ಗದಗ: ಗದಗ ರೈಲು ನಿಲ್ದಾಣಕ್ಕೆ ಹೈಟೆಕ್ ಟಚ್ ನೀಡಲಾಗಿದೆ. ಗದಗಿನ ಪ್ರಮುಖ ಸ್ಥಳಗಳಲ್ಲಿ ಈ ರೈಲು ನಿಲ್ದಾಣವನ್ನೂ ಸಹ ಆಕರ್ಷಣೆ ಕೇಂದ್ರವನ್ನಾಗಿ ಮಾಡಲಾಗಿದೆ. ಇಷ್ಟು ದಿನ ಕೇವಲ ಕಪ್ಪತಗುಡ್ಡದ ಸೌಂದರ್ಯದ ಬಗ್ಗೆ ಮಾತನಾಡಿಕೊಳ್ತಿದ್ದ ಜನ ಈಗ ಈ ನಿಲ್ದಾಣದ ಬಗ್ಗೆ ಮಾತನಾಡಿಕೊಳ್ತಿದ್ದಾರೆ. ನಿಲ್ದಾಣದಲ್ಲಿ ವಿವಿಧ ರೀತಿಯಲ್ಲಿ ಆಕರ್ಷಣೆಯಂತೆ ಕಂಗೊಳಿಸಲಾಗಿದೆ. ರೈಲು ಸುತ್ತಲೂ ಬಣ್ಣದ ಅಲಂಕಾರ ಮಾಡಲಾಗಿದೆ.
ಹುಲಿ ಚಿತ್ರದ ಥ್ರೀಡಿ ಎಫೆಕ್ಟ್ ನಲ್ಲಿ ಮೆಟ್ಟಿಲು ಕಂಗೊಳಿಸುತ್ತಿದೆ.
ಒಂದು ಪ್ಲಾಟ್ ಫಾರ್ಮ್ ದಿಂದ ಇನ್ನೊಂದು ಪ್ಲಾಟ್ ಫಾರ್ಮ್ ಗೆ ಹೋಗಲು ಮಾಡಿರುವ ಸೇತುವೆಯ ಮೆಟ್ಟಿಲುಗಳನ್ನು ಥ್ರೀಡಿ ಎಫೆಕ್ಟ್ ಕೊಡುವ ಹುಲಿಯ ಚಿತ್ರದಿಂದ ಕಂಗೊಳಿಸುವಂತೆ ಮಾಡಲಾಗಿದೆ. ಮುಖ್ಯವಾಗಿ ಚಿಕ್ಕದೊಂದು ಮಾದರಿ ರೈಲು ನಿಲ್ದಾಣದ ವಸ್ತು ಸಂಗ್ರಹಾಲಯ ತೆರೆಯಲಾಗಿದೆ. ಬಹುತೇಕ ನಿಲ್ದಾಣದ ಸುತ್ತಲೂ ಮರಗಿಡಗಳಿಂದ ಕಂಗೊಳಿಸಲಾಗಿದೆ. ಪಕ್ಕದಲ್ಲೇ ಮಿನಿ ಗಾರ್ಡನ್ ಮಾಡಲಾಗಿದ್ದು ಮರ ಮತ್ತು ಕಲ್ಲಿನ ಮಂಚಗಳನ್ನ ಇಡಲಾಗಿದೆ. ಗಾರ್ಡನ್ ಒಳಗಡೆ ವಿವಿಧ ರೀತಿಯ ಕಲರ್ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಗಾರ್ಡನ್ ನಲ್ಲಿ ಗದಗಿನವರಾದ ಸಂಗೀತ ದಿಗ್ಗಜ ಪಂಡಿತ ಭೀಮಸೇನ್ ಜೋಶಿಯವರ ಪ್ರತಿಮೆಯನ್ನ ಪ್ರತಿಷ್ಠಾಪನೆ ಮಾಡಿದ್ದಾರೆ.
ಇದನ್ನೂ ಓದಿ: ಕೊರೋನಾ ಲಸಿಕೆ ಬಗ್ಗೆ ಜನಜಾಗೃತಿಗಾಗಿ ನೆಟ್ವರ್ಕ್18, ಫೆಡರಲ್ ಬ್ಯಾಂಕ್ನಿಂದ ಸಂಜೀವನಿ ಅಭಿಯಾನ
ಮಕ್ಕಳ ಆಕರ್ಷಣೆಯ ಕೃತಕ ರೈಲು ನಿಲ್ದಾಣ ಮಾದರಿ..!
ಇನ್ನು ಮುಖ್ಯವಾಗಿ ಈ ರೈಲು ನಿಲ್ದಾಣವನ್ನ ಪರಿಸರ ಸ್ನೇಹಿ ನಿಲ್ದಾಣ ಅಂದರೆ ತಪ್ಪಾಗೋದಿಲ್ಲ. ಈ ರೈಲು ನಿಲ್ದಾಣಕ್ಕೆ ಬೇಕಾಗುವ ವಿದ್ಯುತ್ ಅನ್ನು ಶೇ.70 ರಷ್ಟು ಸೌರಶಕ್ತಿ ಮೂಲಕ ಉತ್ಪಾದನೆ ಮಾಡಿ ಬಳಕೆ ಮಾಡಿಕೊಳ್ಳಲಾಗ್ತಿದೆ. ನಿಲ್ದಾಣದ ಮೇಲ್ಛಾವಣಿಯಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಸಿದ್ದು ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬಿಯಾಗಿದೆ. ಜೊತೆಗೆ ಗದಗ ರೈಲು ನಿಲ್ದಾಣದಿಂದ ಗುಂಡಕಲ್ವರೆಗೆ ವಿದ್ಯುತ್ ಚಾಲಿತ ರೈಲು ಓಡಾಟಕ್ಕೆ ವ್ಯವಸ್ಥೆ ಮಾಡಲಾಗ್ತಿದೆ. ಇಡೀ ರೈಲು ನಿಲ್ದಾಣದಲ್ಲಿ ಸ್ವಚ್ಛತೆಯ ಜೊತೆಗೆ ಸುಂದರಗೊಳಿಸಿದ್ದಾರೆ. ನೈರುತ್ಯ ರೈಲ್ವೆ ಅಧಿಕಾರಿಗಳು ಗದಗ ರೈಲು ನಿಲ್ದಾಣದವನ್ನು ಗ್ರೆಟ್ ಒನ್ ಮಾದರಿಯಲ್ಲಿ ಅಭಿವೃದ್ಧಿ ಮಾಡಿರೋದು ಸಂತಸ ತಂದಿದೆ ಅಂತಾರೆ.
ಒಟ್ಟಿನಲ್ಲಿ ಬಹುತೇಕ ರೈಲು ನಿಲ್ದಾಣಗಳು ಸಾಕಷ್ಟು ಸಮಸ್ಯೆಗಳನ್ನ ಎದುರಿಸ್ತಿವೆ. ಅದರಲ್ಲೂ ಸ್ವಚ್ಛತೆ ಅನ್ನೋದು ಮರೀಚಿಕೆಯಾಗಿರುತ್ತೆ. ಆದ್ರೆ ಗದಗನ ರೈಲು ನಿಲ್ದಾಣ ಹೈಟೆಕ್ ಟಚ್ ನಿಂದ ಇಡೀ ಉತ್ತರ ಕರ್ನಾಟಕದಲ್ಲಿ ಮಾದರಿಯಾಗಿದೆ.
ವರದಿ: ಸಂತೋಷ ಕೊಣ್ಣೂರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ