HOME » NEWS » District » RTI ACTIVIST BHIMAPPA GADADA URGES POLICE TO FILE CASE AGAINST AMIT SHAH AND OTHERS CSB SNVS

ಅಮಿತ್ ಷಾ, ಸಿಎಂ, ಸಚಿವರ ವಿರುದ್ಧ ಕೇಸ್ ದಾಖಲಿಸಿ: ಆರ್​ಟಿಐ ಕಾರ್ಯಕರ್ತ ಭೀಮಪ್ಪ ಆಗ್ರಹ

ಬೆಳಗಾವಿಯಲ್ಲಿ ನಡೆದ ಜನಸೇವಕ ಸಮಾವೇಶದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಅಮಿತ್ ಶಾ, ಯಡಿಯೂರಪ್ಪ ಹಾಗೂ ಇತರ ಸಚಿವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆರ್​ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

news18-kannada
Updated:January 20, 2021, 3:56 PM IST
ಅಮಿತ್ ಷಾ, ಸಿಎಂ, ಸಚಿವರ ವಿರುದ್ಧ ಕೇಸ್ ದಾಖಲಿಸಿ: ಆರ್​ಟಿಐ ಕಾರ್ಯಕರ್ತ ಭೀಮಪ್ಪ ಆಗ್ರಹ
ಕೇಂದ್ರ ಸಚಿವ ಅಮಿತ್​ ಶಾ
  • Share this:
ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಸಿಎಂ ಯಡಿಯೂರಪ್ಪ ಸೇರಿ ಡಿಸಿಎಂ, ಸಚಿವರ ವಿರುದ್ಧ FIR ದಾಖಲಿಸಲು ದೂರು ನೀಡಲಾಗಿದೆ. ಬೆಳಗಾವಿಯಲ್ಲಿ ನಡೆದ ಜನಸೇವಕ ಸಮಾವೇಶದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದಕ್ಕೆ ಪ್ರಕರಣ ದಾಖಲಿಸುವಂತೆ ಆರ.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ ದೂರು ನೀಡಿದ್ದಾರೆ. ಒಂದು ವೇಳೆ ಕೇಸ್ ದಾಖಲಿಸದಿದ್ದರೆ ಸರ್ಕಾರದ ಮುಖ್ಯಕಾರ್ಯದರ್ಶಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ವಿರುದ್ಧ PIL ದಾಖಲಿಸುವ ಎಚ್ಚರಿಕೆಯನ್ನ ಗಡಾದ ನೀಡಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್19 ನಿಯಮಗಳನ್ನ ಜಾರಿಗೊಳಿಸಿದೆ. ಆದ್ರೆ ಸರ್ಕಾರ ಮಾಡಿರುವ ನಿಯಮಗಳನ್ನ ಸರ್ಕಾರದ ಪ್ರತಿಧಿನಿಗಳೇ ಗಾಳಿಗೆ ತೂರಿವೆ. ಮೊನ್ನೆ ಕುಂದಾನಗರಿ ಬೆಳಗಾವಿ ಜಿಲ್ಲಾಕ್ರೀಡಾಂಗಣದಲ್ಲಿ ಬಿಜೆಪಿ ಪಕ್ಷದ ಜನಸೇವಕ ಸಮಾವೇಶದ ಸಮಾರೋಪ ನಡೆಯಿತು. ಈ ಕಾರ್ಯಕ್ರಮ ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ, ಸಿಎಂ ಯಡಿಯೂರಪ್ಪ, ಡಿಸಿಎಂ, ಸಚಿವರು, ಸಂಸದರು, ಶಾಸಕರು ಭಾಗವಹಿಸಿದ್ದರು.

ಸಮಾವೇಶದಲ್ಲಿ ಒಂದೂವರೆ ಲಕ್ಷ ಜನರು ಭಾಗವಹಿಸಿದ್ದರು. ಈ ಜನಸೇವಕ ಸಮಾವೇಶದಲ್ಲಿ ಕೋವಿಡ್ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ. ಸರ್ಕಾರದ ಪ್ರತಿನಿಧಿಗಳೇ ಮಾಸ್ಕ್ ಧರಿಸಿಲ್ಲ, ಕೋವಿಡ್ ನಿಯಮದಂತೆ 200ಕ್ಕೂ ಅಧಿಕ ಜನರನ್ನ ಸೇರಿಸುವಂತಿಲ್ಲ. ಸಾಮಾಜಿಕ ಅಂತರ ಅಂತೂ ಇಲ್ಲದೇ ಸಮಾವೇಶ ನಡೆಸಲಾಗಿದೆ. ಹೀಗಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು, ಕಾರ್ಯಕ್ರಮ ಆಯೋಜಕರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿ ಕೇಸ್ ದಾಖಲಿಸುವಂತೆ ಆರ.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ ಸರ್ಕಾರದ ಮುಖ್ಯಕಾರ್ಯದರ್ಶಿ ಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ವಿನಾಃಕಾರಣ ಕಾಂಗ್ರೆಸ್​ ಕೃಷಿ ಕಾಯ್ದೆಯನ್ನು ವಿರೋಧಿಸುತ್ತಿದೆ, ಸುಳ್ಳು ಹೇಳುತ್ತಿದೆ; ಕೈ ಜಾಥಾ ವಿರುದ್ಧ ರಾಮುಲು ಕಿಡಿ

ಜನವರಿ 17 ರಂದು ನಡೆದ ಸಮಾವೇಶ ಕ್ಕೆ ಅನುಮತಿ ನೀಡದಂತೆ ಭೀಮಪ್ಪ ಗಡಾದ ಜಿಲ್ಲಾಡಳಿತ ಕ್ಕೆ ದೂರು ನೀಡಿದ್ರು. ಕೋವಿಡ್ ನಿಯಮಗಳನ್ನು ಪಾಲಿಸಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪ್ರತಿನಿಧಿಗಳೇ ನಿಯಮಗಳನ್ನ ಗಾಳಿಗೆ ತೂರಿದ್ದಾರೆ. ಮದುವೆ, ಸಭೆ, ಸಮಾರಂಭದಲ್ಲಿ 200 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನ ಸೇರಿಸುವಂತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕು. ಆದ್ರೆ ಜನಸೇವಕ ಸಮಾವೇಶದಲ್ಲಿ ಇದ್ಯಾವುದು ಪಾಲನೆ ಆಗಿಲ್ಲ. ಹೀಗಾಗಿ ಕೋವಿಡ್ ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕರ ವಿರುದ್ಧ ಕೇಸ್ ದಾಖಲಿಸದಿದ್ದರೆ ಹೈಕೋರ್ಟ್​ನಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಮೇಲೆ PIL ದಾಖಲಿಸುವುದಾಗಿ ಭೀಮಪ್ಪ ಗಡಾದ ಎಚ್ಚರಿಕೆ ನೀಡಿದ್ದಾರೆ.

ವರದಿ: ಚಂದ್ರಕಾಂತ ಸುಗಂಧಿ
Published by: Vijayasarthy SN
First published: January 20, 2021, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories