HOME » NEWS » District » ROBBERS GANGS ARRESTED BY BENGALURU POLICE GVTV SNVS

Robbery - ಹೊರರಾಜ್ಯಗಳಿಂದ ಬಂದು ದರೋಡೆ ಮಾಡುತ್ತಿದ್ದ ಗ್ಯಾಂಗ್​ಗಳು ಪೊಲೀಸರ ವಶಕ್ಕೆ

ನೇಪಾಳದಿಂದ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದು ಮನೆಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಒಂದು ಗ್ಯಾಂಗ್, ಹಾಗೂ ನೆಲ್ಲೂರಿನಿಂದ ಬಂದು ಚಿನ್ನಾಭರಣ ದೋಚುತ್ತಿದ್ದ ಮತ್ತೊಂದು ಗ್ಯಾಂಗ್ ಅನ್ನು ಪೊಲೀರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

news18-kannada
Updated:March 22, 2021, 10:58 AM IST
Robbery - ಹೊರರಾಜ್ಯಗಳಿಂದ ಬಂದು ದರೋಡೆ ಮಾಡುತ್ತಿದ್ದ ಗ್ಯಾಂಗ್​ಗಳು ಪೊಲೀಸರ ವಶಕ್ಕೆ
ಯಲಹಂಕ ಉಪನಗರದಲ್ಲಿ ಕಳ್ಳತನ ಪ್ರಕರಣ
  • Share this:
ಬೆಂಗಳೂರು: ಅವರ್ಯಾರೂ ನಮ್ಮ ರಾಜ್ಯದವರಲ್ಲ. ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದ ಆ ಮಂದಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಹೊಟ್ಟೆ ಬಟ್ಟೆ ಕಟ್ಟಿಕೊಂಡಿದ್ದರು. ಆದರೆ, ಇಷ್ಟೇ ಆಗಿದ್ರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಅತಿ ಆಸೆ ಗತಿಕೇಡು ಅನ್ನೋ ಹಾಗೆ ಅರ್ಧ ರಾತ್ರಿಯಲ್ಲಿ ಕುಬೇರರಾಗುವ ಕನಸು ಕಂಡವರು ಮಾಡಿದ ಎಡವಟ್ಟಿಗೆ ಈಗ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದ್ದಾರೆ. ಇವರ ಹೆಸರು ಪ್ರಕಾಶ ಶಾಹಿ, ಉದಯ ಕುಮಾರ ಮತ್ತು ರೋಷನ್.

ಮೂಲತಃ ನೇಪಾಳದವರಾದ ಇವರು ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ಹೀಗೆ ಬಂದವರು, ನಗರದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕಿದ್ದರು. ಹೀಗೇ ಇದ್ದಿದ್ದರೆ ಇವತ್ತು ಈ ಮಂದಿ ಜೈಲಿಗೆ ಸೇರುವ ಪರಿಸ್ಥಿತಿ ಬರುತ್ತಿರಲಿಲ್ಲ. ಬದಲಾಗಿ, ಕಂಡ ಕಂಡ ಬೀಗ ಹಾಕಿದ ಮನೆಗಳನ್ನ ಟಾರ್ಗೆಟ್ ಮಾಡುತಿದ್ದ ಈ ಮಂದಿ ಯಾರೂ ಇಲ್ಲದ ವೇಳೆ ಎಂಟ್ರಿ ಕೊಟ್ಟು ಅಪಾರ ಮೌಲ್ಯದ ಚಿನ್ನಾಭರಣ, ನಗದು ಹಣ ಕದ್ದು ಪರಾರಿ ಆಗುತ್ತಿದ್ದರು. ಇನ್ನು ಇದೇ ರೀತಿ ಕಳೆದ ತಿಂಗಳು ಅಮೃತಹಳ್ಳಿಯ ಮನೆಯೊಂದಕ್ಕೆ ಎಂಟ್ರಿ ಕೊಟ್ಟ ಈ ಗ್ಯಾಂಗ್ ಮನೆಯಲ್ಲಿದ್ದ ಚಿನ್ನಾಭರಣ, ವಿದೇಶಿ ಕರೆನ್ಸಿ, ಏರ್ ಗನ್ ಲೂಟಿ ಮಾಡಿ ಎಸ್ಕೇಪ್ ಆಗಿದ್ದರು. ಬಳಿಕ ಮೆಲ್ಲಗೇ ತಮ್ಮ ದೇಶಕ್ಕೆ ತೆರಳೋ ಸ್ಕೆಚ್ ಹಾಕಿದ್ರು. ಆದ್ರೆ ಅದಾಗಲೇ ಸಿಸಿಟಿವಿಯಲ್ಲಿ ಕಳ್ಳರ ಹೆಜ್ಜೆಗುರುತು ಪತ್ತೆ ಹಚ್ಚಿದ್ದ ಪೊಲೀಸರು ಆ ಗ್ಯಾಂಗ್ ಬೆಂಗಳೂರು ಬಿಡುವ ಮುನ್ನವೇ ಖೆಡ್ಡಾಕ್ಕೆ ಕೆಡವಿದೆ.

ಮತ್ತೊಂದು ಕಡೆ, ಇದೇ ವಿಭಾಗದ ಸಂಪಿಗೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶ್ರೀರಾಮ್ ಎಂಬ ಚಿನ್ನದ ವ್ಯಾಪಾರಿ ಚಿನ್ನವನ್ನು ಗಿರವಿ ಅಂಗಡಿಗಳಿಗೆ ಮಾರಾಟ ಮಾಡಲು ಬಂದಾಗ ಅದೊಂದು ಅಟೆನ್ಶನ್ ಡೈವರ್ಷನ್ ಗ್ಯಾಂಗ್ ಕಣ್ಣು ಹಾಕಿತ್ತು. ಅಂಗಡಿ ಮುಂದೆ ಬ್ಯಾಗ್ ನಲ್ಲಿದ್ದ ಚಿನ್ನ ಬೀಳಿಸಿದ ವೇಳೆ ಗುರುತು ಮಾಡಿಕೊಂಡ ನಟೋರಿಯಸ್ ಗ್ಯಾಂಗ್ ಶಿವರಾಂ ಬೈಕ್ ನಲ್ಲಿ ತೆರಳುವ ವೇಳೆ ಫಾಲೋ ಮಾಡಿತ್ತು. ಅಂತಿಮವಾಗಿ ಅದೊಂದು ಶಾಲೆಯ ಆವರಣದ ಬಳಿ ಗಾಡಿ ನಿಲ್ಲಿಸಿ ಶೌಚಾಲಯಕ್ಕೆ ಹೊದ ಸಂದರ್ಭದಲ್ಲಿ ಎಂಟ್ರಿ ಕೊಟ್ಟಿದ್ದ ಆ ಗ್ಯಾಂಗ್ ಬೈಕ್​ನ ಡಿಕ್ಕಿ ತೆರೆದು ಅದರಲ್ಲಿದ್ದ ಬರೊಬ್ಬರಿ 1200 ಗ್ರಾಂ ಚಿನ್ನವನ್ನು ಕದ್ದು ಎಸ್ಕೇಪ್ ಆಗಿದ್ರು.

ಇದನ್ನೂ ಓದಿ: ಬಾಂಬೆ ಟೀಂನವರ ಕ್ಷೇತ್ರಗಳೀಗ ಭೂಲೋಕದ ಸ್ವರ್ಗಗಳಾಗಿವೆಯೇ?; ಸಿಎಂಗೆ ಹೆಚ್​.ಡಿ ಕುಮಾರಸ್ವಾಮಿ ಪ್ರಶ್ನೆ

ಈ ಬಗ್ಗೆ ದೂರು ದಾಖಲಿಸಿಕೊಂಡ ಸಂಪಿಗೇ ಹಳ್ಳಿ ಪೊಲೀಸರು ಘಟನಾ ಸ್ಥಳದಿಂದ ಸಿಕ್ಕ ಸಿಸಿಟಿವಿಯಿಂದ ಸುಮಾರು 400 ಕಿ.ಮಿ ನಷ್ಟು ವಿವಿಧ ಸಿಸಿಟಿವಿಗಳ ಪರಿಶೀಲನೆ ನಡೆಸಿ ಆಂಧ್ರದ ನಲ್ಲೂರಿನಲ್ಲಿ ಚೆಲ್ಲಾ ಪ್ರಭುದಾಸ್ ಎಂಬಾತನ ಬಂಧಿಸುವುದರ ಮುಖಾಂತರ ಪ್ರಕರಣ ಭೇದಿಸಿದ್ರು. ಈ ಮೂಲಕ ಆತನೊಬ್ಬನಿಂದಲೇ ಬರೊಬ್ಬರಿ 24 ಲಕ್ಷ ಮೌಲ್ಯದ 440 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಈತ ಗ್ಯಾಂಗ್​ನ ಸದಸ್ಯ ಮಾತ್ರನಾಗಿದ್ದು, ಇನ್ನು ಉಳಿದ ಐದಕ್ಕೂ ಹೆಚ್ಚು ಆರೋಪಿಗಳು ನಾಪತ್ತೆಯಾಗಿದ್ದು, ಪೊಲೀಸರಿಂದ ತಲಾಶ್ ಮುಂದುವರೆದಿದೆ.

ಉಳಿದಂತೆ, ಈಶಾನ್ಯ ವಿಭಾಗದಲ್ಲಿ ದಾಖಲಾಗಿದ್ದ ವಿವಿಧ ಸರಗಳ್ಳತನ, ಕನ್ನಕಳವು ಹಾಗೂ ಮಾದಕ ವಸ್ತುಗಳ ಮಾರಾಟ ದಂಧೆಯನ್ನು ಭೇದಿಸಿದ ಪೊಲೀಸರು ಒಟ್ಟು 50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 10 ಲಕ್ಷ ಮೌಲ್ಯದ ಗಾಂಜಾ ಹಾಗೂ ಮೆಥಾಕೊಲಿನ್, ಕೊಕೈನ್ ಡ್ರಗ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ.. ಅದೇನೆ ಇದ್ದರೂ, ದೂರದೂರುಗಳಿಂದ ಕೆಲಸ ಅರಿಸಿಕೊಂಡು ಬೆಂಗಳೂರಿಗೆ ಬಂದವರು ಮೈ ಬಗ್ಗಿಸಿ ದುಡಿದು ತಿನ್ನೋದನ್ನ ಬಿಟ್ಟು, ಅಡ್ಡದಾರಿಯಲ್ಲಿ ಹಣ ಮಾಡಲು ಹೋಗಿ ಜೈಲು ಸೇರಿದ್ದು ವಿಪರ್ಯಾಸವೇ ಸರಿ.

ವರದಿ: ಗಂಗಾಧರ ವಾಗಟ
Published by: Vijayasarthy SN
First published: March 22, 2021, 10:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories