ಕೊರೋನಾ ಸೋಂಕಿನಿಂದ ಮೃತರ ಸುತ್ತಮುತ್ತ ಸಂಬಂಧಿಗಳು ಸುಳಿಯುತ್ತಿಲ್ಲ ; ಪಾಲಿಕೆಯಿಂದಲೇ ಅಂತ್ಯಕ್ರಿಯೆ ಕಾರ್ಯ!

ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಸ್ಮಶಾನದಲ್ಲಿ ಸರ್ಕಾರದ ನಿಯಮಗಳ ಪ್ರಕಾರ ನಿತ್ಯ ಅಂತ್ಯಕ್ರಿಯೆಗಳು ನಡೆಯುತ್ತಿವೆ. ಪಾಲಿಕೆ ಆರೋಗ್ಯ ಅಧಿಕಾರಿ ನೇತೃತ್ವದಲ್ಲಿ ಅಂತ್ಯಕ್ರಿಯೆ ನಡೆಸಲು 6 ಜನರ ತಂಡವನ್ನು ರಚನೆ ಮಾಡಲಾಗಿದೆ.

news18-kannada
Updated:July 31, 2020, 4:40 PM IST
ಕೊರೋನಾ ಸೋಂಕಿನಿಂದ ಮೃತರ ಸುತ್ತಮುತ್ತ ಸಂಬಂಧಿಗಳು ಸುಳಿಯುತ್ತಿಲ್ಲ ; ಪಾಲಿಕೆಯಿಂದಲೇ ಅಂತ್ಯಕ್ರಿಯೆ ಕಾರ್ಯ!
ಸಾಂದರ್ಭಿಕ ಚಿತ್ರ
  • Share this:
ಬೆಳಗಾವಿ(ಜುಲೈ.31): ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ಮೃತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ಮೃತಪಟ್ಟವರ ಶವಗಳನ್ನು ಅಂತ್ಯಕ್ರಿಯೆ ಮಾಡಲು ಸಂಬಂಧಿಗಳು ಬರುತ್ತಿಲ್ಲ. ಮಹಾನಗರ ಪಾಲಿಕೆ ಅಧಿಕಾರಿಗಳೆ ಕೊನೆಗೆ ಅಂತ್ಯಕ್ರಿಯೆ ನಡೆಸುತ್ತಿದ್ದು, ಈಗಾಗಲೇ 30ಕ್ಕೂ ಹೆಚ್ಚು ಮೃತ ಅಂತ್ಯಕ್ರಿಯನ್ನು ನಡೆಸಿದ್ದಾರೆ. 

ಸೋಂಕಿನಿಂದ ಯಾರೇ ಮೃತಪಟ್ಟರೇ ಕುಟುಂಬಸ್ಥರನ್ನು ಪ್ರಾರ್ಥಮಿಕ ಸಂಪರ್ಕ ಎಂದು ಗುರುಸಿತಲಾಗುತ್ತದೆ. ಕುಟುಂಬದ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಇನ್ನೂ ಮೃತರ ಸಂಬಂಧಿಕರೇ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಬೇಕಾದ ಅನಿರ್ವಾತೆ ನಿರ್ಮಾಣವಾಗಿದೆ. ಆದರೇ ಸಂಬಂಧಿಕರು ಮಾತ್ರ ಭಯದಿಂದ ಜಿಲ್ಲಾಸ್ಪತ್ರೆಯ ಕಡೆ ಬರುತ್ತಿಲ್ಲ.

ಬೆಳಗಾವಿಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳ ಅಂತ್ಯಕ್ರಿಯೆ ನಡೆಸಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಆದರೇ ಒಪ್ಪಿಗೆ ಪತ್ರಕ್ಕೂ ಸಹಿ ಹಾಕಲು ಕೆಲವರು ಬಂದಿಲ್ಲ. ಹೀಗಾಗಿ ವಾಟ್ಸ್​​ಆ್ಯಪ್ ನಲ್ಲಿಯೇ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿ ಅಂತ್ರಕ್ರಿಯೆ ನಡೆಸಲಾಗುತ್ತಿದೆ.

ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ಸದಾಶಿವ ನಗರದ ಸ್ಮಶಾನವನ್ನು ಗುರುತು ಮಾಡಲಾಗಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಸ್ಮಶಾನದಲ್ಲಿ ಸರ್ಕಾರದ ನಿಯಮಗಳ ಪ್ರಕಾರ ನಿತ್ಯ ಅಂತ್ಯಕ್ರಿಯೆಗಳು ನಡೆಯುತ್ತಿವೆ. ಪಾಲಿಕೆ ಆರೋಗ್ಯ ಅಧಿಕಾರಿ ನೇತೃತ್ವದಲ್ಲಿ ಅಂತ್ಯಕ್ರಿಯೆ ನಡೆಸಲು 6 ಜನರ ತಂಡವನ್ನು ರಚನೆ ಮಾಡಲಾಗಿದೆ.

ಕೊರೋನಾ ಸೋಂಕಿನಿಂದ ಬೆಳಗಾವಿ ಜಿಲ್ಲೆಯಲ್ಲಿ ಅತಿಹೆಚ್ಚು ಸುದ್ದಿ ಮಾಡಿದ್ದು ಹಿರೇಬಾಗೇವಾಡಿ ಗ್ರಾಮ. ಏಪ್ರಿಲ್ 3 ರಂದು ಗ್ರಾಮದ 20ವರ್ಷದ ಯುವಕನಿಗೆ ಮೊದಲು ಸೋಂಕು ಕಾಣಿಸಿಕೊಂಡಿತ್ತು. ನಂತರ ಯುವಕನ ಸಂಪರ್ಕದಲ್ಲಿ ಇದ್ದ 49 ಜನರಲ್ಲಿ ಸೋಂಕು ವ್ಯಾಪಿಸಿತ್ತು. ಹಿರೇಬಾಗೇವಾಡಿ ಗ್ರಾಮ ಎಪ್ರೀಲ್ 3 ರಿಂದ ಜೂನ್ 5ರ ವರೆಗೆ ನಿರಂತವಾಗಿ ಸಿಲ್ ಡೌನ್ ಮಾಡಲಾಗಿತ್ತು.

ಇದನ್ನೂ ಓದಿ : ಕೊರೋನಾ ರೋಗಿಗಳ ನಿರ್ಲಕ್ಷ್ಯ ಆರೋಪ ; ಚಿಕಿತ್ಸೆ ಸಿಗದೆ ಬೇಸತ್ತು ಸಾರ್ವಜನಿಕ ವಾಹನದಲ್ಲಿ ತೆರಳಿದ ಸೋಂಕಿತರು

ಕೊರೋನಾ ಸೋಂಕಿನಿಂದ ತತ್ತರಿಸಿದ್ದ ಹಿರೇಬಾಗೇವಾಡಿ ಗ್ರಾಮದ ಕೆಲ ವಾರಗಳಿಂದ ನೆಮ್ಮದಿಯಿಂದ ಇತ್ತು. ಆದರೇ ಇದೀಗ ಮತ್ತೆ ಗ್ರಾಮದಲ್ಲಿ ಸೋಂಕು ಕಾಣಿಸಿಕೊಂಡಿದೆ. ಗ್ರಾಮದ 15 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಗ್ರಾಮದ ಹಲವು ಬಡಾವಣೆಯಲ್ಲಿ ಕಂಟೈನಮೆಂಟ್ ಝೋನ್ ಮಾಡಲಾಗಿದೆ.

ಹಿರೇಬಾಗೇವಾಡಿ ಗ್ರಾಮದ 15 ಜನರ ಪೈಕಿ 5 ಜನ ಪೊಲೀಸ್ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಹಿರೇಬಾಗೇವಾಡಿ ಪಿಎಸ್ಐ ಸೇರಿ 5 ಜನ ಸಿಬ್ಬಂದಿಯನ್ನು ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಿತ್ಯ ಪೊಲೀಸ್ ಠಾಣೆಯನ್ನು ಸ್ಯಾನಿಟೈಷ್ ಮಾಡಲಾಗುತ್ತಿದೆ. ಗ್ರಾಮಸ್ಥರು ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಬೇಕು ಎಂದರು ಆಗ್ರಹಿಸಿದ್ದಾರೆ.
Published by: G Hareeshkumar
First published: July 31, 2020, 4:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading