ್​ ಅಳವಡಿಸಿಕೊಂಡಿದ್ದಾರೆ.

ಆಟೋಗಳನ್ನು ಎಫ್.ಸಿ. ಕ್ಲಿಯರೆನ್ಸ್ ಮಾಡಿಸಲು ಆರ್ ಟಿ ಓ ಕಚೇರಿಗೆ ತೆರಳಿದರೆ, ಆಗ ಅಧಿಕಾರಿಗಳು ಫೈಬರ್ ಪ್ಲಾಸ್ಟಿಕ್ ಅಳವಡಿಸಿಕೊಳ್ಳಿ ಅಂತಾ ಹೇಳುತ್ತಿದ್ದಾರಂತೆ. ಇಲ್ಲದೇ ಹೋದರೆ ಎಫ್ ಸಿ ಮಾಡುವುದಿಲ್ಲ ಎಂದು ಹೇಳಿ ಹೇಳಿ ಕಳುಹಿಸುತ್ತಿದ್ದಾರಂತೆ. ಫೈಬರ್ ಪ್ಲಾಸ್ಟಿಕ್ ಅಳವಡಿಸಲು ಒಂದುವರೆಯಿಂದ, ಎರಡು ಸಾವಿರ ರೂ. ವರೆಗೆ ಖರ್ಚು ಆಗಲಿದೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಅದು ಆಟೋ ಚಾಲಕರಿಗೆ ಕಷ್ಟ ಸಾಧ್ಯವಾಗಿದೆ.

ಕಳೆದೆರೆಡು ತಿಂಗಳಿನಿಂದ ಆಟೋ ಬಾಡಿಗೆ ಇಲ್ಲದೇ, ಆಟೋ ಚಾಲಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.ಲಾಕ್ ಡೌನ್ ಸಂದರ್ಭದಲ್ಲಿ, ತುತ್ತು ಅನ್ನಕ್ಕೂ ಪರಿತಪಿಸುವಂತಹ ಪರಿಸ್ಥಿತಿ ಇತ್ತು. ಸರ್ಕಾರದಿಂದ ಏನಾದರೂ ಸಹಾಯ ಸಿಗುತ್ತಾ ಎಂಬ ನಿರೀಕ್ಷೆಯಲ್ಲಿ ಆಟೋ ಚಾಲಕರು ಇದ್ದರು. ಲಾಕ್ ಡೌನ್ ನಿಂದಾಗಿ ಮನೆ ಬಿಟ್ಟು ಹೊರಗೆ ಬಾರದ ಪರಿಸ್ಥಿತಿ ನಡುವೆ ಆಟೋ ಬಾಡಿಗೆಗೆ ಜನರು ಬಾರದೇ, ಆಟೋ ಚಾಲಕರ ಕುಟುಂಬ ನಲುಗಿ ಹೋಗಿತ್ತು. ಈಗಲೂ ಕೂಡ ಹೇಳಿಕೊಳ್ಳುವಷ್ಟು ಬಾಡಿಗೆ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ, ಆರ್.ಟಿ.ಒ. ಇಲಾಖೆ ಅಧಿಕಾರಿಗಳು, ಹೊಸ ರೂಲ್ಸ್ ಜಾರಿಗೆ ತಂದಿದ್ದು,ಗಾಯದ ಮೇಲೆ ಬರೆ ಎಳೆದಂತಾಗಿದೆ.

ನಮಗೆ ಸಿಗುವ ಪ್ಲಾಸ್ಟಿಕ್ ನ್ನು ಬಳಸಿಕೊಂಡು, ಪ್ರಯಾಣಿಕರು ಕಾಣುವ ಹಾಗೆ ಪ್ಲಾಸ್ಟಿಕ್ ಕವರ್ ಅಳವಡಿಸಿಕೊಳ್ಳುತ್ತೇವೆ ಇದಕ್ಕೆ ಅಧಿಕಾರಿಗಳು ಅನುಮತಿ ನೀಡಬೇಕು, ನಮ್ಮ ಕಷ್ಟ ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಧಾರಾವಿ ಸ್ವರೂಪ ಪಡೆಯುವ ಆತಂಕದಲ್ಲಿ ರಾಗಿಗುಡ್ಡ ; ಸ್ಲಂ ಪ್ರದೇಶ ಸಂಪೂರ್ಣ ಸೀಲ್ ಡೌನ್

ಒಂದೆಡೆ, ಸರ್ಕಾರದ 5 ಸಾವಿರ ಪರಿಹಾರದ ಹಣ ಇನ್ನು ಆಟೋ ಚಾಲಕರಿಗೆ ಸಿಕ್ಕಿಲ್ಲ. ಇದರ ನಡುವೆ ಈ ಫೈಬರ್ ಪ್ಲಾಸ್ಟಿಕ್ ಕವರ್ ಅಳವಡಿಸಿ ಎನ್ನುತ್ತಿರುವುದು ಹೊಸ ತಲೆ ನೋವಾಗಿ ಪರಿಣಮಿಸಿದೆ. ಸರ್ಕಾರದ ಆಟೋ ಚಾಲಕರ ಸಹಾಯಕ್ಕೆ ಬರಬೇಕಿದೆ.
First published: