ಶ್ರೀರಂಗಪಟ್ಟಣದ ಬಳಿ ರೌಡಿಶೀಟರ್ ಕಳ್ಳಪಚ್ಚಿ ಹರೀಶ್​ನನ್ನು ಬರ್ಬರವಾಗಿ ಕೊಲೆ ಮಾಡಿದ್ದ 6 ಜನ ಆರೋಪಿಗಳ ಬಂಧನ

ಕೊಲೆಯಾದ ರೌಡಿಶೀಟರ್ ಹರೀಶನ ಬರ್ಬ ರ ಸಾವಿಗೆ ಹಳೇ ವೈಯಕ್ತಿಕ ದ್ವೇಷವೇ ಕಾರಣವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಶ್ರೀರಂಗಪಟ್ಟಣ ವೃತ್ತದ ಡಿವೈಎಸ್​ಪಿ ಅರುಣ್ ನಾಗೇಗೌಡರ ತಂಡ ಕಡೆಗೂ ಪ್ರಕರಣ ಬೇಧಿಸಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದು, ಶ್ರೀರಂಗಪಟ್ಟಣ ಪೊಲೀಸರ ಕಾರ್ಯಕ್ಕೆ ಎಸ್ಪಿ ಪರಶುರಾಮ್ ಪ್ರಶಂಸೆ ವ್ಯಕ್ತಪಡಿಸಿ, ನಗದು ಬಹುಮಾನ ನೀಡಿದ್ದಾರೆ‌.

ಬಂಧಿತ ಕೊಲೆ ಆರೋಪಿಗಳು.

ಬಂಧಿತ ಕೊಲೆ ಆರೋಪಿಗಳು.

  • Share this:
ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ಅ.22 ರಂದು ರೌಡಿ ಶೀಟರ್ ನ ಬರ್ಬರ ಹತ್ಯೆ ನಡೆದಿತ್ತು. ಪಾಲಹಳ್ಳಿ ರೌಡಿ ಶೀಟರ್ ಕಳ್ಳಪಚ್ಚಿ ಹರೀಶ್ ನನ್ನು ದುಷ್ಕರ್ಮಿಗಳ ತಂಡವೊಂದು ಬರ್ಬ ರವಾಗಿ ಕೊಲೆಗೈದು ಪರಾರಿಯಾಗಿತ್ತು. ಈ ಹತ್ಯೆ ಪ್ರಕ ರಣಕ್ಕೆ ಸಂಬಂಧಪಟ್ಟಂತೆ ಶ್ರೀರಂಗಪಟ್ಟಣ ಪೊಲೀಸ ರು ತನಿಖೆ ನಡೆಸಿ ಇದೀಗ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಹೌದು! ಅ.22 ರ ರಾತ್ರಿ ಪಶ್ಚಿಮವಾಹಿನಿ ಬಳಿ ಕಾರಿನಲ್ಲಿ ಪಾಲಹಳ್ಳಿಯ ತನ್ನ ನಿವಾಸಕ್ಕೆ ಹೋಗುತ್ತಿದ್ದ  ರೌಡಿ ಶೀಟರ್ ಹರೀಶ್  ಬರ್ಬರವಾಗಿ ಹತ್ಯೆಯಾಗಿದ್ದ. ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಹರೀಶ್ ಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು. ರಾತ್ರಿ ರಸ್ತೆ ಬದಿ ನಡೆದ ಬರ್ಬರ ಹತ್ಯೆಗೆ ಜಿಲ್ಲೆಯ ಜನರು ಬೆಚ್ಚಿ ಬಿದಿದ್ದರು. ಭೀಕರವಾಗಿ ಕೊಲೆಯಾದ ರೌಡಿಶೀಟರ್  ಹರೀಶ್ ಸಾವು ಪೊಲೀಸ್ ಇಲಾಖೆಗೆ ತಲೆನೋವಾಗಿತ್ತು. ಪ್ರಕರಣದ ತನಿಖೆ ನಡೆಸಿದ ಶ್ರೀರಂಗಪಟ್ಟಣ ಪೊಲೀಸರು ಕಡೆಗೂ ಪ್ರಕರಣ ಬೇಧಿಸುವಲ್ಲಿ ಸಫಲರಾಗಿದ್ದಾರೆ. ಕೊಲೆ ಮಾಡಿ ಮಂಡ್ಯ ಬಳಿಯ ಆಲೆಮನೆಯೊಂದರಲ್ಲಿ ತಲೆ ಮರೆಸಿಕೊಂಡಿದ್ದ 6 ಜನ ಕೊಲೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನದ ವಶಕ್ಕೆ ಒಪ್ಪಿಸಿದ್ದಾರೆ.

ಇದನ್ನು ಓದಿ: ರೈತರು ಆತ್ಮಹತ್ಯೆ ದಾರಿ ತುಳಿಯದಂತೆ ಆರಂಭದಲ್ಲೇ ಸರಕಾರ ಎಚ್ಚೆತ್ತು ವಿಶೇಷ ಪ್ಯಾಕೇಜ್ ಘೋಷಿಸಲಿ; ಎಚ್​ಡಿಕೆ ಆಗ್ರಹ

ಪ್ರಕರಣದಲ್ಲಿ ಶ್ರೀರಂಗಪಟ್ಟಣದ ಭರತ್ ಕುಮಾರ್, ಸತ್ಯ ನಾರಾಯಣ, ಗಂಜಾಂನ ರಕ್ಷಿತ್, ಇಬ್ರಾಹಿಂ ಹಾಗು ಮೈಸೂರು ತಾಲೂಕಿನ ಸಿದ್ದಲಿಂಗಪುರದ ದರ್ಶನ್ ಮತ್ತು ಧರ್ಮ ರತ್ನಾಕರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಹಳೇ ದ್ವೇಷವೇ ಕಾರಣವೆಂದು ಹೇಳಲಾಗಿದೆ. ಹತ್ಯೆಯಾದ ರೌಡಿಶೀಟರ್  ಹರೀಶ್ ಮತ್ತು ಆರೋಪಿಗಳ‌ ನಡುವೆ ಒಂದು ತಿಂಗಳ‌ ಹಿಂದೆ ಗಲಾಟೆ ನಡೆದಿತ್ತು. ಇದಕ್ಕಾಗಿ ಸಮಯ ಸಾಧಿಸಿ ಕೃತ್ಯ ಎಸಗಿರೋದಾಗಿ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದಾರೆ. ಇನ್ನು ಪೊಲೀಸರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ, 1ಮಾರುತಿ ಓಮ್ನಿ‌ ಕಾರು, 8 ಮೊಬೈಲ್ ಗಳು  ಹಾಗೂ  2  ಬೈಕ್ ವಶಪಡಿಸಿಕೊಂಡಿದ್ದಾರೆ.

ಒಟ್ಟಾರೆ ಕೊಲೆಯಾದ ರೌಡಿಶೀಟರ್ ಹರೀಶನ ಬರ್ಬ ರ ಸಾವಿಗೆ ಹಳೇ ವೈಯಕ್ತಿಕ ದ್ವೇಷವೇ ಕಾರಣವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಶ್ರೀರಂಗಪಟ್ಟಣ ವೃತ್ತದ ಡಿವೈಎಸ್​ಪಿ ಅರುಣ್ ನಾಗೇಗೌಡರ ತಂಡ ಕಡೆಗೂ ಪ್ರಕರಣ ಬೇಧಿಸಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದು, ಶ್ರೀರಂಗಪಟ್ಟಣ ಪೊಲೀಸರ ಕಾರ್ಯಕ್ಕೆ ಎಸ್ಪಿ ಪರಶುರಾಮ್ ಪ್ರಶಂಸೆ ವ್ಯಕ್ತಪಡಿಸಿ, ನಗದು ಬಹುಮಾನ ನೀಡಿದ್ದಾರೆ‌.
Published by:HR Ramesh
First published: