ಬೀದರ್ನಲ್ಲಿ ಬಡವರಿಗೆ ಸೂರು; ಉಳ್ಳವರಿಂದ ಅತಿಕ್ರಮಣ; ನಿವೇಶನಕ್ಕಾಗಿ ಬಡ ಫಲಾನುಭವಿಗಳಿಂದ ಹೋರಾಟ
ಬೀದರ್ ಜಿಲ್ಲೆ ಚಿಟಗುಪ್ಪದ ಮುಸ್ತರಿ ಪಂಚಾಯತ್ ವ್ಯಾಪ್ತಿಯ ಮುಸ್ತಿರಿವಾಡಿ ಗ್ರಾಮದಲ್ಲಿ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಹಂಚಿಕೆಯಾಗಿದ್ದ ನಿವೇಶನಗಳನ್ನ ಪ್ರಭಾವಿಗಳು ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ.
news18-kannada Updated:November 17, 2020, 11:58 AM IST

ಬೀದರ್ನ ಮುಸ್ತರಿಯಲ್ಲಿರುವ ನಿವೇಶನಗಳು
- News18 Kannada
- Last Updated: November 17, 2020, 11:58 AM IST
ಬೀದರ್: ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಸರಕಾರ ಬೀದರ್ ಜಿಲ್ಲೆಯ ಮುಸ್ತರಿವಾಡಿ ಗ್ರಾಮದಲ್ಲಿ 165 ಫಲಾನುಭವಿಗಳಿಗೆ 30X40 ಸೈಟ್ ಗಳನ್ನ ಹಂಚಿಕೆ ಮಾಡಿತ್ತು. ಫಲಾನುಭವಿಗಳಿಗೆ ಹಕ್ಕು ಪತ್ರವನ್ನೂ ಸಹ ನೀಡಿತ್ತು. ಆದರೀಗ ಆ ಸೈಟ್ಗಳ ಮೇಲೆ ಉಳ್ಳವರ ಕಣ್ಣುಬಿದ್ದಿದ್ದು, ನಿಜವಾದ ಫಲಾನುಭವಿಗಳನ್ನು ಹಿಂದೆ ಸರಿಸಿ ಅಲ್ಲಿ ಪ್ರಭಾವಿಗಳು ಮನೆ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಅವಕಾಶ ಸಿಕ್ಕಿತೆಂದು ಒಬ್ಬೊಬ್ಬ ವ್ಯಕ್ತಿ ಎರಡ್ಮೂರು ಮನೆಗಳನ್ನ ನಿರ್ಮಾಣ ಮಾಡಿಕೊಳ್ಳುತ್ತಿದ್ದರೂ, ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಿದೆ.
ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ಮುಸ್ತರಿ ಪಂಚಾಯತ್ ವ್ಯಾಪ್ತಿಯ ಮುಸ್ತಿರಿವಾಡಿ ಗ್ರಾಮದಲ್ಲಿ ಸರಕಾರದಿಂದ ಬಡವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಸೈಟ್ ಹಂಚಿತ್ತು. ಒಟ್ಟು 53.20 ಎಕರೆ ಸರಕಾರದ ಜಾಗೆಯಲ್ಲಿ 165 ಜನ ಫಲಾನುಭವಿಗಳನ್ನ ಗುರುತಿಸಲಾಗಿತ್ತು. ಎಲ್ಲರಿಗೂ 30X40 ಅಳತೆಯ ಸೈಟ್ ಹಂಚಿ ಕಾಗದ ಪತ್ರಗಳನ್ನು ಕೊಟ್ಟಿತ್ತು. ಆದರೆ ಈ ಜಾಗೆಯಲ್ಲಿ ಕೆಲವು ಫಲಾನುಭವಿಗಳ ಜೊತೆ ಪ್ರಭಾವಿಗಳು ಹೆಚ್ಚಿನ ಭೂಮಿಯಲ್ಲಿ ಮನೆ ಕಟ್ಟಿಕೊಳ್ಳುತ್ತಿದ್ದು, 40 ಜನರಷ್ಟೇ ಇಡೀ ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂಬ ಆರೋಪವನ್ನ ಇಲ್ಲಿನ ಜನರ ಮಾಡುತ್ತಿದ್ದಾರೆ. 165 ಜನ ಫಲಾನುಭವಿಗಳ ಭೂಮಿ ಅತಿಕ್ರಮಣ ಮಾಡಿದವರೆಲ್ಲರೂ ಪ್ರಭಾವಿಗಳಾಗಿದ್ದಾರೆ. ಹಾಗಾಗಿ ಬಡ ಫಲಾನುಭವಿಗಳು ಇದರಿಂದ ಕಚೇರಿಗೆ ಅಲೆಯುವಂತಾಗಿದ್ದು, ತಮ್ಮ ಸ್ವಂತ ಮನೆ ಕಟ್ಟಿಕೊಳ್ಳುವ ಕನಸನ್ನು ಕೈ ಬಿಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇನ್ನು ಈ ಬಗ್ಗೆ ಜಿಲ್ಲಾಡಳಿತಕ್ಕೆ ಸ್ಥಳೀಯರು ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತ ಸಹಿತ ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದು, ಮುಸ್ತರಿವಾಡಿಯ ಬಡಜನರು ಜಾಗೆಯ ಹಕ್ಕು ಪತ್ರವಿದ್ದರು ತಮ್ಮ ಜಾಗೆಗಾಗಿ ಪರದಾಡುವಂತಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ಕೇಳಿದರೆ, ಈಗಾಗಲೇ ಒತ್ತುವರಿ ಮಾಡಿದವರಿಗೆ ನೋಟೀಸ್ ನೀಡಲಾಗಿದೆ. ಕೆಲವರ ಕಟ್ಟಡಗಳನ್ನು ಅರ್ಧಕ್ಕೆ ನಿಲ್ಲಿಸಲು ಸೂಚಿಸಿದರೂ ಸಹ ನಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ. ಹಾಗಾಗಿ ಮೇಲಧಿಕಾರಿಗಳೇ ಮಧ್ಯಪ್ರವೇಶಿಸಬೇಕೆಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ: ಭೀಮಾ ಪ್ರವಾಹ ಸಂತ್ರಸ್ತರಿಗೆ ಬೆಳಕಾಗದ ದೀಪಾವಳಿ; ಹಬ್ಬದ ಸಿಹಿ ಬದಲು ಖಾರ ರೊಟ್ಟಿ ಸೇವನೆ, ಬಿದ್ದ ಮನೆಗೆ ಪೂಜೆ ಸಲ್ಲಿಸಿದ ಸಂತ್ರಸ್ತರು
ಸರ್ವರಿಗೂ ಸಮಾನವಾಗಿ ಸಿಗಬೇಕಿದ್ದ ನಿವೇಶನಗಳು ಪ್ರಭಾವಿಗಳ ಆಟಾಟೋಪದಿಂದ ಬಡವರಿಗೆ ಮರೀಚಿಕೆಯಾಗಿವೆ. ತಲೆ ಮೇಲೊಂದು ಸೂರು ಕಟ್ಟಿಕೊಳ್ಳಲು ಹವಣಿಸುತ್ತಿದ್ದ ಬಡ ಕುಟುಂಬಗಳು ಇದೀಗ ನ್ಯಾಯಕ್ಕಾಗಿ ಅಲೆದಾಡಬೇಕಾದಂತಹ ಪರಿಸ್ಥಿತಿ ಬಂದೊದಗಿರುವುದು ದುರ್ದೈವವೇ ಸರಿ. ಬೀದರ್ ಜಿಲ್ಲೆಯ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಈ ಸಮಸ್ಯೆಯತ್ತ ಗಮನಹರಿಸಿ, ಬಡವರಿಗೆ ಆದಷ್ಟು ಬೇಗ ನ್ಯಾಯ ಕಲ್ಪಿಸಬೇಕಾಗಿದೆ.
ವರದಿ: ಸಿದ್ದಪ್ಪ ಸತ್ಯಣ್ಣನವರ್
ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ಮುಸ್ತರಿ ಪಂಚಾಯತ್ ವ್ಯಾಪ್ತಿಯ ಮುಸ್ತಿರಿವಾಡಿ ಗ್ರಾಮದಲ್ಲಿ ಸರಕಾರದಿಂದ ಬಡವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಸೈಟ್ ಹಂಚಿತ್ತು. ಒಟ್ಟು 53.20 ಎಕರೆ ಸರಕಾರದ ಜಾಗೆಯಲ್ಲಿ 165 ಜನ ಫಲಾನುಭವಿಗಳನ್ನ ಗುರುತಿಸಲಾಗಿತ್ತು. ಎಲ್ಲರಿಗೂ 30X40 ಅಳತೆಯ ಸೈಟ್ ಹಂಚಿ ಕಾಗದ ಪತ್ರಗಳನ್ನು ಕೊಟ್ಟಿತ್ತು. ಆದರೆ ಈ ಜಾಗೆಯಲ್ಲಿ ಕೆಲವು ಫಲಾನುಭವಿಗಳ ಜೊತೆ ಪ್ರಭಾವಿಗಳು ಹೆಚ್ಚಿನ ಭೂಮಿಯಲ್ಲಿ ಮನೆ ಕಟ್ಟಿಕೊಳ್ಳುತ್ತಿದ್ದು, 40 ಜನರಷ್ಟೇ ಇಡೀ ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂಬ ಆರೋಪವನ್ನ ಇಲ್ಲಿನ ಜನರ ಮಾಡುತ್ತಿದ್ದಾರೆ.
ಇದನ್ನೂ ಓದಿ: ಭೀಮಾ ಪ್ರವಾಹ ಸಂತ್ರಸ್ತರಿಗೆ ಬೆಳಕಾಗದ ದೀಪಾವಳಿ; ಹಬ್ಬದ ಸಿಹಿ ಬದಲು ಖಾರ ರೊಟ್ಟಿ ಸೇವನೆ, ಬಿದ್ದ ಮನೆಗೆ ಪೂಜೆ ಸಲ್ಲಿಸಿದ ಸಂತ್ರಸ್ತರು
ಸರ್ವರಿಗೂ ಸಮಾನವಾಗಿ ಸಿಗಬೇಕಿದ್ದ ನಿವೇಶನಗಳು ಪ್ರಭಾವಿಗಳ ಆಟಾಟೋಪದಿಂದ ಬಡವರಿಗೆ ಮರೀಚಿಕೆಯಾಗಿವೆ. ತಲೆ ಮೇಲೊಂದು ಸೂರು ಕಟ್ಟಿಕೊಳ್ಳಲು ಹವಣಿಸುತ್ತಿದ್ದ ಬಡ ಕುಟುಂಬಗಳು ಇದೀಗ ನ್ಯಾಯಕ್ಕಾಗಿ ಅಲೆದಾಡಬೇಕಾದಂತಹ ಪರಿಸ್ಥಿತಿ ಬಂದೊದಗಿರುವುದು ದುರ್ದೈವವೇ ಸರಿ. ಬೀದರ್ ಜಿಲ್ಲೆಯ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಈ ಸಮಸ್ಯೆಯತ್ತ ಗಮನಹರಿಸಿ, ಬಡವರಿಗೆ ಆದಷ್ಟು ಬೇಗ ನ್ಯಾಯ ಕಲ್ಪಿಸಬೇಕಾಗಿದೆ.
ವರದಿ: ಸಿದ್ದಪ್ಪ ಸತ್ಯಣ್ಣನವರ್