ಚಾಮರಾಜನಗರ (ಮಾ.4): ಗುಂಡ್ಲುಪೇಟೆ (Gundlupet) ತಾಲೂಕಿನ ಮಡಹಳ್ಳಿ ಬಳಿಯ ಗುಮ್ಮಕಲ್ಲು ಗುಡ್ಡದಲ್ಲಿ ಗಣಿಗಾರಿಕೆ (Mining) ನಡೆಯುತ್ತಿದ್ದ ವೇಳೆ ಬಂಡೆ ಕುಸಿದಿದ್ದು ಟಿಪ್ಪರ್ ಮೇಲೆ ಬಂಡೆಗಳು ಬಿದ್ದಿವೆ. ಬಂಡೆಯಡಿ ಹಲವು ಕಾರ್ಮಿಕರು (Workers) ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಚರಣೆ ಶುರು ಮಾಡಿದ್ದು, ಯಾವುದೇ ಸಾವಿನ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಗುಂಡ್ಲುಪೇಟೆ ತಾಲೂಕು ಬೊಮ್ಮಲಾಪುರ ಗ್ರಾಮದ ಮಹೇಂದ್ರಪ್ಪ ಎಂಬುವವರ ಜಾಗದಲ್ಲಿ ಹಕೀಂ ಎಂಬುವವರಿಂದ ಗಣಿಗಾರಿಕೆ ನಡೆಯುತ್ತಿದ್ದು ಆ ಜಾಗವನ್ನು ಗುತ್ತಿಗೆಗೆ ಪಡೆದು ಹಕೀಮ್ ಗಣಿಗಾರಿಕೆ ನಡೆಸುತ್ತಿದ್ದರು ಎಂದು ಮಾಹಿತಿ ತಿಳಿದು ಬಂದಿದೆ. ಮಹೇಂದ್ರಪ್ಪರ ಒಂದು ಎಕರೆ ಜಾಗದಲ್ಲಿ ಹಕೀಂ ಗಣಿಗಾರಿಕೆ ನಡೆಸುತ್ತಿದ್ದಾರೆ. ಸದ್ಯ ಇಲ್ಲಿ ಈಗ ಬಂಡೆ ಕುಸಿದಿದ್ದು ಟಿಪ್ಪರ್ ಮೇಲೆ ಬಂಡೆಗಳು ಬಿದ್ದಿವೆ. ಪಶ್ಚಿಮ ಬಂಗಾಳ (West Bengal) ಮೂಲದ ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಬಂಡೆಯಡಿ ಸಿಲುಕಿದ್ದ 3 ಮಂದಿ ರಕ್ಷಣೆ, ಇಬ್ಬರು ಸಿಲುಕಿರೋ ಶಂಕೆ
ಇನ್ನು ಗುಮ್ಮಕಲ್ಲು ಗುಡ್ಡದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿತ್ತು ಎಂದು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಗಣಿಯಲ್ಲಿ ಐವರು ಕಾರ್ಮಿಕರು ಕೆಲಸ ಮಾಡುತ್ತಿದ್ದ ಬಗ್ಗೆ ಮಾಹಿತಿ ಇದೆ. ಐವರು ಕಾರ್ಮಿಕರ ಪೈಕಿ ಮೂವರು ಕಾರ್ಮಿಕರನ್ನು ರಕ್ಷಿಸಲಾಗಿದೆ. ಮತ್ತಿಬ್ಬರು ಕಾರ್ಮಿಕರು ಕಣ್ಮರೆಯಾಗಿದ್ದು ಶೋಧ ನಡೆಯುತ್ತಿದೆ. ಸ್ಥಳೀಯರ ಮಾಹಿತಿ ಪ್ರಕಾರ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಇದ್ದರಂತೆ ಎಂದು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.
ಟಿಪ್ಪರ್ ಒಳಗಿದ್ದ ಚಾಲಕನನ್ನು ರಕ್ಷಿಸಿರುವ ಸಿಬ್ಬಂದಿ
ಟಿಪ್ಪರ್ ಒಳಗೆ ಸಿಲುಕಿದ್ದ ಚಾಲಕನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಟಿಪ್ಪರ್ ಚಾಲಕನನ್ನು ಸಿಬ್ಬಂದಿ ರಕ್ಷಣೆ ಮಾಡಿದ್ದು ಗಾಯಾಳು ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ: UPSC Exam ಅನ್ನು ಮಾತೃಭಾಷೆ ಕನ್ನಡದಲ್ಲಿ ನಡೆಸುವಂತೆ ಸಿಎಂಗೆ ಪತ್ರ
ಇದು ಸಂಪೂರ್ಣ ಅಕ್ರಮ ಗಣಿಗಾರಿಕೆ
ಇದು ಸಂಪೂರ್ಣ ಅಕ್ರಮ ಗಣಿಗಾರಿಕೆ. ಒಂದು ಎಕರೆ ಗುತ್ತಿಗೆ ಪಡೆದು 4 ಎಕರೆಯಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಲ್ಲಿ ಗಣಿ ಇಲಾಖೆ ಅಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಕಳೆದ 10 ವರ್ಷಗಳಿಂದ ಈ ಗಣಿಗಾರಿಕೆ ವಿರುದ್ದ ಹೋರಾಡಿ ನಡೆಸಲಾಗುತ್ತಿದೆ. ಪ್ರತಿ ದಿನ 200 ಲಾರಿಗಳಲ್ಲಿ ಕಲ್ಲು ಸಾಗಿಸಲಾಗುತ್ತಿದೆ. ಈ ಬಗ್ಗೆ ಎಲ್ಲಾ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಆದ್ರೂ ಸಹಾ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮಡಹಳ್ಳಿ ಮಹದೇವಪ್ಪ ಹೇಳಿಕೆ
ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ
ಗಣಿಗಾರಿಕೆ ದುರಂತ ಸ್ಥಳಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ಪರಿಶೀಲನೆ ನಡೆಸಿದ್ರು. ಒಳಗೆ ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಗುಡ್ಡ ಕುಸಿತ ಪ್ರಕರಣದಲ್ಲಿ 6 ಮಂದಿ ಗಾಯಗೊಂಡಿದ್ದಾರೆ. ಗಾಯಗಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಣಿಯಲ್ಲಿ ಸಿಲುಕಿರುವವರ ಮಾಹಿತಿ ಇನ್ನೂ ಸಿಕ್ಕಿಲ್ಲ. ಮೃತಪಟ್ಟಿರುವವರ ಬಗ್ಗೆ ಖಚಿತ ಮಾಹಿತಿ ಇಲ್ಲ. ಎಲ್ಲಾ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಲಾಗುವುದು. ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಂತ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕೊವಿಡ್ ಲಸಿಕೆ ಹೇಗೆ ಕೆಲಸ ಮಾಡುತ್ತೆ? ಬೆಂಗಳೂರಿನ IISC ಸಂಶೋಧಕರಿಂದ ಗಣಿತದ ಮಾಡೆಲ್ ಅಭಿವೃದ್ಧಿ!
ಗಣಿಗಾರಿಕೆ ಗುಡ್ಡ ಕುಸಿದ ಸ್ಥಳಕ್ಕೆ ಶ್ವಾನದಳ ಆಗಮಿಸಿದ್ದು, ರಾತ್ರಿ ಕೂಡ ರಕ್ಷಣಾ ಕಾರ್ಯ ನಡೆಯಲಿದೆ. ಈಗಾಗಲೇ ಬೆಂಗಳೂರಿನಿಂದ NDRF ತಂಡ ಆಗಮಿಸಿದೆ.21 ಮಂದಿಯ ತಂಡ ಆಗಮಿಸಿದ್ದು.ರಾತ್ರಿಯೂ ಕೂಡ ಲೈಟ್ ಅಳವಡಿಸಿ ರಕ್ಷಣಾ ಕಾರ್ಯ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ