ಆನೇಕಲ್(ಅಕ್ಟೋಬರ್. 21): ಇಡೀ ವಿಶ್ವಕ್ಕೆ ಹೆಮ್ಮಾರಿಯಾಗಿ ಬಿಟ್ಟು ಬಿಡದೆ ಕಾಡುತ್ತಿರುವ ಕೊರೋನಾ ಸದ್ಯಕ್ಕೆ ಶಮನವಾಗುವಂತೆ ಕಾಣುತ್ತಿಲ್ಲ. ಸದ್ಯಕ್ಕೆ ಕೃಷಿ, ಕೈಗಾರಿಕೆ ಸೇರಿದಂತೆ ಉತ್ಪಾದನಾ ಕ್ಷೇತ್ರಗಳು ಚೇತರಿಸಿಕೊಳ್ಳಲು ಇನ್ನಷ್ಟು ದಿನ ಬೇಕಾಗಬಹುದು. ಹಾಗಾಗಿ ಗುಲಾಬಿ ಅರಳುವ ನಿರೀಕ್ಷೆಯಲ್ಲಿದ್ದ ಗುಲಾಬಿ ಬೆಳೆಗಾರರು ಕೈ ಚೆಲ್ಲಿ ಕೂರುವಂತಾಗಿದೆ. ಬೆಂಗಳೂರು ಹೊರ ವಲಯ ಆನೇಕಲ್ ತಾಲೂಕಿನ ಮಾಯಸಂದ್ರ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಗುಲಾಬಿ ಕೃಷಿಯಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ಸುಮಾ 600 ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಗುಲಾಬಿ ಹೂ ಬೆಳೆಯಲಾಗುತ್ತಿದೆ. ಗುಣ ಮಟ್ಟಕ್ಕೆ ಹೆಸರು ವಾಸಿಯಾದ ಇಲ್ಲಿನ ಹೂ ತಮಿಳುನಾಡಿನ ಚೆನ್ನೈ ಮತ್ತು ತಿರುಚ್ಚಿ ಹೂ ಮಾರುಕಟ್ಟೆಗೆ ಪಾರ್ಸಲ್ ಹೋಗುತ್ತಿತ್ತು. ಆದರೆ, ಕೊರೋನಾ ಕಾಲಿಟ್ಟ ಮೇಲೆ ಗುಲಾಬಿ ಹೂವು ಮಾರುಕಟ್ಟೆ ಕೆಳಗೆ ಬಿದ್ದದ್ದು ಇಲ್ಲಿಯವರೆಗೆ ಚೇತರಿಸಿಕೊಳ್ಳಲೇ ಇಲ್ಲ. ಗುಲಾಬಿ ಅರಳುತ್ತದೆ ಬದುಕು ಹಸನಾಗುತ್ತದೆ ಎಂದುಕೊಂಡಿದ್ದ ರೈತರು ನಿರಾಸೆಯಲ್ಲಿಯೇ ದಿನ ದೂಡುವಂತಾಗಿದೆ.
ಇನ್ನೂ ಗುಲಾಬಿ ಹೂವು ಮಾರುಕಟ್ಟೆ ಚೇತರಿಕೆ ಕಾಣದ ಹಿನ್ನೆಲೆ ರೈತರಿಗೆ ನಷ್ಟ ಉಂಟಾಗುತ್ತಿದೆ. ಗುಲಾಬಿ ತೋಟಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರಿಗು ಕೆಲಸ ಇಲ್ಲದಂತಾಗಿದೆ. ಮಾರುಕಟ್ಟೆಯಲ್ಲಿ ಗುಲಾಬಿ ಹೂವಿನ ಬೇಡಿಕೆ ಇಲ್ಲದೆ ಇರುವುದರಿಂದ ಕೇಳುವವರು ಇಲ್ಲ. ಹಾಗಾಗಿ ಗುಲಾಬಿ ಹೂವುಗಳ ಗಿಡಗಳ ನಿರ್ವಹಣೆ ಮಾಡಲು ಕಟಾವಿಗೆ ಬಂದ ಗುಲಾಬಿ ಹೂವನ್ನು ಕಿತ್ತೆಸೆಯಲಾಗುತ್ತಿದೆ.
ಇದನ್ನೂ ಓದಿ : ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಸಿದ್ದರಾಮಯ್ಯ; ಬೆಂಬಲ ನೀಡಿದ ಜಮೀರ್ ಅಹ್ಮದ್
ಒಂದು ಎಕರೆ ಪ್ರದೇಶದಲ್ಲಿ ಗುಲಾಬಿ ಹೂವಿನ ಗಿಡ ಬೆಳೆಸಲು ಎರಡು ಲಕ್ಷ ಬಂಡವಾಳ ಹೂಡಿದ್ದು, ಅಸಲು ಸಹ ವಾಪಸ್ ಬರದಾಗಿದೆ. ಗುಲಾಬಿ ಮಾರುಕಟ್ಟೆ ಚೇತರಿಕೊಳ್ಳುವ ನಿರೀಕ್ಷೆ ಸದ್ಯಕ್ಕೆ ಹುಸಿಯಾಗಿದೆ ಎಂದು ಗುಲಾಬಿ ಹೂವು ಬೆಳೆಗಾರ ಕಿರಣ್ ಬೇಸರ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ