ಚಿಕ್ಕಮಗಳೂರು: ಮೊದಲು ನಿಮ್ಮ ಊರನ್ನ ಕಾಯಿರಿ, ಆಮೇಲೆ ದೇಶ ಕಾಯಿರಿ. ನೀವು ಎಲೆಕ್ಷನ್ ಗೋಸ್ಕರ "ದತ್ತ" ನನ್ನ ಇಟ್ಟುಕೊಂಡಿದ್ದೀರಿ. ಎಲೆಕ್ಷನ್ ಗೋಸ್ಕರ ಒಂದೊಂದು ಜಿಲ್ಲೆಗಳನ್ನು ಇಟ್ಟುಕೊಂಡಿದ್ದೀರಿ. ದತ್ತ ಮಾಲೆ ಹಾಕಿಕೊಂಡು ಜೈದತ್ತ, ಗುರುದತ್ತ ಅಂತೀರಿ. ಚುನಾವಣೆ ಗೆದ್ದ ಮೇಲೆ ಎಲ್ಲವನ್ನೂ ಮರೆಯುತ್ತೀರಿ ಎಂದು ಕಾಳಿಮಠದ ಋಷಿಕುಮಾರ ಸ್ವಾಮೀಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಬುಡನ್ ಗಿರಿಯಲ್ಲಿ ಶ್ರೀರಾಮಸೇನೆ ವತಿಯಿಂದ ನಡೆದ ದತ್ತಮಾಲಾ ಅಭಿಯಾನದ ಹಿನ್ನೆಲೆ ದತ್ತಪೀಠಕ್ಕೆ ಆಗಮಿಸಿ ದತ್ತಪಾದುಕೆ ದರ್ಶನ ಪಡೆದು ಮಾತಾನಾಡಿದ ಅವರು, ತಮಿಳುನಾಡಿನಲ್ಲಿ ಸಿ.ಟಿ. ರವಿ ನಾವು ಹಿಂದುಗಳು ಎಂದು ಭಾಷಣ ಮಾಡ್ತಾರೆ. ತಮಿಳುನಾಡಿನಲ್ಲಿ ಬಿಡಿ, ಚಿಕ್ಕಮಗಳೂರಿನಲ್ಲಿರುವ ಹಿಂದುಗಳು ಬೀದಿಯಲ್ಲಿ ನಿಂತಿದ್ದೀವಿ. ಮೊದಲು ಚಿಕ್ಕಮಗಳೂರನ್ನು ಕಾಯಿರಿ, ಹಿಂದುಗಳನ್ನು ಉಳಿಸಿ. ಅದನ್ನ ಬಿಟ್ಟು ತಮಿಳುನಾಡಿನಲ್ಲಿ ಎಲೆಕ್ಷನ್ಗೆ ಹೋಗಿದ್ದೀರಾ. ನಿಮಗೆ ಎಲೆಕ್ಷನ್ ಬೇಕು ಬಿಡಿ, ಎಲೆಕ್ಷನ್ಗೆ ದತ್ತ ಬೇಕು, ಎಲೆಕ್ಷನ್ಗೋಸ್ಕರ ದತ್ತಾತ್ರೇಯನ ಇಟ್ಟುಕೊಂಡಿದ್ದೀರಾ. ನೀವು ಎಲೆಕ್ಷನ್ ಗೋಸ್ಕರ ಒಂದೊಂದು ಕೇಸರಿ ಶೆಲ್ಯ ಇಟ್ಟುಕೊಂಡಿದ್ದೀರಿ. ದತ್ತ ಮಾಲೆ ಹಾಕಿಕೊಂಡು ಜೈದತ್ತ, ಗುರುದತ್ತ ಅಂತೀರಿ ಎಂದು ಟೀಕಿಸಿದರು.
ಇದನ್ನೂ ಓದಿ: ಮಹಾರಾಣಿಯಂತೆ ಮೆರೆಯಬೇಡಿ ಎಂದಿದ್ದ ಶಾಸಕರಿಗೆ ಪತ್ರದಲ್ಲಿ ಉತ್ತರ ನೀಡಿದ ಡಿಸಿ ರೋಹಿಣಿ ಸಿಂಧೂರಿ
ಇದೇ ವೇಳೆ ಸಿಎಂ ಯಡಿಯೂರಪ್ಪ ವಿರುದ್ಧವೂ ಋಷಿಕುಮಾರ ಸ್ವಾಮೀಜಿ ಕಿಡಿಕಾಡಿದರು. “ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮ ಸರ್ಕಾರಕ್ಕೆ ನಾಜಿಕೆ ಆಗ್ಬೇಕು, ಯಾಕಂದ್ರೆ ನೀವು ಹಿಂದು ಧರ್ಮದ ಮೇಲೆ ಪ್ರಮಾಣ ಮಾಡಿ ಅಧಿಕಾರ ಏರುತ್ತೀರಿ, ಆದ್ರೆ, ಹಿಂದು ಧರ್ಮದ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಾಣ್ತಿಲ್ವ ಮುಖ್ಯಮಂತ್ರಿಗಳೇ” ಎಂದು ಅವರು ಪ್ರಶ್ನಿಸಿದರು.
ಇದೇ ವೇಳೆ, ಯಾಕ್ರಿ ಸಿ.ಟಿ.ರವಿ ಅವರೇ ದತ್ತಪೀಠದಲ್ಲಿ ಮೈಕ್ ಬಳಸಿರೋದು ನಿಮ್ಗೆ ಗೊತ್ತಿಲ್ವಾ ಎಂದು ಪ್ರಶ್ನೆ ಮಾಡಿದ ಕಾಳಿ ಸ್ವಾಮಿ, ಸಿ.ಟಿ ರವಿ ಅವರು ದತ್ತಪೀಠವನ್ನು ಮುಸ್ಲಿಮರಿಗೆ ಕೊಡಲು ಷಡ್ಯಂತ್ರ ಮಾಡ್ತಿದ್ದಾರೆ ಅನ್ನೋ ಅನುಮಾನ ನಮ್ಗೆ ಮೂಡ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ವಿಜಯೇಂದ್ರ ಉಪ ಚುನಾವಣೆ ಗೆಲುವಿನ ರೂವಾರಿ- ಹಾಗಾದ್ರೆ ಮಂತ್ರಿಗಳು, ರಾಜ್ಯಾಧ್ಯಕ್ಷರು ಏನೂ ಅಲ್ಲ: ಬೇಳೂರು ಪ್ರಶ್ನೆ
ಇನ್ನು, ಚಳಿಗಾಲದ ಅಧಿವೇಶನದ ಒಳಗೆ ದತ್ತಪೀಠ ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಚಿಕ್ಕಮಗಳೂರಿಗೆ ಐದು ಲಕ್ಷ ಜನರನ್ನು ಕರೆದುಕೊಂಡು ಬಂದು ದತ್ತಾತ್ರೇಯ ವಿಗ್ರಹ ತಂದು ದತ್ತಪೀಠಕ್ಕೆ ಮುತ್ತಿಗೆ ಹಾಕುತ್ತೇವೆ. ವಿಗ್ರಹವನ್ನ ಪ್ರತಿಸ್ಠಾಪನೆ ಮಾಡಬೇಕಾದ ಕೆಲಸ ಮಾಡ್ತಿವಿ. ಹಾಗಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ದತ್ತಪೀಠವನ್ನ ಹಿಂದುಗಳಿಗೆ ವಹಿಸಬೇಕು. ಚಳಿಗಾಲದ ಅಧಿವೇಶನದ ಒಳಗೆ ಸಮಸ್ಯೆ ಬಗೆಹರಿಯದಿದ್ದರೆ ಹಿಂದುಗಳ ಪ್ರತಿಯೊಂದು ಮನೆಯಿಂದ ಒಬ್ಬೊಬ ಹಿಂದು ದತ್ತಪೀಠಕ್ಕೆ ಬಂದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ವರದಿ: ವೀರೇಶ್ ಹೆಚ್ ಜಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ