• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ದುಬಾರಿಯಾದ ಭತ್ತ ಕೊಯ್ಲು ಯಂತ್ರದ ಬಾಡಿಗೆ; ಜಿಲ್ಲಾಧಿಕಾರಿಗಳ ಆದೇಶಕ್ಕಿಲ್ಲ ಕಿಮ್ಮತ್ತು!

ದುಬಾರಿಯಾದ ಭತ್ತ ಕೊಯ್ಲು ಯಂತ್ರದ ಬಾಡಿಗೆ; ಜಿಲ್ಲಾಧಿಕಾರಿಗಳ ಆದೇಶಕ್ಕಿಲ್ಲ ಕಿಮ್ಮತ್ತು!

ಭತ್ತ ಕೊಯ್ಲು ಮಾಡುತ್ತಿರುವ ಯಂತ್ರ

ಭತ್ತ ಕೊಯ್ಲು ಮಾಡುತ್ತಿರುವ ಯಂತ್ರ

ದುಬಾರಿಯಾಗಿರುವ ಭತ್ತದ ಕೊಯ್ಲು ಯಂತ್ರದ ಬಾಡಿಗೆಯ ಬಗ್ಗೆ ನಿಗಾವಹಿಸಬೇಕಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಆದೇಶ ಮಾಡಿ ಕೈ ತೊಳೆದುಕೊಂಡಿದ್ದು, ತಾವು ಆದೇಶದ ಪರಾಮರ್ಶೆ ಮಾಡಬೇಕಾಗಿದೆ. ಈಗಾಗಲೇ ಆದೇಶ ಹೊರಡಿಸಿ ಒಂದು ತಿಂಗಳಾಗಿದೆ. ಕಟಾವು ಸಹ ಅರ್ಧದಷ್ಟು ಮುಗಿದಿದೆ. ಈ ಸಂದರ್ಭದಲ್ಲಾದರೂ ಜಿಲ್ಲಾಧಿಕಾರಿಗಳು ಆದೇಶ ಜಾರಿಯಾಗಿದೆ ಎಂಬುವುದನ್ನು ನೋಡಬೇಕೆಂದು ರೈತರು ಆಗ್ರಹಿಸಿದ್ದಾರೆ

ಮುಂದೆ ಓದಿ ...
  • Share this:

ರಾಯಚೂರು: ಭತ್ತದ ಕಣಜ ಎಂದು ಕರೆಯುವ ರಾಯಚೂರು ಜಿಲ್ಲೆಯಲ್ಲಿ ಪ್ರಮುಖ ಬೆಳೆ ಭತ್ತ. ಭತ್ತವನ್ನು ಬೆಳೆದ ರೈತ ಈಗ ಕೊಯ್ಲು ಮಾಡುತ್ತಿದ್ದಾನೆ. ಬಹುತೇಕರು ಯಂತ್ರಗಳಿಂದ ಕೊಯ್ಲು ಮಾಡುತ್ತಿರುವುದರಿಂದ ಭತ್ತದ ಗದ್ದೆಗಳಲ್ಲಿ ಯಂತ್ರಗಳ ದರ್ಬಾರ್ ಕಂಡು ಬರುತ್ತಿದೆ. ಕೊಯ್ಲು ಮಾಡಲು ಪ್ರತಿ ಎಕರೆ 2200 ರಿಂದ 2500 ರೂಪಾಯಿಯವರೆಗೂ ದರ ನಿಗಿದಿ ಮಾಡಲಾಗಿದೆ. ಆದರೆ ಜಿಲ್ಲಾಡಳಿತ ಕೊಯ್ಲು ಮಾಡುವ ಯಂತ್ರವು ಪ್ರತಿ ಗಂಟೆಗೆ 2000 ರೂಪಾಯಿ ಮಾತ್ರ ರೈತರಿಂದ ಪಡೆಯಬೇಕೆಂದು ಆದೇಶ ಮಾಡಿದೆ. ಆದರೆ ಈ ಆದೇಶ ಕೇವಲ ಕಾಗದಕ್ಕಷ್ಟೇ ಸೀಮಿತವಾಗಿದೆ ಎನ್ನುವುದು ನ್ಯೂಸ್ 18 ರಿಯಾಲ್ಟಿ ಚೆಕ್ ರುಜುವಾತಾಗಿದೆ.


ಈ ವರ್ಷ ರಾಯಚೂರು ಜಿಲ್ಲೆಯಲ್ಲಿ ಒಟ್ಟು 1.57 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ಪ್ರತಿ ಎಕರೆಗೆ 22-28 ಕ್ವಿಂಟಾಲ್ ಭತ್ತದ ಇಳುವರಿ ಬರುತ್ತಿದೆ. ಈ ವರ್ಷ ಅಧಿಕ ಮಳೆಯಾಗಿದ್ದರಿಂದ ಭತ್ತ ನಾಶವಾಗಿದೆ. ಕೋವಿಡ್ ಕಾರಣಕ್ಕಾಗಿ ಲಾಕ್ ಡೌನ್ ಆದ ನಂತರ ರೈತರಲ್ಲಿ ಹಣದ ಕೊರತೆ ಕಾರಣಕ್ಕಾಗಿ ಜಿಲ್ಲಾಡಳಿತವು ಕೊಯ್ಲು ಮಾಡುವ ಯಂತ್ರಕ್ಕೆ ಪ್ರತಿ ಗಂಟೆಗೆ 2000 ರೂಪಾಯಿ ದರ ನಿಗಿದಿ ಮಾಡಿದೆ. ಆದರೆ ಈ ದರ ಎಲ್ಲಿಯೂ ಜಾರಿಯಾಗಿಲ್ಲ.


ಇದನ್ನು ಓದಿ: ನೆರೆ ಸಂದರ್ಭವನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ; ಸಚಿವ ಆರ್.ಅಶೋಕ್ ಸಮರ್ಥನೆ


ಬಹುತೇಕ ಕಡೆ ಪ್ರತಿ ಗಂಟೆಗೆ 2200 ರೂಪಾಯಿ ಪಡೆಯುತ್ತಿದ್ದಾರೆ. ರೈತರು ಸಹ ಬೇಗನೆ ಕೊಯ್ಲು ಆಗಲಿ ಎಂಬ ಕಾರಣಕ್ಕೆ 200-300 ರೂಪಾಯಿ ಹೆಚ್ಚಾದರೂ ಇರಲಿ ಬಿಡಿ ಎನ್ನುತ್ತಿದ್ದಾರೆ. ಈ ಮಧ್ಯೆ ಅಧಿಕ ಮಳೆಯಾದ ಕಾರಣ ಈ ಹಿಂದೆ ಪ್ರತಿ ಎಕರೆ ಭತ್ತವನ್ನು ಒಂದು ಗಂಟೆಯಲ್ಲಿ ಕೊಯ್ಲು ಮಾಡುತ್ತಿದ್ದ ಯಂತ್ರಗಳು ಈಗ ಪ್ರತಿ ಎಕರೆ ಒಂದು ಕಾಲು ಗಂಟೆಯಿಂದ ಒಂದೂವರೆ ಗಂಟೆ ತೆಗೆದುಕೊಳ್ಳುತ್ತಿವೆ. ಇದರಿಂದಾಗಿ ಅಧಿಕ ದುಬಾರಿಯಾಗುತ್ತಿದೆ. ಯಂತ್ರಗಳ ದರದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ರೈತರ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಕ್ಕರೆ ಯಂತ್ರದ ಅಧಿಕ ಬಾಡಿಗೆ ನಿಭಾಯಿಸಬಹುದು ಎನ್ನತ್ತಾರೆ.


ಈ ಮಧ್ಯೆ ಯಂತ್ರದ ಮಾಲೀಕರು ಸಹ ಈಗ ರೈತರು ನೀಡುವ ಬಾಡಿಗೆ ನಮ್ಮ ದುಡಿಮೆ, ಖರ್ಚು, ಇಲಾಖೆಗೆ ಯಂತ್ರಕ್ಕೆ ಕಟ್ಟಬೇಕಾದ ಟ್ಯಾಕ್ಸ್ ಗೆ ಸಮವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಜಿಲ್ಲಾಡಳಿತವು ನಿಗಿದಿ ಮಾಡಿದ ಬಾಡಿಗೆ ದರ ಜಾರಿಯಾಗುವುದಿಲ್ಲ ಎಂಬುವುದು ಎಲ್ಲರಿಗೂ ಗೊತ್ತಿದೆ. ದುಬಾರಿಯಾಗಿರುವ ಭತ್ತದ ಕೊಯ್ಲು ಯಂತ್ರದ ಬಾಡಿಗೆಯ ಬಗ್ಗೆ ನಿಗಾವಹಿಸಬೇಕಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಆದೇಶ ಮಾಡಿ ಕೈ ತೊಳೆದುಕೊಂಡಿದ್ದು, ತಾವು ಆದೇಶದ ಪರಾಮರ್ಶೆ ಮಾಡಬೇಕಾಗಿದೆ. ಈಗಾಗಲೇ ಆದೇಶ ಹೊರಡಿಸಿ ಒಂದು ತಿಂಗಳಾಗಿದೆ. ಕಟಾವು ಸಹ ಅರ್ಧದಷ್ಟು ಮುಗಿದಿದೆ. ಈ ಸಂದರ್ಭದಲ್ಲಾದರೂ ಜಿಲ್ಲಾಧಿಕಾರಿಗಳು ಆದೇಶ ಜಾರಿಯಾಗಿದೆ ಎಂಬುವುದನ್ನು ನೋಡಬೇಕೆಂದು ರೈತರು ಆಗ್ರಹಿಸಿದ್ದಾರೆ

Published by:HR Ramesh
First published: