HOME » NEWS » District » ROCK GARDEN NEGLECT BY UTTARA KANNADA DISTRICT ADMINISTRATION HK

ಕೊರೋನಾದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನರ ಬವಣೆ ; ಹಾಳು ಕೊಂಪೆಯಾಗಿ ಮಾರ್ಪಟ್ಟ ರಾಕ್ ಗಾರ್ಡನ್

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ ಇಲ್ಲಿನ ಬುಡಕಟ್ಟು ಸಮೂದಾಯವರ ಇತಿಹಾಸ ತಿಳಿಯಲು ಇದು ನಿರ್ಮಾಣ ಮಾಡಲಾಗಿತ್ತು, ಆದರೆ, ಈಗ ಈ ರಾಕ್ ಗಾರ್ಡನ್ ಕಳೆದ ಆರು ತಿಂಗಳಿಂದ ನಿರ್ವಹಣೆ ಇಲ್ಲದೆ ಹಾಳು ಕೊಂಪೆ ಆಗಿದೆ

news18-kannada
Updated:September 24, 2020, 7:18 AM IST
ಕೊರೋನಾದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನರ ಬವಣೆ ; ಹಾಳು ಕೊಂಪೆಯಾಗಿ ಮಾರ್ಪಟ್ಟ ರಾಕ್ ಗಾರ್ಡನ್
ರಾಕ್​​ ಗಾರ್ಡನ್​​
  • Share this:
ಕಾರವಾರ(ಸೆಪ್ಟೆಂಬರ್​. 24): ಕೊರೋನಾ ಮಾಹಾಮಾರಿ ನಿಯಂತ್ರಣಕ್ಕೆ ಆದ ಲಾಕ್ ಡೌನ್ ನಲ್ಲಿ ವಾಸ್ಥವವಾಗಿ ಎಲ್ಲ ಸಮೂದಾಯದವರು ಆರ್ಥಿಕ ಸಂಕಷ್ಟ ಅನುಭವಿಸಿದ್ದಾರೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನಾಂಗದವರ ಸ್ಥಿತಿ ಅಂತೂ ಹೇಳ ತೀರದ್ದಾಗಿತ್ತು, ಹಾಗೆ ಅವರ ಜೀವನ ಶೈಲಿಯ ಇತಿಹಾಸ ಹೇಳುವ ನಿಟ್ಟಿನಲ್ಲಿ ಕಾರವಾರದಲ್ಲಿ ನಿರ್ಮಾಣವಾದ ರಾಕ್ ಗಾರ್ಡನ್ ಕೂಡಾ ಈಗ ನಿರ್ವಹಣೆ ಇಲ್ಲದೆ ಹಾಳು ಕೊಂಪೆ ಆಗಿದೆ. ಕರ್ನಾಟಕದ ಕಾಶ್ಮೀರ ಕಾರವಾರ ರವೀಂದ್ರನಾಥ ಕಡಲ ತೀರದಲ್ಲಿ ಎರಡು ಎಕರೆ ಜಾಗದಲ್ಲಿ ನಿರ್ಮಾಣವಾದ ರಾಕ್ ಗಾರ್ಡನ್ ಲಾಕ್ ಡೌನ್ ಆಗಿದೆ. ಕಳೆದ ಆರು ತಿಂಗಳಿಂದ ಲಾಕ್ ಡೌನ್ ಸಮಯದಲ್ಲಿ ಲಾಕ್ ಆಗಿ ಪ್ರವಾಸಿಗರಿಂದ ದೂರ ಸರಿದಿದ್ದ ರಾಕ್ ಗಾರ್ಡನ್ ಲಾಕ್ ಡೌನ್ ಸಡಿಲಿಕೆ ಆದರೂ ಪ್ರವಾಸಿಗರಿಗೆ ಮುಕ್ತ ವಿಕ್ಷಣೆಗೆ ಅವಕಾಶ ಸಿಕ್ಕಿಲ್ಲ. ಜಿಲ್ಲೆಯ ಬುಡಕಟ್ಟು ಜನಾಂಗಗಳಾದ ಸಿದ್ದಿ, ಗೌಳಿ, ಹಾಲಕ್ಕಿ ಗೌಡಾ, ಕುಣಬಿ, ಗೊಂಡ, ಸಮೂದಾಯದ ಜೀವನ ಶೈಲಿಯ ತೋರ್ಪಡಿಸಲು ಅವರ ಜೀವನ ಶೈಲಿಯಲ್ಲೆ ಸಿಮೆಂಟ್ ನಿಂದ ಕಲಾಕೃತಿಯನ್ನ ನಿರ್ಮಾಣ ಮಾಡಲಾಗಿತ್ತು.

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ ಇಲ್ಲಿನ ಬುಡಕಟ್ಟು ಸಮೂದಾಯವರ ಇತಿಹಾಸ ತಿಳಿಯಲು ಇದು ನಿರ್ಮಾಣ ಮಾಡಲಾಗಿತ್ತು, ಆದರೆ, ಈಗ ಈ ರಾಕ್ ಗಾರ್ಡನ್ ಕಳೆದ ಆರು ತಿಂಗಳಿಂದ ನಿರ್ವಹಣೆ ಇಲ್ಲದೆ ಹಾಳು ಕೊಂಪೆ ಆಗಿದೆ. ಸುತ್ತಲು ಉಪಯೋಗಕ್ಕೆ ಬಾರದ ಗಿಡಗಂಟಿಗಳು ಬೆಳೆದು ನಿಂತು ಕಲಾಕೃತಿಗಳು ಕಾಣದಂತಾಗಿದೆ. ಇಲ್ಲಿ ನಿರ್ಮಾಣ ಮಾಡಲಾದ ಶೆಡ್ ಗಳು ನಿರ್ವಹಣೆ ಇಲ್ಲದೆ ಹಾಳಾಗಿದೆ. ಈ ಬಗ್ಗೆ ಜಿಲ್ಲೆಯ ಜನರು ಖೇದ ವ್ಯಕ್ತಪಡಿಸಿದ್ರೆ ಅಧಿಕಾರಿಗಳು ಮುಂದಿನ ದಿನದಲ್ಲಿ ಸೂಕ್ತ ನಿರ್ವಹಣೆ ಮಾಡಿ ಪ್ರವಾಸಿಗರಿಗೆ ಮುಕ್ತ ಅವಕಾಶ ನೀಡಲಾಗುತ್ತದೆ ಎನ್ನುತ್ತಾರೆ.

ಸಮಸ್ಯೆ ಏನು?

ರಾಕ್ ಗಾರ್ಡನ್ ಕೇವಲ ಉತ್ತರ ಕನ್ನಡ ಜಿಲ್ಲೆಯಷ್ಟೆ ಅಲ್ಲ, ರಾಜ್ಯದ ಮೂಲೆ ಮೂಲೆಗಳಲ್ಲಿರುವ ಪ್ರವಾಸಿಗರನ್ನ ಸೆಳೆದ ಪ್ರವಾಸಿ ತಾಣ. ಕೇವಲ ರಾಜ್ಯ ಅಷ್ಟೆ ಅಲ್ಲದೆ ಹೊರ ರಾಜ್ಯದಿಂದಲೂ ಪ್ರವಾಸಿಗರು ಆಗಮಿಸಿ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನರ ಜೀವನ ಶೈಲಿಯ ಅನಾವರಣವನ್ನು ನೋಡಿ ಮಾಹಿತಿ ತಿಳಿದುಕೊಂಡು ಹೋಗುತ್ತಿದ್ದರು. ಆದರೆ, ಕೊರೋನಾ ಮಾಹಾಮಾರಿ ಇವೆಲ್ಲವನ್ನ ನಿಯಂತ್ರಿಸಿ  ಜನರ ಮೋಜು ಮಸ್ತಿಯನ್ನೆ ಕಸಿದುಕೊಂಡಿತ್ತು. ಈಗ ರಾಕ್ ಗಾರ್ಡನ್ ಬಂದ್ ಆಗಿ ಬರೋಬ್ಬರಿ ಆರು ತಿಂಗಳು ಕಳೆದಿದೆ. ಈ‌ ನಡುವೆ ಈ ರಾಕ್ ಗಾರ್ಡನ್ ಕಡೆ ತಲೆ ಹಾಕಿಯೂ‌ ಮಲಗದ ಆಡಳಿತ ವ್ಯವಸ್ಥೆ ಇದರ ಕೆಟ್ಟ ಸ್ಥಿತಿಗೆ ಕಾರಣರಾಗಿದ್ದಾರೆ. ನಿರ್ವಹಣೆ ಮಾಡಲು ಸಿಬ್ಬಂದಿಯ ಕೊರತೆಯೂ ಇದ್ದದ್ದು ಪ್ರವಾಸಿಗರ ಅಚ್ಚು ಮೆಚ್ಚಿನ ತಾಣ ಈಗ ಲಾಕ್ ಡೌನ್ ಗೆ ಸಿಲುಕಿ ಹಾಳು ಕೊಂಪೆ ಆಗಿದೆ.

ಹಣ ಇಲ್ಲ, ನಿರ್ವಹಣೆ ಮಾಡಲು ಸಿಬ್ಬಂದಿ ಕೊರತೆ

ಈಗಾಗಲೆ ರಾಕ್ ಗಾರ್ಡನ್ ನಿರ್ವಹಣೆ ಮಾಡಲು ಜಿಲ್ಲಾಡಳಿತದಲ್ಲಿ ಪ್ರತ್ಯೇಕ ಹಣ ಇಲ್ಲ. ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ‌ ಆಗಿ ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿದೆ. ಈ‌ ನಡುವೆ ರಾಕ್ ಗಾರ್ಡನ್ ತೆರೆದು ಪ್ರವಾಸಿಗರಿಗೆ ಮುಕ್ತ ಅವಕಾಶ ನೀಡಿದ್ರೆ ಬಂದ ಹಣದಿಂದ ‌ನಿರ್ವಹಣೆ ಆದರು ಮಾಡಬಹುದಿತ್ತು ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯ.

ಇದನ್ನೂ ಓದಿ : ಕುಖ್ಯಾತ ಮಟ್ಕಾ ಬುಕ್ಕಿ ಸೇರಿ 23 ಜನರ ಬಂಧನ ; ಬೆಳಗಾವಿ ಡಿಸಿಪಿ ನೇತೃತ್ವದಲ್ಲಿ ನಡೆದ ಮಿಂಚಿನ ಕಾರ್ಯಾಚರಣೆಆದರೆ, ಜಿಲ್ಲಾಡಳಿತ ರಾಕ್ ಗಾರ್ಡನ್ ತೆರೆಯಲು ಮನಸ್ಸು ಮಾಡುತ್ತಿಲ್ಲ, ಜೊತೆಗೆ ಇದರ ನಿರ್ವಹಣೆಯನ್ನು ಮಾಡದೆ ಎಲ್ಲ ಕಲಾಕೃತಿಗಳು ಮತ್ತು ಶೆಡ್ ಗಳು ಹಾಳಾಗುತ್ತಿವೆ. ಮುಂದೆ ರಾಕ್ ಗಾರ್ಡನ್ ತೆರೆಯಬೇಕು ಎಂದು ನಿರ್ಧರಿಸಿದ ಸಂದರ್ಭದಲ್ಲಿ ರಾಕ್ ಗಾರ್ಡನ್ ಸ್ವಚ್ಛ ಮಾಡಿ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿ ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಹರೀಶ್ ಕುಮಾರ್ ಹೇಳುತ್ತಾರೆ.

ರಾಕ್ ಗಾರ್ಡನ್ ಇನ್ನು ಎಷ್ಟು ದಿನ ತೆರೆಯದೆ ಹಾಳು ಕೊಂಪೆ ಆಗಿರಲಿದೆ ಅಂತಿದ್ದಾರೆ ಇಲ್ಲಿನ ಜನ. ಪ್ರವಾಸೋದ್ಯಮ ಚೇತರಿಕೆ ಕಾಣಲು ಇವೆಲ್ಲ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದ್ರೆ ಬರುವ ಪ್ರವಾಸಿಗರಿಗು ಸಹಕಾರಿ ಆಗಲಿದೆ. ಪ್ರವಾಸಿಗರಿಗೆ ಅವಕಾಶ ನೀಡದಿದ್ದರೂ ಪರವಾಗಿಲ್ಲ ಕನಿಷ್ಟ ಪಕ್ಷ ರಾಕ್ ಗಾರ್ಡನ್ ನಿರ್ವಹಣೆ ಆದರು ಸಮರ್ಪಕವಾಗಿ ಮಾಡಲಿ ಎಂಬ ಆಗ್ರಹ ಸ್ಥಳೀಯರದ್ದಾಗಿದೆ.
Published by: G Hareeshkumar
First published: September 24, 2020, 7:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading