ಕಂದಾಯ ಸಚಿವರ ಕಾಟಾಚಾರದ ಭೇಟಿ ; ರಸ್ತೆ ಮೇಲೆಯೇ ಸಮೀಕ್ಷೆ ಮಾಡಿ ವಾಪಸ್ಸಾದ ಸಚಿವ ಅಶೋಕ್

ಪ್ರವಾಹ ನಿರ್ವಹಣೆ ಮಾಡಲು ಸರ್ಕಾರದ ಬಳಿಕ ಸಾಕಷ್ಟು ಹಣ ಇದೆ ಯಾರಿಗೂ ಸಮಸ್ಯೆ ಆಗದ ರೀತಿಯಲ್ಲಿ ಸರ್ಕಾರ ನಿರ್ವಹಣೆ ಮಾಡುತ್ತಿದೆ. ಮಹಾರಾಷ್ಟ್ರ ಡ್ಯಾಂ ಗಳಿಂದ ರಾಜ್ಯಕ್ಕೆ ನೀರು ಹರಿದು ಬರುತ್ತಿರುವ ಹಿನ್ನಲೆ ರಾಜ್ಯದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. 

ಕಂದಾಯ ಸಚಿವ ಆರ್​ ಆಶೋಕ್​​

ಕಂದಾಯ ಸಚಿವ ಆರ್​ ಆಶೋಕ್​​

  • Share this:
ಚಿಕ್ಕೋಡಿ(ಅಕ್ಟೋಬರ್​. 19): ಮಳೆ ಹಾಗೂ ಪ್ರವಾಹ ದಿಂದಾದ ಹಾನಿ ಕುರಿತು ಸಮೀಕ್ಷೆ ನಡೆಸಲು ಇಂದು ಕಂದಾಯ ಸಚಿವ ಆರ್.ಅಶೋಕ್ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಆದರೆ, ಸಚಿವರ ಭೇಟಿ ಮಾತ್ರ ಕಾಟಾಚಾರಕ್ಕೆ ಎಂಬತ್ತೆ ಇತ್ತು. ನಿಜವಾದ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡದೇ ಬರಿ ರಸ್ತೆ ಮೇಲೆಯೇ ನಿಂದು ವೀಕ್ಷಣೆ ಮಾಡಿ ವಾಪಸ್ ತೆರಳಿದ್ದಾರೆ. ಇನ್ನು ಸಚಿವರ ಕಾಟಾಚಾರದ ಭೇಟಿಗೆ ಜನಾಕ್ರೋಶ ಕೂಡ ಉಂಟಾಗಿದೆ. ಇಂದು ಬೆಳಿಗ್ಗ 9 ಗಂಟೆಗೆ ಬೆಂಗಳೂರಿನಿಂದ ಆಗಮಿಸಿದ ಸಚಿವ ಆರ್.ಅಶೋಕ್ ಮೊದಲು ಬೆಳಗಾವಿಯ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿದರು. ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದಾದ ಹಾನಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಅಲ್ಲಿಂದ ಹುಕ್ಕೇರಿ ತಾಲೂಕಿನ ಹತ್ತರಗಿ ಹಾಗೂ ಜಿನ್ರಾಳ ಗ್ರಾಮಕ್ಕೆ ಭೇಟಿ ನೀಡಿ ಅಕಾಲಿಕ ಮಳೆಯಿಂದಾಗಿ ಹಾನಿಯಾದ ಎಲೆಕೋಸು ಹಾಗೂ ಟೊಮೆಟೋ ಬೆಳೆಯನ್ನ ವೀಕ್ಷಣೆ ಮಾಡಿದರು. ಅಲ್ಲಿಂದ ಹುಕ್ಕೇರಿ ಪಟ್ಟಣಕ್ಕೆ ತೆರಳಿದ ಸಚಿವರು ಹುಕ್ಕೇರಿ ಪಟ್ಟಣದ ಮುಖ್ಯ ರಸ್ತೆ ಮೇಲೆ ನಿಂತು ವಾಪಸ್ ಆಗಿದ್ದಾರೆ. 

ಕಳೆದ ಭಾನುವಾರ ದಂದು ಹುಕ್ಕೇರಿ ಪಟ್ಟಣದಲ್ಲಿ ಸುರಿದ ಭಾರಿ ಮಳೆಗೆ ಓರ್ವ ಕೂಲಿ ಕಾರ್ಮಿಕ ಶೆಡ್ ಬಿದ್ದು ಸಾವನ್ನಪ್ಪಿದರೆ 500 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ 30 ಕ್ಕೂ ಹೆಚ್ಚು ಮನೆಗಳು ಬಿದ್ದು ಜನ ಬಿದಿಗೆ ಬಿದ್ದಿದ್ದಾರೆ. ಆದರೆ ಕಂದಾಯ ಸಚಿವರು ಮಾತ್ರ ಆ ಪ್ರದೇಶದ ಮನೆಗಳಿಗೆ ತೆರಳದೆ ಕಾಟಾಚಾರಕ್ಕೆ ಎಂಬಂತೆ ಬರಿ ಬಸ್ ನಿಲ್ದಾಣದ ಪಕ್ಕದ ಮುಖ್ಯ ರಸ್ತೆಯಲ್ಲಿ ನಿಂತು ಮೃತ ಪಟ್ಟ ಗ್ಯಾರೇಜ್ ಕುಟುಂಬಕ್ಕೆ ರಸ್ತೆ ಮೇಲೆಯೆ ಭೇಟಿಯಾಗಿ ಅಲ್ಲಿಂದ ಚಿಕ್ಕೋಡಿಗೆ ತೆರಳಿದ್ದಾರೆ.

ಇನ್ನು ಇದೆ ವೇಳೆ ಮಾತನಾಡಿದ ಸಚಿವ ಆರ್ ಅಶೋಕ್, ಪ್ರವಾಹ ನಿರ್ವಹಣೆ ಮಾಡಲು ಸರ್ಕಾರದ ಬಳಿಕ ಸಾಕಷ್ಟು ಹಣ ಇದೆ ಯಾರಿಗೂ ಸಮಸ್ಯೆ ಆಗದ ರೀತಿಯಲ್ಲಿ ಸರ್ಕಾರ ನಿರ್ವಹಣೆ ಮಾಡುತ್ತಿದೆ. ಮಹಾರಾಷ್ಟ್ರ ಡ್ಯಾಂ ಗಳಿಂದ ರಾಜ್ಯಕ್ಕೆ ಲಕ್ಷಾಂತರ ಕ್ಯೂಸೆಕ್ ನೀರು ಹರಿದು ಬರುತ್ತಿರುವ ಹಿನ್ನಲೆ ರಾಜ್ಯದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.  ಕಳೆದ ವರ್ಷ ಬಿದ್ದ ಮನೆಗಳಿಗೆ ಶೇ 95 ರಷ್ಟು ಜನರಿಗೆ ಮೊದಲನೆ ಕಂತಿನ ಹಣ ಪಾವತಿಯಾಗಿದೆ. ಆದರೆ, ಜನ ಮಾತ್ರ ಮನೆ ಕಟ್ಟಿಕೊಳ್ಳಲು ಬೇಗನೆ ಮುಂದೆ ಬರುತ್ತಿಲ್ಲ. ಜನರಿಗೆ ಎರಡನೆ ಕಂತಿನ ಹಣ ಪಡೆದು ಬೇಗನೇ ಮನೆ ಕಟ್ಟಿಕೊಳ್ಳಲು ಈಗಾಗಲೆ ಪತ್ರದ ಮೂಲಕ ಹೇಳಲಾಗಿದೆ ಎಂದರು.

ಆರ್.ಆರ್.ನಗರದಲ್ಲಿ ಬಂಡೆ ಆಟ ನಡೆಯಲ್ಲ :

ಶಿರಾ ಮತ್ತು ಆರ್.ಆರ್.ನಗರ ಉಪ ಚುನಾವಣೆ ವಿಚಾರದಲ್ಲಿ ಮಾತನಾಡಿದ ಅವರು ಚುನಾವಣೆ ಗೆಲ್ಲಲು ನಮಗೆ ಯಾವುದೇ ಅನುಮಾನ ಇಲ್ಲ. ಅನುಮಾನ ಇರುವುದು ಕಾಂಗ್ರೆಸ್ ನವರಿಗೆ ಮಾತ್ರ. ಎಲ್ಲೂ ಗೆಲ್ಲುವ ಸ್ಥಿತಿಯಲ್ಲಿ ಕಾಂಗ್ರೆಸ್ ನವರು ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರೆ ಈಗ ಬಿಜೆಪಿ ಅಭ್ಯರ್ಥಿ. ಕಳೆದ ಬಾರಿಯ ಬಿಜೆಪಿ ಅಭ್ಯರ್ಥಿಯು ನಮ್ಮಲ್ಲೆ ಇದ್ದಾರೆ. 60 ಸಾವಿರ ಮತ ಪಡೆದಿದ್ದ ಜನತಾದಳದ ಅಭ್ಯರ್ಥಿ ರಾಮಚಂದ್ರ ಅವರು ನಾಳೆಯೆ ಬಿಜೆಪಿ ಸೇರಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ : ಕೋವಿಡ್​, ಪ್ರವಾಹದಿಂದ ರಾಜ್ಯದ ಅಭಿವೃದ್ಧಿ ನಿಲ್ಲಬಾರದು; ಸಿಎಂ ಬಿಎಸ್​ ಯಡಿಯೂರಪ್ಪ

ಇಷ್ಟೆಲ್ಲಾ ಇರುವಾಗ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಆಟ ಆರ್.ಆರ್.ನಗರದಲ್ಲಿ ನಡೆಯಲ್ಲಿ. ಡಿಕೆ ಅಂತ ಬಂಡೆಯ ಯಾವುದೇ ಆಟ ನಾವು ನಡೆಯಲು ಬಿಡಲ್ಲ. ಆರ್.ಆರ್ ನಗರದ ಚುನಾವಣೆಯನ್ನ ನಾವು ಸವಾಲಾಗಿ ಸ್ವೀಕಾರ ಮಾಡಿದ್ದೇವೆ. ಸವಾಲಾಗೆ ಆರ್.ಆರ್.ನಗರ ಗೆಲ್ಲುತ್ತೇವೆ ಎಂದರು.

ಒಟ್ಟಿನಲ್ಲಿ ಇವತ್ತು ಸಚಿವರು ಬರುತ್ತಾರೆ ನಮ್ಮ ಸಮಸ್ಯೆಗಳನ್ನು ಕೇಳುತ್ತಾರೆ ಎಂದು ಕೊಂಡಿದ್ದ ಹುಕ್ಕೇರಿ ಸಂತ್ರಸ್ತರಿಗೆ ನಿರಾಶೆಯಾಗಿದೆ.
Published by:G Hareeshkumar
First published: