ಕೋವಿಡ್ ಚಿಕಿತ್ಸೆಗೆ ರೋಬೋ: ಕೊಡಗಿನ ವಿರಾಜಪೇಟೆಯ ಎಂಜಿನಿಯರಿಂಗ್ ವಿದ್ಯಾರ್ಥಿಯ ಸಾಧನೆ

ರೋಬೋವನ್ನು ಮೊಬೈಲ್ ಬಳಸಿ ನಿಯಂತ್ರಿಸಬಹುದು. ಅದು ಕೋವಿಡ್ ರೋಗಿಯ ಬಳಿಗೆ ಹೋಗಿ ಅವರಿಗೆ ಬೇಕಾಗಿರುವ ಔಷಧಿ, ಮಾತ್ರೆಗಳನ್ನು ವಿತರಣೆ ಮಾಡುತ್ತದೆ. ಅಲ್ಲದೆ ರೋಗಿಗೆ ಸೂಚನೆಗಳನ್ನು ನೀಡುತ್ತದೆ

ರೋಬೋ ಜತೆಗೆ ಎಂಜಿನಿಯರಿಂಗ್ ವಿದ್ಯಾರ್ಥಿ  ಮಣಿಕಂಠ

ರೋಬೋ ಜತೆಗೆ ಎಂಜಿನಿಯರಿಂಗ್ ವಿದ್ಯಾರ್ಥಿ ಮಣಿಕಂಠ

  • Share this:
ಕೊಡಗು(ಡಿಸೆಂಬರ್​. 11): ಕೊರೋನಾ ಅಂದ್ರೆ ಯಾರಿಗೆ ತಾನೆ ಭಯ ಇಲ್ಲ ಹೇಳಿ. ಅದರಲ್ಲೂ ಆ ಮಹಾಮಾರಿ ದೇಶಕ್ಕೆ ಎಂಟ್ರಿಕೊಟ್ಟ ಆರಂಭದಲ್ಲಂತೂ ಜನರಷ್ಟೇ ಅಲ್ಲ ಚಿಕಿತ್ಸೆ ಕೊಡುವ ವೈದ್ಯರೂ ಕೂಡ ಬೆಚ್ಚಿ ಬೀಳುತ್ತಿದ್ದದ್ದು ಸುಳ್ಳಲ್ಲ. ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಎಷ್ಟೋ ವೈದ್ಯರು, ದಾದಿಯರು ಕೂಡ ಆ ಮಹಾಮಾರಿಗೆ ಬಲಿಯಾಗಿದ್ದಾರೆ. ಇದೆಲ್ಲವನ್ನೂ ಗಮನಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕೋವಿಡ್ ಚಿಕಿತ್ಸೆ ಮಾಡುವುದಕ್ಕೆ ಮೆಡಿಕಲ್ ರೋಬೋ ಕಂಡು ಹಿಡಿದು ವಿಶ್ವದ ಗಮನ ಸೆಳೆದಿದ್ದಾನೆ. ಈತ ಮೂಲತಃ ಹುಬ್ಬಳಿ ಜಿಲ್ಲೆಯವರಾದ ಸದ್ಯ ಕೊಡಗು ಜಿಲ್ಲೆ ಪೊನ್ನಂಪೇಟೆ ನ್ಯಾಯಾಲಯದಲ್ಲಿ ನೌಕರರಾಗಿರುವ ಅಮರೇಶ್ ಅವರ ಮಗ ಮಣಿಕಂಠ ಈ ಸಾಧನೆ ಮಾಡಿದ್ದು, ವಿರಾಜಪೇಟೆಯಲ್ಲಿ ಕಳೆದ 15 ವರ್ಷಗಳಿಂದ ವಾಸವಾಗಿರುವ ಅಮರೇಶ್ ಅವರ ಮಗ ಮಣಿಕಂಠ ಮಂಡ್ಯದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಐದನೇ ಸೆಮಿಸ್ಟರ್ ಪದವಿ ಕಲಿಯುತ್ತಿದ್ದು, ಲಾಕ್‍ಡೌನ್ ಸಂದರ್ಭದಲ್ಲಿ ಈ ಸಾಧನೆ ಮಾಡಿದ್ದಾನೆ.

ಐಇಇಇ ಇಂಡಿಯಾ ಕೌನ್ಸಿಲ್​​​ ಸಂಸ್ಥೆಯು ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿ ಪ್ರಾಜೆಕ್ಟ್ ಮಾಡಲು ಆಸಕ್ತಿ ಇರುವ ವಿದ್ಯಾರ್ಥಿಗಳು ತಮ್ಮ ಪ್ಲಾನ್​​ ಗೆ ಸಂಬಂಧಿಸಿ ವರದಿ ಕಳುಹಿಸಿಕೊಡುವಂತೆ ಸೂಚಿಸಿತ್ತು. ಮಣಿಕಂಠ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ರೋಬೋ ಕುರಿತ ವರದಿಯನ್ನು ಕಳುಹಿಸಿದ್ದ. ವರದಿಯನ್ನು ನೋಡಿದ್ದ ಸಂಸ್ಥೆಯು ಪ್ರಾಜೆಕ್ಟ್ ಸಿದ್ಧಗೊಳಿಸುವಂತೆ ಅದರ ವೆಚ್ಚಕ್ಕಾಗಿ 12 ಸಾವಿರ ರೂಪಾಯಿ ಕೊಟ್ಟಿತ್ತು. ಅದನ್ನು ಬಳಸಿಕೊಂಡು ಸಿ ಪ್ರೋಗ್ರಾಂ ಬಳಸಿ ಮಣಿಕಂಠ ಈ ರೋಬೋ ಕಂಡು ಹಿಡಿದಿದ್ದಾನೆ.

ರೋಬೋವನ್ನು ಮೊಬೈಲ್ ಬಳಸಿ ನಿಯಂತ್ರಿಸಬಹುದು. ಅದು ಕೋವಿಡ್ ರೋಗಿಯ ಬಳಿಗೆ ಹೋಗಿ ಅವರಿಗೆ ಬೇಕಾಗಿರುವ ಔಷಧಿ, ಮಾತ್ರೆಗಳನ್ನು ವಿತರಣೆ ಮಾಡುತ್ತದೆ. ಅಲ್ಲದೆ ರೋಗಿಗೆ ಸೂಚನೆಗಳನ್ನು ನೀಡಿ ಅವರ ಹೃದಯ ಬಡಿತ, ಅವರ ದೇಹದ ಉಷ್ಣತೆಗಳನ್ನು ಮಾಪನ ಮಾಡುತ್ತದೆ. ನಂತರ ನಿಮಗೆ ಧನ್ಯವಾದಗಳು ಆದಷ್ಟು ಬೇಗ ಗುಣಮುಖರಾಗಿ ಎಂದು ಹಾರೈಸಿ ಹಿಂದಿರುಗುತ್ತದೆ.

ಇದನ್ನೂ ಓದಿ : PAN Number: ಅವಳಿ ಸಹೋದರರಿಗೆ ಒಂದೇ ಪ್ಯಾನ್ ನಂಬರ್ ; ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ

ವಾರ್ಡ್‍ಗಳಿಂದ ಹಿಂದಿರುಗುವ ರೋಬೋ ಬ್ಲೂರೇಸ್ ಗಳಿಂದ ತನ್ನ ಇಡೀ ಬಾಡಿಯನ್ನು ಸ್ಕ್ಯಾನ್ ಮಾಡಿಕೊಂಡು ತನ್ನ ದೇಹವನ್ನು ರಕ್ಷಣೆ ಮಾಡಿಕೊಳ್ಳುತ್ತದೆ. ಇಂತಹ ವಿಶೇಷ ರೋಬೋವನ್ನು ಕಂಡು ಹಿಡಿದಿರುವುದಕ್ಕೆ ಐಜೆಡಬ್ಲ್ಯೂಎಂಟಿ ಸಂಸ್ಥೆಯೂ ಇವರಿಂದ ಸಂಶೋಧನಾ ಲೇಖನ ಬರೆಸಿ ಅದನ್ನು ಪ್ರಕಟಿಸಿದೆ. ಜೊತೆಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದೆ.

ಮಗನ ಈ ಸಾಧನೆಗೆ ಪೋಷಕರು ಇನ್ನಿಲ್ಲದ ಹರ್ಷ ವ್ಯಕ್ತಪಡಿಸಿದ್ದಾರೆ. ಸದ್ಯ ಇದು ವಿಶ್ವದಲ್ಲೇ ಕೋವಿಡ್ ಚಿಕಿತ್ಸೆಗಾಗಿ ಮೆಡಿಕಲ್ ರೋಬೋ ಕಂಡು ಹಿಡಿದ ಖ್ಯಾತಿ ಪಡೆದಿದೆ.
Published by:G Hareeshkumar
First published: