HOME » NEWS » District » REMDESIVIR AND VACCINE WAS CELL IN KODAGU GOVERNMENT HOSPITAL SAYS APPACCHU RANJAN RHHSN RSK

ಕೊಡಗಿನ ಸರ್ಕಾರಿ ಆಸ್ಪತ್ರೆಯಲ್ಲೇ ಹಣಕ್ಕಾಗಿ ರೆಮ್ಡಿಸಿವರ್, ಲಸಿಕೆ ಮಾರಾಟ; ಶಾಸಕ ಅಪ್ಪಚ್ಚು ರಂಜನ್ ಆರೋಪ

ಕೊಡಗು ಜಿಲ್ಲೆಯಲ್ಲಿ ವಾರದಲ್ಲಿ ಎರಡು ದಿನಗಳ ಕಾಲ ಅಗತ್ಯ ವಸ್ತುಗಳ ಖರೀದಿಗೆ ನಿಗಧಿ ಮಾಡಿರುವ ದಿನಗಳಲ್ಲಿ ಬದಲಾವಣೆ ಮಾಡಿದರು. ಈ ಹಿಂದೆ ಅಗತ್ಯ ವಸ್ತುಗಳ ಖರೀದಿಗೆ ಮಂಗಳವಾರ ಮತ್ತು ಶುಕ್ರವಾರ ಸಮಯ ನಿಗಧಿ ಮಾಡಲಾಗಿತ್ತು. ಇದನ್ನು ಬದಲಾಯಿಸಿ ಮಂಗಳವಾರದ ಬದಲಿಗೆ ಸೋಮವಾರ ಮತ್ತು ಶುಕ್ರವಾರ ಅಗತ್ಯ ವಸ್ತುಗಳ ಖರೀದಿಗೆ ಜನರಿಗೆ ಅವಕಾಶ ಕಲ್ಪಿಸಲಾಯಿತು.

news18-kannada
Updated:May 6, 2021, 7:40 PM IST
ಕೊಡಗಿನ ಸರ್ಕಾರಿ ಆಸ್ಪತ್ರೆಯಲ್ಲೇ ಹಣಕ್ಕಾಗಿ ರೆಮ್ಡಿಸಿವರ್, ಲಸಿಕೆ ಮಾರಾಟ; ಶಾಸಕ ಅಪ್ಪಚ್ಚು ರಂಜನ್ ಆರೋಪ
ಕೊಡಗು ಕೋವಿಡ್ ಕೇರ್ ಸೆಂಟರ್​ಗೆ ಭೇಟಿ ನೀಡಿದ್ದ ಸಚಿವ ವಿ. ಸೋಮಣ್ಣ ಮತ್ತು ಅಧಿಕಾರಿಗಳು.
  • Share this:
ಕೊಡಗು: ಸರ್ಕಾರಿ ಆಸ್ಪತ್ರೆಯಲ್ಲಿ ರೆಮ್ಡಿಸಿವರ್ ಮತ್ತು ವ್ಯಾಕ್ಸಿನ್ ಅನ್ನು ಹಣ ಪಡೆದು ಜನರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಸ್ವತಃ ಮಡಿಕೇರಿಯ ಬಿಜೆಪಿಯ ಶಾಸಕ ಅಪ್ಪಚ್ಚು ರಂಜನ್ ಸಚಿವರ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರ ನೇತೃತ್ವದಲ್ಲಿ ಸಭೆ ನಡೆಯುತ್ತಿತ್ತು. ಈ ವೇಳೆ ಜಿಲ್ಲೆಯಲ್ಲಿ ವ್ಯಾಕ್ಸಿನ್ ಇದೆಯಾ ಎಂದು ಸಚಿವ ಸೋಮಣ್ಣ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಶಾಸಕ ಅಪ್ಪಚ್ಚು ರಂಜನ್, ಕಳೆದ ಒಂದು ವಾರದಿಂದ ನಮ್ಮ ಕ್ಷೇತ್ರದ ವಿವಿಧ ಆಸ್ಪತ್ರೆಗಳಿಗೆ ತೆರಳಿ ಜನರ ಸಮಸ್ಯೆಯನ್ನು ಆಲಿಸುವ ಕೆಲಸ ಮಾಡುತ್ತಿದ್ದೇನೆ. ಈ ಸಂದರ್ಭದಲ್ಲಿ ಸೋಮವಾರಪೇಟೆ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯೊಂದರ ಸಿಬ್ಬಂದಿಗಳು ರೆಮ್ಡಿಸಿವರ್ ಮತ್ತು ವ್ಯಾಕ್ಸಿನ್ ಅನ್ನು ಜನರಿಂದ ಹಣ ಪಡೆದು ಮಾರಾಟ ಮಾಡಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹತ್ತು ಜನರಿಗೆ ಕೊಡಬೇಕಾಗಿರುವ ವ್ಯಾಕ್ಸಿನ್ ಅನ್ನು 11 ಕಡಿಮೆ ಪ್ರಮಾಣದಲ್ಲಿ ನೀಡಿ ಅದನ್ನು 11 ಜನರಿಗೆ ಹಣ ಪಡೆದು ಹಂಚಿಕೆ ಮಾಡಲಾಗುತ್ತಿದೆ. ಇದು ನಮ್ಮ ಗಮನಕ್ಕೆ ಬಂದ ಕೂಡಲೇ ಎಚ್ಚರಿಕೆ ಕೊಟ್ಟಿದ್ದೇನೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ ಇಂತಹ ಯಾವುದೇ ಸಣ್ಣ ಅಪವಾದ ಬಾರದಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಕೂಡಲೇ ಪೊಲೀಸ್ ಇಲಾಖೆ ಅಧಿಕಾರಿಗಳು ಈ ಕುರಿತು ಗಮನಹರಿಸಿ ಕಟ್ಟುನಿಟ್ಟಿನ ಶಿಸ್ತು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಇದನ್ನು ಓದಿ: ಮುಖ್ಯಮಂತ್ರಿಯಾಗಿ ನಾಳೆ ಎಂ.ಕೆ. ಸ್ಟಾಲಿನ್ ಪ್ರಮಾಣವಚನ ಸ್ವೀಕಾರ, ತಮಿಳುನಾಡು ಸಂಪುಟಕ್ಕೆ ಡಿಎಂಕೆ ಹಿರಿಯ ನಾಯಕರ ಪುನರಾಗಮನ

ಒಟ್ಟಿನಲ್ಲಿ ಸಚಿವರ ಸಭೆಯಲ್ಲೇ ಹಣಕ್ಕಾಗಿ ರೆಮ್ಡಿಸಿವರ್ ಮಾರಾಟ ಆಗುತ್ತಿರುವ ವಿಷಯ ಪ್ರಸ್ತಾಪಿಸಿ ಎಲ್ಲರೂ ಸೈಲೆಂಟ್ ಆಗುವಂತೆ ಮಾಡಿದರು. ಇದಕ್ಕೂ ಮೊದಲು ಸಭೆಯಲ್ಲಿ ಕೊಡಗು ಜಿಲ್ಲೆಯಲ್ಲಿ ವಾರದಲ್ಲಿ ಎರಡು ದಿನಗಳ ಕಾಲ ಅಗತ್ಯ ವಸ್ತುಗಳ ಖರೀದಿಗೆ ನಿಗಧಿ ಮಾಡಿರುವ ದಿನಗಳಲ್ಲಿ ಬದಲಾವಣೆ ಮಾಡಿದರು. ಈ ಹಿಂದೆ ಅಗತ್ಯ ವಸ್ತುಗಳ ಖರೀದಿಗೆ ಮಂಗಳವಾರ ಮತ್ತು ಶುಕ್ರವಾರ ಸಮಯ ನಿಗಧಿ ಮಾಡಲಾಗಿತ್ತು. ಇದನ್ನು ಬದಲಾಯಿಸಿ ಮಂಗಳವಾರದ ಬದಲಿಗೆ ಸೋಮವಾರ ಮತ್ತು ಶುಕ್ರವಾರ ಅಗತ್ಯ ವಸ್ತುಗಳ ಖರೀದಿಗೆ ಜನರಿಗೆ ಅವಕಾಶ ಕಲ್ಪಿಸಲಾಯಿತು. ಸಭೆಗೂ ಮುನ್ನಾ ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಸಚಿವ ವಿ ಸೋಮಣ್ಣ ಕೋವಿಡ್ ಕೇರ್ ಸೆಂಟರ್ ಒಳಗೋಗಿ ಸೋಂಕಿತರ ಆರೋಗ್ಯ ವಿಚಾರಿಸಿ ಬಂದರು.
Youtube Video

ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಸಚಿವರಿಗೆ ಸಾಥ್ ನೀಡಿದ್ದರು. ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ನೀವು ಕೂಡ ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್ ಗಳ ಒಳಗೆ ಹೋಗಿ ಸೋಂಕಿತರ ಸಮಸ್ಯೆಯನ್ನು ಆಲಿಸಿ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿ ಎಂದು ಕೊಡಗು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಕಾರ್ಯಪ್ಪ ಮತ್ತು ಅಧೀಕ್ಷಕ ಲೋಕೇಶ್ ಅವರಿಗೆ ಮಾತಿನಿಂದಲೇ ಚುಚ್ಚಿ ಹೇಳಿದರು.
Published by: HR Ramesh
First published: May 6, 2021, 7:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories